Author: ನ್ಯೂಸ್ ಬ್ಯೂರೋ

ಮಾವಿನ ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ಗೊತ್ತು. ಅದರೆ ಮಾವಿನ ಎಲೆಗಳಿಂದಲೂ ಹಲವು ಪ್ರಯೋಜನಗಳಿದೆ ಎಂಬುದು ಕೂಡ ಸತ್ಯವೆ. ಹೌದು ಮಾವಿನ ಎಲೆಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ ಮಧುಮೇಹ (ಟೈಪ್ 1 ಮತ್ತು 2) ಚಿಕಿತ್ಸೆಯಲ್ಲಿ ಎಳೆಯ ಮಾವಿನ ಎಲೆಗಳು ತುಂಬಾ ಉಪಯಕ್ತ. ಇದು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕಾಪೌಂಡ್ಗಳನ್ನು ಒಳಗೊಂಡಿದೆ. ಈ ಮಾವಿನ ಎಲೆ ಕಷಾಯ ಮಾಡಬಹುದು. ಎಳೆ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಅದರ ನೀರು ಕುಡಿಯಬಹುದು. ಮಧುಮೇಹ ಆಂಜಿಯೋಪತಿ, ರೆಟಿನೋಪತಿ ಮತ್ತು ಹೈಪರ್ ಗ್ಲೈಸೆಮಿಯಾಗಳಿಗೆ ಒಣಗಿದ ಮಾವಿನ ಎಲೆ ಪುಡಿಯನ್ನು ಸಹ ಸೇವಿಸಬಹುದು. ಮಾವಿನ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಿಣದಲ್ಲಿರುತ್ತದೆ. ಮಾವಿನ ಎಲೆಗಳಲ್ಲಿರುವ ಪಾಲಿಫಿನಾಲ್ ರಕ್ತನಾಳಗಳನ್ನು ಬಲಪಡಿಸುತ್ತದೆ ಮತ್ತು ಉಬ್ಬಿರುವ ರಕ್ತನಾಳಗಳಿಂದ (varicose veins) ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಸೂಕ್ತ. ಮಾವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮಾಡಿದ ಕಷಾಯದಿಂದ ಆಸ್ತಮಾ ಸೇರಿ ವಿವಿಧ ಉಸಿರಾಟದ ಸಮಸ್ಯೆಗಳಿಗೆ ಮದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಬೈಂದೂರು ಸಿಟಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಇವರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಕಲಿಯಲು ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಬೋಧನಾ ತರಬೇತಿ ಕಾರ್ಯಕ್ರಮ ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆನಂದ ಮದ್ದೋಡಿ ಇವರಿಂದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಯಿತು, ಈ ಸಂದರ್ಭದಲ್ಲಿ ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ಶ್ರೀಧರ ಆಚಾರ್ಯ, ಪೂರ್ವಧ್ಯಕ್ಷರಾದ ಮಣಿಕಂಠ ಎಸ್, ದೇವಾಡಿಗ, ಹಾಗೂ ಸ್ಥಾಪಕ ಕಾರ್ಯದರ್ಶಿ ಸುಶಾಂತ್ ಆಚಾರ್ಯ, ಉಪಾಧ್ಯಕ್ಷೆ ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು, ಹಾಗೂ ಜೆಸಿಐ ಬೈಂದೂರು ಸಿಟಿ ವತಿಯಿಂದ ವಿದ್ಯಾರ್ಥಿಗಳಿಗೆ ತಂಪು ಪಾನೀಯ ವ್ಯವಸ್ಥೆ ಮಾಡಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸಾಧನೆ ಎಂಬುವುದು ಪರಿಶ್ರಮದ ಮೂಲಕ ಹೊರಬರುವ ಮೇರು ಶಕ್ತಿ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಇತರರಿಗೆ ಮಾದರಯಾಗಿ ಬದುಕಬೇಕು ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಜ್ಯೋತಿಷ್ಯಿ ಕೆ.ವಿ ರಮೇಶ್ ರಾವ್ ಹೇಳಿದರು. ಅವರು ಪಾಂಡೇಶ್ವರದ ರಕ್ತೇಶ್ವರಿ, ನಾಗಾಧಿಪರಿವಾರ ದೇವಳದ ವರ್ಧಂತ್ಯುತ್ಸೋವದಲ್ಲಿ ಹಮ್ಮಿಕೊಳ್ಳಲಾದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವಾರ್ಪಣೆ ನೀಡಿ ಮಾತನಾಡಿದರು. ಈ ಸಮಾಜದಲ್ಲಿ ಹಲವು ರೀತಿಯ ಸಾಧಕರಿದ್ದಾರೆ. ಅವರವರ ಭಾವಕ್ಕೆ ಸರಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುತ್ತಾರೆ. ಅದು ಇತರರಿಗೆ ಸ್ಪೂತಿದಾಯಕವಾಗಿ ನಿಲ್ಲುವಂತ್ತಿರಬೇಕು. ಅಲ್ಲದೆ ನಾವು ನೀಡುವ ಗೌರವ ಅರ್ಥಪೂರ್ಣವಾಗಿರಬೇಕು ತಮ್ಮ ಜೀವಿತ ಅವಧಿಯಲ್ಲಿ ಮರೆಯಲಾಗದ ದಿನಗಳನ್ನು ನೆನಪಿಸುವಂತೆ ಗೌರವಿಸಬೇಕು ಆಗಮಾತ್ರ ಅಂತಹ ಕಾರ್ಯಕ್ರಮಗಳ ಅರ್ಥಗರ್ಭಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ರಕ್ತೇಶ್ವರಿ ವರ್ಧಂತಿ ಸಾಧಕ ಪುರಸ್ಕಾರವನ್ನು ಸಾಮಾಜಿಕ ಸೇವೆಗಾಗಿ ರಕ್ತದಾನಿ ದಿನೇಶ್ ಬಾಂಧವ್ಯ, ಆಟೋ ಚಾಲಕ ಶಂಭು ಪೂಜಾರಿ, ಮೆಸ್ಕಾಂ ಇಲಾಖೆಯ ಮಾಲಿಕ್ ಮುಜಾವರ್, ಪರಿಸರಸ್ನೇಹಿ ಯುವಕ ಮಂಡಲ ಕೋಟ ಪಂಚವರ್ಣ ಯುವಕ ಮಂಡಲ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ತುಳು ಸ್ನಾತಕೋತ್ತರ ವಿಭಾಗದ ಪರೀಕ್ಷೆಯಲ್ಲಿ ಭರತೇಶ ಅಲಸಂಡೆಮಜಲು ಇವರು ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. 2018-20 ಶೈಕ್ಷಣಿಕ ವರ್ಷದಲ್ಲಿ ಮೊದಲ ಬಾರಿಗೆ ತುಳು ಸ್ನಾತಕೋತ್ತರ ಪದವಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರಂಭವಾಗಿದ್ದು ಪ್ರಥಮ ಬ್ಯಾಚ್ ನ ವಿದ್ಯಾರ್ಥಿಯಾಗಿದ್ದಾರೆ. ಇವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಲಸಂಡೆಮಜಲು ಬೋಜಪ್ಪ ಗೌಡ ಗಿರಿಜಾ ದಂಪತಿಗಳ ಪುತ್ರರಾಗಿದ್ದು, ಪ್ರಸ್ತುತ ಬ್ಯಾಂಕ್ ಅಫ್ ಬರೋಡ ಮಂಗಳೂರು ವಲಯ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರು ಭಾಷೆ, ಸಂಸ್ಕೃತಿಯ ವಿಶೇಷ ಬಗೆಗೆ ವಿಶೇಷ ಒಲವಿನ ವಿಚಾರಗಳು ಅವರನ್ನು ಭಾರತಕ್ಕೆ ಮರಳಿ ಬರುವಂತೆ ಮಾಡಿತು. ಇದೀಗ ಅವರ ತುಳು ಭಾಷೆ ಮೇಲಿನ ಗೌರವವೇ ಮೊದಲ ರ‍್ಯಾಂಕಿನೊಂದಿಗೆ ಪದವಿ ಪಡೆಯುವಂತೆ ಮಾಡಿದೆ. ಇವರು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರೂ ಅಗಿರುವ ಇವರು ತುಳು, ಅರೆಭಾಷೆಯಲ್ಲಿ ಹೆಚ್ಚಿನ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಕಾಲ್ತೋಡು ಗ್ರಾಮದ ಗೋಖ೯ಲ್ ಮತ್ತು ಅಲ್ಸಾಡಿ ಪ್ರದೇಶದ ಕಟ್ಟಡ ಕಾಮಿ೯ಕರ ಸಭೆ ಅಲ್ಸಾಡಿ ಮರ್ಲ ಚಿಕ್ಕು ದೈವಸ್ಥಾನದ ವಠಾದಲ್ಲಿ ನಡೆಯಿತು. ಕಟ್ಟಡ ಕಾಮಿ೯ಕರ ಸಂಘದ ತಾಲೂಕು ಪ್ರಧಾನ ಕಾಯ೯ದಶಿ೯ ಗಣೇಶ ತೊಂಡೆಮಕ್ಕಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಮ್ಮ ಕಾಮಿ೯ಕ ಸಂಘಟನೆ ಸಿಐಟಿಯು ನೇತೃತ್ವದಲ್ಲಿ ನಡೆಸಿದ ಸಮರಶೀಲ ಹೋರಾಟದ ಫಲವಾಗಿ ಇದೀಗ ಕನಾ೯ಟಕ ಕಟ್ಟಡ ಕಾಮಿ೯ಕರ ಕಲ್ಯಾಣ ಮಂಡಳಿ ಬೆಂಗಳೂರು ಇವರು,ಕರೊನಾ ಸಂಕಷ್ಟಕ್ಕೊಳಗಾದ ಕಟ್ಟಡ ಕಾಮ೯ಕರಿಗೆ ಕೊಡಬೇಕಾದ ಬಾಕಿ ಪರಿಹಾರ ಹಣ ರೂಪಾಯಿ 5000 ಈ ಕೂಡಲೇ ಬಿಡುಗಡೆಗೆ ತೀಮಾ೯ನ ಮಾಡಿರುವುದು ಆಶಾದಾಯಕ ಬೆಳವಣಿಗೆ ಹಾಗೂ ಇದು ನಮ್ಮ ಸಂಘದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು. ಸಿಐಟಿಯು ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ವೆಂಕಟೇಶ್ ಕೋಣಿ ಪ್ರಾಸ್ತಾವಿಕ ಮಾತನಾಡಿದರು. ಮುಂದಿನ 25,ಏಪ್ರಿಲ್,2021ರಂದು ಗೋಖ೯ಲ್, ಅಲ್ಸಾಡಿ ಪ್ರದೇಶದ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೊಂಬೆಯಾಟ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮ (1995-2020) ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ (1921-2021)ದ ಅಂಗವಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 65ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಗಂಗೊಳ್ಳಿಯ ಶಶಾಂಕ್ ಶೆಣೈ ಪ್ರಾರ್ಥಿಸಿದರು. ನಾರಾಯಣ ವಿಶೇಷ ಮಕ್ಕಳ ಶಾಲೆ, ತಲ್ಲೂರಿನ ಸಂಚಾಲಕಿ ಮನೋರಮ ಕೆ. ಅಧ್ಯಕ್ಷ ಸ್ಥಾನ ವಹಿಸಿದ್ದರು. ದೇವಕಿ ಸುರೇಶ್ ಪ್ರಭು, ತಲ್ಲೂರು ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಸದಾನಂದ ಶೆಣೈ ಪರ್ಕಳ, ಉಡುಪಿಯ ಖ್ಯಾತ ಉದ್ಯಮಿ ವಿಶ್ವನಾಥ ಶೆಣೈ ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು ಗೊಂಬೆಯಾಟದ ಪ್ರೋತ್ಸಾಹಕರಾದ ನರೇಂದ್ರ ಹೆಗ್ಡೆ, ತಲ್ಲೂರು ಮತ್ತು ಗೊಂಬೆಯಾಟ ಅಕಾಡೆಮಿಯ ಹಿತೈಶಿಯಾದ ರಾಜಶ್ರೀ ಆರ್. ಪೈ ಇವರನ್ನೂ ಸತ್ಕರಿಸಲಾಯಿತು. ನಂತರ ದೇವಕಿ ಸುರೇಶ್ ಪ್ರಭು ತಲ್ಲೂರು ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಫಿಯಾ ಅವರ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪ್ರದಾನ ಮಾಡಿದೆ. ಪತ್ರಿಕೋದ್ಯಮ ವಿಭಾಗದ ನಿವೃತ್ತ ಉಪನ್ಯಾಸಕಿ ಪ್ರೊ. ವಹೀದಾ ಸುಲ್ತಾನ ಅವರ ಮಾರ್ಗದರ್ಶನದಲ್ಲಿ ರಚಿಸಿದ  ‘ಇಂಪಾಕ್ಟ್ ಆಫ್ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ಸ್ ಎಮಾಂಗ್ ಮೀಡಿಯಾ ಪ್ರೊಫೆನಲ್ಸ್ ಇನ್ ಕರ್ನಾಟಕ’ ಎಂಬ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು ಆಳ್ವಾಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದ ಸಫಿಯಾ ಅವರು ದಿ. ಅಬ್ದುಲ್ ಹಮೀದ್ ವೇಣೂರು ಹಾಗೂ ರಬಿಯಮ್ಮ ದಂಪತಿಯ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತ್ವರಿತಗೊಳಿಸಿ ಶೀಘ್ರವೇ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿಯು ಸೋಮವಾರ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಭೇಟಿ ಅಹವಾಲು ಸಲ್ಲಿಸಿತು. ಹೆದ್ದಾರಿ ಹೋರಾಟ ಸಮಿತಿ ಪರವಾಗಿ ಬಿ. ಕಿಶೋರ್ ಕುಮಾರ್ ಮಾತನಾಡಿ ಕುಂದಾಪುರ ಫ್ಲೈ ಓವರ್ ಸೇರಿದಂತೆ ಉಳಿದ ಕಾಮಗಾರಿ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಭರವಸೆ ಇದೀಗ ಹುಸಿಯಾಗಿದ್ದು ಮತ್ತೊಮ್ಮೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇನ್ನೆಷ್ಟು ಕಾಲ ಕಳೆಯುವುದು? ಮಳೆಗಾಲ ಬಂತೆಂದರೆ ಮತ್ತೆ ಕಾಮಗಾರಿ ಇನ್ನೊಂದು 6 ತಿಂಗಳು ಮುಂದುವರಿಯುತ್ತದೆ. ಶೀಘ್ರ ಕ್ರಮ ಕೈಗೊಂಡು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉಪವಿಭಾಗಾಧಿಕಾರಿ ರಾಜು ಕೆ. ಪ್ರತಿಕ್ರಿಯಿಸಿ ಇನ್ನು 15 ದಿನಗಳ ಒಳಗೆ ಹೆದ್ದಾರಿ ಕಾಮಗಾರಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ ಎಂಬ ಮಾಹಿತಿಯನ್ನು ನಮಗೆ ನೀಡಿದರು. ಉಪವಿಭಾಗಾಧಿಕಾರಿ ನೀಡಿರುವ ಈ ಗಡುವಿನ ಒಳಗೆ ಈ ಕಾಮಗಾರಿ ಮುಗಿದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಧರ್ಮದ ಮೇಲೆ ನಿಷ್ಠೆ ಹೊಂದಿರುವ ಮೇಸ್ತ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಈಗಾಗಲೇ ಸುಮಾರು 50 ಲಕ್ಷ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಗುಜ್ಜಾಡಿ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಸಮಾಜದ ಅಭಿವೃದ್ಧಿಗೆ ಸರಕಾರದಿಂದ ಅಗತ್ಯ ನೆರವು ನೀಡಲು ಪ್ರಯತ್ನಿಸಲಾಗುವುದು. ಕಳೆದ 46 ವರ್ಷಗಳಿಂದ ನಿರಂತರವಾಗಿ ನಾಗಮಂಡಲೋತ್ಸವವನ್ನು ನಡೆಸಿಕೊಂಡು ಬಂದಿರುವ ಮೇಸ್ತ ಸಮಾಜ ಬಾಂಧವರು ದೇವಸ್ಥಾನದಲ್ಲಿ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ದೇವರ ಸಾನಿಧ್ಯ ವೃದ್ಧಿಗೆ ಶ್ರಮಿಸುತ್ತಿರುವುದು ಮತ್ತು ದೇವಸ್ಥಾನದ ಪ್ರತೀಕವಾಗಿರುವ ಸ್ವಾಗತ ಗೋಪುರ ನಿರ್ಮಿಸಿರುವುದು ಶ್ಲಾಘನೀಯ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು. ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ವತಿಯಿಂದ ಗುಜ್ಜಾಡಿ-ಬೆಣ್ಗೆರೆ ರಸ್ತೆ ಸಮೀಪ ನಿರ್ಮಿಸಲಾಗಿರುವ ಸ್ವಾಗತ ಗೋಪುರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಮೇಸ್ತ ಸಮಾಜದ ಹಿರಿಯರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸಿದ್ಢಾರ್ಥ ಜೆ ಶೆಟ್ಟಿ ಕಾಲೇಜಿನ ಸಂಸ್ಥಾಪಕರಾದ ಮಾಜಿ ಸಂಸದ ಐ ಎಂ ಜಯರಾಮ ಶೆಟ್ಟಿಯವರ ಪುತ್ಹಳಿಗೆ ಹಾರಾರ್ಪಣೆ ಮಾಡಿ ಗೌರವವನ್ನು ಸಲ್ಲಿಸಿದರು. ಸಂಸ್ಥಾಪಕರ ಸಾಧನೆ ಮತ್ತು ಸೇವೆಗಳ ಸಾರಾಂಶ ವಿರುವ ವಿಡಿಯೊವನ್ನ ಪ್ರದರ್ಶಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಮಾತನಾಡಿ, ದಿ|ಜಯರಾಮ ಶೆಟ್ಟಿ ಇವರ ಜೊತೆಗಿನ ತಮ್ಮ ಒಡನಾಟದ ಮತ್ತು ಅನುಭವವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕಾಲೇಜಿನ ಬೆಳವಣಿಗೆಯಲ್ಲಿ ಶ್ರಮಿಸಿದ ಸಿಬ್ಬಂದಿಗಳಿಗೆ ಐಎಂಜೆ ಪ್ರಶಸ್ತಿ ಮತ್ತು ಫಲಕ ಗಳನ್ನ ನೀಡಿ ಸನ್ಮಾನಿಸಲಾಯಿತು. ಜೊತೆಗೆ ಕಾಲೇಜಿನ ವಿಧ್ಯಾರ್ಥಿಗಳಿಗೆ ಆಯೋಜಿಸಲಾದ ಪೆನ್ಸಿಲ್ ಉಪಯೋಗಿಸಿ ಸಂಸ್ಥಾಪಕರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ಪ್ರತಿಭಾ ಪಟೇಲ್ ಮತ್ತು ಪ್ಲೇಸ್ಮೆಂಟ್ ಡೀನ್…

Read More