ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋವಿಡ್-19 ಸಮುದಾಯಕ್ಕೆ ಹರಡದಂತೆ ತಡೆಯಲು ಪಾಸಿಟಿವ್ ಬರುವ ವ್ಯಕ್ತಿಗಳ ಮನೆಯ ಸುತ್ತಲಿನ 200 ಮೀ. ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗುತ್ತಿದ್ದು, ಬುಧವಾರ ಸಂಜೆಯ ತನಕ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಒಟ್ಟು 39 ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ.
ತೆಕ್ಕಟ್ಟೆ, ಬೀಜಾಡಿ, ಗುಲ್ವಾಡಿ, ಕರ್ಕುಂಜೆ, ತಲ್ಲೂರು, ಹೆಮ್ಮಾಡಿ, ಹಕ್ಲಾಡಿ, ಮರವಂತೆ, ಹಡವು ನಾಡ, ಕೊಲ್ಲೂರು, ಜಡ್ಕಲ್, ಗೋಳಿಹೊಳೆ, ಯಡ್ತರೆ, ಶಿರೂರು ಗ್ರಾಮಗಳ ಪ್ರದೇಶಗಳು ಸೇರಿದಂತೆ ಬೈಂದೂರು ತಾಲೂಕು 15 ಹಾಗೂ ಕುಂದಾಪುರ ತಾಲೂಕಿನ 24 ಕಡೆಗಳಲ್ಲಿ ಬುಧವಾರ ಸೀಲ್‌ಡೌನ್ ಮಾಡಲಾಗಿದೆ. ನಿನ್ನೆಯೂ ಪಾಸಿಟಿವ್ ಪ್ರಕರಣಗಳು ಹೆಚ್ಚಿರುವುದರಿಂದ ಸೀಲ್‌ಡೌನ್ ಪ್ರಕ್ರಿಯೆ ಮುಂದುವರಿದಿದೆ. ಮಂಗಳವಾರ ಉಡುಪಿ ಜಿಲ್ಲೆಯಲ್ಲಿ16 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.
ಮುಂಬೈ ಹಾಗೂ ಹೊರರಾಜ್ಯಗಳಿಂದ ಬಂದು ಕ್ವಾರಂಟೈನಿನಲ್ಲಿ ಇದ್ದವರು ಮನೆಗೆ ತೆರಳಿದ ಬಳಿಕ ಕೋವಿಡ್ ವರದಿಗಳು ಬರುತ್ತಿದ್ದು, ಕಳೆದ ಮೂರು ದಿನಗಳಿಂದ ಹೆಚ್ಚು ವರದಿಗಳು ದೊರೆಯುತ್ತಿವೆ. ಹಾಗಾಗಿ ಪಾಸಿಟಿವ್ ಬರುವ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಅವರ ಮನೆಯ ಪರಿಸರವನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ನಿನ್ನೆ ಉಡುಪಿಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ. ಸುಧಾಕರ ಇನ್ನು ಮುಂದೆ ಸೀಲ್‌ಡೌನ್ ಬದಲಿಗೆ ಸೋಂಕಿತರ ಮನೆಗೆ ಮಾತ್ರವೇ ನಿರ್ಬಂಧ ವಿಧಿಸುವ ಬಗ್ಗೆಯೂ ತಿಳಿಸಿದ್ದರು. ಅದಿನ್ನು ಕಾರ್ಯರೂಪಕ್ಕೆ ಬರಬೇಕಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹೋಂ ಕ್ವಾರಂಟೈನಿನಲ್ಲಿ ಇರುವ ವ್ಯಕ್ತಿಗಳು ಹೊರಗಡೆ ತಿರುಗಾಡುವುದು, ಪಾಸಿಟಿವ್ ಬರುವ ವ್ಯಕ್ತಿಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯದಿರುವುದು, ಅವರನ್ನು ಸುರಕ್ಷತೆ ಇಲ್ಲದೇ ಜನರ ನಡುವೆಯೇ ಕರೆದೊಯ್ದು ಅಂಬುಲೆನ್ಸ್ ಹತ್ತುವಂತೆ ಹೇಳುತ್ತಿರುವುದು, ನೆಗೆಟಿವ್ ಬಂದವರಿಗೆ ಸರಿಯಾದ ಮಾಹಿತಿ ನೀಡದಿರುವುದು, ಪಾಸಿಟಿವ್ ಬರುವ ವ್ಯಕ್ತಿಯಿದ್ದ ಮನೆಯ ಪರಿಸರವನ್ನು ಸೀಲ್‌ಡೌನ್ ಮಾಡಲು ವಿಳಂಬ ಮಾಡುತ್ತಿರುವುದು ಸೇರಿದಂತೆ ಹಲವು ದೂರುಗಳು ಕೇಳಿಬರುತ್ತಿದ್ದು, ಜನಸಾಮಾನ್ಯರನ್ನು ಆತಂಕಕ್ಕೆ ನೂಕಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=38242 .
► ಉಡುಪಿ ಜಿಲ್ಲೆ: ಬುಧವಾರ 62 ಕೊರೋನಾ ಪಾಸಿಟಿವ್ – https://kundapraa.com/?p=38228 .
► ಉಡುಪಿ ಜಿಲ್ಲೆಯಲ್ಲಿ ಶೀಘ್ರ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್: ಡಾ. ಸುಧಾಕರ್ – https://kundapraa.com/?p=38214 .