ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಕಲ್ಲಿನಾಯುಧಗಳು ಪತ್ತೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಇಡೂರು – ಕುಂಜಾಡಿ ಸಮೀಪದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಒಳಭಾಗದಲ್ಲಿರುವ ಒಂದು ದೊಡ್ಡ ಪಾರೆಯಲ್ಲಿ ಭಾನುವಾರ ದೊರೆತ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಕಲ್ಲಿನಾಯುಧಗಳು ಪತ್ತೆಯಾಗಿದೆ. ಇತಿಹಾಸ ಸಂಶೋಧಕ ಟಿ. ಮುರುಗೇಶ್ ಇವುಗಳನ್ನು ಪತ್ತೆಹಚ್ಚಿದ್ದಾರೆ.

Call us

Click Here

ಈ ಆಯುಧೋಪಕರಣಗಳಲ್ಲಿ, ಕೊರೆಯುಳಿಗಳು, ಬ್ಲೇಡ್ ಗಳು, ಫ್ಲೂಟೆಡ್ ಕೋರ್ ಗಳು, ಹೆರೆಗತ್ತಿಗಳು ಹಾಗೂ ಬಾಣದ ಮೊನೆಗಳು ಕಂಡುಬಂದಿವೆ. ಇವು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮತ್ತು ಮಾಣಿಗಳಲ್ಲಿ ದೊರೆತ ಕಲ್ಲಿನಾಯುಧಗಳನ್ನು ಹೋಲುತ್ತವೆ. ಈ ನಿವೇಶನಕ್ಕೆ ಸಮೀಪದಲ್ಲಿಯೇ ಇರುವ ಅವಲಕ್ಕಿ ಪಾರೆಯಲ್ಲಿ ಆದಿಮ ಕಾಲದ ಕುಟ್ಟು ಚಿತ್ರಗಳು ಕಂಡು ಬಂದಿವೆ.

ಕಾಡಿನ ಮಧ್ಯೆ ಇರುವ ಈ ಸಮತಟ್ಟಾದ ಬಯಲು ಪಾರೆಗಳು, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ, ಹಂದಿ ಮುಂತಾದ ಪ್ರಾಣಿಗಳ ಮೇವು ಹಾಗೂ ಆಹಾರದ ತಾಣಗಳಾಗಿದ್ದು, ಮಾನವನ ಬೇಟೆಗೆ ಪ್ರಶಸ್ತವಾದ ಜಾಗಗಳಾಗಿದ್ದವು. ಇಂದಿಗೂ ಈ ಎಲ್ಲಾ ಪ್ರಾಣಿಗಳು ಈ ಪರಿಸರದಲ್ಲಿವೆ. ಈ ಸಂಶೋಧನೆಯಲ್ಲಿ ಕೊಲ್ಲೂರಿನ ಮುರುಳೀಧರ ಹೆಗಡೆ ಅವರು ಸಹಕರಿಸಿದ್ದರು
ಎಂದು ಸಂಶೋಧಕ ಟಿ. ಮುರುಗೇಶ್  ತಿಳಿಸಿದ್ದಾರೆ.

Leave a Reply

Your email address will not be published. Required fields are marked *

thirteen + 2 =