ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ರಾಮಕೃಷ್ಣ ಪರಮಹಂಸರ 186ನೇ ಜನ್ಮ ಜಯಂತಿ ಅಂಗವಾಗಿ ಸೋಮವಾರ ಏಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರಾತಃಪೂಜೆ, ಭಜನೆ, ಉಪನಿಷತ್ ಪಠಣ, ಚಂಡಿಕಾ ಪಾರಾಯಣ, ಪೂಜೆ ಹಾಗೂ ಪ್ರಸಾದ ವಿತರಣೆ, ಏಳಜಿತ ಶಾಲಾ ವಿದ್ಯಾರ್ಥಿಗಳಿಂದ ಶ್ರೀ ಭಗವದ್ಗೀತೆ ಹಾಗೂ ಶ್ರೀ ವಿಷ್ಣುಸಹಸ್ರನಾಮ ಪಠಣ, ಮಧ್ಯಾಹ್ನ ಸ್ಥಳೀಯ ಶಾಲೆಗಳಲ್ಲಿ ಶ್ರೀ ರಾಮಕೃಷ್ಣರ ಜನ್ಮ ಜಯಂತಿ ಆಚರಣೆ ನಡೆಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಾವ್ರಾಡಿಯ ಮುಕ್ಕನಾಡಿ ಮನೆ ಸಂಪತ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಸ್ಥಾಪಕ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಶಿಕ್ಷಕ ಪ್ರದೀಪ್ ಶೆಟ್ಟಿ ಕಾವ್ರಾಡಿ, ಚೇತನ್ ಶೆಟ್ಟಿ ಕೋವಾಡಿ, ಅಕ್ಷಯ್ ಶೆಟ್ಟಿ ಮುಂಬಾರು, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ಚೋರಮಕ್ಕಿ, ಸಂದೇಶ್ ಶೆಟ್ಟಿ ಮುಂಬಾರು, ಸಚಿನ್ ಶೆಟ್ಟಿ ವಕ್ವಾಡಿ, ಮಹೇಂದ್ರ ಶೆಟ್ಟಿ ಹಾಗೂ ಸಿ.ಎ ಸಾಧಕ ಸಂಪತ್ ಶೆಟ್ಟಿಯವರ ತಂದೆ ಶೇಖರ ಶೆಟ್ಟಿ, ತಾಯಿ ಪ್ರೇಮಲತಾ ಶೆಟ್ಟಿ, ಕುಟುಂಬಸ್ಥರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ನಾವುಂದ ಹಿಂದು ಅಭ್ಯುದಯ ಸಂಘ, ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ ನಡೆಯಿತು . ಉದ್ಘಾಟಿಸಿ ಮಾತನಾಡಿದ ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆಯ ಯು. ಶಂಕರ ಶೆಟ್ಟಿ, ಕಣ್ಣು ಅತ್ಯಂತ ಅನಿವಾರ್ಯ ಅಂಗಗಳಲ್ಲಿ ಒಂದು. ಅದು ತೀರ ಸೂಕ್ಷ್ಮವೂ ಆಗಿರುವುದರಿಂದ ಅದರ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮನೋಜ್ ಭಟ್ ಕಣ್ಣಿನ ಆರೋಗ್ಯ ಮತ್ತು ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳ ಮಾಹಿತಿ ನೀಡಿದರು. ಹಿಂದು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಆಚಾರ್ಯ ವಂದಿಸಿದರು. ಎ. ಶಿವರಾಮ ಮಧ್ಯಸ್ಥ ನಿರೂಪಿಸಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಲಯನ್ಸ್ ಕೋಶಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಿದ್ಕಲ್ಕಟ್ಟೆ ಸಮೀಪದ ಹಾದ೯ಳ್ಳಿ ಮಂಡಳ್ಳಿ ಗ್ರಾಮದ ಸೌಡ ಪ್ರದೇಶದ ವಾರಾಹಿ ನದಿ ತಟದ ವಿಜಯನಗರ ಕಾಲದ ಶ್ರೀ ವೀರಾಂಜನೇಯ ವಿಗ್ರಹದಲ್ಲಿ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿ ಪತ್ತೆಯಾಗಿದೆ. ವಿಗ್ರಹದ ಪೀಠದಲ್ಲಿ ತಲೆಕೆಳಗಾಗಿ ಬರವಣಿಗೆ ಕಂಡು ಬಂದಿದ್ದು, 4 ಅಡ್ಡ ಪಟ್ಟಿಕೆಯಲ್ಲಿ ಶ್ರೀ ವೀರಾಂಜನೇಯರ ಮಂತ್ರಗಳನ್ನು ಒಳಗೊಂಡ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿಯನ್ನು ಕಾಣಬಹುದಾಗಿದೆ. ಕೆಲವೊಂದು ಅಕ್ಷರ ಅಸ್ಪಷ್ಠವಾಗಿ ಕಾಣಲ್ಪಟ್ಟಿದ್ದು, ಸಂಪೂಣ೯ ಅಧ್ಯಯನದ ಬಳಿಕ ಮಾಹಿತಿ ಲಭ್ಯವಾಗಲಿದೆ. ದೇವಾಲಯದ ಎದುರಿನ ಮಂಟಪದಲ್ಲಿ ವ್ಯಕ್ತಿಯ ಶಿಲ್ಪಕಲೆ ಕೆತ್ತಲಾಗಿದ್ದು ಇದರೊಂದಿಗೆ “ಮುದ್ರಾಡಿ ಅನಂತಯ್ಯ” ಎಂದು ಬರವಣಿಗೆ ಕಂಡುಬಂದಿದೆ. ಸೌಡದಲ್ಲಿ ಶ್ರೀ ವೀರಾಂಜನೇಯ ಎಂದು ಕರೆಸಿಕೊಳ್ಳುವ ಶ್ರೀ ಆಂಜನೇಯ ವಿಗ್ರಹವು ಸುಮಾರು 4 ಅಡಿ ಎತ್ತರವಿದೆ. ಶ್ರೀ ದೇವರ ಮಧ್ಯೆ ಪಟ್ಟಿಕೆಯಲ್ಲಿ ಖಡ್ಗವನ್ನು ತೋರಿಸುವುದರ ಮೂಲಕ ವೀರತ್ವವವನ್ನು ಇಲ್ಲಿ ಗಮನಿಸಬಹುದಾಗಿದೆ. ಹಾಗೆ ಬಾಲದಲ್ಲಿ ಘಂಟೆ, ಎಡಕೈಯ ಮಧ್ಯೆ ಭಾಗದಿಂದ ಗಧೆಯನ್ನು ತೋರಿಸಲಾಗಿದೆ. ಬಲ ಕೈ ಅಭಯ ಹಸ್ತ ನೀಡಿದರೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿಗಳನ್ನು ಬೈಂದೂರು ಪೊಲೀಸರು ಶನಿವಾರ ರಾತ್ರಿ ಶಿರೂರು ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ. ಭಟ್ಕಳದ ನಿವಾಸಿಗಳಾದ ಸೈಯದ್ ಮೊಸ್ಸಿನ್ ಲಂಕಾ (52) ಹಾಗೂ ಇಷ್ತಿಯಾಕ್ ಅಹಮ್ಮದ್ ಇಕ್ಕೇರಿ (41) ಬಂಧಿತ ಆರೋಪಿಗಳು. ಶನಿವಾರ ರಾತ್ರಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಕರ್ತವ್ಯದ್ದಾಗ ದನದ ಮಾಂಸ ತುಂಬಿಸಿಕೊಂಡ ಕಾರು ಬೈಂದೂರು ಕಡೆಗೆ ಬರುತ್ತಿರುವ ಮಾಹಿತಿ ಪಡೆದಿದ್ದು, ಅದರಂತೆ ಸಿಬ್ಬಂದಿಗಳ ಸಹಾಯದಿಂದ ಶಿರೂರು ಚೆಕ್ಪೋಸ್ಟ್ ಬಳಿ ರಾತ್ರಿ 9.45ರ ಹೊತ್ತಿಗೆ ಭಟ್ಕಳ ಕಡೆಯಿಂದ ಬರುತ್ತಿದ್ದ ಸಂಶಯಾಸ್ಪದ ಇಟಿಯಾಸ್ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದು ಡಿಕ್ಕಿಯಲ್ಲಿ 3 ಪ್ಲಾಸ್ಟಿಕ್ ಚೀಲದಲ್ಲಿ ಜಾನುವಾರು ಮಾಂಸ ಇರುವುದು ಕಂಡು ಬಂದಿದೆ. ಕಾರಿನಲ್ಲಿ ಸುಮಾರು 40 ಸಾವಿರ ರೂಪಾಯಿ ಅಂದಾಜು ಮೌಲ್ಯದ ಒಟ್ಟು ಸುಮಾರು 150 ಕೆ.ಜಿ ತೂಕದ ಮಾಂಸ, 5 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆಯಲಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಸೇನೆಯ ಬಗ್ಗೆ ಉತ್ತಮ ಅನುಭವ ಕಟ್ಟಿಕೊಡುವ ‘ಸೇನಾನುಭವ’ ಕೃತಿ ಭಾರತೀಯ ಸೇನೆಯ ಬಗೆಗಿನ ಹಲವು ತಪ್ಪು ಕಲ್ಪನೆಯನ್ನು ತೊಡೆದುಹಾಕುತ್ತದೆ. ಸೇನೆಯ ಬಗೆಗೆ ಉತ್ತಮ ಅಂಶಗಳನ್ನು ಒಳಗೊಂಡಿರುವ ಕೃತಿಯು ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಬಲ್ಲ ಮೌಲ್ಯ ಹೊಂದಿದೆ ಎಂದು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಹೇಳಿದರು. ಅವರು ಶನಿವಾರ ಉಡುಪಿ ಸುಹಾಸಂ ನೇತೃತ್ವದಲ್ಲಿ ಹೊಟೆಲ್ ಕಿದಿಯೂರಿನ ರೂಪ್ ಟಾಪ್ ಹಾಲಿನಲ್ಲಿ ಆಯೋಜನೆಗೊಂಡ ಸಮಾರಂಭದಲ್ಲಿ ಬೈಂದೂರು ಚಂದ್ರಶೇಖರ ನಾವಡರ ಸೇನಾನುಭವ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಈ ಕೃತಿಯು ಸೇನಾನುಭವ, ಸೇವಾನುಭವ ಮತ್ತು ಸೇವಾನುಭಾವದ ಮೂರು ಆಯಾಮವನ್ನು ಒಳಗೊಂಡಿದ್ದು, ಪರಿಪೂರ್ಣತೆಯೆಡೆಗೆ ಸಾಗಿದೆ. ಚಂದ್ರಶೇಖರ ನಾವುಡರಲ್ಲಿ ಪತ್ರಕರ್ತನಲ್ಲಿರಬೇಕಾದ ನಿರೂಪಣಾ ಶೈಲಿ, ಸಾಹಿತ್ಯಿಕ ಪಟುತ್ವ ಕರಗತವಾಗಿರುವುದರಿಂದ ತಮ್ಮ ಕೃತಿಯಲ್ಲಿ ಹಲವು ವಿಚಾರಗಳನ್ನು ಸೊಗಸಾಗಿ ವಿವರಿಸಿದ್ದಾರೆ ಎಂದರು. ಲೇಖಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕೃತಿ ಪರಿಚಯ ಮಾಡಿದರು. ಕುಂದಪ್ರಭ ಸಂಪಾದಕರಾದ ಯು. ಎಸ್. ಶೆಣೈ ಉಪಸ್ಥಿತರಿದ್ದರು. ಲೇಖಕ ಬೈಂದೂರು ಚಂದ್ರಶೇಖರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗವು ಮೂಡುಬಿದಿರೆಯ ಶ್ರೀಧವಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಪತ್ರಿಕೋದ್ಯಮ ಕೌಶಲ್ಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಗಾರವನ್ನು ಉದ್ಘಾಟಿಸಿದ ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ಪತ್ರಿಕೋದ್ಯಮವೆಂಬುದು ವಿಪುಲ ಅವಕಾಶಗಳಿರುವ ಕ್ಷೇತ್ರ. ನವಯುಗದ ಕೌಶಲ್ಯಗಳನ್ನು ತಮ್ಮ ಕಾರ‍್ಯ ಕ್ಷೇತ್ರದಲ್ಲಿ ಆಳವಡಿಸಿಕೊಂಡರೆ ಅತ್ಯಂತ ಹೆಚ್ಚು ಬೇಡಿಕೆ ಇರುವ ವ್ಯಕ್ತಿಗಳಾಗಿ ನಾವು ಬೆಳಯಬಹುದು. ಇಂತಹ ವಿಭಿನ್ನ ಕ್ಷೇತ್ರಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಥೆವಹಿಸಿ ಬರುವಂತಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಧವಳಾ ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್‌ಕುಮಾರ್ ಮಾತನಾಡಿ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಇದು ಸಾಕಷ್ಟು ಸದವಕಾಶಗಳನ್ನು ಒದಗಿಸುವ ಕ್ಷೇತ್ರವಾಗಿರುವುದರಿಂದ ವಿದ್ಯಾರ್ಥಿಗಳು ಇದರ ಕಡೆಗೆ ಗಮನಹರಿಸಬೇಕು. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ಕೌಶಲ್ಯಗಳನ್ನು ಒದಗಿಸುವ ಈ ಕಾರ್ಯಗಾರ ಪ್ರಾಮುಖ್ಯತೆ ಪಡೆದಿದೆ’ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಖಿಲ ಭಾರತ ನಿಮಾ೯ಣಕಾಮಿ೯ಕರ ಫೆಡರೇಶನ್ ನವದೆಹಲಿಗೆ ಸಂಯೋಜಿಸಲ್ಪಟ್ಟ ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಫೆಡರೇಶನ್ ನೇತೃತ್ವದಲ್ಲಿ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘದಡಿಯಲ್ಲಿ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರೆಶಿರೂರು ಪ್ರದೇಶದ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಮಾವೇಶವು ಅರೆಶಿರೂರು ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು. ಬೈಂದೂರು ತಾಲೂಕು ಹಾಗೂ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘ (ಸಿಐಟಿಯು)ದ ಕಾಯ೯ದಶಿ೯ ಶ್ರೀಧರ ಉಪ್ಪುಂದ ಮಾತನಾಡಿ, ಕನಾ೯ಟಕ ಕಟ್ಟಡ ಮತ್ತು ಇತರೆ ನಿಮ೯ಣ ಕಾಮಿ೯ಕರ ಕಲ್ಯಾಣ ಮಂಡಳಿಯಲ್ಲಿ ಕಾಮಿ೯ಕರ ಸಾಮಾಜಿಕ ಭದ್ರತೆಯ ವಿವಿಧ ಸೌಲಭ್ಯಕ್ಕಾಗಿ ಜಮೆ ಯಾಗಿರುವ ಕೋಟ್ಯಾಂತರ ರೂಪಾಯಿ ಕಾಮಿ೯ಕರ ಹಕ್ಕಿನ ಸೆಸ್ ಹಣ,ಮೀಸಲಿಟ್ಟಿರುವುದನ್ನು ಸಕಾಲದಲ್ಲಿ ಮಂಜೂರು ಮಾಡುವುದಕ್ಕೆ ಸೂಕ್ತ ಕ್ರಮವಹಿಸಬೇಕು ಎಂದು ಸರಕಾರವನ್ನುಒತ್ತಾಯಿಸಿದರು. ಕಾಮಿ೯ಕ ಮುಖಂಡ ವೆಂಕಟೇಶ್ ಕೋಣಿ ಸಭೆಯನ್ನದ್ದೇಶಿಸಿ ಮಾತನಾಡಿ, ಕಟ್ಟಡ ಕಾಮಿ೯ಕರ ಕಲ್ಯಾಣ ಮಂಡಳಿಯಿಂದ ಲಭ್ಯವಿರುವ ವಿವಿಧ ಸೌಲಭ್ಯಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆಯನ್ನು ಸಕಾಲದಲ್ಲಿ ಮುಕ್ತಾಯಗೊಳಿಸಿ, ಸಾರ್ವಜನಿಕರಿಗೆ ಯೋಜನೆಯ ಸಂಪೂರ್ಣ ಪ್ರಯೋಜನ ಒದಗಿಸುವಂತೆ ರಾಜ್ಯ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರದಾನ ಕಾರ್ಯದರ್ಶಿ ಎಲ್. ಕೆ. ಅತೀಕ್ ಹೇಳಿದರು. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಮನೆಗಳಿಗೆ ಶುದ್ದ ಕುಡಿಯುವ ನೀರು ಕುಡಿಯುವ ಉದ್ದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ನಿಗಧಿತ ಅವಧಿಯೊಳಗೆ ನೀರು ಒಗಿಸುವಂತೆ ಸೂಚಿಸಿದ ಪ್ರದಾನ ಕಾರ್ಯದರ್ಶಿಗಳು, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ದೂರುಗಳಿಗೆ ಆಸ್ಪದವಾಗದಂತೆ, ಸ್ಥಳೀಯ ಜನಪ್ರನಿಧಿಗಳ ಅಭಿಪ್ರಾಯಗಳನ್ನು ಆಲಿಸಿ , ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಕುರಿತು ಪರಿಶೀಲಿಸಿದ ಪ್ರದಾನ ಕಾರ್ಯದರ್ಶಿ ಎಲ್. ಕೆ. ಅತೀಕ್ ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟತಟ್ಟು ಗ್ರಾಮ ಪಂಚಾಯತ್,ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.)ಕೋಟ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಅಂಗವಾಗಿ, ಕೋಟ ವಿವೇಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ, ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ , ಹೊಳಪು 2021 – ಕ್ರೀಡೋತ್ಸವ -ಸಾಂಸ್ಕೃತಿಕ ಸ್ಪರ್ದೆಗಳಿಗೆ ಶನಿವಾರ ಚಾಲನೆ ನೀಡಲಾಯಿತು. ಅವದೂತ ವಿನಯ್ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಜಾತಿ ಮತ ಭೇದ ನೋಡದೆ ಐಕ್ಯತೆಯ ಸಂದೇಶ ಸಾರುವ ಹೊಳಪು ಕಾರ್ಯಕ್ರಮ ಆಯೋಜಿಸುವ ಮೂಲಕ ಕೋಟ ಶ್ರೀನಿವಾಸ ಪೂಜಾರಿಯವರು ಡಾ. ಶಿವರಾಮ ಕಾರಂತರಿಗೆ ನಿಜವಾದ ಗೂರು ದಕ್ಷಿಣೆ ನೀಡುತ್ತಿದ್ದಾರೆ ಎಂದರು. ದ.ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲು ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು. ಉಡುಪಿ ಶಾಸಕ ರಘುಪತಿ ಭಟ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ಪ್ರತಿಜ್ಞಾವಿಧಿ ಭೋದಿಸಿದರು.…
