Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಲಾಕ್‌ಡೌನ್ ಹಿನ್ನಲೆಯಲ್ಲಿ ನೂರಾರು ಅಸಹಾಯಕ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಾ ನೆರವಿನ ಹಸ್ತ ಚಾಚುತ್ತಿರುವ ಗಂಗೊಳ್ಳಿಯ ’ಸೇವಾ ಸಂಕಲ್ಪ’ ತಂಡದ ಕಾರ್ಯವನ್ನು ಮೆಚ್ಚಿ ೨೫ ಕುಟುಂಬಗಳಿಗೆ ದೈನಂದಿನ ವಸ್ತುಗಳ ಕಿಟ್‌ಗಳನ್ನು ನೀಡಲು ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ೨೫ ಸಾವಿರ ರೂ.ಗಳನ್ನು ನೀಡಿದೆ. ಸಹಕಾರಿ ಗುಜ್ಜಾಡಿ ಶಾಖೆಯಲ್ಲಿ ಚೆಕ್‌ನ್ನು ಹಸ್ತಾಂತರಿಸಿ ಮಾತನಾಡಿದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ ಸೇವಾ ಮನೋಭಾವದಿಂದ ಹುಟ್ಟಿಕೊಂಡ ಈ ಸಂಘಟನೆಯು ಸಹೃದಯಿ, ನಿಸ್ವಾರ್ಥ ದಾನಿಗಳ ನೆರವಿನೊಂದಿಗೆ ಬಡ ಕುಟುಂಬಗಳಿಗೆ ಅಗತ್ಯವಿರುವ ದೈನಂದಿನ ವಸ್ತುಗಳ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸೇವಾ ಸಂಕಲ್ಪ ತಂಡದ ಚರಣ್ ಖಾರ್ವಿ, ಕಾರ್ತಿಕ್ ಖಾರ್ವಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಗೋಪಾಲ ಪೂಜಾರಿ, ಗಿರೀಶ ಖಾರ್ವಿ, ದಿನಕರ ಪೂಜಾರಿ, ಸಹಕಾರಿಯ ಗುಜ್ಜಾಡಿ ಶಾಖಾ ಪ್ರಬಂಧಕ ವಿಷ್ಣು ಪೂಜಾರಿ, ಸಹಕಾರಿಯ ಸಿಬ್ಬಂದಿಗಳಾದ ರಜತ್ ಸಿ.ಎಸ್.ಪೂಜಾರಿ, ಭಾರತಿ ಬಿಲ್ಲವ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯದ ವತಿಯಿಂದ ಶಿರೂರು, ಬೈಂದೂರು, ಕಿರಿಮಂಜೇಶ್ವರ ಹಾಗೂ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 125 ಆಶಾ ಕಾರ್ಯಕರ್ತರಿಗೆ ಎನ್-95 ಮಾಸ್ಕ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭ ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕಾರ್ಯದರ್ಶಿ ರಾಘವೇಂದ್ರ ದೇವಾಡಿಗ, ಖಜಾಂಚಿ ಮಹಾಬಲ ಕೆ. ಶಿಕ್ಷಕರುಗಳಾದ ಪ್ರಭಾಕರ ಬಿಲ್ಲವ, ನಾಗರಾಜ ಶೇರುಗಾರ್, ವೆಂಕಪ್ಪ ಉಪ್ಪಾರ್, ಪ್ರಭಾಕರ ಎಚ್ ಮೊದಲಾದವರು ಇದ್ದರು. ಒಟ್ಟು 32,000 ಸಾವಿರ ರೂ. ಮೌಲ್ಯದ ಮಾಸ್ಕ್‌ಗಳನ್ನು ವಿತರಿಸಲಾಯಿತು./ಕುಂದಾಪ್ರ ಡಾಟ್ ಕಾಂ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ದೇಶದಲ್ಲಿ  ಸುಳ್ಳು ಸುದ್ದಿಗಳ ಆರ್ಭಟ ಜೋರಾಗಿದೆ. ಪ್ರತಿ ದಿನವೂ ಅಂತೆ ಕಂತೆಗಳ ಸಂತೆಯೇ ಸೃಷ್ಟಿಯಾಗುತ್ತಿದೆ. ಮನೆಯಲ್ಲೇ ಕುಳಿತು ಕೊರೊನಾ ವೈರಸ್ ಕುರಿತಾದ ಸುದ್ದಿಗಳನ್ನು ನೋಡುತ್ತಿರುವ ಜನರಿಗೆ,  ಫೇಕ್‌ ನ್ಯೂಸ್‌ಗಳು ಎದೆಬಡಿತ ಹೆಚ್ಚಿಸುತ್ತಿವೆ. ಈ ವದಂತಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಟ್ಸಪ್ ಕಂಪನಿ ಹಲವು ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ. ವಾಟ್ಸಪ್‌ನಲ್ಲಿ ಒಂದೇ ಬಾರಿ ಐದು ಮಂದಿಗೆ ಸಂದೇಶವನ್ನು ಫಾರ್ವರ್ಡ್‌ ಮಾಡುವ ಅವಕಾಶವಿತ್ತು. ಇದೀಗ ಐವರ ಬದಲು ಕೇವಲ ಒಬ್ಬರಿಗೆ ಮಾತ್ರ ಫಾರ್ವರ್ಡ್‌ ಮಾಡಬಹುದಾಗಿದೆ. ಇದು ವಾಟ್ಸಪ್ ವಿಧಿಸುತ್ತಿರುವ ಪ್ರಮುಖ ನಿರ್ಬಂಧವಾಗಿದೆ. ಕೊರೊನಾ ಆತಂಕ ದೂರವಾಗುವವರೆಗೂ ಫಾರ್ವರ್ಡ್‌ ಸಂದೇಶಗಳಿಗೆ ವಿಧಿಸಲಾಗಿರುವ ಮಿತಿ ಮುಂದುವರಿಯಲಿದೆ. ಬಳಕೆದಾರರು ತಮಗೆ ಬರುವ ಸಂದೇಶಗಳನ್ನು ಪರಾಮರ್ಶಿಸಿ ಜವಾಬ್ದಾರಿಯುತವಾಗಿ ವರ್ತಿಸಲಿ ಎಂಬುದು ಮಾತ್ರ ಕಂಪನಿಯ ಉದ್ದೇಶವೇ ಹೊರತು ಬಳಕೆದಾರರನ್ನು ನಿರುತ್ಸಾಹಗೊಳಿಸುವುದಲ್ಲ’ ಎಂದು ವಾಟ್ಸಪ್‌ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಾಟ್ಸಪ್‌ ಸಂದೇಶಗಳು ರಾಜಕೀಯ ಉದ್ದೇಶಕ್ಕೆ ದುರ್ಬಳಕೆಯಾಗುತ್ತಿವೆ, ವದಂತಿಗಳು ಹರಡಲು ಸಹಾಯಕವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೊರೊನಾ ಪ್ರಸರಣ ತಡೆಗಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ, ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರದ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಅದನ್ನು ತಡೆಗಟ್ಟಬೇಕು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಜಿಲ್ಲಾ ಅಬಕಾರಿ ಅಧಿಕಾರಿಗೆ ಸೂಚಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆಸಿದ ಕ್ಷೇತ್ರದ ಅಧಿಕಾರಿಗಳ ಸಭೆಯ ನಡುವೆ ಜಿಲ್ಲಾ ಅಬಕಾರಿ ಅಧಿಕಾರಿಗೆ ದೂರವಾಣಿಯ ಮೂಲಕ ಈ ಸೂಚನೆ ನೀಡಿದರು. ಕ್ಷೇತ್ರಕ್ಕೆ 386 ಜನರು ವಿದೇಶಗಳಿಂದ ಹಿಂತಿರುಗಿದ್ದಾರೆ. ಇವರ ಕ್ವಾರಂಟೈನ್ ಅವಧಿ ಮುಗಿದಿದೆ. ಹೊರ ಜಿಲ್ಲೆಗಳಿಂದ ವಾಪಸಾಗಿರುವ 20,669 ಜನರು ಆರೋಗ್ಯವಾಗಿ ಇದ್ದಾರೆ. ಇಲ್ಲಿ ಸೋಂಕಿತರು ಇಲ್ಲ. ಆದರೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೋಂಕಿತರು ಇರುವುದರಿಂದ ಎಲ್ಲರೂ ಮನೆಯೊಳಗೇ ಇರಬೇಕಾಗುತ್ತದೆ. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅವರ ಮೇಲೆ ಮುಂದೆಯೂ ನಿಗಾ ಇಡುವುದರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಮೂರು ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ವಿತರಿಸುತ್ತಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗರೀಬ್ ಕಲ್ಯಾಣ ಯೋಜನೆಯಡಿ ಎಪ್ರಿಲ್, ಮೇ ಹಾಗೂ ಜೂನ್ ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ರಿಫೀಲ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಗ್ಯಾಸ್ ಕಂಪೆನಿ ವತಿಯಿಂದ ಆಧಾರ್ ನೊಂದಾಯಿತ ಬ್ಯಾಂಕ್ ಖಾತೆಗೆ ಎಪ್ರಿಲ್ ಮೊದಲ ವಾರವೇ ಮೊದಲನೇ ರೀಫಿಲ್ ಹಣವನ್ನು ಜಮಾ ಮಾಡಲಾಗುತ್ತದೆ. ಗ್ರಾಹಕರು ಪ್ರತಿ ತಿಂಗಳು ಜಮಾ ಆದ ಹಣವನ್ನು ಗ್ಯಾಸ್ ಏಜೆನ್ಸಿಗೆ ಪಾವತಿಸಿ ಸಿಲಿಂಡರ್ ಪಡೆಯಬಹುದಾಗಿದೆ. ಮೊದಲ ತಿಂಗಳು ಜಮಾ ಆದ ಹಣದಿಂದ ಗ್ಯಾಸ್ ಸಿಲಿಂಡರ್ ಪಡೆಯದೇ ಇದ್ದರೇ ಮುಂದಿನ ಎರಡು ತಿಂಗಳು ಗ್ಯಾಸ್ ಸಿಲಿಂಡರ್ ವಿತರಿಸಲಾಗುವುದಿಲ್ಲ. ಗ್ಯಾಸ್ ಬುಕ್ಕಿಂಗ್ ಮಾಡುವವರು ಕಡ್ಡಾಯವಾಗಿ…

Read More

ಬೈಂದೂರು ಚಂದ್ರಶೇಖರ ನಾವಡ | ಕುಂದಾಪ್ರ ಡಾಟ್ ಕಾಂ ಲೇಖನ. ವಿಶ್ವವನ್ನೇ ಭಯಭೀತಗೊಳಿಸಿದ ಕೊರೋನಾ ಭಾರತದಲ್ಲಿ ತಳವೂರದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ಕೆಲವರು ಈ ಕುರಿತು ಗಂಭೀರರಾಗಿಲ್ಲವೆನ್ನುವುದು ಸಹಾ ಕಾಣಿಸುತ್ತಿದೆ. ಇನ್ನೊಂದೆಡೆ ಸುಳ್ಳು ಸುದ್ದಿಗಳು, ಗಾಭರಿ ಹುಟ್ಟಿಸುವ ವಿಡಿಯೋ ಕ್ಲಿಪ್ಪಿಂಗ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಫಾರ್ವರ್ಡ್ ಆಗುತ್ತಲಿವೆ. ಯಾವುದನ್ನು ನಂಬಬೇಕು ಯಾವುದನ್ನು ನಂಬಬಾರದು ಎನ್ನುವುದು ಜನರಿಗೆ ತಿಳಿಯದಾಗಿದೆ. ಕೊರೋನಾ ಮಹಾ ಮಾರಿಯ ಕುರಿತು ಸರಿಯಾದ ಜ್ಞಾನ ಇಲ್ಲದವರೂ ಮನಬಂದಂತೆ ತಮಗೆ ಬಂದ ಮಾಹಿತಿಯನ್ನು ಇತರರಿಗೆ ಕಳಿಸುವುದರಿಂದ ಸಾರ್ವಜನಿಕರ ನಡುವೆ ಗೊಂದಲ ಹೆಚ್ಚುತ್ತಿದೆ. ಜನತಾ ಕರ್ಫ್ಯೂ ಎಂದು ಪ್ರಧಾನಿ ಮೋದಿಯವರು ಘೋಷಿಸಿದ ದಿನ ವಿಮಾನದ ಮೂಲಕ ಔಷದ ಸಿಂಪಡಿಸಲಾಗುವುದು ಎನ್ನುವ ನಕಲಿ ಸುದ್ದಿಗೂ ಸಹಾ ಹವಾ ಸಿಕ್ಕಿತು ಎನ್ನುವುದು ಇಲ್ಲಿ ಗಮನಾರ್ಹ. ಇಟೆಲಿ, ಬ್ರಿಟನ್ ಮತ್ತು ಇದೀಗ ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲೂ ಸಾವಿರಾರು ಜನ ಕೊರೋನಾ ಸೋಂಕಿಗೊಳಗಾಗಿ ಸಾಯುತ್ತಿದ್ದರೂ ಇತ್ತೀಚೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕೊರೊನಾ ತಡೆಗಟ್ಟಲು ಹಗಲಿರುಳು ಸೆಣಸುತ್ತಿರುವ ಪೊಲೀಸ್ ಸಿಬ್ಬಂದಿಗಳ ನೆರವಿಗೆ ಧಾವಿಸಿರುವ ಗಂಗೊಳ್ಳಿಯ ಶ್ರೀ ಸರಸ್ವತಿ ವಿದ್ಯಾನಿಧಿ ಮತ್ತು ಉದ್ಯಮಿ ಜಿ. ಭಾಸ್ಕರ ವಿಠಲ ಶೆಣೈ ಕುಟುಂಬಸ್ಥರು ಲಾಕ್ ಡೌನ್ ಅವಧಿಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಮಧ್ಯಾಹ್ನದ ದಾಸೋಹ ವ್ಯವಸ್ಥೆಗೆ ಮುಂದಾಗಿದ್ದಾರೆ. ಗಂಗೊಳ್ಳಿಯ ಶ್ರೀ ಸರಸ್ವತಿ ವಿದ್ಯಾನಿಧಿ ಮತ್ತು ಉದ್ಯಮಿ ಜಿ. ಭಾಸ್ಕರ ವಿಠಲ ಶೆಣೈ ಕುಟುಂಬಸ್ಥರು, ಕಳೆದ ಸುಮಾರು ಒಂದು ವಾರದಿಂದ ಪ್ರತಿನಿತ್ಯ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಮಧ್ಯಾಹ್ನದ ಊಟವನ್ನು ಉಣಬಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪೊಲೀಸರಿಗೆ ಲಾಕ್ ಡೌನ್ ಸಮಯದಲ್ಲಿ ಎಲ್ಲೂ ಸರಿಯಾದ ಆಹಾರ ದೊರೆಯುತ್ತಿಲ್ಲ. ಹೀಗಾಗಿ ಲಾಕ್ ಡೌನ್ ಸಮಯದಲ್ಲಿ ಪ್ರತಿದಿನ ಮಧ್ಯಾಹ್ನ ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆಯನ್ನು ಗಂಗೊಳ್ಳಿಯ ಶ್ರೀ ಸರಸ್ವತಿ ವಿದ್ಯಾನಿಧಿ ಮತ್ತು ಉದ್ಯಮಿ ಜಿ. ಭಾಸ್ಕರ ವಿಠಲ ಶೆಣೈ ಕುಟುಂಬಸ್ಥರ ಮೂಲಕ ಮಾಡಲಾಗುತ್ತಿದೆ ಎಂದು ಸರಸ್ವತಿ ವಿದ್ಯಾನಿಧಿ ಅಧ್ಯಕ್ಷ ಜಿ. ವೆಂಕಟೇಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಫೇಸ್‌ಮಾಸ್ಕ್‌ಗಳನ್ನು ಉಚಿತವಾಗಿ ನೀಡಿದ್ದು, ಸೋಮವಾರ ಕರೋನ ತಡೆಗಟ್ಟಲು ನಿರಂತರವಾಗಿ ಶ್ರಮಿಸುತ್ತಿರುವ ಬೈಂದೂರು ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಬೈಂದೂರಿನಲ್ಲಿರುವ ವಲಸೆ ಕಾರ್ಮಿಕರಿಗೆ ಹಸ್ತಾಂತರಿಸಿದರು. ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್‌ಕುಮಾರ್ ಶೆಟ್ಟಿ ಮಾಸ್ಕ್‌ಗಳನ್ನು ವಿತರಿಸಿದರು. ಸಂಸದರ ಬೈಂದೂರು ಕಛೇರಿ ಆಪ್ತ ಸಹಾಯಕ ಶಿವಕುಮಾರ್ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿದ್ದು, ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144(3) ರಂತೆ ನಾಗರೀಕರ ಸಂಚಾರವನ್ನು ನಿಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ. ಜಿಲ್ಲಾಡಳಿತಕ್ಕೆ ದೈನಂದಿನ ದಿನಸಿ/ಅವಶ್ಯಕ ಸಾಮಾಗ್ರಿಗಳನ್ನು ಸ್ವಇಚ್ಛೆಯಿಂದ ನೀಡಬಯಸುವ ದಾನಿಗಳು / ಸಂಘ ಸಂಸ್ಥೆಗಳು/ ಸಾರ್ವಜನಿಕರು ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಘಂಟೆ ಯವರೆಗೆ ನೀಡಬಹುದು ಎಂದು ಈಗಾಗಲೇ ತಿಳಿಸಲಾಗಿದೆ. ಆದರೂ ಕೆಲವೊಂದು ವ್ಯಕ್ತಿಗಳು / ಸಂಸ್ಥೆಗಳು ಮನೆ ಮನೆಗೆ ನೇರ ತೆರಳಿ ದೈನಂದಿನ ದಿನಸಿ/ ಅವಶ್ಯಕ ಸಾಮಾಗ್ರಿಗಳನ್ನು ಯಾವುದೇ ಅನುಮತಿ ಇಲ್ಲದೆ ಹಾಗೂ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೇ ಗುಂಪು ಗುಂಪಾಗಿ ಐದಕ್ಕಿಂತ ಹೆಚ್ಚು ಜನರು ಒಟ್ಟಾಗಿ ತೆರಳಿ ಸಾಮಾಗ್ರಿಗಳನ್ನು ಹಂಚುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಪದೇ ಪದೇ ದೂರುಗಳು ಬರುತ್ತಿವೆ. ಇದರಿಂದಾಗಿ ಲಾಕ್‌ಡೌನ್ / ನಿಷೇಧಾಜ್ಞೆಯ ಉಲ್ಲಂಘನೆಯಾಗುತ್ತದೆ ಅಲ್ಲದೇ ಲಾಕ್‌ಡೌನ್ ನ ಮೂಲ ಉದ್ದೇಶವೇ ಬುಡಮೇಲಾಗುತ್ತದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಸಂದರ್ಭ ತಾಲೂಕಿನ ಸೌಡ ಪರಿಸರದ ಜನರಿಗೆ ನೆರವಾಗುವ ಉದ್ದೇಶದಿಂದ ಸೌಡ ಮಧುರ ಯುವಕ ಮಂಡಲ (ರಿ) ಸದಸ್ಯರುಗಳು ವಿನೂತನ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ತರಕಾರಿ, ಹಾಲು, ಮೊಸರನ್ನು ಮಾರುಕಟ್ಟೆ ಬೆಲೆಯಲ್ಲಿಯೇ ವಿತರಿಸಲು ಯುವಕ ಮಂಡಲದಿಂದ ತಾತ್ಕಾಲಿಕ ಅಂಗಡಿ ತೆರೆದಿದ್ದಾರೆ. ಅಷ್ಟೇ ಅಲ್ಲದೇ ವಿದ್ಯುತ್ ಸಮಸ್ಯೆ, ಮೆಡಿಸಿನ್, ಮೊಬೈಲ್ ರೀಚಾರ್ಜ್ ಹಾಗೂ ಜನರು ಪಡಿತರ ಪಡೆಯುವುದಕ್ಕಾಗಿ ನೆರವಾಗುವ ಪ್ರಯತ್ನದಲ್ಲಿ ಉತ್ಸಾಹಿ ಯುವಕರಿದ್ದಾರೆ. ಸೌಡ ಪರಿಸರದವರು ನಿಗದಿಪಡಿಸಿದ ದಿನಾಂಕದಂದು ಸೊಸೈಟಿಯಲ್ಲಿ ರೇಷನ್ ತೆಗೆದುಕೊಳ್ಳಲು ಸೊಸೈಟಿಗೆ ತೆರಳಿದರೆ ಅವರಿಗೆ ಉಚಿತವಾಗಿ ಸಾಗಾಟ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಮೂರು ದಿನಗಳ ಕಾಲ ವಿವಿಧ ಭಾಗಗಳ ಜನರಿಗೆ ರೇಷನ್ ಪಡೆದುಕೊಳ್ಳಲು ಸೂಚಿಸಲಾಗಿದೆ. ಉಳಿದಂತೆ ಅಗತ್ಯ ತರಕಾರಿ, ಹಾಲು ಮೊಸರು ಕೊಂಡುಕೊಳ್ಳಲು ನೆರವಾಗಿರುವುದಲ್ಲದೇ ವಿದ್ಯುತ್ ಸಮಸ್ಯೆಯಿದ್ದರೇ, ಮೊಬೈಲ್ ರೀಚಾರ್ಜ್ ಮಾಡುವುದಿದ್ದರೇ, ಇನ್ಸುರೆನ್ಸ್ ವಿದ್ಯುತ್ ಬಿಲ್ ಕಟ್ಟಬೇಕಿದ್ದರೇ, ಜೌಷಧಿಗಳ ಅಗತ್ಯವಿದ್ದರೆ ಎಲ್ಲದಕ್ಕೂ ಮಧುರ ಯುವಕ ಮಂಡಲದ ಯುವಕರುಗಳು…

Read More