Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ನಾವುಂದ ಹಿಂದು ಅಭ್ಯುದಯ ಸಂಘ, ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ ನಡೆಯಿತು . ಉದ್ಘಾಟಿಸಿ ಮಾತನಾಡಿದ ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆಯ ಯು. ಶಂಕರ ಶೆಟ್ಟಿ, ಕಣ್ಣು ಅತ್ಯಂತ ಅನಿವಾರ್ಯ ಅಂಗಗಳಲ್ಲಿ ಒಂದು. ಅದು ತೀರ ಸೂಕ್ಷ್ಮವೂ ಆಗಿರುವುದರಿಂದ ಅದರ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮನೋಜ್ ಭಟ್ ಕಣ್ಣಿನ ಆರೋಗ್ಯ ಮತ್ತು ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳ ಮಾಹಿತಿ ನೀಡಿದರು. ಹಿಂದು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಆಚಾರ್ಯ ವಂದಿಸಿದರು. ಎ. ಶಿವರಾಮ ಮಧ್ಯಸ್ಥ ನಿರೂಪಿಸಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಲಯನ್ಸ್ ಕೋಶಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಿದ್ಕಲ್ಕಟ್ಟೆ ಸಮೀಪದ ಹಾದ೯ಳ್ಳಿ ಮಂಡಳ್ಳಿ ಗ್ರಾಮದ ಸೌಡ ಪ್ರದೇಶದ ವಾರಾಹಿ ನದಿ ತಟದ ವಿಜಯನಗರ ಕಾಲದ ಶ್ರೀ ವೀರಾಂಜನೇಯ ವಿಗ್ರಹದಲ್ಲಿ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿ ಪತ್ತೆಯಾಗಿದೆ. ವಿಗ್ರಹದ ಪೀಠದಲ್ಲಿ ತಲೆಕೆಳಗಾಗಿ ಬರವಣಿಗೆ ಕಂಡು ಬಂದಿದ್ದು, 4 ಅಡ್ಡ ಪಟ್ಟಿಕೆಯಲ್ಲಿ ಶ್ರೀ ವೀರಾಂಜನೇಯರ ಮಂತ್ರಗಳನ್ನು ಒಳಗೊಂಡ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿಯನ್ನು ಕಾಣಬಹುದಾಗಿದೆ. ಕೆಲವೊಂದು ಅಕ್ಷರ ಅಸ್ಪಷ್ಠವಾಗಿ ಕಾಣಲ್ಪಟ್ಟಿದ್ದು, ಸಂಪೂಣ೯ ಅಧ್ಯಯನದ ಬಳಿಕ ಮಾಹಿತಿ ಲಭ್ಯವಾಗಲಿದೆ. ದೇವಾಲಯದ ಎದುರಿನ ಮಂಟಪದಲ್ಲಿ ವ್ಯಕ್ತಿಯ ಶಿಲ್ಪಕಲೆ ಕೆತ್ತಲಾಗಿದ್ದು ಇದರೊಂದಿಗೆ “ಮುದ್ರಾಡಿ ಅನಂತಯ್ಯ” ಎಂದು ಬರವಣಿಗೆ ಕಂಡುಬಂದಿದೆ. ಸೌಡದಲ್ಲಿ ಶ್ರೀ ವೀರಾಂಜನೇಯ ಎಂದು ಕರೆಸಿಕೊಳ್ಳುವ ಶ್ರೀ ಆಂಜನೇಯ ವಿಗ್ರಹವು ಸುಮಾರು 4 ಅಡಿ ಎತ್ತರವಿದೆ. ಶ್ರೀ ದೇವರ ಮಧ್ಯೆ ಪಟ್ಟಿಕೆಯಲ್ಲಿ ಖಡ್ಗವನ್ನು ತೋರಿಸುವುದರ ಮೂಲಕ ವೀರತ್ವವವನ್ನು ಇಲ್ಲಿ ಗಮನಿಸಬಹುದಾಗಿದೆ. ಹಾಗೆ ಬಾಲದಲ್ಲಿ ಘಂಟೆ, ಎಡಕೈಯ ಮಧ್ಯೆ ಭಾಗದಿಂದ ಗಧೆಯನ್ನು ತೋರಿಸಲಾಗಿದೆ. ಬಲ ಕೈ ಅಭಯ ಹಸ್ತ ನೀಡಿದರೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿಗಳನ್ನು ಬೈಂದೂರು ಪೊಲೀಸರು ಶನಿವಾರ ರಾತ್ರಿ ಶಿರೂರು ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ. ಭಟ್ಕಳದ ನಿವಾಸಿಗಳಾದ ಸೈಯದ್ ಮೊಸ್ಸಿನ್ ಲಂಕಾ (52) ಹಾಗೂ ಇಷ್ತಿಯಾಕ್ ಅಹಮ್ಮದ್ ಇಕ್ಕೇರಿ (41) ಬಂಧಿತ ಆರೋಪಿಗಳು. ಶನಿವಾರ ರಾತ್ರಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಕರ್ತವ್ಯದ್ದಾಗ ದನದ ಮಾಂಸ ತುಂಬಿಸಿಕೊಂಡ ಕಾರು ಬೈಂದೂರು ಕಡೆಗೆ ಬರುತ್ತಿರುವ ಮಾಹಿತಿ ಪಡೆದಿದ್ದು, ಅದರಂತೆ ಸಿಬ್ಬಂದಿಗಳ ಸಹಾಯದಿಂದ ಶಿರೂರು ಚೆಕ್ಪೋಸ್ಟ್ ಬಳಿ ರಾತ್ರಿ 9.45ರ ಹೊತ್ತಿಗೆ ಭಟ್ಕಳ ಕಡೆಯಿಂದ ಬರುತ್ತಿದ್ದ ಸಂಶಯಾಸ್ಪದ ಇಟಿಯಾಸ್ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದು ಡಿಕ್ಕಿಯಲ್ಲಿ 3 ಪ್ಲಾಸ್ಟಿಕ್ ಚೀಲದಲ್ಲಿ ಜಾನುವಾರು ಮಾಂಸ ಇರುವುದು ಕಂಡು ಬಂದಿದೆ. ಕಾರಿನಲ್ಲಿ ಸುಮಾರು 40 ಸಾವಿರ ರೂಪಾಯಿ ಅಂದಾಜು ಮೌಲ್ಯದ ಒಟ್ಟು ಸುಮಾರು 150 ಕೆ.ಜಿ ತೂಕದ ಮಾಂಸ, 5 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆಯಲಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಸೇನೆಯ ಬಗ್ಗೆ ಉತ್ತಮ ಅನುಭವ ಕಟ್ಟಿಕೊಡುವ ‘ಸೇನಾನುಭವ’ ಕೃತಿ ಭಾರತೀಯ ಸೇನೆಯ ಬಗೆಗಿನ ಹಲವು ತಪ್ಪು ಕಲ್ಪನೆಯನ್ನು ತೊಡೆದುಹಾಕುತ್ತದೆ. ಸೇನೆಯ ಬಗೆಗೆ ಉತ್ತಮ ಅಂಶಗಳನ್ನು ಒಳಗೊಂಡಿರುವ ಕೃತಿಯು ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಬಲ್ಲ ಮೌಲ್ಯ ಹೊಂದಿದೆ ಎಂದು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಹೇಳಿದರು. ಅವರು ಶನಿವಾರ ಉಡುಪಿ ಸುಹಾಸಂ ನೇತೃತ್ವದಲ್ಲಿ ಹೊಟೆಲ್ ಕಿದಿಯೂರಿನ ರೂಪ್ ಟಾಪ್ ಹಾಲಿನಲ್ಲಿ ಆಯೋಜನೆಗೊಂಡ ಸಮಾರಂಭದಲ್ಲಿ ಬೈಂದೂರು ಚಂದ್ರಶೇಖರ ನಾವಡರ ಸೇನಾನುಭವ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಈ ಕೃತಿಯು ಸೇನಾನುಭವ, ಸೇವಾನುಭವ ಮತ್ತು ಸೇವಾನುಭಾವದ ಮೂರು ಆಯಾಮವನ್ನು ಒಳಗೊಂಡಿದ್ದು, ಪರಿಪೂರ್ಣತೆಯೆಡೆಗೆ ಸಾಗಿದೆ. ಚಂದ್ರಶೇಖರ ನಾವುಡರಲ್ಲಿ ಪತ್ರಕರ್ತನಲ್ಲಿರಬೇಕಾದ ನಿರೂಪಣಾ ಶೈಲಿ, ಸಾಹಿತ್ಯಿಕ ಪಟುತ್ವ ಕರಗತವಾಗಿರುವುದರಿಂದ ತಮ್ಮ ಕೃತಿಯಲ್ಲಿ ಹಲವು ವಿಚಾರಗಳನ್ನು ಸೊಗಸಾಗಿ ವಿವರಿಸಿದ್ದಾರೆ ಎಂದರು. ಲೇಖಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕೃತಿ ಪರಿಚಯ ಮಾಡಿದರು. ಕುಂದಪ್ರಭ ಸಂಪಾದಕರಾದ ಯು. ಎಸ್. ಶೆಣೈ ಉಪಸ್ಥಿತರಿದ್ದರು. ಲೇಖಕ ಬೈಂದೂರು ಚಂದ್ರಶೇಖರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗವು ಮೂಡುಬಿದಿರೆಯ ಶ್ರೀಧವಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಪತ್ರಿಕೋದ್ಯಮ ಕೌಶಲ್ಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಗಾರವನ್ನು ಉದ್ಘಾಟಿಸಿದ ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ಪತ್ರಿಕೋದ್ಯಮವೆಂಬುದು ವಿಪುಲ ಅವಕಾಶಗಳಿರುವ ಕ್ಷೇತ್ರ. ನವಯುಗದ ಕೌಶಲ್ಯಗಳನ್ನು ತಮ್ಮ ಕಾರ‍್ಯ ಕ್ಷೇತ್ರದಲ್ಲಿ ಆಳವಡಿಸಿಕೊಂಡರೆ ಅತ್ಯಂತ ಹೆಚ್ಚು ಬೇಡಿಕೆ ಇರುವ ವ್ಯಕ್ತಿಗಳಾಗಿ ನಾವು ಬೆಳಯಬಹುದು. ಇಂತಹ ವಿಭಿನ್ನ ಕ್ಷೇತ್ರಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಥೆವಹಿಸಿ ಬರುವಂತಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಧವಳಾ ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್‌ಕುಮಾರ್ ಮಾತನಾಡಿ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಇದು ಸಾಕಷ್ಟು ಸದವಕಾಶಗಳನ್ನು ಒದಗಿಸುವ ಕ್ಷೇತ್ರವಾಗಿರುವುದರಿಂದ ವಿದ್ಯಾರ್ಥಿಗಳು ಇದರ ಕಡೆಗೆ ಗಮನಹರಿಸಬೇಕು. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ಕೌಶಲ್ಯಗಳನ್ನು ಒದಗಿಸುವ ಈ ಕಾರ್ಯಗಾರ ಪ್ರಾಮುಖ್ಯತೆ ಪಡೆದಿದೆ’ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಖಿಲ ಭಾರತ ನಿಮಾ೯ಣಕಾಮಿ೯ಕರ ಫೆಡರೇಶನ್ ನವದೆಹಲಿಗೆ ಸಂಯೋಜಿಸಲ್ಪಟ್ಟ ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಫೆಡರೇಶನ್ ನೇತೃತ್ವದಲ್ಲಿ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘದಡಿಯಲ್ಲಿ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರೆಶಿರೂರು ಪ್ರದೇಶದ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಮಾವೇಶವು ಅರೆಶಿರೂರು ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು. ಬೈಂದೂರು ತಾಲೂಕು ಹಾಗೂ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘ (ಸಿಐಟಿಯು)ದ ಕಾಯ೯ದಶಿ೯ ಶ್ರೀಧರ ಉಪ್ಪುಂದ ಮಾತನಾಡಿ, ಕನಾ೯ಟಕ ಕಟ್ಟಡ ಮತ್ತು ಇತರೆ ನಿಮ೯ಣ ಕಾಮಿ೯ಕರ ಕಲ್ಯಾಣ ಮಂಡಳಿಯಲ್ಲಿ ಕಾಮಿ೯ಕರ ಸಾಮಾಜಿಕ ಭದ್ರತೆಯ ವಿವಿಧ ಸೌಲಭ್ಯಕ್ಕಾಗಿ ಜಮೆ ಯಾಗಿರುವ ಕೋಟ್ಯಾಂತರ ರೂಪಾಯಿ ಕಾಮಿ೯ಕರ ಹಕ್ಕಿನ ಸೆಸ್ ಹಣ,ಮೀಸಲಿಟ್ಟಿರುವುದನ್ನು ಸಕಾಲದಲ್ಲಿ ಮಂಜೂರು ಮಾಡುವುದಕ್ಕೆ ಸೂಕ್ತ ಕ್ರಮವಹಿಸಬೇಕು ಎಂದು ಸರಕಾರವನ್ನುಒತ್ತಾಯಿಸಿದರು. ಕಾಮಿ೯ಕ ಮುಖಂಡ ವೆಂಕಟೇಶ್ ಕೋಣಿ ಸಭೆಯನ್ನದ್ದೇಶಿಸಿ ಮಾತನಾಡಿ, ಕಟ್ಟಡ ಕಾಮಿ೯ಕರ ಕಲ್ಯಾಣ ಮಂಡಳಿಯಿಂದ ಲಭ್ಯವಿರುವ ವಿವಿಧ ಸೌಲಭ್ಯಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆಯನ್ನು ಸಕಾಲದಲ್ಲಿ ಮುಕ್ತಾಯಗೊಳಿಸಿ, ಸಾರ್ವಜನಿಕರಿಗೆ ಯೋಜನೆಯ ಸಂಪೂರ್ಣ ಪ್ರಯೋಜನ ಒದಗಿಸುವಂತೆ ರಾಜ್ಯ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರದಾನ ಕಾರ್ಯದರ್ಶಿ ಎಲ್. ಕೆ. ಅತೀಕ್ ಹೇಳಿದರು. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಮನೆಗಳಿಗೆ ಶುದ್ದ ಕುಡಿಯುವ ನೀರು ಕುಡಿಯುವ ಉದ್ದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ನಿಗಧಿತ ಅವಧಿಯೊಳಗೆ ನೀರು ಒಗಿಸುವಂತೆ ಸೂಚಿಸಿದ ಪ್ರದಾನ ಕಾರ್ಯದರ್ಶಿಗಳು, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ದೂರುಗಳಿಗೆ ಆಸ್ಪದವಾಗದಂತೆ, ಸ್ಥಳೀಯ ಜನಪ್ರನಿಧಿಗಳ ಅಭಿಪ್ರಾಯಗಳನ್ನು ಆಲಿಸಿ , ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಕುರಿತು ಪರಿಶೀಲಿಸಿದ ಪ್ರದಾನ ಕಾರ್ಯದರ್ಶಿ ಎಲ್. ಕೆ. ಅತೀಕ್ ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟತಟ್ಟು ಗ್ರಾಮ ಪಂಚಾಯತ್,ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.)ಕೋಟ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಅಂಗವಾಗಿ, ಕೋಟ ವಿವೇಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ, ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ , ಹೊಳಪು 2021 – ಕ್ರೀಡೋತ್ಸವ -ಸಾಂಸ್ಕೃತಿಕ ಸ್ಪರ್ದೆಗಳಿಗೆ ಶನಿವಾರ ಚಾಲನೆ ನೀಡಲಾಯಿತು. ಅವದೂತ ವಿನಯ್ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಜಾತಿ ಮತ ಭೇದ ನೋಡದೆ ಐಕ್ಯತೆಯ ಸಂದೇಶ ಸಾರುವ ಹೊಳಪು ಕಾರ್ಯಕ್ರಮ ಆಯೋಜಿಸುವ ಮೂಲಕ ಕೋಟ ಶ್ರೀನಿವಾಸ ಪೂಜಾರಿಯವರು ಡಾ. ಶಿವರಾಮ ಕಾರಂತರಿಗೆ ನಿಜವಾದ ಗೂರು ದಕ್ಷಿಣೆ ನೀಡುತ್ತಿದ್ದಾರೆ ಎಂದರು. ದ.ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲು ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು. ಉಡುಪಿ ಶಾಸಕ ರಘುಪತಿ ಭಟ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ಪ್ರತಿಜ್ಞಾವಿಧಿ ಭೋದಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ಸ್ಪಂದನ ಉಡುಪಿ ಹಾಗೂ ಚ್ಯಾಲೆಂಜರ್ಸ ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ಭ್ರಷ್ಟಾಚಾರ ನಿನಿರ್ಮೂಲನಾ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನುದ್ದೇಶಿಸಿ ಭ್ರಷ್ಟಾಚಾರ ನಿಗ್ರಹದಳ ಉಡುಪಿ ಉಪ ಅಧೀಕ್ಷಕರಾದ ಬಿ. ಎಸ್. ಸತೀಶ್ ಮಾತನಾಡಿ, ಆಚಾರವೇ ಶಿಷ್ಟಾಚಾರ ಆಚಾರವನ್ನು ಅತಿ ಕೃಮಿಸುವುದೇ ಭ್ರಷ್ಟಾಚಾರ, ಯುವಶಕ್ತಿ ಭ್ರಷ್ಟಾಚಾರಕ್ಕೆ ಬದುಕಿನಲ್ಲಿ ಆಸ್ಪದ ಕೊಡದೇ ಭ್ರಷ್ಟಾಚಾರದ ನಿರ್ಮೂಲನೆಗೆ ಕಾರಣೀಕರ್ತರಾಗಬೇಕು ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಮ್. ಅಬ್ದುಲ್ ರೆಹಮಾನ ವಹಿಸಿದ್ದರು. ಚಾಲೆಂಜರ್ಸ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ ಶ್ರೀಯಾನ್, ಉಡುಪಿ ಯುವ ಸ್ಪಂದನ ಕೇಂದ್ರ ಯುವ ಪ್ರವರ್ತಕ ನರಸಿಂಹ, ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಮೀರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸಂದೀಪ ಕುಮಾರ ಶೆಟ್ಟಿ, ಘಟಕದ ವಿದ್ಯಾರ್ಥಿ ಮುಖಂಡ ಮೊಹಮ್ಮದ ಅಯಾನ್ ವೇದಿಕೆಯಲ್ಲಿ ಉಪಸ್ಥಿತರಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಸಂದೀಪ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರದ್ಧಾ ಕೇಂದ್ರಗಳು ಸಮಾಜದಲ್ಲಿ ಒಗ್ಗಟ್ಟು, ಜಾಗೃತಿ, ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಳಿಸುತ್ತವೆ. ನಮ್ಮ ಶ್ರೇಷ್ಠ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ದೇವಸ್ಥಾನ, ದೈವಸ್ಥಾನಗಳು ಶಕ್ತಿಶಾಲಿ ವೇದಿಕೆಗಳು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ವಂಡ್ಸೆ ಯಕ್ಷೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಯಕ್ಷೀ ಅನ್ನಪೂರ್ಣೇಶ್ವರಿ ಯುವ ಸಂಘಟನೆ ದಶಮಾನೋತ್ಸವ ಶಿವರಾತ್ರಿ ಉತ್ಸವದಲ್ಲಿ ಮಾತನಾಡಿದರು. ಉತ್ಸವವನ್ನು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಅವರನ್ನು ‘ಧಾರ್ಮಿಕ ಮಾಣಿಕ್ಯ’ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರನ್ನು ‘ನಮ್ಮೂರ ಮಾಣಿಕ್ಯ’ ಶೆಫ್‌ಕಾಟ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಸಂಸ್ಥಾಪಕ ಗೋವಿಂದ ಬಾಬು ಪೂಜಾರಿ ಅವರನ್ನು ‘ಉದ್ಯೋಗ ಮಾಣಿಕ್ಯ’ ಬಿರುದಿ ನೀಡಿ ಸನ್ಮಾನಿಸಲಾಯಿತು. ಯುವ ಸಂಘಟನೆ ಅಧ್ಯಕ್ಷ ಗಣೇಶ ದೇವಾಡಿಗ ಅಡಿಕೆಕೊಡ್ಲು ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಭಟ್ ಕಲ್ಯಾಣಪುರ ಆಶೀರ್ವಚನ ನೀಡಿದರು. ಉದ್ಯಮಿ ಗುರುರಾಜ್ ಪಂಜು ಪೂಜಾರಿ, ಗ್ರಾಮ ಪಂಚಾಯಿತಿ…

Read More