ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೃಷ್ಣಾನಂದ ಚಾತ್ರಾ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಮಾಜಿ ಪುರಸಭಾ ಸದಸ್ಯರಾದ ಸತೀಶ ಶೆಟ್ಟಿ, ವೀಣಾ ಪ್ರಕಾಶ, ಸವಿತಾ ಜಗದೀಶ, ನಾಗರಾಜ ರಾಯಪ್ಪನಮಠ, ವಿಶ್ವನಾಥ ಪೂಜಾರಿ, ಸತೀಶ್ ಶೆಟ್ಟಿ, ಜಯಾನಂದ ಖಾರ್ವಿ, ಅವರನ್ನು ಸರಕಾರ ನೇಮಕ ಮಾಡಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ94ಸಿ ಕಾಯಿದೆಯಡಿ 125 ಕುಟುಂಬಗಳಿಗೆ ಹಕ್ಕುಪತ್ರ ಮಂಜೂರಾಗಿದೆ. 115 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. 10 ಕುಟುಂಬಗಳಿಗೆ ಡೀಮ್ಡ್ ಫಾರೆಸ್ಟ್ ನೆಪದಲ್ಲಿ ಇನ್ನೂ ಹಕ್ಕು ಪತ್ರ ನೀಡಿಲ್ಲ. ನಿವೇಶನ ಮಂಜೂರು ಮಾಡಿದ ಬಳಿಕ ಡೀಮ್ಡ್ ಫರೆಸ್ಟ್ ನುಸುಳಿದ್ದು ಹೇಗೆ? ತಾಲೂಕಿನಾದ್ಯಂತ ಇಂತಹ ಪರಿಸ್ಥಿತಿ ಇದೆ. ಬಡವರು ಹಕ್ಕುಪತ್ರ ವಂಚಿರಾಗುವಂತಾಗಿದೆ ಎಂದು ತಾಪಂ ಸದಸ್ಯ ಕರಣ್ ಪೂಜಾರಿ ಅಸಮಾಧಾನ ಹೊರಹಾಕಿದರು.ಕುಂದಾಪುರ ತಾಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಕುಂದಾಪುರ ತಾಪಂ ಸಾಮನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಸದಸ್ಯ ಸಿದ್ದಾಪುರ ವಾಸುದೇವ ಪೈ ಮಾತನಾಡಿ, ಅಂಪಾರು ಗ್ರಾಮದ ಸರ್ವೆ ನಂಬ್ರ15ರಲ್ಲಿ 40 ವರ್ಷಗಳಿಂದ ನೆಲೆಸಿರುವ ಕುಟುಂಬ ವೊಂದರ ಭೂಮಿ ಡೀಮ್ಡ್ ಫಾರೆಸ್ಟ್ಗೆ ಸೇರಿದೆ. ಇಂತಹ ದೌರ್ಜನ್ಯ ಸರಿಯೇ ಎಂದು ಪ್ರಶ್ನಿಸಿದರು. ಸದಸ್ಯರಾದ ಜ್ಯೋತಿ ಪುತ್ರನ್, ದೇವದಾಸ ಶೆಟ್ಟಿ, ನಾರಾಯಣ ಗುಜ್ಜಾಡಿ ಡೀಮ್ಡ್ ಫಾರೇಸ್ಟ್ ಕಾನೂನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆದರು. ಕಂದಾಯ, ಅರಣ್ಯ ಇಲಾಖೆಯ ಗೊಂದಲಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಲೋಪದೋಷಗಳ ಬಗ್ಗೆ ಚರ್ಚಿಸುವ ಪುರಸಭೆ ಆಡಳಿತ ವ್ಯವಸ್ಥೆ ತನ್ನದೆ ಕಟ್ಟಡಕ್ಕೆ ಪಾರ್ಕಿಂಗ್ ಹೊಂದಿಲ್ಲ ಎಂದು ಮಾಜಿ ಸದಸ್ಯ ಕೇಶವ ಭಟ್ ಆರೋಪಿಸಿದ್ದಾರೆ. ಹೊಸ ಬಸ್ ನಿಲ್ದಾಣದ ಬಳಿಯಿರುವ ಪುರಸಭೆ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಪಾರ್ಕಿಂಗ್ ಇಲ್ಲ. ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್ ನಿಯಮಾವಳಿ ಅನುಸರಿಸಿಲ್ಲ ರಸ್ತೆಗೆ ತಾಗಿಕೊಂಡಿರುವ ಕಟ್ಟಡ ಇದಾಗಿದ್ದು ವಾಹನಗಳು ಪಾರ್ಕಿಂಗ್ಗೆ ರಸ್ತೆಯಲ್ಲಿ ನಿಲ್ಲಬೇಕು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಿಸಿ ಪಾರ್ಕಿಂಗ್ ಲೋಪದೋಷಗಳ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ -52 ರ ಬಾಳೆಬರೆ ಘಾಟ್ನಲ್ಲಿ ಕಾಂಕ್ರೀಟ್ ಪೇವ್ಮೆಂಟ್ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಹಿನ್ನಲೆ, ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989 ರ ಕಲಂ 221(ಎ)(2) & (5) ರನ್ವಯ ಏಪ್ರಿಲ್ 22 ರಿಂದ ಜೂನ್ 5 ರ ವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ವಾಹನಗಳ ಪರ್ಯಾಯ ಮಾರ್ಗ: ಕುಂದಾಪುರದಿಂದ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಕಡೆಗೆ ಹೋಗುವ ಲಘು ವಾಹನಗಳು ಕುಂದಾಪುರ-ಹೆಮ್ಮಾಡಿ-ವಂಡ್ಸೆ-ಕೊಲ್ಲೂರು-ನಿಟ್ಟೂರು ಘಾಟ್ ಮಾರ್ಗವಾಗಿ ಅಥವಾ ಕುಂದಾಪುರ-ಕೋಟೇಶ್ವರ-ಹಾಲಾಡಿ-ಆಗುಂಬೆ ಮಾರ್ಗವಾಗಿ ಅಥವಾ ಕುಂದಾಪುರ-ಬಸ್ರೂರು-ಹುಣ್ಸೆಮಕ್ಕಿ-ಹಾಲಾಡಿ-ಆಗುಂಬೆ ಮಾರ್ಗವಾಗಿ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ತಲುಪಬಹುದು. ಕುಂದಾಪುರದಿಂದ ತೀರ್ಥಹಳ್ಳಿಗೆ ಹೋಗುವ ಭಾರಿ ವಾಹನಗಳು ಕುಂದಾಪುರ-ಭಟ್ಕಳ-ಹೊನ್ನಾವರ-ಸಾಗರ-ರಿಪ್ಪನ್ಪೇಟೆ ಮೂಲಕ ತೀರ್ಥಹಳ್ಳಿ ತಲುಪಬಹುದು. ಕುಂದಾಪುರದಿಂದ ಶಿವಮೊಗ್ಗ ಕಡೆಗೆ ಹೋಗುವ ಭಾರಿ ವಾಹನಗಳು ಕುಂದಾಪುರ-ಭಟ್ಕಳ-ಹೊನ್ನಾವರ-ಸಾಗರ ಮಾರ್ಗವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಂದುಶ್ರೀ ಬಾಲಕ ಬಾಲಕಿಯರ ಭಜನಾ ತಂಡ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಮತ್ತು ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಇವರ ಆಶ್ರಯದಲ್ಲಿ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶಯದಂತೆ ರಾಮನವಮಿ ಉತ್ಸವದ ಅಂಗವಾಗಿ ಗಂಗೊಳ್ಳಿಯ ಇಂದುಧರ ಸಭಾ ಭವನದಲ್ಲಿ ರಾಮಭಜನೆ, ಕುಣಿತ ಭಜನೆ ನಡೆಯಿತು. ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಿ.ವಿಶ್ವನಾಥ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಾಪಕ ನಾಗರಾಜ ಆಚಾರ್ಯ ಅವರು ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಚರಿತ್ರೆಯನ್ನು ವಿವರಿಸಿದರು. ರಾಮಾಯಣ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕ ದೇವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾ ಜಿ., ದೇವಸ್ಥಾನದ ಅಧ್ಯಕ್ಷ ಅರುಣ್ ಕುಮಾರ್ ಜಿ., ಉಪಾಧ್ಯಕ್ಷ ಗುರುರಾಜ್ ಬಿ., ಕಾರ್ಯದರ್ಶಿ ಶ್ರೀಕಾಂತ ಎನ್., ಅರ್ಚಕ ಶಿವ ಜಿ.ಟಿ., ವಸಂತಿ, ನೇತ್ರಾವತಿ ಶಿರೂರು, ಜಯಂತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಮೀನುಗಾರಿಕಾ ಕ್ಷೇತ್ರದ ಸುಸ್ಥಿರ ಮತ್ತು ಜವಾಬ್ದಾರಿಯುತ ಬೆಳವಣಿಗೆಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಸಂಪದ ಯೋಜನೆಯನ್ನು ರೂಪಿಸಿದ್ದು, ಪ್ರಸ್ತುತ ಸಾಲಿನಲ್ಲಿ ಈ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಾದ ಮೀನು ಕೃಷಿ ಕೊಳಗಳ ನಿರ್ಮಾಣ, ಬೈಯೋಫ್ಲಾಕ್ ಮತ್ತು ಆರ್.ಎ.ಎಸ್ ಘಟಕ ನಿರ್ಮಾಣ, ಮೀನು ಮರಿ ಪಾಲನೆಗೆ ಉತ್ತೇಜನ, ಅಲಂಕಾರಿಕ ಮೀನು ಉತ್ಪಾದನೆ, ಶೈತೀಕರಿಸಿದ ಶಾಖ ನಿರೋಧಕ ವಾಹನ ಖರೀದಿ, ಶೈತ್ಯಾಗಾರ, ಮಂಜುಗಡ್ಡೆ ಸ್ಥಾವರ ನಿರ್ಮಾಣ ಮತ್ತು ನವೀಕರಣ, ಆಳ ಸಮುದ್ರ ಬೋಟ್ ನಿರ್ಮಾಣ, ಹಿನ್ನೀರು ಕೃಷಿ, ಪಂಜರ ಕೃಷಿ, ಮೀನಿನ ಆಹಾರ ಉತ್ಪಾದನಾ ಘಟಕ, ಮೀನು ಮಾರುಕಟ್ಟೆ ಮಳಿಗೆ ನಿರ್ಮಾಣ, ಮೀನುಗಾರಿಕೆ ಬೋಟುಗಳ ಉನ್ನತೀಕರಣ, ಬೋಟಿನಲ್ಲಿ ಬಯೋ ಟಾಯ್ಲೆಟ್ ನಿರ್ಮಾಣ, ಬೋಟಿನಲ್ಲಿಯ ಸಂಪರ್ಕ ಸಾಧನ ಅಳವಡಿಕೆ, ನಾಡ ದೋಣಿಗಳಿಗೆ ಸೇಫ್ಟಿ ಕಿಟ್ ಖರೀದಿ, ಆಹಾರ ಸುರಕ್ಷತಾ ಯೋಜನೆ ಹಾಗೂ ಇನ್ನಿತರ ಯೋಜನೆಗಳಡಿ ರೈತರು, ಮೀನುಗಾರರು ಮತ್ತು ಸಾರ್ವಜನಿಕರಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 15 ಕೊನೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿ, ತ್ವರಿತವಾಗಿ ಸೋಂಕಿತರನ್ನು ಪತ್ತೆ ಹಚ್ಚಿ, ಕೂಡಲೇ ಅವರಿಗೆ ಚಿಕಿತ್ಸೆ ಆರಂಬಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಹರಡುವುದನ್ನು ನಿಯಂತ್ರಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು , ನಿಲರ್ಕ್ಷಿಸದರೆ ಸೋಂಕು ವ್ಯಾಪಕವಾಗಿ ಹರಡಲಿದೆ ಎಂದು ರಾಜ್ಯದ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಬೆಂಗಳೂರಿನ ವಿಕಾಸಸೌಧದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತ ಸಭೆಯಲ್ಲಿ ಮಾತನಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಪ್ರತೀ ದಿನ 3000 ಪರೀಕ್ಷೆಗಳನ್ನು ನಡೆಸುತ್ತಿದ್ದು ಈ ಪ್ರಮಾಣವನ್ನು 4000 ಕ್ಕೆ ಹೆಚ್ಚಿಸಿ, ಪರೀಕ್ಷೆ ವರದಿಯ ವಿವರಗಳನ್ನು ಶೀಘ್ರದಲ್ಲಿ ಪಡೆದು, ಸ್ವಾಬ್ ಸಂಗ್ರಹದ ಪರೀಕ್ಷೆಯನ್ನು ಅವಶ್ಯವಿದ್ದಲ್ಲಿ ಜಿಲ್ಲೆಯ ಖಾಸಗಿ ಲ್ಯಾಬ್ ಗಳ ಮೂಲಕ ಸಹ ನಡೆಸಿ, ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಅವರ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ, ಪ್ರತೀ ಸೋಂಕಿತರ ಪ್ರಾಥಮಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂದು 471 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ಪೈಕಿ ಉಡುಪಿ 267, ಕುಂದಾಪುರ 154, ಕಾರ್ಕಳ ತಾಲೂಕಿನ 44 ಹಾಗೂ ಹೊರ ಜಿಲ್ಲೆಯಿಂದ ಬಂದ 6 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು ಪ್ರಕರಣಗಳಲ್ಲಿ 154 ಸಿಂಟಮಿಕ್ ಹಾಗೂ 317 ಅಸಿಂಟಮಿಕ್ ಪ್ರಕರಣಗಳಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 1084 ಸಕ್ರಿಯ ಪ್ರಕರಣಗಳಿವೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸಂಘ ಸಂಸ್ಥೆಗಳು ನಿರಂತರ ಚಟುವಟಿಕೆ ನಡೆಸುತ್ತಾ ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸಮಾಜದ ಕಟ್ಟಕಡೆಯ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮೀನುಗಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಮೀನುಗಾರ ಕುಟುಂಬದ ಅಭಿವೃದ್ಧಿ ಹಾಗೂ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಪರಿಸರದಲ್ಲಿ ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿರುವ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಸಂಸ್ಥೆಯು ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಬಿಜೆಪಿ ಬೈಂದೂರು ಮಂಡಲ ಉಪಾಧ್ಯಕ್ಷ ವಿನೋದ ಕುಮಾರ್ ಗುಜ್ಜಾಡಿ ಹೇಳಿದರು. ಅವರು ಗಂಗೊಳ್ಳಿಯ ಲೈಟ್ಹೌಸ್ ಸಮೀಪದ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ನ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು ಅಧ್ಯಕ್ಷತೆ ವಹಿಸಿದ್ದರು. ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಜಾಕ್ಷಿ ಎಸ್.ಶೆಟ್ಟಿ, ಗಂಗೊಳ್ಳಿ ರಾಮಕ್ಷತ್ರೀಯ ಯುವಕ ಮಂಡಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ವಿಶೇಷ ಮಾಹಿತಿ ಅರಿವು ಕಾರ್ಯಕ್ರಮವನ್ನು ಪಾಲಕರ ಸಭೆಯಲ್ಲಿ ನಡೆಸಲಾಯಿತು. ಡಾ. ಪಿ.ವಿ.ಭಂಡಾರಿ, ವೈದ್ಯಕೀಯ ನಿರ್ದೇಶಕರು,ಡಾ ಎ.ವಿ ಬಾಳಿಗ ಆಸ್ಪತ್ರೆ ದೂಡ್ಡಣಗುಡ್ಡೆ ಇವರು ಮಾಹಿತಿಯನ್ನು ನೀಡಿದರು. ಪ್ರಮುಖವಾಗಿ ಅಂಗವಿಕಲತೆ ಮತ್ತು ಅದರ ವಿಧಗಳು, ಬುದ್ಧಿಮಾಂಧ್ಯತೆ ಎಂದರೇನು ಮತ್ತು ಅದಕ್ಕೆ ಕಾರಣಗಳು ಹಾಗೂ ವಿಶೇಷ ಮಕ್ಕಳ ಪಾಲನೆ ಮಾಡುವಲ್ಲಿ ಪೋಷಕರಲ್ಲಿ ಇರಬೇಕಾದ ಕೌಶಲ್ಯಗಳೂಂದಿಗೆ ವಿಕಲತೆಯನ್ನು ಶೀಘ್ರ ಗುರುತಿಸುವಿಕೆ ಮತ್ತು ಪರಿಹಾರ ಕಂಡುಕೊಳ್ಳುವಿಕೆ ಮತ್ತು ವಿಶೇಷವಾಗಿ ಆಟಿಸಂನ ಕುರಿತು ಮಾಹಿತಿಯನ್ನು ನೀಡಿದರು. ಅಲ್ಲದೇ ಪೋಷಕರ ವಿವಿಧ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಹಿತೈಷಿಗಳಾದ ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ ರವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿ ಪ್ಲಸಂಟ್ ಕುಂದಾಪುರ ಇದರ ಮಾಲಕರಾದ ಅಬ್ದುಲ್ ಬಶೀರ್ ಉಪಸ್ಥಿತರಿದ್ದರು. ಸುರೇಶ್ ತಲ್ಲೂರು ಸ್ವಾಗತಿಸಿದರು, ಟ್ರಸ್ಟೀ ವಸಂತ ಶಾನುಭಾಗ ವಂದಿಸಿದರು. ಮುಖ್ಯ…
