ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಳದ ಆವರಣದಲ್ಲಿಯೇ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ನಡೆದಿದೆ. ತೆಕ್ಕಟ್ಟೆಬಾರಾಳಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35) ಎಂಬ ಯುವಕ ತೆಕ್ಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಚಂದ್ರ ಪೂಜಾರಿ ನಿತ್ಯವೂ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದ ಎನ್ನಲಾಗುತ್ತಿದೆ. ದೇವಸ್ಥಾನದ ಧಾರ್ಮಿಕ ಕಾರ್ಯಗಳಲ್ಲಿಯೂ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದು ಚಂದ್ರ ಪೂಜಾರಿ ಕಳೆದ ಕೆಲ ಸಮಯದಿಂದಲೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ದೇವಸ್ಥಾನದಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಾವಿಯ ಹಗ್ಗವನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ಘಟನೆ ಬೆಳಕಿಗೆ ಬಂದಿದೆ. ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್ನಲ್ಲಿ ಶನಿವಾರ ಸಾಧಕರಿಗೆ ಉತ್ತಮ ಸಾಧಕ ಪ್ರಶಸ್ತಿ ನೀಡಲಾಯಿತು. ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಮನನ್ ಶೆಟ್ಟಿ (ಗೋಲ್ಡನ್ ಗ್ರೂಪ್), ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಸನಾ ಶೆಟ್ಟಿ (ಡೈಮಂಡ್ ಗ್ರೂಪ್), ಅವರುಗಳ ಪರಿಶ್ರಮವನ್ನು ಮತ್ತು ಚೆಸ್ ಆಟವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೇಸಿಐ ಬೈಂದೂರು ಸಿಟಿ ಜೇಸಿರೆಟ್ ವಿಭಾಗ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಹಿಳಾ ಸದಸ್ಯರಿಗೆ ಆಟೋಟ ಸ್ಪರ್ಧೆ ಶನಿವಾರ ಸಂಜೆ ಮರವಂತೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಐ ವಸಂತ ಕುಮಾರಿ ಕಲಾಂಗಣದಲ್ಲಿ ನಡೆಯಿತು. ಜೇಸಿಐ ಬೈಂದೂರು ಸಿಟಿಯ ಜೇಸಿರೆಟ್ ಅಧ್ಯಕ್ಷೆ ಜೇಸಿರೆಟ್ ಅನಿತಾ ಆರ್ ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಹಿಳೆಯರಾಗಲಿ, ಪುರುಷರಾಗಲಿ ಅಹಂ ಬಿಟ್ಟಾಗ ಸಮಾಜ ಸುಧಾರಣೆಯಾಗಲು ಸಾಧ್ಯ ಹೊರತು ಮಹಿಳಾ ಮೀಸಲಾತಿಯ ಹೋರಾಟದಿಂದ ಸಮಾನತೆಗಳಿಸಲು ಸಾಧ್ಯವಿಲ್ಲ. ಪ್ರತಿ ಮನೆಯಲ್ಲೂ ಸಮಾನತೆ ಆರಂಭಗೊಂಡರೆ ಮಾತ್ರ ಇದು ಯಶಸ್ಸುಗೊಳ್ಳಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಜೇಸಿಐ ಬೈಂದೂರು ಸಿಟಿ ಘಟಕದ ಅಧ್ಯಕ್ಷ ಜೇಸಿ ಎಚ್.ಜಿ.ಎಫ್ ಶ್ರೀಧರ ಆಚಾರ್ಯ, ವಲಯಾಧಿಕಾರಿ ಜೇಸಿ ಎಚ್.ಜಿ.ಎಫ್ ಮಣಿಕಂಠ ಎಸ್, ಘಟಕದ ಕಾರ್ಯದರ್ಶಿ ಜೇಸಿ ಎಚ್.ಜಿ.ಎಫ್ ಸವಿತಾ ದಿನೇಶ್ ಗಾಣಿಗ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಜೆಸಿಐ ಉಪ್ಪುಂದ ಸಂಸ್ಥೆಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ಪತ್ರಕರ್ತ ರಾಮ ಬಿಜೂರು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪ್ಪುಂದ ಜೇಸಿಯ ಅಧ್ಯಕ್ಷರಾದ ಪುರುಷೋತ್ತಮ್ ದೇವಾಡಿಗ, ಉಪಾಧ್ಯಕ್ಷರಾದ ಜಗದೀಶ್ ದೇವಾಡಿಗ, ಸದಸ್ಯರಾದ ಮಂಜುನಾಥ್ ದೇವಾಡಿಗ, ಶ್ರೀ ಗಣೇಶ್ ಗಾಣಿಗ, ಶಿವಾನಂದ ಗಾಣಿಗ, ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ, ರಾಮಕೃಷ್ಣ ಖಾರ್ವಿ, ಜಯಂತಿ ರಾಮ ಬಿಜೂರು ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳೆದ ಎರಡುವರೆ ವರ್ಷದಲ್ಲಿ ಬೈಂದೂರು ಕ್ಷೇತ್ರಕ್ಕೆ ಸುಮಾರು 1680 ಕೋಟಿ ಅನುದಾನ ಬಂದಿದ್ದು, ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಬಹು ನಿರೀಕ್ಷಿತ ಯೋಜನೆಗಳಿಂದ ಪ್ರತಿಯೊಬ್ಬರಿಗೂ ಸಮರ್ಪಕ ಸೇವೆ ದೊರೆತಿದೆ. ಈಗ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಮುಂದಿನ ಒಂದೂವರೆ ವರ್ಷದೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದ ಶಾಸಕ ಬಿ. ಎಂ. ಸುಮಾರ ಶೆಟ್ಟಿ ಹೇಳಿದರು. ಅವರು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇವರಿಂದ ಈ ಹಿಂದೆ ಶಿಲಾನ್ಯಾಸಗೊಂಡಿರುವ ಸುಮಾರು 8.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೈಂದೂರು ನೂತನ ಮಿನಿ ವಿಧಾನಸೌಧ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಬೈಂದೂರು, ಕೊಲ್ಲೂರು, ಮರವಂತೆಯನ್ನು ಗಮನದಲಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ಯೋಜನೆಯನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಬೈಂದೂರನ್ನು ಮಾದರಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಲಾಗುತ್ತದೆ. ಕೇಂದ್ರ ಸರಕಾರದ ಜಲಜೀವನ ಯೋಜನೆಯಡಿ ಹಾಗೂ ರಾಜ್ಯ ಸರಕಾರದ ಸಹಾಯದೊಂದಿಗೆ ರೂ.550 ಕೋಟಿ ವೆಚ್ಚದಲ್ಲಿ ಬೈಂದೂರು ಕ್ಷೇತ್ರ ಪ್ರತಿ ಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳ ಹಾಗೂ ಸಂಸದರ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹನ್ನೊಂದು ವರ್ಷಗಳ ಹಿಂದೆ ಬೈಂದೂರಿನಲ್ಲಿ ಜನ್ಮ ತಾಳಿದ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋಪರೇಟಿವ್ ಬೈಂದೂರು ಪ್ರಧಾನ ಕಚೇರಿ ಮತ್ತು ವಿವಿಧ ಶಾಖೆಗಳ ಮೂಲಕ ತಾಲ್ಲೂಕು ವ್ಯಾಪ್ತಿಗೆ ತನ್ನ ಸೇವೆ ವಿಸ್ತರಿಸಿಕೊಂಡಿದೆ. ಇದಕ್ಕೆ ಅದರ ಸದಸ್ಯರು ಮತ್ತು ಗ್ರಾಹಕರು ಇರಿಸಿದ ವಿಶ್ವಾಸ ಮತ್ತು ನೀಡಿದ ಬೆಂಬಲ ಕಾರಣ ಎಂದು ಸಂಸ್ಥೆಯ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ನಾವುಂದದಲ್ಲಿ ನಡೆದ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋಪರೇಟಿವ್ನ ನಾವುಂದ ಶಾಖೆಯ ಗ್ರಾಹಕರ ಸಮಾವೇಶದಲ್ಲಿ ಎಸ್. ರಾಜು ಪೂಜಾರಿ ಮಾತನಾಡಿದರು. ಮೂರು ವರ್ಷಗಳ ಹಿಂದೆ ಆರಂಭವಾದ ನಾವುಂದ ಶಾಖೆ ರೂ 3 ಕೋಟಿ ಠೇವಣಿ ಸಂಗ್ರಹಿಸಿ, ರೂ 3.5 ಕೋಟಿ ಸಾಲ ನೀಡಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಉನ್ನತಿಗೆ ಶ್ರಮಿಸುತ್ತಿದೆ. ಅಗತ್ಯ ಇರುವವರಿಗೆ ಕ್ಷಿಪ್ರ ಸಾಲ ನೀಡಲಾಗುತ್ತಿದೆ. ಗ್ರಾಹಕ ಸೇವೆಗೆ ಆದ್ಯತೆ ನೀಡುತ್ತಿರುವುದರಿಂದ ಅವರ ಒಲವು ಗಳಿಸಿದೆ. ಇವೆಲ್ಲ ಕಾರಣಗಳಿಂದ ಸಂಸ್ಥೆ ಏರುಗತಿಯ ಬೆಳವಣಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಿಲ್ಲೆಯ ಉತ್ತರದ ಶಿರೋಭಾಗದಲ್ಲಿರುವ ಗ್ರಾಮೀಣ ಪ್ರದೇಶ ಶಿರೂರಿನ ಸರಕಾರಿ ಮಾದರಿ ಶಾಲೆ ಶತಮಾನಗಳ ಇತಿಹಾಸ ಹೊಂದಿದ್ದು, ಉತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣ ಹಾಗೂ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವ್ಯವಸ್ಥೆ ಇರುವುದರಿಂದ ಈ ಶಾಲೆ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಶನಿವಾರ ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇಲ್ಲಿನ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ಸುಮಾರು 21 ಲಕ್ಷ ರೂ. ವೆಚ್ಚದಲ್ಲಿ ಕೊಡಮಾಡಿದ ನೂತನ ಶಾಲಾ ವಾಹನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಶಾಲೆಯ ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಒಂದು ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಶಿಕ್ಷಕರ ಮತ್ತು ವಿದ್ಯಾಭಿಮಾನಿಗಳ ಕೊಡುಗೆ ಅಪಾರವಾಗಿರುತ್ತದೆ ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಆದರ್ಶಗಳನ್ನು ಇಟ್ಟುಕೊಂಡು ಸಾಧನೆ ಮಾಡಲು ಸಾಧ್ಯವಿದೆ ಎಂದು ಮಕ್ಕಳಿಗೆ ಕಿವಿಮಾತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಿಟಿ ಜೇಸಿಐ, ಸಿಟಿ ಜೇಸಿರೆಟ್, ರೆಡ್ಕ್ರಾಸ್ ಘಟಕ ಹಾಗೂ ಆಯುಷ್ಧಾಮ ಆಸ್ಪತ್ರೆ ಆಶ್ರಯದಲ್ಲಿ ನಡೆದ ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಜೇಸಿಸ್ನ ವಲಯ 15 ಸಂಯೋಜಕಿ ಡಿ. ಲತಾ ಸುವರ್ಣ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೇಸಿರೆಟ್ ವಿಭಾಗದ ಸಭಾಪತಿ ಸೋನಿ ಸ್ವಾಗತಿಸಿದರು. ಸಿಟಿ ಜೇಸಿಐ ಅಧ್ಯಕ್ಷ ವಿಜಯ್ ಭಂಡಾರಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯ ಸಂಯೋಜಕ ಪ್ರಶಾಂತ್ ಹವಾಲ್ದಾರ್, ಮನೀಶ್ ಆಸ್ಪತ್ರೆ ವೈದ್ಯೆ ಡಾ. ಪ್ರಮೀಳಾ ನಾಯಕ್, ಅಂಗನವಾಡಿ ಸಂಘಟನೆ ಪ್ರಭಾವತಿ ಶೆಟ್ಟಿ, ಉಷಾ, ರೆಡ್ಕ್ರಾಸ್ ಸಂಸ್ಥೆಯ ಗಣೇಶ್ ಆಚಾರ್ಯ, ಆಯುಷ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವಿನಯ್ ಚಂದ್ರ ಶೆಟ್ಟಿ, ಡಾ.ಸ್ವಾತಿ ಶೆಟ್ಟಿ, ಡಾ ಅಶ್ವಿನಿ ಹಾಗೂ ಮೆಬಲ್ ಡಿಸೋಜ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರವು ಪಿಎಂಎವೈ ಯೋಜನೆಯಡಿ ಮೊದಲನೇ ಮನೆ ನಿರ್ಮಾಣ ಮಾಡುವವರಿಗೆ 2.67 ಲಕ್ಷ ರೂ ಸಹಾಯಧನ ನೀಡುತ್ತಿದ್ದು, ಹಾಗೂ ಎಲ್ಲರಿಗೂ ಸೂರು (PMAY(U)Housing For All) ಯೋಜನೆಯ ಸೌಲಭ್ಯ ಪಡೆಯಲು ಬ್ಯಾಂಕಿನ ಪೋರ್ಟಲ್ ನಲ್ಲಿ ಅಪ್ಡೇಟ್ ಆಗದ ಕಾರಣ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುವುದನ್ನು ಅರಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ತುರ್ತಾಗಿ ಸ್ಪಂದಿಸಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ. ಬೈಂದೂರು ಪಟ್ಟಣ ಪಂಚಾಯತ್ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಶೀಘ್ರ ಕ್ರಮ ಕೈಗೊಳ್ಳುವಂತೆ ಅವರು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದು ಅದರಂತೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ದಿಂದ ಆದೇಶ ಮಾಡಿಸಿದ್ದಾರೆ.ಇದರಿಂದ ಇನ್ನೂ ಮುಂದೆ ಹೊಸದಾಗಿ ಮೊದಲನೇ ಮನೆ ಕಟ್ಟುವವರಿಗೆ 2.67 ಲಕ್ಷ ಸಬ್ಸಿಡಿ ಹಾಗೂ ಎಲ್ಲರಿಗೂ ಸೂರು ಸೌಲಭ್ಯ ಅರ್ಹ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜೆಸಿಐ ಕುಂದಾಪುರ ಸಿಟಿಯ ಮಹಿಳಾ ಘಟಕ ಜೆಸಿರೆಟ್ ಕುಂದಾಪುರ ಸಿಟಿ ಇದರ ಸಹಯೋಗದಲ್ಲಿ ಮಹಿಳಾದಿನ ದ ಪ್ರಯುಕ್ತ ಹಮ್ಮಿಕೊಂಡ ಮಹಿಳಾ ಉತ್ಸವ್- ‘ಬಂಧನ್’-2021′- ಸಪ್ತಾಹದ ಅಂಗವಾಗಿ ನಡೆದ ಮಾಹಿತಿ ಉಪನ್ಯಾಸ ಕಾರ್ಯಕ್ರಮ ಇಲ್ಲಿನ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕುಂದಾಪುರದ ಎ.ಎಸ್.ಐ ಸುಧಾಕರ್ ಮಾತನಾಡಿ, ಆತ್ಮರಕ್ಷಣಾ ಮಾರ್ಗಗಳ ನಿಖರವಾದ ತಿಳುವಳಿಕೆ ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಗೂ ಇರಬೇಕು. ಆತ್ಮ ರಕ್ಷಣೆಯ ಸ್ಪಷ್ಟ ಅರಿವು ದೇಹದಲ್ಲಿ ಶಕ್ತಿ, ಧೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಜೆ.ಸಿ.ಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಮಾತನಾಡಿ, ಆತ್ಮರಕ್ಷಣೆಯೆಂದರೆ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೇ ಅಗತ್ಯವಿದ್ದ ಇತರರಿಗೂ ಸಹಾಯ ಮಾಡುವುದಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣಾ ಅಂಗವಾಗಿ ಜೆ.ಸಿಐ ಕುಂದಾಪುರ ಸಿಟಿಯವರು ವಾರದುದ್ದಕ್ಕೂ ನಡೆಸುತ್ತಿರುವ ಮಾಹಿತಿ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ಆತ್ಮಸ್ಥೈರ್ಯವಿದ್ದು,…
