Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಿವೃತ್ತ ಅಧ್ಯಾಪಕ, ಹಿರಿಯ ಪುರೋಹಿತ ಗಂಗೊಳ್ಳಿ ನಿವಾಸಿ ಕೋಟ ರಾಮದಾಸ ಭಟ್ (99) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಗಂಗೊಳ್ಳಿ ಪರಿಸರದಲ್ಲಿ ‘ಮಾಸ್ಟ್ರ ಮಾಮ್’ ಎಂದೇ ಪರಿಚಿರಾಗಿದ್ದ ಇವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳಲ್ಲಿ ಸುಮಾರು 26 ವರ್ಷಗಳ ಕಾಲ ಸಂಸ್ಕೃತ ಮತ್ತು ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ತಾಂತ್ರಿಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು, ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಮತ್ತು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿಯವರ ಪ್ರೀತಿಗೆ ಪಾತ್ರರಾಗಿ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿ ಗುರುತಿಸಿಕೊಂಡಿದ್ದರು. ಕಾರ್ಕಳದಲ್ಲಿ ವಾಸ್ತವ್ಯವಿದ್ದ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸಹಪಾಠಿಯಾಗಿ ಉಪನಿಷತ್ ಮತ್ತು ವೇದಾಂತಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅಭ್ಯಸಿಸಿದಲ್ಲದೆ ಶ್ರೀ ಸುಧೀಂದ್ರ ತೀರ್ಥ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾನಿಲಯದ ನಡೆಸಿದ ಅಂತಿಮ ಪರೀಕ್ಷೆಗಳಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ ಜೊವಿಟಾ ನೊರೋನ್ಹಾ 5ನೇ ರ‍್ಯಾಂಕ್ ಗಳಿಸಿದ್ದಾರೆ. ಸಿಜಿಪಿ 8.62 ಅಂಕ ಗಳಿಸುವ ಮೂಲಕ ಜೊವಿಟಾ ಈ ಸಾಧನೆ ಮಾಡಿದ್ದಾರೆ. ಕ್ಯಾಂಪಸ್ ಸೆಲೆಕ್ಷನ್ ಮೂಲಕ ಬೆಂಗಳೂರಿನ ಗ್ರಾಂಟ್‌ಥಾರ್ನ್‌ಟನ್ ಕಂಪನಿಗೆ ಆಯ್ಕೆಯಾಗಿರುವ ಅವರು ಪ್ರಸ್ತುತ ಟ್ಯಾಕ್ಸ್ ಅನಾಲಿಸ್ಟ್ ಆಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. 2019-20ರ ಈ ಶೈಕ್ಷಣಿಕ ಬ್ಯಾಚ್‌ನಲ್ಲಿ ಆಳ್ವಾಸ್ ಎಂಬಿಎ ವಿಭಾಗದ ೭೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ. ರಾಮಚಂದ್ರ ಅವರು ಮಂಡಿಸಿದ ‘ಮರಾಟಿ ಸಮುದಾಯಗಳ ತೌಲನಿಕ ಅಧ್ಯಯನ’ ಎಂಬ ಸಮಾಜಶಾಸ್ತ್ರದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ (ಡಾಕ್ಟರೇಟ್) ನೀಡಿ ಗೌರವಿಸಿದೆ. ಇವರಿಗೆ ಹಂಪಿ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ. ಗಂಗಾಧರ ದೈವಜ್ಞ ರು ಮಾರ್ಗದರ್ಶಕರಾಗಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಡಾ. ಪೂರ್ವಚಾರ್. ಎಂ. ಅವರು ಸಹ ಮಾರ್ಗದರ್ಶಕರಾಗಿದ್ದರು. ಇವರು ಮುಲ್ಕಿ ವಿಜಯಾ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸಾಧಕರಿಗೆ ಮಂಗಳವಾರ ಸನ್ಮಾನ ಕಾರ್ಯಕ್ರಮ ನಡೆಯಿತು. ಕಂಬಳ ಕ್ರೀಡೆಯಲ್ಲಿ ದಾಖಲೆ ಮಾಡಿದ ನಾಯ್ಕನಕಟ್ಟೆಯ ವಿಶ್ವನಾಥ ದೇವಾಡಿಗ ಮತ್ತು ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಬಹುಮಾನಗಳಿಸಿದ ನಿರೀಕ್ಷಾ ಅರೆಹೊಳೆ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮರವಂತೆ ಬಡಾಕೆರೆ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪೂಜಾರಿ, ಎಂ. ವಿನಾಯಕ ರಾವ್, ನರಸಿಂಹ ದೇವಾಡಿಗ, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಗಾಣಿಗ, ಅಶೋಕಕುಮಾರ ಶೆಟ್ಟಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತ್ರಾಸಿ-ಮರವಂತೆ ಹಾಗೂ ಸೋಮೇಶ್ವರ ಬೀಚ್ ಅಭಿವೃದ್ಧಿ ಬಗ್ಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಸಂಸದ ಬಿ. ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಗುರುವಾರ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಮರವಂತೆ ತ್ರಾಸಿ ಬೀಚ್ ಹಾಗೂ ಒತ್ತಿನಣೆಗೆ ಬೀಚ್ ಅಭಿವೃದ್ಧಿಗೆ ಒಟ್ಟು25 ಕೋಟಿ ರೂ ಯೋಜನೆ ಸಿದ್ಧವಾಗುತ್ತಿದೆ. ಮರವಂತೆ ಬೀಚ್‌ಗೆ ಈ ಮೊದಲೇ 5 ಕೋಟಿ ಯೋಜನೆ ಸಿದ್ಧಗೊಂಡಿದ್ದು ಬಜೆಟ್‌ನಲ್ಲಿ 10 ಕೋಟಿ ಹಾಗೂ ಸೋಮೇಶ್ವರ ಬೀಚ್‌ಗೆ10 ಕೋಟಿಗೆ ಅನುಮೋದನೆ ದೊರೆತಿದೆ. ಶೀಘ್ರವೇ ಎರಡೂ ಬೀಚ್‌ಗಳು ಮಾದರಿ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ ಎಂದರು. ಸಂಸದರಾದ ಬಿ. ವೈ. ರಾಘವೇಂದ್ರ ಅವರು ಮಾತನಾಡಿ ಪ್ರವಾಸೋದ್ಯಮಕ್ಕಾಗಿ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಮೂಲಕ ಪ್ರವಾಸಿ ತಾಣ ಅಭಿವೃದ್ಧಿ ಜೊತೆಗೆ ಯುವಶಕ್ತಿಗೆ ಉದ್ಯೋಗವು ದೊರೆಯಲಿದೆ. ಸೋಮೇಶ್ವರ ಬೀಚ್ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಓಕ್ ವುಡ್ ಶಾಲೆಯಲ್ಲಿ ‘ಮಳೆ ನೀರಿನೊಂದಿಗೆ ಅನುಸಂಧಾನ’ ವಿಶೇಷ ಕಾರ್ಯಾಗಾರ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರತ್ನಶ್ರೀ ಜೋಸೆಫ್ ಜಿ ಎಮ್ ರೆಬೆಲ್ಲೊ ಕುಡಿಯುವ ನೀರಿನ ಸಮಸ್ಯೆ “ಮಳೆ ನೀರಿನೊಂದಿಗೆ ಅನುಸಂಧಾನ” ಎಂಬ ವಿಚಾರದ ಬಗ್ಗೆ ವಿಧ್ಯಾರ್ಥಿಗಳಿಗೆ ವಿವರಿಸಿದರು ಮತ್ತು ಅದರಲ್ಲೂ ವಿಶೇಷವಾಗಿ ನೀರಿನ ಹಾಗೂ ಸ್ವಚ್ಚತೆಯ ವಿಚಾರದಲ್ಲಿ ಮಾಹಿತಿ ನೀಡಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮಾಹಿತಿಯನ್ನು ನೀಡಿದರು. ಪೋಟ್೯ ಗೇಟ್ ಎಜ್ಯುಕೇಶನ್ ಕಾರ್ಯದರ್ಶಿ ನೀತ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಿನೋದ ಸುವರ್ಣ ವ್ಯಕ್ತಿ ಪರಿಚಯವನ್ನು ಮಾಡಿದರು ಅವಿಲಾ ಡಿಸೋಜ ಕಾರ್ಯಕ್ರಮದ ಸಾರಾಂಶವನ್ನು ತಿಳಿಸಿದರು. ವಂದನಾರ್ಪಣೆಯನ್ನು ಸಹನಾ ಶೆಟ್ಟಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಮುಖ್ಯಶಿಕ್ಷಕರು ಸಹಶಿಕ್ಷಕರು ಶಾಲೆಯ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಾ ಸಂಸ್ಥೆಯಾದ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ‘ತ್ರಿದಿನ ನಾಟಕೋತ್ಸವ’ ರಂಗ ಸುರಭಿ 2021ಎ.3 ರಿಂದ 5ರವರೆಗೆ ಪ್ರತಿದಿನ ಸಂಜೆ 6ಕ್ಕೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ ಎಂದು ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎ.೩ರಂದು ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ನಾಟಕಕರ್ತ ವಿಠ್ಠಲ ಭಂಡಾರಿ ದಿನದ ನುಡಿಗಳನ್ನಾಡಲಿದ್ದಾರೆ. ಅಂದು ಉಪನ್ಯಾಸಕಿ, ಸಾಹಿತಿ ಸುಧಾ ಆಡುಕಳ ಗೌರವ ಸನ್ಮಾನವಿರಲಿದೆ. ಏ.4ರಂದು ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಅವರು ದಿನದ ನುಡಿಗಳನ್ನಾಡಲಿದ್ದು, ರಂಗಭೂಮಿ ಹಾಗೂ ಕಿರುತೆರೆ ನಟ ಪ್ರದೀಪಚಂದ್ರ ಕುತ್ಪಾಡಿ ಅವರಿಗೆ ಗೌರವ ಸನ್ಮಾನಿವಿರಲಿದೆ. ಎ.೫ಂದು ಪ್ರಾಧ್ಯಾಪಕ ಸುಜಯೀಂದ್ರ ಹಂದೆ ದಿನದ ನುಡಿಗಳನ್ನಾಡಲಿದ್ದು, ಚಿತ್ರಕಲಾವಿದ ಎಂ.ಎಲ್. ಸೋಮವಾರದ ಅವರಿಗೆ ಗೌರವ ಸನ್ಮಾನವಿರಲಿದೆ ಎಂದು ಹೇಳಿದರು. ಮೂರು ನಾಟಕಗಳು ಎ.3ರ ಶನಿವಾರ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೃತಿಯಾಧಾರಿದ ಸುರಭಿ ರಿ.…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ/ಸೌದಿ ಅರೇಬಿಯಾ: ಕಳೆದ 3 ತಿಂಗಳಿನಿಂದ ಪಾರ್ಶ್ವವಾಯು ಪೀಡಿತರಾಗಿ ಸೌದಿ ಅರೇಬಿಯಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಸಿ ಟೆಕ್ನೀಷಿಯನ್, ಕುಂದಾಪುರದ ಖಾರ್ವಿಕೇರಿ ನಿವಾಸಿ ಚಂದ್ರಶೇಖರ ಪಾಂಡುರಂಗ ಸಾರಂಗ ಅವರನ್ನು ಸುರೇಶ್ ರಾವ್ ನೇರಂಬಳ್ಳಿ ಹಾಗೂ ಗಲ್ಫ್ ಕನ್ನಡಿಗರ ಒಕ್ಕೂಟದಿಂದ ಮಾನವೀಯತೆಯ ಕಾರ್ಯಾಚರಣೆಯಿಂದಾಗಿ ಹುಟ್ಟೂರಿಗೆ ಕರೆತರಲು ಸಾಧ್ಯವಾಗಿದೆ. ಕಳೆದ 30 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಎಸ್ ಟೆಕ್ನೀಷಿಯನ್ ಆಗಿ ದುಡಿಯುತ್ತಿರುವ ನಿವಾಸಿ ಚಂದ್ರಶೇಖರ ಪಾಂಡುರಂಗ ಸಾರಂಗ ಅವರು ರಿಯಾದ್’ನ ಆಸ್ಪತ್ರೆಯಲ್ಲಿ ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಭಾರತೀಯ ಸ್ನೇಹಿತರ ಸಹಕಾರದಿಂದ ಕುಂದಾಪುರದಲ್ಲಿರುವ ಕುಟುಂಬಿಕರಿಗೆ ವಿಷಯ ತಲುಪಿಸಲಾಗಿತ್ತು. ಕೊರೋನಾ ಮಹಾಮಾರಿ ಕಾರಣದಿಂದ ಆಸ್ಪತ್ರೆಗೆ ಸಂದರ್ಶಕರನ್ನು ಬಿಡುತ್ತಿರಲ್ಲಿಲ್ಲ ಅವರ ಆರೋಗ್ಯ ಸ್ಥಿತಿಯನ್ನು ತಿಳಿಯದೇ ಆತಂಕಗೊಂಡು ಅವರ ಮಗನು ಮೂಲತ: ಕೋಟೇಶ್ವರದವರಾದ ಪ್ರಸ್ತುತ ಕುವೈತ್ ನಲ್ಲಿರುವ ಸುರೇಶ್ ರಾವ್ ನೇರಂಬಳ್ಳಿಯವರನ್ನು ಸಂಪರ್ಕಿಸಿ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆ ಸಹಾಯಕ್ಕಾಗಿ ಕೇಳಿಕೊಂಡಿದ್ದರು. ಸುರೇಶ್ ರಾವ್ ಅವರು ಚಂದ್ರಶೇಖರ್ ಅವರ ಕಂಪೆನಿ ಮತ್ತು ಮಾಲೀಕರ ಬಗ್ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಬದುಕಿನಲ್ಲಿ ಏನಾದರೂ ಸಾಧಿಸುವ ಛಲವಿದ್ದು, ಅದರ ಕಡೆ ಹೆಚ್ಚು ಗಮನ ಹರಿಸಿ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಸಾಧನೆ ಸಾಧ್ಯ ಎಂದು ಶ್ರೀಕ್ಷೇತ್ರ ಅಮೃತೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಆನಂದ್ ಸಿ ಕುಂದರ್ ತಿಳಿಸಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ. ಕೋಟ ಡಾ. ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲೆಯ ಮೊದಲ ಯುವ ಸಾಹಿತ್ಯ-ಸಂಸ್ಕೃತಿ ಸಮ್ಮೆಳನ ತಿಂಗಳ ಪುರಸ್ಕಾರ ಪ್ರದಾನ, ಅಭಿನಂದನಾ ಸಮಾರಂಭ ಅನರ್ಘ್ಯ-2021(ಚಮತ್ಕಾರದ ಬೆರಗು) ಕಾರ್ಯಕ್ರಮ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ತಿಂಗಳ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸುರೇಂದ್ರ ಶೆಟ್ಟಿ ಸ್ಮಾರಕ ಕುಂದಕನ್ನಡ ಶ್ರೀ ಪುರಸ್ಕಾರ ಸ್ವರಾಜ್ಯ ಲಕ್ಷ್ಮೀ, ಮಂಜುನಾಥ ಕೋಟ ರಂಗಭೂಮಿ ಪುರಸ್ಕಾರ ರವಿ ಎಸ್ ಬೈಕಾಡಿ, ಕೆ.ಸಿ ಕುಂದರ್ ಉದ್ಯಮಿ ಪುರಸ್ಕಾರ ಶಿವರಾಮ ಕೊಠಾರಿ, ರಾಘವೇಂದ್ರ ಉರಾಳ ಸಾಂಸ್ಕೃತಿಕ ಪುರಸ್ಕಾರ ಅವಿನಾಶ್ ಕಾಮತ್, ಪಿ. ಕಾಳಿಂಗ…

Read More

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇನೆ ಸೇರುತ್ತಿದ್ದು, ಬೈಂದೂರು ತಾಲೂಕಿನ ಯುವತಿಯೂರ್ವಳು ಇದೀಗ ಭಾರತೀಯ ಗಡಿ ಭದ್ರತಾ ಪಡೆಗೆ (BSF) ಸೇರಲು ಸಿದ್ಧಳಾಗಿದ್ದಾಳೆ. ಬೈಂದೂರು ತಾಲೂಕಿನ ಏಳಜಿತ ಗ್ರಾಮದ ಹುಣ್ಸೆಮಕ್ಕಿ ನಿವಾಸಿಯಾದ ವಿದ್ಯಾ ಗೌಡ ಪ್ರಸಕ್ತ ಸಾಲಿನಲ್ಲಿ ಸೇನೆಗೆ ಸೇರುತ್ತಿರುವ ಉಡುಪಿ ಜಿಲ್ಲೆಯ ಏಕೈಕ ಅಭ್ಯರ್ಥಿಯೆನಿಸಿಕೊಂಡಿದ್ದು ಏಪ್ರಿಲ್ 1ರಿಂದ ತರಬೇತಿಗೆ ಹಾಜರಾಗಲಿದ್ದಾರೆ. ಏಳಜಿತದ ಗ್ರಾಮದ ಹುಣ್ಸೆಮಕ್ಕಿ ರಮೇಶ್ ಗೌಡ ಹಾಗೂ ಪಾರ್ವತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಕಿರಿಯವಳಾದ ವಿದ್ಯಾ ಹೆಚ್. ಗೌಡ ಅವರು ಕ್ರೀಡೆ ಹಾಗೂ ಕಲಿಕೆಯಲ್ಲಿ ಬಾಲ್ಯದಿಂದಲೂ ಚುರುಕು. ವಿದ್ಯಾ ಪ್ರಾಥಮಿಕ ಶಿಕ್ಷಣವನ್ನು ಏಳಜಿತ ಶಾಲೆ, ಹೈಸ್ಕೂಲ್ ಶಿಕ್ಷಣವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ, ಪಿಯುಸಿ ಶಿಕ್ಷಣವನ್ನು ಕುಂದಾಪುರ ಜ್ಯೂನಿಯರ್ ಕಾಲೇಜು, ಬಿಎಸ್ಸಿ ಪದವಿಯನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಹಾಗೂ ಬಿ.ಎಡ್ ಪದವಿಯನ್ನು ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಿ.ಎಡ್ ಪದವಿಯ…

Read More