Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿಯ ಪ್ರಧಾನ ಕಛೇರಿಯಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ಆಶಾಕಾರ್ಯಕರ್ತೆಯರಿಗೆ ಗೌರವಧನ ವಿತರಿಸಲಾಯಿತು. ಸಹಕಾರಿಯ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರು ಗೌರವಧನ ವಿತರಿಸಿ ಮಾತನಾಡಿ ಕರೋನಾ ಆತಂಕದ ಸಮಯದಲ್ಲಿ ಜೀವ ಪಣವಾಗಿಟ್ಟು ಕೆಲಸ ಮಾಡುತ್ತಿರುವ ಆಶಾಕಾರ್ಯಕರ್ತೆಯ ಸೇವೆ ಶ್ಲಾಘನೀಯ ಎಂದರು. ಜೂನ್ 30ರಂದು ವಯೋನಿವ್ರತ್ತಿ ಹೊಂದುತ್ತಿರುವ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಚಂದ್ರಪ್ರತಿಮಾ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಸಹಕಾರ ಅಭಿವೃದ್ಧಿ ಅಧಿಕಾರಿ ಅರುಣಕುಮಾರ್, ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ನಿರ್ದೇಶಕರುಗಳಾದ ಜಗದೀಶ ಪಿ. ಹಕ್ಕಾಡಿ, ನರಸಿಂಹ ದೇವಾಡಿಗ, ನಾರಾಯಣ ಶೆಟ್ಟಿ, ಸರೋಜಾ ಗಾಣಿಗ, ನಾಗಮ್ಮ, ರಾಮ, ಕಾರ್ಯನಿರ್ವಹಣಾಧಿ ಸಂಜೀವ ಮಡಿವಾಳ ಮೊದಲಾವರು ಉಪಸ್ಥಿತರಿದ್ದರು. ಪತ್ರಕರ್ತ ಸುಬ್ರಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.27ರಶನಿವಾರ 14 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢವಾಗಿದೆ. ಈ ಪೈಕಿ 7 ಪುರುಷರು, 6 ಮಹಿಳೆಯರು ಹಾಗೂ ಓರ್ವ 6 ವರ್ಷದ ಹುಡುಗಿಗೆ ಪಾಸಿಟಿವ್ ದೃಢವಾಗಿದೆ. ಇಂದು 173 ನೆಗೆಟಿವ್: ಈ ತನಕ ಒಟ್ಟು 14,127ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,656ನೆಗೆಟಿವ್, 1,139 ಪಾಸಿಟಿವ್ ಬಂದಿದ್ದು, 332 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 173ನೆಗೆಟಿವ್, 14ಪಾಸಿಟಿವ್ ಬಂದಿದೆ. 90 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,139 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1047 ಮಂದಿ ಬಿಡುಗಡೆಯಾಗಿದ್ದು, 90 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರ ಪದಗ್ರಹಣ ಹಾಗೂ ಪ್ರತಿಜ್ಞಾ ದಿನ ಕಾರ್ಯಕ್ರಮದ ಪೂರ್ವಭಾವಿಯಾಗಿ ಶನಿವಾರ ತಲ್ಲೂರಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಯುವ ಕಾಂಗ್ರೆಸ್ ಡಿಜಿಟಲ್ ಯೂತ್ ಕಾರ್ಯಗಾರ ನೆಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕೊಡವೂರು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೆಪಿಸಿಸಿ ವೀಕ್ಷಕ ನವೀನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಮದನ್ ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಅಮೀನ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕರಾದ ಯೋಗೆಶ್ ಇನ್ನಾ ರವರು ಜ಼ೂಮ್ ಮೀಟಿಂಗ್ ಬಗ್ಗೆ ಮಾಹಿತಿ ನೀಡಿದರು. ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಸ್ವಾಗತಿಸಿದರು ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್…

Read More

ಕುಂದಾಪ್ರ ಡಾಟ್ ಕಾಂ ಮಾಹಿತಿ. ಉಡುಪಿ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಲಭ್ಯವಿರುವ ಸಹಾಯಧನದ ವಿವರ ಈ ಕೆಳಗಿನಂತಿದೆ. ಸಣ್ಣ ಸಸ್ಯಾಗಾರಕ್ಕೆ ಸಹಾಯಧನ: 1.00 ಹೆ. ವಿಸ್ತೀರ್ಣದಲ್ಲಿ ಬ್ಯಾಂಕ್’ನಿಂದ ಅವಧಿ ಸಾಲ ಪಡೆದು ಹೊಸದಾಗಿ ನಿರ್ಮಾಣ ಮಾಡುವ ಸಸ್ಯಾಗಾರ/ನರ್ಸರಿಗೆ ಒಟ್ಟು ವೆಚ್ಚದ ಶೇ. 50 ರಂತೆ ಗರಿಷ್ಟ ರೂ. 7.50 ಲಕ್ಷ ಸಹಾಯಧನ ವಿತರಿಸಲಾಗುವುದು. ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ: ಯೋಜನೆಯ ಮಾರ್ಗಸೂಚಿಯಂತೆ ನಿಗದಿತ ಬೆಳೆಗಳನ್ನು ನೂತನ ತಾಂತ್ರಿಕತೆಯೊಂದಿಗೆ ಹೊಸದಾಗಿ ಬೆಳೆಯುವ ರೈತರಿಗೆ ಸಹಾಯಧನವನ್ನು ವಿತರಿಸಲಾಗುವುದು. ಪ್ರತಿ ಫಲಾನುಭವಿ ಕನಿಷ್ಟ 0.20 ಹೆ. ಹಾಗೂ ಗರಿಷ್ಟ 4.00 ಹೆ. ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಸಹಾಯಧನವು ಒಟ್ಟು ವೆಚ್ಚದ ಶೇ. 40 ರಂತೆ ಇದ್ದು, 2020-21 ನೇ ಸಾಲಗೆ ಸಹಾಯಧನ ಪಡೆಯಬಹುದಾಗ ಬೆಳೆಗಳು ಹಾಗೂ ಸಹಾಯಧನದ ವಿವರ ಈ ಕೆಳಗಿನಂತಿದೆ. ಬಾಳೆ (ಕಂದುಗಳು)ವೆಚ್ಚ 65,000.00 ಸಹಾಯಧನ 26,000.00 ಬಾಳೆ (ಅಂಗಾಂಶ ಕೃಷಿ) ವೆಚ್ಚ 1,02,000. 00 ಸಹಾಯಧನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.26ರ ಶುಕ್ರವಾರ 9 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢವಾಗಿದೆ. ಈ ಪೈಕಿ ಶಿರೂರು ಆರೋಗ್ಯ ಕೇಂದ್ರದ ಎ.ಎನ್.ಎಂ ಅವರಿಗೂ ಕೋವಿಡ್-19 ಪಾಸಿಟಿವ್ ಬಂದಿದ್ದು, ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್.22 ಶಿರೂರಿನ ಓರ್ವ ಆರೋಗ್ಯ ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕದಿಂದ ಇನ್ನೋರ್ವರಿಗೂ ಇಂದು ಬಂದಿ ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಇಂದು 147 ನೆಗೆಟಿವ್: ಈ ತನಕ ಒಟ್ಟು 13,960ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,483ನೆಗೆಟಿವ್, 1,125 ಪಾಸಿಟಿವ್ ಬಂದಿದ್ದು, 352 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 147 ನೆಗೆಟಿವ್, 9 ಪಾಸಿಟಿವ್ ಬಂದಿದೆ. 86 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,125ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1037 ಮಂದಿ ಬಿಡುಗಡೆಯಾಗಿದ್ದು, 86 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದ ಗ್ರಾಮದ ಅರೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಂಗಳವಾರ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕರ ಪಡೆ ಇದೆ. ಅವರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಈಚಿನ ದಿನಗಳಲ್ಲಿ ಶಾಲೆಗಳ ಮೂಲ ಸೌಕರ್ಯಗಳನ್ನು ಉತ್ತಮಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಮಕ್ಕಳ ಸಂಖ್ಯೆ ಹೆಚ್ಚುವ ಭರವಸೆ ಇದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ನಾರಾಯಣ ದೇವಾಡಿಗ ಸ್ವಾಗತಿಸಿದರು. ಸಹಶಿಕ್ಷಕಿ ಶೈಲಾ ನಿರೂಪಿಸಿದರು. ಯೋಗ ಶಿಕ್ಷಕ ಸುಬ್ಬ ದೇವಾಡಿಗ ವಂದಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಹೇರೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ, ಸ್ಥಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ರಕ್ತದಾನ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಗಂಗೊಳ್ಳಿಯ ಯಕ್ಷಾಭಿಮಾನಿ ಬಳಗ ಮತ್ತು ರಕ್ತದಾನಿಗಳ ಬಳಗದ ಸದಸ್ಯರು ರಕ್ತದಾನದ ಮಹತ್ವ ಮತ್ತು ಪ್ರಚಾರದ ಧ್ಯೇಯದೊಂದಿಗೆ ಸತತ ೧೧ನೇ ವರುಷ ಗಂಗೊಳ್ಳಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಗಂಗೊಳ್ಳಿಯ ಯಕ್ಷಾಭಿಮಾನಿ ಬಳಗ ಮತ್ತು ರಕ್ತದಾನಿಗಳ ಬಳಗದ ವತಿಯಿಂದ ಪ್ರತಿ ವ?ದಂತೆ ಈ ವ? ಕೂಡ ರಕ್ತದಾನಿ, ಯಕ್ಷಾಭಿಮಾನಿ ರಕ್ತದಾನಿ ಬಳಗದ ಅಧ್ಯಕ್ಷ ಗುರುಚರಣ್ ಖಾರ್ವಿ ನೇತೃತ್ವದಲ್ಲಿ ಸುಮಾರು ೧೦ ಜನರು ’ರಕ್ತದಾನದ ಜಾಗೃತಿ ಮತ್ತು ರಕ್ತದಾನದ ಪ್ರಚಾರ’ ಕುರಿತು ಗಂಗೊಳ್ಳಿಯಿಂದ ಧರ್ಮಸ್ಥಳಕ್ಕೆ ಸತತ ೧೧ನೇ ವ?ದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು. ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿರುವ ಶ್ರೀ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಬಳಿಯಿಂದ ಗುರುವಾರ ಬೆಳಿಗ್ಗೆ ಪಾದಯಾತ್ರೆ ಆರಂಭಿಸಿದ್ದಾರೆ. ಗಂಗೊಳ್ಳಿಯ ಯಕ್ಷಾಭಿಮಾನಿ ಬಳಗ ಹಾಗೂ ರಕ್ತದಾನಿಗಳ ಬಳಗ ’ರಕ್ತಂ ಜೀವಜಲ ದಾನಾದಿ ಕಲ್ಪಿತ ಸಕಲ ಸತ್ಪಲ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ೧೦ ವರ್ಷಗಳಿಂದ ಗಂಗೊಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಯಾರಿಗಾದರೂ ತುರ್ತು ಸಂದರ್ಭಗಳಲ್ಲಿ ರಕ್ತದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೋವಿಡ್-19 ಹರಡುತ್ತಿರುವ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಬೈಂದೂರಿನ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಪ್ರಧಾನ ಕಛೇರಿಯಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ಮಾಹಿತಿ ನೀಡಿದರು. ಈ ಮೊದಲು ಅವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೈಂದೂರು ಶಾಖೆ, ಸಾಗರ್ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕ್ ಬೈಂದೂರು ಹಾಗೂ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಂಘದ ಬೈಂದೂರು ಶಾಖೆ ಹಾಗೂ ಬೈಂದೂರಿನ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸಿಬ್ಬಂದಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ “ಸಂಶಮನ ವಟಿ ಹಾಗೂ ಅರ್ಕ-ಎ-ಅಜೀಬ್” ಮಾತ್ರೆಗಳ ಉಚಿತ ಆಯುಷ್ ಕಿಟ್ ವಿತರಿಸಿದರು. ಈ ಸಂದರ್ಭ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ವಿವಿಧ ಸಹಕಾರಿಗಳ ಕಾರ್ಯನಿರ್ವಹಣಾಧಿಕಾರಿ, ಪ್ರಬಂಧಕರು ಈ ಸಂದರ್ಭ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜನತಾ ಪಾರ್ಟಿ  ಕುಂದಾಪುರ ಮಂಡಲದ ಪದಾಧಿಕಾರಿಗಳ ಅಂತಿಮ ಪಟ್ಟಿ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಪಟ್ಟಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಿಪರಸ್ಸಿನ ಮೇರೆಗೆ ಗುರುವಾರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಕುಂದಾಪುರ: ಅಧ್ಯಕ್ಷ-ಶಂಕರ ಅಂಕದಕಟ್ಟೆ, ಉಪಾಧ್ಯಕ್ಷ-ಸುರೇಂದ್ರ ನಾಯಕ್ ಬೆಳ್ವೆ, ಶ್ರೀಧರ್ ಮೊಗವೀರ, ರಾಜೇಶ್ ಉಡುಪ, ಪೂರ್ಣಿಮಾ ಜಿ. ಪೂಜಾರಿ, ಸರೋಜಾ, ಸಂಜೀವ ದೇವಾಡಿಗ. ಪ್ರಧಾನ ಕಾರ್ಯದರ್ಶಿ- ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಕಾರ್ಯದರ್ಶಿ-ಪ್ರವೀಣ್ ಶೆಟ್ಟಿ ವಂಡಾರು, ಸುರೇಂದ್ರ ಎಸ್. ಕಾಂಚನ್, ಆಶಾಲತಾ ನಾಯಕ್, ಉಮಾದೇವಿ, ನಿರ್ಮಲಾ ಶೆಟಿ, ಉಮೇಶ್ ಕಲ್ಲಿಗುಡ್ಡೆ, ಕೋಶಾಧಿಕಾರಿ-ರಾಘವೇಂದ್ರ ಸುವರ್ಣ ಯುವ ಮೋರ್ಚಾ: ಅಧ್ಯಕ್ಷ-ಅವಿನಾಶ್ ಉಳ್ತೂರು, ಪ್ರಧಾನ ಕಾರ್ಯದರ್ಶಿ-ಚೇತನ್ ಬಂಗೇರಾ ಮಂದರ್ತಿ, ಸುನಿಲ್ ಖಾರ್ವಿ ಖಾರ್ವಿಕೇರಿ ಮಹಿಳಾ ಮೋರ್ಚಾ: ಅಧ್ಯಕ್ಷ-ರೂಪಾ ಪೈ ಕೋಟೇಶ್ವರ, ಪ್ರಧಾನ ಕಾರ್ಯದರ್ಶಿ ಅನಿತಾ ಶ್ರೀಧರ್ ಸಾಲಿಗ್ರಾಮ ಹಿಂದುಳಿದ ವರ್ಗ:…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.25ರ ಗುರುವಾರ 14 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢವಾಗಿದೆ. ಇವುಗಳಲ್ಲಿ 10 ಪ್ರಕರಣ ಮಹಾರಾಷ್ಟ್ರದಿಂದ ಹಿಂದಿರುಗಿದವರದ್ದಾಗಿದ್ದು, 4 ಪ್ರಕರಣ ಸ್ಥಳೀಯ ಸಂಪರ್ಕದಿಂದ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ನಾಲ್ವರು ಪುರುಷರು, ಏಳು ಮಹಿಳೆಯರು ಹಾಗೂ ಮೂವರು ಮಕ್ಕಳ ಸೇರಿದ್ದಾರೆ. ಈ ತನಕ ಒಟ್ಟು 13,840ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,336ನೆಗೆಟಿವ್, 1,116 ಪಾಸಿಟಿವ್ ಬಂದಿದ್ದು, 388 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 103 ನೆಗೆಟಿವ್, 14 ಪಾಸಿಟಿವ್ ಬಂದಿದೆ. 94 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಸದ್ಯ ಒಟ್ಟು 1,116ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1020 ಮಂದಿ ಬಿಡುಗಡೆಯಾಗಿದ್ದು, 94  ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

Read More