ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಎಸ್.ಎಸ್.ಎಲ್.ಸಿ ಪರೀಕ್ಷೆಯು ಜೂನ್ ೨೫ ರಿಂದ ನಡೆಯಲಿದ್ದು, ಮಕ್ಕಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಸರಕಾರಿ ರಜಾದಿನ ಹೊರತುಪಡಿಸಿ ಪ್ರತೀ ದಿನ ಕಚೇರಿ ಸಮಯದಲ್ಲಿ ಪರೀಕ್ಷೆಗೆ ಸಂಬಂದಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಈ ಸಹಾಯವಾಣಿಯ ಮೂಲಕ ನೋಡೆಲ್ ಅಧಿಕಾರಿ/ಕಚೇರಿಯನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳುವಂತೆ ಡಿಡಿಪಿಯ ಉಡುಪಿ ಅವರ ಪ್ರಕಟಣೆ ತಿಳಿಸಿದೆ. ಸಹಾಯವಾಣಿ ಸಂಖ್ಯೆ ವಿವರ ಈ ಕೆಳಗಿನಂತಿದೆ ಇದನ್ನೂ ಓದಿ: ► ಉಡುಪಿ ಜಿಲ್ಲೆ: ಸೋಮವಾರ 45 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38421 . ► ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ತೆರೆದ ಬಾಗಿಲು: ಕೊಲ್ಲೂರಿನಲ್ಲಿ ಕರೋನಾ ನಿವಾರಣೆಗಾಗಿ ಚಂಡಿಕಾ ಹೋಮ – https://kundapraa.com/?p=38410 .
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಡಿಸ್ಚಾರ್ಜ್ ಪ್ರಮಾಣ ಹೆಚ್ಚಿದ್ದು, ಮುಂದಿನ 10 ದಿನದಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಪಾಸಿಟಿವ್ ಪ್ರಕರಣಗಳು ಡಿಸ್ಚಾರ್ಜ್ ಆಗುವ ಸಾದ್ಯತೆಗಳಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಂದ ಯಾವುದೇ ಸಂದರ್ಭದಲ್ಲೂ ಸಾವು ಸಂಭವಿಸದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಿಲ್ಲೆಯನ್ನು ನಾನ್ ಕೋವಿಡ್ ಜಿಲ್ಲೆಯನ್ನಾಗಿ ರೂಪಿಸುವಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರನಿಧಿಗಳು ಸಹಕಾರದಿಂದ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ, ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ 12540 ಮಂದಿಯನ್ನು ಕೋವಿಡ್-19 ಪರೀಕ್ಷೆ ಮಾಡಿದ್ದು, ಅದರಲ್ಲಿ 11566 ವರದಿ ನೆಗೆಟಿವ್ ಬಂದಿದ್ದು, 946 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಇದರಲ್ಲಿ ಶೇ. 98 ಮಹಾರಾಷ್ಟçದಿಂದ ಬಂದವರಲ್ಲಿ ಕಂಡುಬಂದಿದು, ಇಂದಿನವರೆಗೆ 318ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ, ರಾಜ್ಯದಲ್ಲೇ ಅತೀ ಹೆಚ್ಚು ಕ್ವಾರಂಟೈನ್ ಕೇಂದ್ರದಲ್ಲಿನ ಟೆಸ್ಟ್ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಸೋಂಕು ಕಂಡುಬಂದ 929 ಮಂದಿಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಚಿತ್ತೂರು ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆ ವತಿಯಿಂದ ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಪ್ರೇರಣಾ ಹಸಿರುಸಿರು ವನ ಮಹೋತ್ಸವ ಆಚರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ರಾಘು ಶೆಟ್ಟಿ ನೈಕಂಬ್ಳಿ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ಹಾಗೂ ಪ್ರೇರಣಾ ಸದಸ್ಯರು ಪಾಲ್ಗೊಂಡಿದ್ದರು. ಪ್ರತಿ ವರ್ಷದಂತೆ ನೂರು ಗಿಡಗಳನ್ನು ನೆಡಲಾಯಿತು. ಇದನ್ನೂ ಓದಿ: ► ಉಡುಪಿ ಜಿಲ್ಲೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಹಿತಿಗಾಗಿ ಸಹಾಯವಾಣಿ – https://kundapraa.com/?p=38453 . ► ಉಡುಪಿ ಜಿಲ್ಲೆ: ಸೋಮವಾರ 45 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38421 . ► ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ತೆರೆದ ಬಾಗಿಲು: ಕೊಲ್ಲೂರಿನಲ್ಲಿ ಕರೋನಾ ನಿವಾರಣೆಗಾಗಿ ಚಂಡಿಕಾ ಹೋಮ – https://kundapraa.com/?p=38410 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಿದ್ದಾಪುರ ಗ್ರಾ.ಪಂ. ನಿವಾಸಿಗಳಿಗೆ ವಾರಾಹಿ ಕಾಲುವೆಯ ಕಲುಷಿತ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಿರುವ ಬಗ್ಗೆ ವಂಡ್ಸೆ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಾರ್ವಜನಿಕರು ಪಂಚಾಯತ್ಗೆ ಮುತ್ತಿಗೆ ಹಾಕಿದ ಘಟನೆಯು ಸೋಮವಾರ ನಡೆದಿದೆ. ಈ ಸಂದರ್ಭ ಕಲುಷಿತ ನೀರನ್ನು ಗ್ರಾಮಸ್ಥರಿಗೆ ಕೊಡುತ್ತಿರುವ ಗುತ್ತಿಗೆದಾರ ಹಾಗೂ ಅದರ ನಿರ್ವಹಣೆ ಮಾಡುತ್ತಿರುವ ಗ್ರಾ.ಪಂ. ಸದಸ್ಯ ಶೇಖರ ಕುಲಾಲ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಟೆಂಡರ್ನ್ನು ರದ್ದು ಮಾಡುವುದರ ಜತೆಯಲ್ಲಿ ಬಿಲ್ನ್ನು ತಡೆಹಿಡಿಯಬೇಕು. ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಗುತ್ತಿಗೆದಾರರಿಂದ ಟ್ಯಾಂಕರ್ ಚಾಲಕನಿಗೆ ಜೀವ ಬೆದರಿಕೆ ಬರುತ್ತಿರುವುದರಿಂದ ಚಾಲಕನಿಗೆ ರಕ್ಷಣೆ ಕೊಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು. ಸಂಬಂಧಪಟ್ಟವರು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಸ್ಥರಿಗೆ ಶುದ್ಧ…
udaಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.8ರ ಸೋಮವಾರದ ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು 45 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 44 ಪ್ರಕರಣಗಳು ಮುಂಬೈನಿಂದ ಹಿಂದಿರುಗಿದವರಾಗಿದ್ದು, 1 ಉಡುಪಿ ಜಿಲ್ಲೆಯ ಮಗುವಿಗೆ ಪಾಸಿಟಿವ್ ಬಂದಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 946 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 318 ಮಂದಿ ಬಿಡುಗಡೆಯಾಗಿದ್ದು, 627 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ತೆರೆದ ಬಾಗಿಲು: ಕೊಲ್ಲೂರಿನಲ್ಲಿ ಕರೋನಾ ನಿವಾರಣೆಗಾಗಿ ಚಂಡಿಕಾ ಹೋಮ – https://kundapraa.com/?p=38410 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಇಡೂರು – ಕುಂಜಾಡಿ ಸಮೀಪದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಒಳಭಾಗದಲ್ಲಿರುವ ಒಂದು ದೊಡ್ಡ ಪಾರೆಯಲ್ಲಿ ಭಾನುವಾರ ದೊರೆತ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಕಲ್ಲಿನಾಯುಧಗಳು ಪತ್ತೆಯಾಗಿದೆ. ಇತಿಹಾಸ ಸಂಶೋಧಕ ಟಿ. ಮುರುಗೇಶ್ ಇವುಗಳನ್ನು ಪತ್ತೆಹಚ್ಚಿದ್ದಾರೆ. ಈ ಆಯುಧೋಪಕರಣಗಳಲ್ಲಿ, ಕೊರೆಯುಳಿಗಳು, ಬ್ಲೇಡ್ ಗಳು, ಫ್ಲೂಟೆಡ್ ಕೋರ್ ಗಳು, ಹೆರೆಗತ್ತಿಗಳು ಹಾಗೂ ಬಾಣದ ಮೊನೆಗಳು ಕಂಡುಬಂದಿವೆ. ಇವು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮತ್ತು ಮಾಣಿಗಳಲ್ಲಿ ದೊರೆತ ಕಲ್ಲಿನಾಯುಧಗಳನ್ನು ಹೋಲುತ್ತವೆ. ಈ ನಿವೇಶನಕ್ಕೆ ಸಮೀಪದಲ್ಲಿಯೇ ಇರುವ ಅವಲಕ್ಕಿ ಪಾರೆಯಲ್ಲಿ ಆದಿಮ ಕಾಲದ ಕುಟ್ಟು ಚಿತ್ರಗಳು ಕಂಡು ಬಂದಿವೆ. ಕಾಡಿನ ಮಧ್ಯೆ ಇರುವ ಈ ಸಮತಟ್ಟಾದ ಬಯಲು ಪಾರೆಗಳು, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ, ಹಂದಿ ಮುಂತಾದ ಪ್ರಾಣಿಗಳ ಮೇವು ಹಾಗೂ ಆಹಾರದ ತಾಣಗಳಾಗಿದ್ದು, ಮಾನವನ ಬೇಟೆಗೆ ಪ್ರಶಸ್ತವಾದ ಜಾಗಗಳಾಗಿದ್ದವು. ಇಂದಿಗೂ ಈ ಎಲ್ಲಾ ಪ್ರಾಣಿಗಳು ಈ ಪರಿಸರದಲ್ಲಿವೆ. ಈ ಸಂಶೋಧನೆಯಲ್ಲಿ ಕೊಲ್ಲೂರಿನ ಮುರುಳೀಧರ ಹೆಗಡೆ ಅವರು ಸಹಕರಿಸಿದ್ದರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಎಪ್ಪತ್ತೇಳು ದಿನಗಳಿಂದ ಮುಚ್ಚಿದ್ದ ದೇವಸ್ಥಾನಗಳ ಬಾಗಿಲು ಸೋಮವಾರ ತೆರೆದಿದ್ದರೂ ಭಕ್ತರ ಸಂಖ್ಯೆ ವಿರಳವಾಗಿತ್ತು. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹೊರತು ಪಡಿಸಿ, ಆನೆಗುಡ್ಡೆ, ಹಟ್ಟಿಯಂಗಡಿ, ಸೌಕೂರು ಶ್ರೀ ದುರ್ಗಾಪರಮೇಶ್ವರಿ, ಶಂಕರನಾರಾಯಣ, ಕುಂದೇಶ್ವರ, ಬೈಂದೂರು ಶ್ರೀ ಸೇನೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಭಕ್ತರಿಗಾಗಿ ತೆರೆದುಕೊಂಡಿತ್ತು. ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬರೋಬ್ಬರಿ 77 ದಿನಗಳ ನಂತರ ಮೂಕಾಂಬಿಕೆ ಭಕ್ತರಿಗೆ ದರ್ಶನ ಕೊಟ್ಟಿದ್ದಾಳೆ. ಬೆಳಗ್ಗೆ 5:30 ದೇವಸ್ಥಾನದಲ್ಲಿ ಭಕ್ತರಿಗೆ ದೇವರನ್ನು ಕಣ್ತುಂಬಿಕೊಳ್ಳಲು ಅವಕಾಶ ಕೊಡಲಾಯಿತು. ದೇವಸ್ಥಾನ ಸಿಬ್ಬಂದಿ ಒಟ್ಟಾಗಿ ಪ್ರಪಂಚವನ್ನು ವ್ಯಾಪಿಸಿದ ಕರೋನಾ ನಿರ್ಮೂಲನೆಗಾಗಿ ಚಂಡಿ ಹೋಮ ನೆರವೇರಿಸಿ, ಆದಿಗುರು ಶ್ರೀ ಶಂಕರಾಚಾರ್ಯ ಫಿಠದ ಬಳಿ ಔಷಧೀಯ ಸಸ್ಯಗಳ ನೆಟ್ಟ್ಟು ಕರೋನಾ ದೂರ ಮಾಡುವಂತೆ ತಾಯಿ ಮೂಕಾಂಬಿಕೆ ಬೇಡಿಕೊಂಡರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಳಗ್ಗೆ5:30 ಕೊಲ್ಲೂರಿನ ಸ್ಥಳೀಯ ಭಕ್ತರು ಮೂಕಾಂಬಿಕೆ ಕಣ್ತುಂಬಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಸರ್ಕಾರದ ನಿಯಮದಂತೆ ಭಕ್ತರಿಗೆ ಕೈಕಾಲು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿಗೆ ಸಮೀಪದ ಆನಗಳ್ಳಿಯ ಶ್ರೀ ದತ್ತಾಶ್ರಮದಲ್ಲಿ ಮುಂದಿನ ತೀರ್ಮಾನದವರೆಗೆ ಸಾಧು, ಸಂತರು ಹಾಗೂ ಸಂನ್ಯಾಸಿಗಳಿಗೆ ವಾಸ್ತವ್ಯ ವ್ಯವಸ್ಥೆ ನೀಡದೆ ಇರುವ ಕುರಿತು ತೀರ್ಮಾನ ಮಾಡಲಾಗಿದೆ ಎಂದು ಆಶ್ರಮದ ಪ್ರವರ್ತಕ ಸುಭಾಶ್ ಪೂಜಾರಿ ಸಂಗಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಸೋಮವಾರದಿಂದ ದತ್ತಾಶ್ರಮದಲ್ಲಿ ಭಗವಾನ್ ನಿತ್ಯಾನಂದರ, ದತ್ತಾತ್ರೇಯರ ಹಾಗೂ ನರ್ಮದೇಶ್ವರ ಶಿವಲಿಂಗದ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕಾಗಿ ದತ್ತಾಶ್ರಮಕ್ಕೆ ಬರುವವರು, ಅಂತರವನ್ನು ಕಾಯ್ದುಕೊಳ್ಳುವ ಜತೆಯಲ್ಲಿ ಸೋಂಕು ಹರಡದಂತೆ ಸರ್ಕಾರ ಸೂಚಿಸಿರುವ ಎಲ್ಲ ನಿಯಮಗಳನ್ನು ಕಡ್ಡಾಯ ಪಾಲಿಸುವಂತೆ ಅವರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ► ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ತೆರೆದ ಬಾಗಿಲು: ಕೊಲ್ಲೂರಿನಲ್ಲಿ ಕರೋನಾ ನಿವಾರಣೆಗಾಗಿ ಚಂಡಿಕಾ ಹೋಮ – https://kundapraa.com/?p=38410 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನಲ್ಲಿ 77 ದಿನಗಳ ಬಳಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತದ ದರ್ಶನಕ್ಕೆ ಅವಕಾಶ ದೊರೆತಿದ್ದು, ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಯೂಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಿಗ್ಗೆಯಿಂದಲೇ ಭಕ್ತರು ಶ್ರೀ ಸನ್ನಿಧಿಗೆ ಆಗಮಿಸಿ ದರ್ಶನ ಪಡೆದರು. ಸರಕಾರದ ಆದೇಶದಂತೆ ದೇವಸ್ಥಾನಕ್ಕೆ ಬರುವ ಸಂದರ್ಭದಲ್ಲಿ ಮಾಸ್ಕ ಬಳಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಸೇರಿದಂತೆ ಸರಕಾರದ ನಿರ್ದೇಶನಗಳನ್ನು ಪಾಲಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ► ಜೂ.8 ರಿಂದ ಜಿಲ್ಲೆಯಲ್ಲಿ ದೇವಾಲಯಗಳ ಆರಂಭ. ಇವಿಷ್ಟು ನಿಯಮ ಪಾಲನೆ ಕಡ್ಡಾಯ – https://kundapraa.com/?p=38342 . ► ಉಡುಪಿ ಜಿಲ್ಲೆ: ಸೋಮವಾರ 45 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38421 . ► ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ತೆರೆದ ಬಾಗಿಲು: ಕೊಲ್ಲೂರಿನಲ್ಲಿ ಕರೋನಾ ನಿವಾರಣೆಗಾಗಿ ಚಂಡಿಕಾ ಹೋಮ – https://kundapraa.com/?p=38410 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವ್ಯಾಪಕ ಪ್ರಚಾರ ಪಡೆದಿದ್ದ ವಾರಾವಧಿಯ ಉಪ್ಪುಂದ ಪ್ರದೇಶದ ಸ್ವಯಂಪ್ರೇರಿತ ಬಂದ್ ಭಾನುವಾರಕ್ಕಷ್ಟೆ ಸೀಮಿತವಾಗಿ ಅಕಾಲಿಕ ಅಂತ್ಯ ಕಂಡಿದೆ. ಅಂತಿಮ ಕ್ಷಣದಲ್ಲಿ ಹಲವು ವ್ಯಾಪಾರಿಗಳಿಂದ ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ವಿರೋಧ ಇದಕ್ಕೆ ಕಾರಣ ಎಂದು ಸಂಘಟನೆಯ ಮುಂಚೂಣಿಯಲ್ಲಿದ್ದವರು ತಿಳಿಸಿದ್ದಾರೆ. ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಜನರ ನಿರ್ಲಕ್ಷ್ಯದ ವಿರುದ್ಧ ಜಿಲ್ಲೆಯ ಜನರ ಗಮನ ಸೆಳೆದು, ಅವರನ್ನು ಎಚ್ಚರಿಸುವ ಮಹಾತ್ವಾಕಾಂಕ್ಷೆಯಿಂದ ಉಪ್ಪುಂದ, ಬಿಜೂರು, ನಂದನವನ ಮತ್ತು ಕೆರ್ಗಾಲು ಪ್ರದೇಶದಲ್ಲಿ ಭಾನುವಾರದಿಂದ ಮುಂದಿನ ಭಾನುವಾರದ ವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ತಯಾರಿ ನಡೆದಿತ್ತು. ಶನಿವಾರ ರಾತ್ರಿ ನಡೆದ ವ್ಯಾಪಾರಸ್ಥರ ಸಭೆಯಲ್ಲಿ ಇದಕ್ಕೆ ತೀವ್ರ ವಿರೋಧ ಕಂಡು ಬಂದುದರಿಂದ ಭಾನುವಾರ ಮಾತ್ರ ಸಾಂಕೇತಿಕ ಬಂದ್ ನಡೆಸಿ, ಸೋಮವಾರದಿಂದ ಎಂದಿನಂತೆ ವ್ಯವಹಾರ ನಡೆಸಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ. ► ಬಿಜೂರಿನಿಂದ- ಉಪ್ಪುಂದ, ಕೆರ್ಗಾಲು ತನಕ 1 ವಾರ ಸ್ವಯಂಪ್ರೇರಿತ ಬಂದ್: ಪರ-ವಿರೋಧ ಪ್ರತಿಕ್ರಿಯೆ – https://kundapraa.com/?p=38400 . ಇದನ್ನೂ…
