Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯ ಬೆಳ್ವೆ ಗಣೇಶ್ ಕಿಣಿ ರಾಜೀನಾಮೆ ನೀಡಿದ್ದಾರೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಕೊಲ್ಲೂರು ದೇವಳದ ಸಮಿತಿಗೆ ಸದಸ್ಯನಾಗಿ ಆಯ್ಕೆಯಾಗಿದ್ದು ದೇವರ ಸೇವೆಗೆ ಸಿಕ್ಕ ಅವಕಾಶ ಎಂದು ತಿಳಿದುಕೊಂಡಿದ್ದೆ ಆದರೆ ಸಮಿತಿ ರಚನೆಗೊಂಡು 5 ತಿಂಗಳು ಕಳೆದರೂ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಸಮಿತಿಯ ಸಭೆ ನಡೆದಿಲ್ಲ, ಇದು ಖೇದಕರ. ಸಮಿತಿ ರಚನೆಗೊಂಡು ಸೇವೆಗೆ ಈವರೆಗೆ ಅವಕಾಶ ಸಿಗದಿರುದರಿಂದ ಇಂತಹ ವ್ಯವಸ್ಥೆಯಲ್ಲಿ ಮುಂದುವರಿಯುವುದು ಸರಿಯಿಲ್ಲ ಅನಿಸಿತು ಎಂದು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಸಮಾಜಸೇವೆ, ಧಾರ್ಮಿಕ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಬೆಳ್ವೆ ಗಣೇಶ್ ಕಿಣಿಯವರ ಹಠಾತ್ ರಾಜೀನಾಮೆ ಸಂಚಲನ ಮೂಡಿಸಿದೆ. ಕೆಲವೊಬ್ಬರ ಪ್ರತಿಷ್ಠೆಗಾಗಿ ದೇವಳದ ಕಾರ್ಯ ಚಟುವಟಿಕೆ ಕುಂಠಿತಾಗುತ್ತಿದೆ ಎಂಬ ಆರೋಪ ಈಗ ಭುಗಿಲೆದ್ದಿದೆ. ಕಿಣಿಯವರು ರಾಜೀನಾಮೆ ಹಿಂಪಡೆಯುವಂತೆ ಅನೇಕರು ಒತ್ತಡ ಹೇರುತ್ತಿದ್ದರೂ, ಇದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ದೇವರ ಸೇವೆಗೆ ಅವಕಾಶ ಇಲ್ಲದ…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ. ಬೈಂದೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ತಗ್ಗರ್ಸೆ ಎಂಬಲ್ಲಿ ನಡೆದಿದೆ. ತಗ್ಗರ್ಸೆ ನಿವಾಸಿ ದಾಸಪ್ಪ (42) ಮೃತ ದುರ್ದೈವಿ. ಕೊಲ್ಲೂರು ಕಡೆಯಿಂದ ಬರುತ್ತಿದ್ದ ಬೆಂಗಳೂರು ನೊಂದಣಿಯ ಸ್ವಿಫ್ಟ್ ಕಾರು ತಗ್ಗರ್ಸೆಯಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ದಾಸಪ್ಪ ಎಂಬುವವರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ತಲೆಯ ಭಾಗಕ್ಕೆ ಗಂಭೀರ ಗಾಯವಾದ ಅವರನ್ನು ಸ್ಥಳಯರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು. ಡಿಕ್ಕಿ ಹೊಡೆದ ಕಾರಿನ ಚಾಲಕ ಎಲ್ಲಿಯೂ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದು ಶಿರೂರು ತೂದಳ್ಳಿ ಮೂಲಕ ಭಟ್ಕಳ ಕಡೆಗೆ ತೆರಳಿದ್ದ ಎನ್ನಲಾಗಿದೆ. ಘಟನೆಯ ಮಾಹಿತಿ ಪಡೆದುಕೊಂಡ ಬೈಂದೂರು ಪೊಲೀಸರು ತಕ್ಷಣ ಕಾರನ್ನು ಹಿಂಬಾಲಿಸಿ ಹೋಗಿದ್ದು ಅಷ್ಟರಲ್ಲೇ ಕಾರನ್ನು ಭಟ್ಕಳದ ಬೇಲಂದೂರು ಎಂಬಲ್ಲಿ ನಿಲ್ಲಿಸಿ, ಚಾಲಕ ಪರಾರಿಯಾಗಿದ್ದ. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿಎಸ್ಐ ಸಂಗೀತಾ ಅವರ ತಂಡ ಕಾರ್ಯಾಚರಣೆಯಲ್ಲಿದ್ದು ತಕ್ಷಣ ಕಾರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಾದದ್ದು ಎಲ್ಲರ ಕರ್ತವ್ಯ ಆದರೆ ಕೋವಿಡ್ ಮಾರ್ಗಸೂಚಿ ಹೆಸರಿನಲ್ಲಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಸಾರಿಗೆ ಉದ್ಯಮದಾರರಿಗೆ ಅಧಿಕಾರಿಗಳು ದಂಡದ ಹೆಸರಿನಲ್ಲಿ ಅನಗತ್ಯ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ವಿಕಾಸ್ ಹೆಗ್ಡೆ ತಿಳಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಸಾವಿರಾರು ರೂಪಾಯಿಯ ದಂಡವೊಂದೇ ಪರಿಹಾರವಲ್ಲ. ದಂಡ ಹಾಕುವ ಮೊದಲು ಜಾಗೃತಿ ಮೂಡಿಸುವ ಕೆಲಸವಾಗಲಿ. ಈಗಾಗಲೇ ಲಾಕ್’ಡೌನ್, ಸೀಲ್ಡೌನ್ ಮುಂತಾದವುಗಳಿಂದ ಎಲ್ಲಾ ಉದ್ದಿಮೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದಿ. ಸ್ವಲ್ಪ ಪ್ರಮಾಣದ ಚೇತರಿಕೆ ಕಾಣುವಾಗ ಸರ್ಕಾರ ಅವರ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಮಾರ್ಗಸೂಚಿಗನ್ನು ರಚಿಸಬೇಕು ಎಂದು ಆಗ್ರಹಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಗುರುವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕುಂದಾಪರ ನಗರದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕಿದ್ದ ವಿದ್ಯಾರ್ಥಿಗಳ ಬೆನ್ನುತಟ್ಟಿ ಹುರಿದುಂಬಿಸಿದರೆ, ಮಾಸ್ಕ್ ಧರಿಸದವರಿಗೆ ಫೈನ್ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ತಾಲೂಕು ಆಸ್ಪತ್ರೆಯಿಂದ ಶಾಸ್ತ್ರಿ ವೃತ್ತದವರಗೆ ತೆರಳಿದ ಡಿಸಿ ಜಿ. ಜಗದೀಶ್ ಮುಖ್ಯರಸ್ತೆ ಅಕ್ಕಪಕ್ಕ ಇರುವ ಎಲ್ಲಾ ಅಂಗಡಿಗೆ ಹೋಗಿ ಕರೋನಾ ಏರುಗತಿಯಲ್ಲಿರುವುದರಿಂದ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸೂಚಿಸಿ, ಪಾರಿಜಾತ ವೃತ್ತದ ಬಳಿ ಕಾರ್ ಪಾರ್ಕಿಂಗ್‌ಗೆ ಭೇಟಿ ನೀಡಿದಾಗ ಮಾಸ್ಕ್ ಧರಿಸದೆ ಇದ್ದ ಕಾರ್ ಚಾಲಕರಿಗೆ ಮಾಸ್ಕ್ ಎಲ್ಲಿ ಎಂದು ಗರಮ್ ಆದರು. ಕಿಸೆಯಲ್ಲಿರುವ ಮಾಸ್ಕ್ ತೆಗೆದು ಧರಿಸಿದ ಚಾಲಕರಿಗೆ ಮಾಸ್ಕ್ ಇರಬೇಕಿರುವುದು ಮುಖದ ಮೇಲೆ, ಕಿಸೆಯಲ್ಲಲ್ಲ. ಮಾಸ್ಕ್ ಹಾಕದೆ ಅಸಹಾಕರ ತೋರಿಸಿದರೆ ಕರೋನ ನಿಯಂತ್ರಣ ಹೇಗೆ ಎಂದು ಪ್ರಶ್ನಿಸಿ, ಬಾಡಿಗೆ ಮಾಡುವ ಕಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವುದೇ ಸಮುದಾಯ ಶೈಕ್ಷಣಿಕವಾಗಿ ಪ್ರಗತಿಯಿಂದ ಸಾಧಿಸಿದಾಗ ಮಾತ್ರವೇ ಎಲ್ಲಾ ಸಾಮಾಜಿಕವಾಗಿ ಅಭ್ಯುದಯ ಸಾಧಿಸಲು ಸಾಧ್ಯವಿದೆ ಎಂದು ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಇದರ ಗೋಳಿಹೊಳೆ ಶಾಖೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಖಾ ವ್ಯಾಪ್ತಿಯ ಕೊರಗ ಸಮುದಾಯದ ಮಕ್ಕಳಿಗೆ ವಸ್ತ್ರ ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ರಾಜು ಪೂಜಾರಿ ಅವರು ಮಾತನಾಡಿ ಗೋಳಿಹೊಳೆ ಶಾಖೆಯಲ್ಲಿ ಪ್ರಾರಂಭದಿಂದಲೂ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕೊರಗ ಸಮುದಾಯದ ಮಕ್ಕಳಿಗೆ ವಸ್ತ್ರ, ಪ್ರೋತ್ಸಾಹಧನವನ್ನು ನೀಡಲಾಗುತ್ತಿದ್ದು ಮುಂದಿನ ವರ್ಷಗಳಲ್ಲಿಯೂ ಈ ಯೋಜನೆಯನ್ನು ಮುಂದುವರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಹಕಾರಿಯ ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕರಾದ ರಾಮಕೃಷ್ಣ ಖಾರ್ವಿ ಉಪಸ್ಥಿತರಿದ್ದರು. ಎಸ್ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ಸ್ವಾಗತಿಸಿ, ಸೌಹಾರ್ದದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಂದಿಸಿದರು. ಶಾಖಾ ವ್ಯವಸ್ಥಾಪಕ ರಾಘವೇಂದ್ರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮಂಗಳೂರು ವಿಭಾಗ 16 ವರ್ಷ ವಯೋಮಿತಿಯಲ್ಲಿ ಆಯೋಜಿಸಲಾಗಿರುವ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸನಿತ್ ಶೆಟ್ಟಿ ಉತ್ತಮ ಸಾಧನೆ ತೋರುವುದರ ಮೂಲಕ ಉಡುಪಿ ಜಿಲ್ಲೆಯಿಂದ ಮಂಗಳೂರು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಸಾಧನೆ ತೋರಿದ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜಯನಗರದ ಅರಸರು ಆಳ್ವಿಕೆ ನಡೆಸಿದ ಇತಿಹಾಸ ಇರುವ ಕುಂದಾಪುರ ತಾಲ್ಲೂಕಿನ ಬಸ್ರೂರಿನ 16ನೇ ಶತಮಾನದ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ವಿನಾಯಕ ದೇವರ ಕಂಚಿನ ದೀಪಸ್ತಂಭದಲ್ಲಿ ಶಾಸನ ಪತ್ತೆಯಾಗಿದೆ. ನೂರಾರು ವರ್ಷಗಳ ಕಾಲ ದೀಪವನ್ನು ಹಚ್ಚುವ ಮೂಲಕ ಈ ಕಂಚಿನ ದೀಪಸ್ತಂಭ ಕರಿ ಕಟ್ಟಿದ ಪರಿಣಾಮವಾಗಿ ಆಮೆಯ ಹಣೆಯ ಮೇಲ್ಭಾಗದಲ್ಲಿ ಇದ್ದ ನಾಲ್ಕು ಸಾಲಿನ ಶಾಸನ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಬಸ್ರೂರಿನ ಯುವ ಬ್ರಿಗೇಡ್ ತಂಡ ಕೈಗೊಂಡ ಶ್ರಮ ದಾನದ ಫಲಶೃತಿಯಾಗಿ ಕಂಚಿನ ಕಂಭದ ಕೆಳಭಾಗ ಇಂದು ಫಳ ಫಳವಾಗಿ ಹೊಳೆಯುತ್ತಿದ್ದು ಸ್ಥಳೀಯ ನಿವಾಸಿಯಾಗಿರುವ ಪ್ರದೀಪ್ ಕುಮಾರ್ ಬಸರೂರು ಅವರು ಈ ಶಾಸನವನ್ನು ಮೊಟ್ಟಮೊದಲ ಬಾರಿಗೆ ನೋಡಿ ಇದನ್ನು ಓದಿ ಜನರ ಗಮನಕ್ಕೆ ತರಲು ಸಫಲರಾಗಿದ್ದಾರೆ. ಈ ಅಪ್ರಕಟಿತ ಶಾಸನದಲ್ಲಿ ಇರುವ ನಾಲ್ಕು ಸಾಲುಗಳಿದ್ದು ಮೊದಲ ಸಾಲಿನಲ್ಲಿ “ವಿನಾಯಕ ದೇವರ”, ಎರಡನೆ ಸಾಲಿನಲ್ಲಿ “ಕಂಚಿನ ಕಂಬ ೧ಕ್ಕೆ “, ಮೂರನೇ ಸಾಲಿನಲ್ಲಿ”…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಾಡಿಗ ಅಕ್ಷಯ ಕಿರಣ ಸೇವಾ ಪೌಂಡೇಷನ್‌ನಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಕುಂದಾಪುರದ ನಾಗರತ್ನ ಅವರ ಮನೆಗೆ ತೆರಳಿ 2,600ರೂ. ವೈದ್ಯಕೀಯ ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ಸೇವಾದಾರರಾದ ನಾಗರಾಜ ರಾಯಪ್ಪನ ಮಠ, ದಿನೇಶ್ ದೇವಾಡಿಗ, ಮಹಾಲಿಂಗ ದೇವಾಡಿಗ, ರಾಜ್ ದೇವಾಡಿಗ, ಗಿರೀಶ್ ದೇವಾಡಿಗ, ಪುರುಷೋತ್ತಮದಾಸ್, ಜಗದೀಶ್ ದೇವಾಡಿಗ, ಮದುಕರ ದೇವಾಡಿಗ, ರಾಜಾ ಮಠದ ಬೆಟ್ಟು ಮದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಲ್ಪೆಯ ದಿನೇಶ್ ತಿಂಗಳಾಯ ಇವರ ಮೀನುಗಾರಿಕಾ ‘ಶ್ರೀ ಶಿವರಕ್ಷ’ ಬೋಟ್  ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ಸಂಪೂರ್ಣ ಮುಳುಗಡೆಯಾದ ಪರಿಣಾಮ ಬಾಬ್ತು ವಿಮಾ ಪರಿಹಾರವಾಗಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಪರವಾಗಿ ಕುಂದಾಪುರ ಶಾಖೆಯ ಶಾಖಾಧಿಕಾರಿ ಪಿ. ದಿನಕರ್ ಇವರು 40 ಲಕ್ಷದ ವಿಮಾ ಪರಿಹಾರವನ್ನು ಬೋಟಿನ ಮಾಲಕರಾದ ದಿನೇಶ್ ತಿಂಗಳಾಯ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಚೀಫ್ ಅಡ್ವೈಸರ್ ಹೆಚ್ ಸೀತಾರಾಮ ಹೆಗ್ಡೆ, ಬ್ಯುಸಿನೆಸ್ ಎಸೋಸಿಯೇಡ್ ವಿಲ್ಪ್ರೆಡ್ ಡಿ’ಸೋಜಾ ಸಿಬ್ಬಂದಿ ರಾಯಪುಡಿ ಜಗದೀಶ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಮಾತೃಭಾಷೆಯಿಂದ ವ್ಯಕ್ತಿಯ ವಿಕಾಸ ಸಾಧ್ಯ. ವ್ಯಕ್ತಿಯಲ್ಲಿರುವ ಆತ್ಮಜ್ಞಾನ ವಿಶಿಷ್ಟವಾದದ್ದು. ಅದನ್ನು ಬೇರೆಯವರು ಅಪಹರಿಸಲು ಸಾಧ್ಯವಿಲ್ಲ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಟಿ. ಎ. ಎನ್. ಖಂಡಿಗೆ ಹೇಳಿದರು. ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘ ಹಾಗೂ ಲಲಿತಕಲಾ ಸಂಘದ ವತಿಯಿಂದ ನಡೆದ ಕಲಾಕಿರಣ- 2021ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆತ್ಮಜ್ಞಾನ ಮತ್ತು ಆತ್ಮಶಕ್ತಿಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಕಂಡುಕೊಳ್ಳಬೇಕಾದದ್ದು ವ್ಯಕ್ತಿಯ ವಿಕಾಸದ ದೃಷ್ಟಿಯಿಂದ ಮಹತ್ವವಾದದ್ದು. ಈ ಜ್ಞಾನಗಳನ್ನು ಮಾತೃಭಾಷೆಯು ಬೆಳೆಸುತ್ತದೆ. ಇಂತಹ ಕೆಲಸಗಳನ್ನು ಸಾಹಿತ್ಯ ಹಾಗೂ ಕಲಾ ಸಂಘಗಳು ಮಾಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ, ಭಾಷೆ ಅಭಿಮಾನವಿರಬೇಕು, ಆದರೆ ಅಂಧಾಭಿಮಾನವಿರಬಾರದು. ಯಾವುದೇ ಭಾ?ಯಾದರೂ ಅದು ವ್ಯಕ್ತಿಯ ಭಾವ ಬುದ್ಧಿಯನ್ನು ವಿಕಾಸಗೊಳಿಸುತ್ತದೆ. ಭಾ?ಗಳ ಬಗ್ಗೆ ಅನಗತ್ಯ ಮಡಿವಂತಿಕೆ ಇರಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ,…

Read More