ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್‌ನ ಮೂರನೇ ದಿನವಾದ ಗುರುವಾರ ಕುಂದಾಪುರ ಪೇಟೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಕುಂದಾಪುರದ ಸಹಾಯಕ ಕಮೀಷನರ್(ಎಸಿ) ಕೂಡ ಇದಕ್ಕೆ ಸಾಥ್ ನೀಡಿದರು. ಕುಂದಾಪುರ ಎಸಿ ಕೆ. ರಾಜು ಅವರು ಒಂದೆಡೆ ರಸ್ತೆಯಲ್ಲಿ ಅಲೆಯುತ್ತಿದ್ದ ಯುವಕರಿಗೆ ಲಾಠಿ ರುಚಿ ತೋರಿಸಿದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಅಂಗಡಿಗಳಿಗೆ ತೆರಳಿ ಹೆಚ್ಚಿನ ದರ ವಿಧಿಸದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ನಿಯಮ ಪಾಲಿಸದಿದ ಬಗ್ಗೆ ದೂರು ಬಂದರೆ ಅಂಗಡಿ ಮುಚ್ಚಿಸುವ ಜೊತೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಸಿದರು. ಮೆಡಿಕಲ್ ಸ್ಟೋರ್, ಜನ ಔಷಧಿ ಕೇಂದ್ರಗಳಿಗೆ ತೆರಳಿ ಸರಿತಿಯಲ್ಲಿ ನಿಲ್ಲುವಂತೆ ಸೂಚಿಸಿ ಒಬ್ಬರಿಂದ ಒಬ್ಬರಿಗೆ ಅಂತರ ಕಾಪಾಡುವಂತೆ ಸೂಚಿಸಿ, ರಸ್ತೆ ಬದಿಯಲ್ಲಿ ಅನಾವಶ್ಯಕ ನಿಂತ ವಾನಗಳ ತೆರವು ಮಾಡಿದರು. ನಂತರ ಶಾಸ್ತ್ರಿ ವೃತ್ತದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ನಿಲ್ಲುವ ಮೂಲಕ ಅನಾವಶ್ಯಕವಾಗಿ ಬರುವ ವಾನಗಳ ಚಾಲಕರಿಗೆ ಯಾಕೆ ಸುಖಾಸುಮ್ಮನೆ ಬರುತ್ತೀರಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಹರಡುವುದನ್ನು ತಡೆಯಲು ಈಗಾಗಲೇ ನಾಗರೀಕರ ಸಂಚಾರ ನಿರ್ಭಂದಿಸಿ ಸಿ.ಆರ್.ಪಿ.ಸಿ ಸೆಕ್ಷನ್ 144 (3) ರಲ್ಲಿ ಆದೇಶ ಹೊರಡಿಸಿದೆ ಅಲ್ಲದೇ ಇತರೇ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಆದರೆ ಜಿಲ್ಲೆಯ ನಾಗರೀಕರು ಈ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿರುವುದು ವರದಿಯಾಗುತ್ತಿದ್ದು, ಇಂತಹ ಪ್ರಕರಣಗಳನ್ನು ನಿಯಂತ್ರ್ರಿಸುವ ಅವಶ್ಯಕತೆಯಿರುವುದರಿಂದ, ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆಯಿದ್ದು, ಸಿ.ಆರ್.ಪಿ.ಸಿ ಆದೇಶ ಮತ್ತು ಕೋವಿಡ್ ರೋಗವನ್ನು ನಿಯಂತ್ರಿಸಲು ಹೊರಡಿಸಲಾಗಿರುವ ಇತರೇ ನಿರ್ದೇಶನಗಳನ್ನು ಪಾಲಿಸದೇ ಇದ್ದವರ ಮೇಲೆ, ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು, ಕುಂದಾಪುರ ಉಪವಿಭಾಗಾಧಿಕಾರಿಗಳು, ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ ತಹಸೀಲ್ದಾರ್‌ಗಳಿಗೆ ಪ್ರತ್ಯಾಯೋಜಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ತರಕಾರಿ, ದಿನಸಿ, ಮೀನು, ಮಾಂಸ, ಹಣ್ಣು ಹಂಪಲು, ಮೆಡಿಕಲ್ ಶಾಪ್, ಹಾಲು ಮುಂತಾದವುಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರು ತಮ್ಮ ಅಂಗಡಿ ಎದುರಿನಲ್ಲಿ ಕನಿಷ್ಠ 6 ಅಡಿಗಳ ಅಂತರದಲ್ಲಿ ಕಡ್ಡಾಯವಾಗಿ ಪೇಂಟ್ ಅಥವಾ ಇನ್ನಿತರ ಬಣ್ಣದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ನವೀಕೃತ ಗರ್ಭಗುಡಿ ಸಮರ್ಪಣೆ ಹಾಗೂ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕಾರ್ಯಕ್ರಮವು ಎಪ್ರಿಲ್ 05ರಿಂದ ನಡೆಯಬೇಕಿದ್ದು, ಈ ನಡುವೆ ಸರಕಾರ ಲಾಕ್‌ಡೌನ್ ಆದೇಶ ನೀಡಿರುವುದರಿಂದ ಗರಡಿಯ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ತಂತ್ರಿಗಳು, ಊರ ಗ್ರಾಮಸ್ಥರು ಸೇರಿ ನಿರ್ಣಯಿಸಿ ಭಕ್ತರಿಗೆ ತಿಳಿಸಲಾಗುವುದು ಎಂದು ಗರಡಿಯ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮಾಚ್.18ರಂದು ದುಬೈನಿಂದ ಬಂದಿದ್ದ 34 ವರ್ಷ ವಯಸ್ಸಿನ ವ್ಯಕ್ತಿಯೋರ್ವರು ಜ್ವರದ ಕಾರಣ ಮಾರ್ಚ್ 23ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಪ್ರಾಥಮಿಕ ವರದಿಯಲ್ಲಿ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಇಂದಿನಿಂದ ದೇಶಾದ್ಯಂತ ವಿಧಿಸಲಾಗಿರುವ 21 ದಿನಗಳ ಲಾಕ್‌ಡೌನ್ ಸಂದರ್ಭ ಭಾರತದ ಗೃಹ ಇಲಾಖೆ ಬಿಡುಗಡೆ ಮಾಡಿರುವ ಲಭ್ಯವಿರುವ ಮತ್ತು ಲಭ್ಯವಿರದ ಸೇವೆಗಳ ಪಟ್ಟಿ: ಲಭ್ಯವಿರುವ ಸೇವೆಗಳು: ► ಆಸ್ಪತ್ರೆಗಳು, ಆರೋಗ್ಯ ಸಂಬಂಧಿತ ಎಲ್ಲಾ ವಿಭಾಗಗಳು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕ ಕಂಪನಿಗಳು, ಉದ್ದಿಮೆಗಳು, ಘಟಕಗಳು ಅಂದರೆ, ಮೆಡಿಕಲ್ ಸಾಧನಗಳನ್ನು ತಯಾರಿಸುವ ಕಂಪನಿಗಳು, ಔಷಧಿ ತಯಾರಕಾ ಹಾಗೂ ವಿತರಕರು, ವೈದ್ಯಕೀಯ ಸಿಬ್ಬಂದಿ, ನರ್ಸ್‌ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ಆಸ್ಪತ್ರೆಗಳಿಗೆ ಸಂಬಧಿತ ವಾಹನ ಪ್ರಯಾಣಕ್ಕೆ ಅವಕಾಶ. ► ದಿನಸಿ ಅಂಗಡಿಗಳು, ತರಕಾರಿ, ಹಣ್ಣು ಅಂಗಡಿಗಳು, ಹಾಲಿನ ಡೈರಿಗಳು, ಮೀನು ಮಾಂಸ, ಪ್ರಾಣಿಗಳ ಮೇವು ಅಂಗಡಿಗಳು ► ಬ್ಯಾಂಕುಗಳು, ವಿಮಾ ಕಂಪನಿಗಳು, ಎಟಿಎಮ್ ► ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು. /ಕುಂದಾಪ್ರ ಡಾಟ್ ಕಾಂ ಸುದ್ದಿ/ ► ದೂರಸಂಪರ್ಕ, ಇಂಟರ್ನೆಟ್, ಪ್ರಸಾರ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಕೋವಿಡ್-19 (ಕೊರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಎಸಿ ರಾಜು ಕೆ., ತಾಲೂಕು ಆರೋಗ್ಯಾಧಿಕಾರಿ ನಾಗಭೂಷಣ್ ಅವರು ನೇತೃತ್ವದಲ್ಲಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಕುಂದಾಪುರ ರ‍್ಯಾಪಿಡ್ ಆಕ್ಷನ್ ತಂಡದ ಸಭೆ ನಡೆ ನಡೆಸಲಾಯಿತು. ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಹೋಮ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆಗೆ ಆರೋಗ್ಯ ತಪಾಸಣಾ ತಂಡದೊಂದಿಗೆ ಪೊಲೀಸ್ ಸಿಬ್ಬಂಧಿಗಳು ತೆರಳುವುದು. ಹೋಮ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆಯ ಎದುರು ಮುದ್ರಿತ ಭಿತ್ತಿಪತ್ರವನ್ನು ಅಂಟಿಸುವುದು. ಕೊರೋನಾ ವೈರಸ್ ಶಂಕಿತ ವ್ಯಕ್ತಿಗಳ ಮನೆಗಳಿಗೆ ತೆರಳಿದ ಸಮಯದಲ್ಲಿ ಅವರು ಮನೆಯಲ್ಲಿ ಇಲ್ಲದಿರುವುದು ಕಂಡುಬಂದರೆ ಅಂತವರ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸುವುದು. ಯಾವುದಾದರೂ ವ್ಯಕ್ತಿಗಳ ಬಗ್ಗೆ ಕರೋನಾ ಸೊಂಕಿನ ಬಗ್ಗೆ ಸಂಶಯವಿದ್ದಲ್ಲಿ ತಾಲೂಕು ಆರೋಗ್ಯ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸುವುದು. ಸೇವೆಯಲ್ಲಿರುವ ಅಧಿಕಾರಿ, ಸಿಬ್ಬಂಧಿ ಹೊರತುಪಡಿಸಿ ಬೇರೆ ವ್ಯಕ್ತಿಗಳು ಓಡಾಟ ನಡೆಸದಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ೧೪೪ ಸೆಕ್ಷನ್ ಜಾರಿಯಲ್ಲಿದೆ. ಇದು ತಿಳಿದಿದ್ದು ಅಗನತ್ಯವಾಗಿ ಮನೆ ಹೊರಕ್ಕೆ ಬರುವುದು, ಗುಂಪು ಸೇರುವುದು ಮುಂತಾದ ಕಾನೂನು ಮೀರಿದ ವರ್ತನೆ ಕಂಡುಬಂದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ಅನುಸರಿಸಲಿದೆ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಹೇಳಿದರು. ಅವರು ಮಂಗಳವಾರ ಕುಂದಾಪುರದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕೊರೋನಾ ವಿಚಾರದಲ್ಲಿ ಜನರು ಭಯ ಪಡುವ ಅಗತ್ಯವಿಲ್ಲ. ಆದರೆ ಅಗತ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಕುಂದಾಪುರದ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ನಾಗರಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಶಿರೂರು, ಹೊಸಂಗಡಿ, ನಾಗೋಡಿ ಚೆಕ್‌ಪೋಸ್ಟ್‌ಗಳಲ್ಲಿ ಖಾಸಗಿ ವಾಹನ ಹಾಗೂ ಜನಸಂಚಾರವನ್ನು ಸಂಪೂರ್ಣ ನಿಬಂರ್ಧಿಸಲಾಗಿದೆ. ಗಡಿಯಲ್ಲಿ ಆರೋಗ್ಯ ಸಿಬ್ಬಂಧಿಗಳನ್ನ ನೇಮಿಸಲಾಗಿದೆ. ತುರ್ತು ಸೇವೆಯ ವಾಹನ, ತರಕಾರಿ, ಹಾಲಿನ ವಾಹನಗಳನ್ನಷ್ಟೇ ಬಿಡಲಾಗುತ್ತಿದೆ. ಎಲ್ಲೆಡೆಯೂ ಆಸ್ಪತ್ರೆ, ಮೆಡಿಕಲ್, ದಿನಸಿ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೊರೊನಾ ನಿಯಂತ್ರಣ ಕುರಿತಂತೆ, ರಾಜ್ಯ ಸರ್ಕಾರ ಸೂಚಿಸಿರುವ ನಿರ್ಬಂಧಗಳನ್ನು ಉಡುಪಿ ಜಿಲ್ಲೆಯ ನಾಗರೀಕರು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಈ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಮಂಗಳವಾರ, ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಗೆ ವಿದೇಶದಿಂದ ಬಂದಿರುವ ೯೦೦ ಜನರನ್ನು ಗುರುತಿಸಲಾಗಿದ್ದು, ಈ ಎಲ್ಲರ ಮನೆಗಳಿಗೆ ನೋಟೀಸ್ ಅಂಟಿಸಲಾಗಿದ್ದು, ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಪಾಲಿಸಲು ಸೂಚಿಸಲಾಗಿದ್ದು, ಪ್ರತಿದಿನ ದಿನಕ್ಕೆ 2 ಬಾರಿ ಗಸ್ತು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲಿಸಲಿದ್ದಾರೆ ಅಲ್ಲದೇ ಈ ಮನೆಗಳ ಪಕ್ಕದವರಿಗೂ ಇವರ ಬಗ್ಗೆ ಮಾಹಿತಿ ನೀಡಿದ್ದು, ಮನೆಯಿಂದ ಹೊರಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಉಚಿತ ಟೋಲ್ ಫ್ರೀ ನಂ.1077ಹಾಗೂ ಪೊಲೀಸ್ ಕಂಟ್ರೋಲ್ ರೂಮ್ 100 ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ, ಈ ನಿರ್ಬಂದ ಪಾಲಿಸದಿದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯಾದ್ಯಂತ ಲಾಕ್‌ಡೌನ್ ಮಾಡಲು ಸರಕಾರ ಆದೇಶಿಸಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಕರ್ಫ್ಯೂ ಜಾರಿಯಲ್ಲಿದೆ. ಸರಕಾರದ ಆದೇಶವನ್ನು ನಾಗರಿಕರು ಪಾಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕೋರಿಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಮಾರ್ಚ್ 23ರ ಮಧ್ಯರಾತ್ರಿಯಿಂದ ಲಾಕ್‌ಡೌನ್ ಮಾಡಲಾಗುತ್ತಿದೆ. ಅನಗತ್ಯವಾಗಿ ಮನೆಯಿಂದ ಹೊರಕ್ಕೆ ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ನಾಗರಿಕರು ಮನೆಯಲ್ಲೇ ಇದ್ದು ಕರೋನಾ ವೈರಸ್ ತಡೆಗೆ ಸಹಕರಿಸಬೇಕಾಗಿ ಅವರು ತಿಳಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ತುರ್ತು ಸೇವೆಗಳಷ್ಟೇ ಲಭ್ಯವಿರಲಿದೆ. ಮೆಡಿಕಲ್, ಆಹಾರ ಸಾಮಾಗ್ರಿ, ಹಣ್ಣು, ತರಕಾರಿ, ಮೀನು-ಮಾಂಸ ಲಭ್ಯವಿರಲಿದೆ. ಉಳಿದಂತೆ ಯಾವುದೇ ಸರಕಾರಿ, ಖಾಸಗಿ ಸಾರಿಗೆ ಸೇವೆಗಳು ಲಭ್ಯವಿರುವುದಿಲ್ಲ. ಅನಗತ್ಯವಾಗಿ ಖಾಸಗಿ ವಾಹನಗಳು ತಿರುಗಲು ಬಿಡುವುದಿಲ್ಲ ಎಂದಿರುವ ಅವರು, ತುರ್ತು ಸಂದರ್ಭದಲ್ಲಿ ಸರಕಾರ, ಪೊಲೀಸ್ ಇಲಾಖೆ ಸ್ಪಂದಿಸಲಿದೆ ಎಂದಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಕ್ವಾಡಿಯವರಾದ ಉದ್ಯಮಿ, ಸಿನೆಮಾ ವಿತರಕ ವಿ. ಕೆ. ಮೋಹನ್(60) ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೋಟೆಲ್ ಉದ್ಯಮದಲ್ಲಿ ತೊಡಗಿಕೊಡಿದ್ದ ಮೋಹನ್ ಅವರು ಸಿನೆಮಾ ನಿರ್ಮಾಣ, ಸಿನೆಮಾ ವಿತರಕರಾಗಿಯೂ ಗುರುತಿಸಿಕೊಂಡಿದ್ದರು. ಡಾ. ರಾಜ್ ಕುಟುಂಬದವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಅವರು ಕೆಲ ಸಿನೆಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು. ಕುಂದಾಪುರಕ್ಕೆ ವಿವಿಧ ಸಂದರ್ಭಗಳಲ್ಲಿ ಸಿನೆಮಾ ನಟ-ನಟಿಯರನ್ನು ಕರೆತಂದು ಸ್ಥಳೀಯ ಕಾರ್ಯಕ್ರಮಗಳಿಗೆ ಮೆರಗು ನೀಡುತ್ತಿದ್ದರು. ಕೆಲ ದಿನಗಳ ಹಿಂದೆ ಮೋಹನ್ ಅವರಿಗೆ ಸೇರಿದ ಕ್ಲಬ್ ಮೇಲೆ ದಾಳಿ ನಡೆದಿತ್ತು. ಆ ಬಳಿಕವೂ ಉದ್ಯಮದಲ್ಲಿ ಆರ್ಥಿಕ ಹಿಂಜರಿತ ಅನುಭವಿಸಿದ್ದರು. ಇದೆಲ್ಲವೂ ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ ಎನ್ನಲಾಗಿದೆ. ನಿನ್ನೆ ಹೋಟೇಲ್ ಬಂದಿದ್ದ ಅವರು ಇಂದು ಬೆಳಿಗ್ಗೆ ರೂಮ್ ಬಾಗಿಲು ತೆರೆಯದೇ ಇದ್ದುದರಿಂದ ಅನುಮಾನಗೊಂಡು ಕಿಟಕಿ ತೆರೆದು ನೋಡಿದಾಗ ಅವರು ನೇಣಿಗೆ ಶರಣಾಗಿರುವುದು ತಿಳಿದುಬಂದಿತ್ತು. /ಕುಂದಾಪ್ರ ಡಾಟ್ ಕಾಂ ಸುದ್ದಿ./
