Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜದ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಮುಂಬಯಿಯ ಬಿಲ್ಲವ ಸೇವಾ ಸಂಘ ಕುಂದಾಪುರ, ಲಾಕ್ ಡೌನ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೆ ಅಸಹಾಯಕ ಸಮುದಾಯ ಬಾಂಧವರಿಗೆ ಹಾಗೂ ಸಂಕಷ್ಟಕ್ಕೆ ಸಿಲುಕಿದ ಕೆಲವು ಕುಟುಂಬಗಳಿಗೆ ದೈನಂದಿನ ಅಗತ್ಯ ವಸ್ತುಗಳು ವಿತರಿಸಿದ ಸಂಘ ನೊಂದ ಸದಸ್ಯರ ಪಾಲಿಗೆ ಆಶಾಕಿರಣವಾಗಿದೆ. ಲಾಕ್ ಡೌನ್ ನಿಂದ ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂಘದ ಸದಸ್ಯರಿಗೆ, ಸಮುದಾಯ ಬಾಂಧವರಿಗೆ ಮತ್ತು ಬಿಲ್ಲವರೇತರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದೆ. ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿಯವರ ನೇತೃತ್ವದಲ್ಲಿ ಸಮಾಜದ ದಾನಿಗಳು ಹಾಗೂ ಸಂಘದ ಆಡಳಿತ ಸಮಿತಿ ಮತ್ತು ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ನಾಲಾಸೋಪಾರ, ವಿರಾರ್, ದಿಘಾ, ಐರೋಳಿ, ಸಾಯನ್, ಕುರ್ಲಾ, ಬಾಂಢೂಪ್, ಥಾಣೆ, ಡೊಂಬಿವಲಿ, ಠಾಕುರ್ಲಿ, ಅಂಬರನಾಥ್ ಮುಂತಾದ ಕಡೆಗಳಲ್ಲಿ ನೆಲೆಸಿರುವ ಸಂಕಷ್ಟಕ್ಕೀಡಾದ ಕೆಲವು ಕುಟುಂಬಗಳಿಗೆ ದೈನಂದಿನ ಆಹಾರ ಸಾಮಗ್ರಿಗಳನ್ನು ವಿತರಿಸಿದೆ. ಕುಂದಾಪ್ರ ಡಾಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.5ರ ಶುಕ್ರವಾರದ ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು 204 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 203 ಮಂದಿ ಮಹಾರಾಷ್ಟದಿಂದ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ. ಓರ್ವ ಸ್ಥಳೀಯ ಪೊಲೀಸ್ ಸಿಬ್ಬಂದಿಗೂ ಪಾಸಿಟಿವ್ ಬಂದಿದೆ.  204ರಲ್ಲಿ 157 ಪುರುಷರು, 40 ಜನ ಮಹಿಳೆರು ಹಾಗೂ 7 ಜನ ಮಕ್ಕಳಿಗೆ ಪಾಸಿಟಿವ್ ದೃಢವಾಗಿದೆ.   ಜಿಲ್ಲೆಯಲ್ಲಿ ಸದ್ಯ ಒಟ್ಟು 767 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 134 ಮಂದಿ ಬಿಡುಗಡೆಯಾಗಿದ್ದು, 634 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 80 ಕಡೆ ಸೀಲ್ ಡೌನ್ – https://kundapraa.com/?p=38288 . ► ಉಡುಪಿ ಜಿಲ್ಲೆ: ಗುರುವಾರ 92 ಕೊರೋನಾ ಪಾಸಿಟಿವ್ – https://kundapraa.com/?p=38278 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂಬೈನ ಹೋಟೆಲ್ ಉದ್ಯಮಿ, ಆಲೂರು ಕಲ್ಲಂಗಡಿ ಮನೆ ಮಂಜುನಾಥ ಪೂಜಾರಿ (55) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರಿ, ಸಹೋದರರು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಜೂ.4: ಕೋವಿಡ್-19 ಪಾಸಿಟಿವ್ ಬರುವ ವ್ಯಕ್ತಿಯ ಮನೆಯ ಸುತ್ತಲಿನ 200 ಮೀ. ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದ್ದು, ಕುಂದಾಪುರ ಉಪವಿಭಾಗದಲ್ಲಿ ಇಲ್ಲಿಯ ತನಕ ಒಟ್ಟು 80 ಕಡೆಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ. ಈ ಪೈಕಿ ಗಂಗೊಳ್ಳಿ ಹಾಗೂ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗರಿಷ್ಠ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಬೈಂದೂರು ಠಾಣೆ ವ್ಯಾಪ್ತಿಯಲ್ಲಿ 31, ಕೊಲ್ಲೂರು ಠಾಣೆ ವ್ಯಾಪ್ತಿಯಲ್ಲಿ 2, ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ 32, ಕುಂದಾಪುರ ಠಾಣೆ ವ್ಯಾಪ್ತಿಯಲ್ಲಿ 07, ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 07, ಅಮಾಸೆಬೈಲು ಠಾಣೆ ವ್ಯಾಪ್ತಿಯ 01 ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಸೀಲ್ ಡೌನ್ ಹಾಗೂ ಕಂಟೈನ್ಮೆಂಟ್ ಆಗಿರುವ ಪ್ರದೇಶಗಳಲ್ಲಿ ಕೇದೂರು, ತೆಕ್ಕಟ್ಟೆ, ಬೀಜಾಡಿ, ಬಸ್ರೂರು, ಕೋಣಿ, ಗುಲ್ವಾಡಿ, ಕರ್ಕುಂಜೆ, ಹಳ್ನಾಡು, ಕೋಡಿ,  ವಡೇರಹೋಬಳಿ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಹಕ್ಲಾಡಿ, ಮರವಂತೆ, ನಾವುಂದ, ಹಡವು ನಾಡ, ನೆಂಪು, ಕಂಬದಕೋಣೆ, ಗಂಗೊಳ್ಳಿ, ಗುಜ್ಜಾಡಿ, ಕೊಲ್ಲೂರು, ಜಡ್ಕಲ್, ಗೋಳಿಹೊಳೆ, ಯಡ್ತರೆ, ಬೈಂದೂರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.4ರ ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು 92 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಎಲ್ಲಾ ಪ್ರಕರಣಗಳು ಮಂಬೈನಿಂದ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ. ಈ ಪೈಕಿ 78 ಪುರುಷರು, 13 ಮಹಿಳೆಯರು ಹಾಗೂ 1 ಮಗು ಸೇರಿದೆ. ಒಂದು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 563 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 108 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. 454 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ► ಕೋವಿಡ್ ಪ್ರಕರಣ ನಿಭಾಯಿಸುವಲ್ಲಿ ಬೈಂದೂರು ತಾಲೂಕಿನಲ್ಲಿ ನಿರ್ಲಕ್ಷ್ಯ ಧೊರಣೆ: ಬ್ಲಾಕ್ ಕಾಂಗ್ರೆಸ್ ನಿಯೋಗ ಖಂಡನೆ – https://kundapraa.com/?p=38258 . ► ಕುಂದಾಪುರ ತಾಲೂಕಿನ 24, ಬೈಂದೂರು ತಾಲೂಕಿನ 15 ಕಡೆಗಳಲ್ಲಿ ಸೀಲ್‌ಡೌನ್ – https://kundapraa.com/?p=38263 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕ್ವಾರಂಟೈನ್ ಮುಗಿಸಿದ ಬಳಿಕ ಸರಕಾರದ ಆದೇಶದ ಹಿನ್ನಲೆ ಮನೆಗೆ ಬಂದ ಗಂಗೊಳ್ಳಿ ಗ್ರಾಮದ ಮಹಿಳೆಯೋರ್ವಳಿಗೆ ಕೋವಿಡ್-೧೯ ಸೋಂಕು ದೃಢಪಟ್ಟಿದ್ದು, ಗಂಗೊಳ್ಳಿ ಗ್ರಾಮದ ವೆಂಕಿಮನೆ ಪ್ರದೇಶವನ್ನು ಗುರುವಾರ ಸೀಲ್‌ಡೌನ್ ಮಾಡಲಾಗಿದೆ. ಗಂಗೊಳ್ಳಿ ಗ್ರಾಮದ ವೆಂಕಿಮನೆ ಸಮೀಪದ ಮನೆಗೆ ಮಹಾರಾಷ್ಟ್ರದಿಂದ ಆಗಮಿಸಿದ ವ್ಯಕ್ತಿಗೆ ವರದಿಯು ಪಾಸಿಟಿವ್ ಬಂದಿದ್ದು ಇದೀಗ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವೆಂಕಿಮನೆ ಸಮೀಪದ ೧೦೦ ಮೀಟರ್ ವ್ಯಾಪ್ತಿಯ ಎಂಟು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಗ್ರಾಮ ಕರಣಿಕ ರಾಘವೇಂದ್ರ ಡಿ. ಅವರು ಕಂಟೈನ್‌ಮೆಂಟ್ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸೀಲ್ ಡೌನ್ ಮಾಡಿದ ಸ್ಥಳಕ್ಕೆ ಯಾರೂ ಪ್ರವೇಶಿಸುವಂತಿಲ್ಲ ಮತ್ತು ಮನೆಯವರು ಯಾರು ಹೊರಗೆ ಬರುವಂತಿಲ್ಲ ಎಂದು ಸೂಚನೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಎಸ್.ಪೂಜಾರಿ, ಪಿಡಿಒ ಚಂದ್ರಶೇಖರ, ಕಾರ್ಯದರ್ಶಿ ದಿನೇಶ ಶೇರುಗಾರ್, ಟಾಸ್ಕ್‌ಪೋರ್ಸ್ ಸದಸ್ಯ ಬಿ.ರಾಘವೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನಲ್ಲಿ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಇಲಾಖೆಗಳ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿರುವುದಲ್ಲದೇ, ಆತಂಕದ ನಡುವೆ ಬದುಕುವಂತಾಗಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ನಿಯೋಗ ಆರೋಪಿಸಿದೆ. ಗುರುವಾರ ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್ ಅವರನ್ನು ಭೇಟಿ ಮಾಡಿ ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ಮನವರಿಕೆ ಮಾಡಿತು. ಈ ಸಂದರ್ಭ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕೋವಿಡ್ ಪ್ರಕರಣಗಳನ್ನು ನಿಭಾಯಿಸುವ ರೀತಿಯೇ ಗೊಂದಲಮಯವಾಗಿದೆ. ಕೋವಿಡ್ ವರದಿಯಲ್ಲಿ ನೆಗೆಟಿವ್ ಬಂದವರ ಮಾಹಿತಿಯನ್ನು ಅವರಿಗೆ ತಿಳಿಸುತ್ತಿಲ್ಲ. ಪಾಟಿಸಿವ್ ಬಂದಿರುವ ಬಗ್ಗೆ ತಿಳಿಸಿದ ಮೇಲೆ ಕೂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ೨-೩ ದಿನ ತೆಗೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಪಾಸಿಟಿವ್ ಬಂದವರ ಮನೆಗೆ ತೆರಳಿ ಕರೆದೊಯ್ಯುವ ಬದಲಿಗೆ ಹೈವೆಗೆ ಬಂದು ನಿಂತುಕೊಳ್ಳುವಂತೆ ಹೇಳಲಾಗುತ್ತಿದೆ. ಆರೋಗ್ಯ ಇಲಾಖೆಯ ಈ ನಿರ್ಧಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್-19 ಸಮುದಾಯಕ್ಕೆ ಹರಡದಂತೆ ತಡೆಯಲು ಪಾಸಿಟಿವ್ ಬರುವ ವ್ಯಕ್ತಿಗಳ ಮನೆಯ ಸುತ್ತಲಿನ 200 ಮೀ. ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗುತ್ತಿದ್ದು, ಬುಧವಾರ ಸಂಜೆಯ ತನಕ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಒಟ್ಟು 39 ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ. ತೆಕ್ಕಟ್ಟೆ, ಬೀಜಾಡಿ, ಗುಲ್ವಾಡಿ, ಕರ್ಕುಂಜೆ, ತಲ್ಲೂರು, ಹೆಮ್ಮಾಡಿ, ಹಕ್ಲಾಡಿ, ಮರವಂತೆ, ಹಡವು ನಾಡ, ಕೊಲ್ಲೂರು, ಜಡ್ಕಲ್, ಗೋಳಿಹೊಳೆ, ಯಡ್ತರೆ, ಶಿರೂರು ಗ್ರಾಮಗಳ ಪ್ರದೇಶಗಳು ಸೇರಿದಂತೆ ಬೈಂದೂರು ತಾಲೂಕು 15 ಹಾಗೂ ಕುಂದಾಪುರ ತಾಲೂಕಿನ 24 ಕಡೆಗಳಲ್ಲಿ ಬುಧವಾರ ಸೀಲ್‌ಡೌನ್ ಮಾಡಲಾಗಿದೆ. ನಿನ್ನೆಯೂ ಪಾಸಿಟಿವ್ ಪ್ರಕರಣಗಳು ಹೆಚ್ಚಿರುವುದರಿಂದ ಸೀಲ್‌ಡೌನ್ ಪ್ರಕ್ರಿಯೆ ಮುಂದುವರಿದಿದೆ. ಮಂಗಳವಾರ ಉಡುಪಿ ಜಿಲ್ಲೆಯಲ್ಲಿ16 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಮುಂಬೈ ಹಾಗೂ ಹೊರರಾಜ್ಯಗಳಿಂದ ಬಂದು ಕ್ವಾರಂಟೈನಿನಲ್ಲಿ ಇದ್ದವರು ಮನೆಗೆ ತೆರಳಿದ ಬಳಿಕ ಕೋವಿಡ್ ವರದಿಗಳು ಬರುತ್ತಿದ್ದು, ಕಳೆದ ಮೂರು ದಿನಗಳಿಂದ ಹೆಚ್ಚು ವರದಿಗಳು ದೊರೆಯುತ್ತಿವೆ. ಹಾಗಾಗಿ ಪಾಸಿಟಿವ್ ಬರುವ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಅವರ ಮನೆಯ ಪರಿಸರವನ್ನು ಸೀಲ್‌ಡೌನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಗೆ ಹೊರಜಿಲ್ಲೆಯಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳುವ ಮುನ್ನ ತಪ್ಪು ವಿಳಾಸ , ದೂರವಾಣಿ ಸಂಖ್ಯೆ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಹೊರ ರಾಜ್ಯಗಳಿಂದ ಬರುವವರಿಗೆ ಸೂಚನೆ: ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಕೊಂಡಿರಬೇಕು. ರಸ್ತೆ ಮಾರ್ಗದಲ್ಲಿ ಆಗಮಿಸುವವರು , ರಾಜ್ಯದ ಗಡಿಯಲ್ಲಿರುವ ಸ್ವೀಕಾರ (BRC – BORDER RECEIVE CENTER) ಕೇಂದ್ರದಲ್ಲಿ ಸೂಚಿಸುವ , ತಮ್ಮ ಜಿಲ್ಲೆಯಲ್ಲಿನ, ಸ್ವೀಕಾರ ಕೇಂದ್ರ (DRC – DISTRICT RECEIVE CENTER) ಗೆ ಹಾಜರಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕ್ವಾರಂಟೈನ್ ಗೆ ಒಳಪಡಬೇಕು, ಮಹಾರಾಷ್ಟ್ರದಿಂದ ಆಗಮಿಸುವವರು 7 ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು, ಇತರೆ ರಾಜ್ಯದಿಂದ ಆಗಮಿಸುವವರು 14 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು. ರೈಲಿನಲ್ಲಿ ಬರುವವರಿಗೆ ಅವರು ಇಳಿಯುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.3ರ ಬುಧವಾರದ ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು 62 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಎಲ್ಲಾ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದು, ಈ ಪೈಕಿ ನಾಲ್ವರು ಮಕ್ಕಳು ಸೇರಿದ್ದಾರೆ. ನಿನ್ನೆ ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ 150 ಸೋಂಕು ಪ್ರಕರಣಗಳು ದೃಢವಾಗಿತ್ತು. ನಿನ್ನೆ ಜಿಲ್ಲೆಯಲ್ಲಿ 410 ಒಟ್ಟು ಪ್ರಕರಣವಿದ್ದರೆ ಇಂದು 472 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 472 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 85 ಮಂದಿ ಬಿಡುಗಡೆಯಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. 387 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 63 ಕಂಟೈನ್ಮೆಂಟ್ ಝೋನ್ ಮಾಡಲಾಗಿದ್ದು, 4,500ಕ್ಕೂ ಅಧಿಕ ವರದಿಗಳು ಬರುವುದು ಬಾಕಿ ಇದೆ. ಇದನ್ನೂ ಓದಿ: ► ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=38242…

Read More