Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2021-22ನೇ ಸಾಲಿಗೆ ತೆರಿಗೆ ದರವನ್ನು ಜನರಿಗೆ ಹೊರೆಯಾಗದಂತೆ, ಮಾರುಕಟ್ಟೆ ದರದ ಅನ್ವಯ ಪರಿಷ್ಕರಿಸಲು ಪುರಸಭೆಯ ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು. ತೆರಿಗೆ ಏರಿಕೆ ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಸಭೆಯನ್ನು ಬಹಿಷ್ಕರಿಸಿದ ಘಟನೆಯೂ ನಡೆಯಿತು. ಸೋಮವಾರ ನಡೆದ  ಸಭೆಯಲ್ಲಿ, ಸರ್ಕಾರದ ಸುತ್ತೋಲೆ, ಪುರಸಭೆ ಕೈಗೊಳ್ಳಬಹುದಾದ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು, ಸುತ್ತೋಲೆಯನ್ನು ನಿರ್ಲಕ್ಷ್ಯ ಮಾಡಿದರೆ ಅನುದಾನಗಳಿಗೆ ತೊಡಕಾಗಬಹುದು ಎಂದರು. ದರ ಪರಿಷ್ಕರಣೆಯ ಸಂದರ್ಭದಲ್ಲಿ ಪ್ರಾದೇಶಿಕ ಮೌಲ್ಯಮಾಪನ ಆಧರಿಸಿ ವಾಣಿಜ್ಯ, ವಸತಿ, ಖಾಲಿ ನಿವೇಶನಗಳನ್ನು ಪ್ರತ್ಯೇಕವಾಗಿ ಪರಿಗಣಿಸಲು ಅವಕಾಶವಿದೆ ಎಂದರು. ‘ಕೋವಿಡ್ ಕಾಲಘಟ್ಟದಲ್ಲಿ ಜನರಿಗೆ ಹೊರೆಯನ್ನು ಹೇರುವುದು ಇಷ್ಟವಿಲ್ಲ’ ಎಂದ ಕೆ.ಮೋಹನ್ದಾಸ್ ಶೆಣೈ, ‘ಆಡಳಿತ ಹಾಗೂ ವಿಪಕ್ಷ ಸದಸ್ಯರು ಒಟ್ಟಾಗಿ ಚರ್ಚೆ ಮಾಡಬೇಕಿತ್ತು. ಆದರೆ, ಅವರ ಅನುಪಸ್ಥಿತಿಯಲ್ಲಿ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಸರ್ಕಾರದ ಸಲಹೆ ಹಾಗೂ ಜನ ಸಾಮಾನ್ಯರ ಜೀವನ ನಿರ್ವಹಣೆ ಎರಡನ್ನೂ ಗಮನದಲ್ಲಿ ಇರಿಸಿಕೊಂಡು ದರ ಪರಿಷ್ಕರಣೆ ಮಾಡಬೇಕಾಗಿದೆ’…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೊಂಬೆಯಾಟ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮ (1995-2020) ಹಾಗೂ ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ (1921-2021)ದ ಅಂಗವಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 64ನೇ ತಿಂಗಳ ಕಾರ್ಯಕ್ರಮ ನಡೆಯಿತು. ಡಾ. ಹೆಚ್. ಆರ್. ಹೆಬ್ಬಾರ್ ಮತ್ತು ಡಾ. ಪುಷ್ಪಗಂಧಿನಿ ಹಾಗೂ ಸದಾಶಿವ ಐತಾಳ್‌ರವರನ್ನೂ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರದ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್ ನ ಡಾ. ವೆಂಕಟರಾಮ ಉಡುಪ, ಡಾ. ಹೆಚ್. ಆರ್. ಹೆಬ್ಬಾರ್, ಡಾ. ಪುಷ್ಪಗಂಧಿನಿ, ಡಾ. ಕಾಶೀನಾಥ್ ಪೈ ಗಂಗೊಳ್ಳಿ, ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ಡಾ.ಹೆಚ್. ಆರ್. ಹೆಬ್ಬಾರ್ ರವರ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಹರಿ ಓಂ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ರಥೋತ್ಸವದ ಪ್ರಯುಕ್ತ ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಜರಗಿದ ಗೌಡ ಸಾರಸ್ವತ ಸಮಾಜ ಬಾಂಧವರ 30 ಗಜಗಳ ಸೀಮಿತ ಓವರ್‌ಗಳ ಗಂಗೊಳ್ಳಿ ಜಿಎಸ್‌ಬಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ವಿ. ಕೆ. ಪೋವಾಸ್ ತಂಡ ಪ್ರಥಮ ಸ್ಥಾನಿಯಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸಂಜೆ ನಡೆದ ಅಂತಿಮ ಹಣಾಹಣಿಯಲ್ಲಿ ಗಂಗೊಳ್ಳಿಯ ವಿ. ಕೆ. ಪೋವಾಸ್ ತಂಡವು ಗಂಗೊಳ್ಳಿ ಸೂಪರ್ ಆಮ್ಚಿಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಉಪಾಂತ್ಯ ಪಂದ್ಯದಲ್ಲಿ ವಿ. ಕೆ. ಪೋವಾಸ್ ತಂಡವು ರೈಸಿಂಗ್ ಸ್ಟಾರ್ ತ್ರಾಸಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರೆ ಗಂಗೊಳ್ಳಿ ಸೂಪರ್ ಆಮ್ಚಿಸ್ ತಂಡ ಅಂಕಗಳ ಆಧಾರದಲ್ಲಿ ನೇರವಾಗಿ ಫೈನಲ್ ಪ್ರವೇಶ ಪಡೆದುಕೊಂಡಿತು. ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿ. ಕೆ. ಪೋವಾಸ್ ತಂಡದ ಎಂ.ರಮೇಶ ಪೈ ಪಡೆದುಕೊಂಡರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗಂಗೊಳ್ಳಿ ಸೂಪರ್ ಆಮ್ಚಿಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ವತಿಯಿಂದ ಪತ್ರಿಕೆಯ ಪುಟ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ವಿಜಯ ಕರ್ನಾಟಕದ ಇನ್ಪೋಗ್ರಾಫಿಕ್ ಡಿಸೈನರ್ ಧರಣೇಶ್ ಕೆ.ಬಿ ವಿದ್ಯಾರ್ಥಿಗಳಿಗೆ ಪುಟ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು. ಪುಟ ವಿನ್ಯಾಸಕಾರನಿಗೆ ಸೌಂದರ‍್ಯ ಪ್ರಜ್ಞೆ ಅತ್ಯಗತ್ಯ. ಸುದ್ದಿ-ಮಾಹಿತಿಗಳನ್ನು ನೀಡುವುದಷ್ಟೇ ಅಲ್ಲ; ಓದುಗರಿಗೆ ಅದು ಅಷ್ಟೇ ಆಕರ್ಷಕವಾಗಿ ಕಾಣುವಂತೆ ನೀಡಬೇಕು. ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಈಗಿನ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಪ್ರಾಯೋಗಿಕ ಪತ್ರಿಕೆಯನ್ನು ವೃತ್ತಿಪರ ಪತ್ರಿಕೆಯಂತೆ ವಿನ್ಯಾಸ ಗೊಳಿಸುವುದನ್ನು ಕಲಿಯಬೇಕು’ ಎಂದರು. ಪತ್ರಿಕೆಯಲ್ಲಿ ಬಳಸುವ ಅಕ್ಷರಶೈಲಿಗಳ ಬಗ್ಗೆ ಹೇಳಿದ ಧರಣೇಶ್, ಸಾಮಾನ್ಯವಾಗಿ ಉಚಿತ ಕನ್ನಡ ಫಾಂಟ್‌ಗಳು ಲಭ್ಯವಿರುತ್ತವೆ. ಅವುಗಳು ಅಷ್ಟು ಆಕರ್ಷಕವಾಗಿರುವುದಿಲ್ಲ. ಆದರೆ ಪ್ರೀಮಿಯಂ ಫಾಂಟ್‌ಗಳನ್ನು ಬಳಸಿದಾಗ ಪುಟವು ಆಕರ್ಷವಾಗಿ ವಿನ್ಯಾಸಗೊಳ್ಳುತ್ತದೆ’ ಎಂದು ತಿಳಿಸಿದರು. ಪುಟ ವಿನ್ಯಾಸದಲ್ಲಿ ಬಳಕೆಯಾಗುವ ಬಾಡಿ ಪ್ಯಾರಾ, ರಿವರ್ಸ್ ಹೆಡ್ಡಿಂಗ್, ಮಾರ್ಜಿನ್, ಪಾಯಿಂಟರ್ ಫೋಟೋ, ಫ್ಲೈಯರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿರುವ ಭಾರತ್ ಸಿನೆಮಾಮಾಸ್‌ಗೆ ಸೋಮವಾರ ಸಂಜೆ ಹೀರೋ ಚಿತ್ರತಂಡ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಒಂದಷ್ಟು ಹೊತ್ತು ಸಂವಾದ ನಡೆಸಿದರು. ಹೀರೋ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ,  ನಿರ್ದೇಶಕ ಎಂ. ಭರತ್‌ರಾಜ್, ನಟರಾದ ಪ್ರಮೋದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕಿರಣ್ ಚಂದ್ರಶೇಖರ್, ರಕ್ಷಿತ್ ರಾಮಚಂದ್ರ, ಸಲ್ಮಾನ್ ಅಹಮ್ಮದ್, ಸುಹಾಸ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಹಲವರು ಸಂದರ್ಭ ಇದ್ದರು. ಲಾಕ್‌ಡೌನ್ ಬಳಿಕ ಕಡಿಮೆ ಅವಧಿಯಲ್ಲಿ ನಿರ್ಮಾಣವಾದ ಹೀರೋ ಸಿನೆಮಾ ಮಾರ್ಚ್ 5ರಂದು ಬಿಡುಗಡೆಗೊಂಡು ಯಶಸ್ವಿಯಾಗಿ ಸಾಗುತ್ತಿದ್ದು, ಪ್ರೇಕ್ಷಕವರ್ಗದಿಂದ ಉತ್ತಮ ಅಭಿಪ್ರಾಯ ಕೇಳಿಬಂದಿದೆ. ಈ ನಡುವೆ ಚಿತ್ರತಂಡ ಕೇಸ್ ಸ್ಟಡಿ ಕಂಟೆಸ್ಟ್ ಆಯೋಜಿಸಿದ್ದು ಚಿತ್ರದ ಕುರಿತಾಗಿ  ನಡೆಸುವ 50 ಉತ್ತಮ ಕೇಸ್ ಸ್ಟಡಿಯನ್ನು ಆರಿಸಿ ರಿಷಬ್ ಶೆಟ್ಟಿ ಫಿಲ್ಮ್ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ನೀಡಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಜುವೆಲ್ಲರಿಯೊಂದರಲ್ಲಿ ಚಿನ್ನ ಮತ್ತು ನಗದು ಹೂಡಿಕೆ ಮಾಡಿದ ಗ್ರಾಹಕರಿಗೆ ಹಲವು ಸಮಯದಿಂದ ಹೂಡಿಕೆ ಮಾಡಿರುವ ಚಿನ್ನ ಮತ್ತು ನಗದು ಹಿಂದಿರುಗಿಸದೆ ವಂಚಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಮೊಹಮ್ಮದ್ ಇಪ್ತಿಕಾರ್ ಕಂಡ್ಲೂರು, ಮೋಮಿನ್ ಯೂಸೆಫ್ ಆಲಿ ಭಟ್ಕಳ, ಗಣೇಶ್ ಶೆಟ್ಟಿ, ಖತೀಬ್ ಅಬ್ದುಲ್ ರೆಹಮಾನ್ ಭಟ್ಕಳ, ಬಿ.ಎಂ.ಜಾಫರ್, ಫರಾಜ್ ಆಶೀಪ್, ನಜೀರ್ ಅಹಮ್ಮದ್, ಮೊಹಮ್ಮದ್ ಮುಶ್ರಫ್, ಮೊಹಮ್ಮದ್ ಆಸೀಪ್, ಮೊಹಮ್ಮದ್ ನೂರೈಸ್, ಎಸ್.ಜೀವನ್, ಬೆಟ್ಟಿ ಭಾಷಾ, ಬೆಟ್ಟಿ ಅಕ್ಬರ್, ಬಶೀರ್ ಅಹ್ಮದ್, ಕೆ.ಮುನೀರ್, ಅರ್ಫಾದ್ ಮೊಹಮ್ಮದ್, ಮೊಹಮ್ಮದ್ ಪಾಮೀಝಾ, ಸರ್ದಾರ್ ಸವೀದ್ ಅಕ್ಬರ್, ನೌಶಾದ್, ಮೊಹಮ್ಮದ್ ಫಾರೀಸ್, ಬಿ.ಭಾನು, ನಾಸೀಯಾ, ವಾಹಿದಾ ಆಪಾದಿತರು. ಕುಂದಾಪುರ ನಿವಾಸಿ ಇರ್ಷಾದ್ ಗುಲ್ಜಾರ್ ಸೇರಿ 24 ಜನ ಗ್ರಾಹಕರು ಚಿನ್ನ ಹಾಗೂ ನಗದು ಕಳೆದುಕೊಂಡವರು. ಕುಂದಾಪುರ ಮುಖ್ಯರಸ್ತೆಯಲ್ಲಿ 2000ರಲ್ಲಿ ಆರಂಭವಾದ ಜುವೆಲ್ಲರಿಯಲ್ಲಿ ಗ್ರಾಹಕರು ಹೆಚ್ಚಿನ ಬಡ್ಡಿಯಾಸೆಗೆ ಚಿನ್ನ ಹಾಗೂ ನಗದನ್ನು ಠೇವಣಿ ಇರಿಸಿದ್ದರು. 2500 ರೂನಂತೆ ನಗದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಮಕ್ಷತ್ರಿಯ ಸಮಾಜವನ್ನು ಸಾಮಾಜಿಕವಾಗಿ ಸಂಘಟಿಸುವ ಸಲುವಾಗಿ ಇಪ್ಪತ್ತಾರು ವರ್ಷಗಳ ಹಿಂದೆ ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘ ಸ್ಥಾಪಿಸಿದ್ದು, ಬಳಿಕ ಅದು ವಿಶ್ವ ರಾಮಕ್ಷತ್ರಿಯ ಮಹಾ ಸಂಘವಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಾಜದ ಸಂಘಟನೆ ಹಾಗೂ ಉನ್ನತಿಗಾಗಿ ಶ್ರಮಿಸಲಾಗುತ್ತಿದೆ ಎಂದು ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ್ ನಾಯಕ್ ಹೇಳಿದರು. ಅವರು ಕುಂದಾಪುರ ಪಾರಿಜಾತ ಸಭಾಭವನದಲ್ಲಿ ನಡೆದ ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ನೂತನ ಪಧಾದಿಕಾರಿಗಳ ಸಭೆ ಹಾಗೂ ಪಧಾದಿಕಾರಿಗಳ ವಿಳಾಸ ಕೈಪಿಡಿ ಬಿಡುಗಡೆಗೋಳಿಸಿ ಮಾತನಾಡಿದರು. ಸುಮಾರು 500 ವರ್ಷಗಳ ಹಿಂದೆ ಉತ್ತರದ ಮದ್ಯ ಪ್ರದೇಶ, ಗೋವಾದಲ್ಲಿ ನೆಲೆಸಿದ್ದ ವಿಶ್ವ ರಾಮಕ್ಷತ್ರಿಯರು ಪೋರ್ಚುಗೀಸರ ಆಳ್ವಿಕೆಯ ನಂತರ ದಕ್ಷಿಣಕ್ಕೆ ಬಂದು ಉತ್ತರ ಕನ್ನಡ, ಉಡುಪಿ, ದ.ಕ ಜಿಲ್ಲೆ ಹಾಗೆಯೇ ಕೇರಳದ ಬೇಕಲ್ ವರೆಗೆ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ಮಲೆನಾಡು, ಬಯಲುಸೀಮೆ, ಬೆಂಗಳೂರು, ಮೈಸೂರಿನಲ್ಲೂ ಭಾಗಗಳಲ್ಲಿಯೂ ಉದ್ಯೋಗಕ್ಕಾಗಿ ವಾಸವಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ರಾಮಕ್ಷತ್ರಿಯ ಸಮಾಜ ಬಹಳ ಶ್ರಮವಹಿಸಿ ಆರ್ಥಿಕವಾಗಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲ್ಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೆ ನಂ 180, 157, 189 ರಲ್ಲಿನ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 4ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೆ ನಂ. 174. 56ರಲ್ಲಿನ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ SAND APPನ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದ್ದರಿಂದ ಸದರಿ ಮರಳನ್ನು ಪಡೆದುಕೊಳ್ಳಲು ಇಚ್ಚಿಸುವವವರು UDUPI E-SAND APP ಮುಖಾಂತರ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ , ರಜತಾದ್ರಿ, A ಬ್ಲಾಕ್, ಮೊದಲನೇ ಮಹಡಿ, ಮಣಿಪಾಲ, ಉಡುಪಿ ಜಿಲ್ಲೆ, ಉಡುಪಿ, ದೂರವಾಣಿ ಸಂಖ್ಯೆ: 0820-2572333, UDUPI E-SAND APP ದೂರವಾಣಿ ಸಂಖ್ಯೆ – 6366248666, 6366743888, 6366871888 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಭೂವಿಜ್ಞಾನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲೆಗಳ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಹರ್ಷಾ ಆಚಾರ್ ಕೋಟೇಶ್ವರ ಇವರು ವಿದ್ಯಾರ್ಥಿಗಳನ್ನು ಸಮ್ಮೇಳಿಸಿ ಟ್ರೆಡ್ ಆರ್ಟ್, ಏಕಪಾತ್ರಾಭಿನಯ, ಕರೋಕೆ ಗಾಯನ, ಜಾನಪದ ಗೀತೆ, ಉಭಯತಿಟ್ಟು ಯಕ್ಷಗಾನದ ಹೆಜ್ಜೆಯೊಂದಿಗೆ ಅಪೂರ್ವ ಸಂಭಾಷಣೆಯ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಮ್. ಅಬ್ದುಲ್ ರೆಹಮಾನ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಹಾಗೂ ಲಲಿತ ಕಲಾರಂಗದ ಸಂಯೋಜಕರಾದ ಡಾ. ಸಂದೀಪ ಕುಮಾರ ಶೆಟ್ಟಿ ಮತ್ತು ಲಲಿತ ಕಲಾರಂಗದ ವಿದ್ಯಾರ್ಥಿ ಕಾರ್ಯದರ್ಶಿ ಕುಮಾರಿ ಕಾವ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಜಯ್ ಕುಮಾರ ಅತಿಥಿ ಪರಿಚಯಿಸಿ, ವಿದ್ಯಾರ್ಥಿ ಯಲ್ಲಪ್ಪ ಸ್ವಾಗತಿಸಿ, ವಿದ್ಯಾರ್ಥಿನಿ ನಮಿತಾ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಓಕ್ ವುಡ್ ಇಂಡಿಯನ್ ಸ್ಕೂಲ್‌ನಲ್ಲಿ ಈಚೆಗೆ ಮಹಿಳಾ ದಿನದ ಅಂಗವಾಗಿ ಹದಿಹರೆಯದವರಿಗೆ ಗ್ರೆಸ್‌ಪುಲ್ ಗ್ರೋಯಿಂಗ್ ಎಂಬ ಬ್ಯಾನರ್ ಅಡಿಯಲ್ಲಿ 6 ಹಾಗೂ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಆಯುರ್ವೇದ ತಜ್ಞೆ ಡಾ.ಸ್ವಾತಿ ಶೇಟ್ ಮಾತನಾಡಿ, ಮಗುವಿನ ಜೀವನದ ಪ್ರಮುಖ ಹಂತದ ಬಗ್ಗೆ ಹಾಗೂ ವಯಸ್ಸಿನಲ್ಲಿ ಮಗುವಿನ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಕುರಿತು ವಿವರಿಸಿದರು. ಕಾರ್ಯಾಗಾರವನ್ನು ಸಾಮಾನ್ಯ ಹಾಗೂ ಹುಡುಗಿಯರ ಆರೋಗ್ಯ ನೈರ್ಮಲ್ಯದ ಕುರಿತಾಗಿ ವಿಂಗಡಿಸಲಾಗಿತ್ತು. ಕಾರ್ಯಾಗಾರದಲ್ಲಿ ವಿದ್ಯಾಥಿ೯ಗಳು ಹಾಗೂ ಸಂಪನ್ಮೂಲ ವ್ಯಕ್ತಿ ಜತೆಗೆ ಪ್ರಶ್ನೋತ್ತರ ಸಂವಾದ ನಡೆಯಿತು. ಪೋರ್ಟ್‌ಗೇಟ್ ಎಜುಕೇಷನ್ ಕಾರ್ಯದರ್ಶಿ ನೀತಾ ಎ.ಶೆಟ್ಟಿ ಸ್ವಾಗತಿಸಿದರು, ವಿಜೇತ ಪರಿಚಯಿಸಿದರು, ಸ್ನೇಹಾ ನಿರೂಪಿಸಿದರು, ಪ್ರಜ್ಞಾ ವಂದಿಸಿದರು.

Read More