Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡ್ಸೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಝಹೀರ್ ಅಹಮ್ಮದ್ ನಾಖುದಾ ಅವರನ್ನು ಆಯ್ಕೆ ಮಾಡಲಾಗಿದೆ. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ಶಿಫಾರಸ್ಸಿನ ಮೇರೆಗೆ ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ ಅವರು ನೇಮಕ ಮಾಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 5ನೇ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು . ಅಧ್ಯಕ್ಷೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಗೊಂಬೆಯಾಟದಂತಹ ಅಪರೂಪದ ಜಾನಪದ ಕಲೆಯನ್ನು ಎಲ್ಲರೂ ಸೇರಿ ಉಳಿಸಬೇಕು. ಈ ಕಲೆಯನ್ನು ನಶಿಸಿ ಹೋಗಲು ಬಿಡಬಾರದು. ಸಣ್ಣ ಮಕ್ಕಳನ್ನು ತರಬೇತುಗೊಳಿಸಿ ತಂಡವನ್ನು ಕಟ್ಟಬೇಕು. ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬ ಮತ್ತು ಕೊಗ್ಗ ಕಾಮತ್ ಜನ್ಮ ಶತಮಾನೋತ್ಸವದ ಅಂಗವಾಗಿ ಹಳ್ಳಿಯೆಡೆಗೆ ಗೊಂಬೆ ನಡಿಗೆ ಗೆ ಚಾಲನೆ ನೀಡುವುದಾಗಿ ಅಭಿಪ್ರಾಯ ಪಟ್ಟರು. ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2020ನ್ನು ಖ್ಯಾತ ಹಿಂದೂಸ್ಥಾನಿ ಗಾಯಕ ವಿದ್ವಾನ್ ಗಜಾನನ ಹೆಬ್ಬಾರ್ ಇವರಿಗೆ ಪ್ರದಾನ ಮಾಡಲಾಯಿತು. ಕೊಗ್ಗ ದೇವಣ್ಣಕಾಮತ್ ಪ್ರಶಸ್ತಿ -2021ನ್ನು ಶ್ರೀ ಗಣೇಶಂ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇದರ ಖ್ಯಾತ ಅರ್ಥಧಾರಿ ಹೆಚ್. ನಾರಾಯಣ ಬಿಲ್ಲವ, ಹೆಮ್ಮಾಡಿ ಇವರಿಗೆ ನೀಡಲಾಯಿತು. ನಿವೃತ್ತ ಉಪನ್ಯಾಸಕರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ನವಶಕ್ತಿ ಮಹಿಳಾ ವೇದಿಕೆ ಕೊಲ್ಲೂರು ಇವರ ವತಿಯಿಂದ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ರತ್ನ ಪೂಜಾರಿ ಉದ್ಘಾಟಿಸಿದರು. ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾಗಿರಿಧರ ಭಿಡೆ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಶ್ರೇಷ್ಠ ಆದ್ಯಾತ್ಮಿಕ ನಾಯಕರು ತಮ್ಮ ತತ್ವ ಶಾಸ್ತ್ರದ ವೈಭವವನ್ನು ಇಡೀ ಜಗತ್ತಿಗೆ ಸಾರಿದ ಕೀರ್ತಿ ಹೊಂದಿರುವ ಮಹಾನ್ ವ್ಯಕ್ತಿ. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ಇವರ ಚಿಂತನೆಗಳು ಸಂದೇಶಗಳು ಎಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳು ಯುವಜನತೆಯ ಮೇಲೆ ಪ್ರಭಾವ ಬೀರುವ ಬಾಳು ಬೆಳಗುವ ಅಂಶಗಳು ಇದೆ ಕಾರಣಕ್ಕೆ ಇವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ವಿವೇಕಾನಂದರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದರು. ಕಾರ್ಯಕ್ರಮವನ್ನು ಸದಸ್ಯರಾದ ಜ್ಯೋತಿ ರಾಘವೇಂದ್ರ ಸ್ವಾಗತಿಸಿ ನಿರೂಪಿಸಿದರು. ಉಷಾ ವಂದಿಸಿದರು. ನವಶಕ್ತಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಜಾತ ಆಚಾರಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಜ್ಞಾನಪೀಠ ಪುರಸ್ಕೃತ ಡಾ ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ಭೇಟಿ ನೀಡಿ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಂಗಮಂದಿರ, ಗ್ರಂಥಾಲಯ, ಅಂಗನವಾಡಿ ವೀಕ್ಷಿಸಿದರು. ಕಾರಂತರು ಸಾಹಿತ್ಯ ಲೋಕದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡರು, ಅಲ್ಲದೇ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕೋಟತಟ್ಟು, ಕೋಟ ಗ್ರಾಮ ಪಂಚಾಯತ್ ಗ್ರಂಥಾಲಯದ ಸಿಬ್ಬಂದಿಗಳಾದ ಶೈಲಜ ಕೆ.ಎನ್, ಜ್ಯೋತಿ ಅವರು ಗೌರವಧನ ಹೆಚ್ಚಿಸುವಂತೆ ವಿನಂತಿಸಿಕೊಂಡರು ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ದ.ಕ ಉಸ್ತುವಾರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ , ಕಾರಂತ  ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಬಿ.ಎನ್ ಶಂಕರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ, ಗಂಗೊಳ್ಳಿ: ಇಲ್ಲಿನ ಟೌನ್ ಸೌಹಾರ್ದ ಸಹಕಾರಿಯ ಪ್ರಧಾನ ಕಛೇರಿಯಲ್ಲಿ ಮಂಗಳವಾರ ಸಹಕಾರಿ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷ ಗಣೇಶ ಕಾಮತ್ ಒಂದು ಕಾಲದಲ್ಲಿ ಬಂದರಿನ ಪಟ್ಟಣವಾಗಿ, ಬೇರೆ ದೇಶಗಳೊಂದಿಗೆ ವ್ಯವಹಾರ ನಡೆಸುತ್ತಿದ್ದ ಗಂಗೊಳ್ಳಿಯಲ್ಲಿ ಫಲಾಪೇಕ್ಷೆ ಇಲ್ಲದೆ ಆರಂಭಿಸಿದ್ದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಇಂದು ಅವರ ಕನಸಿನಂತೆ ಪರಿಸರದ ಜನರ ಆರ್ಥಿಕತೆಯ ಜೀವಸೆಲೆಯಾಗಿ ಎದ್ದುನಿಂತಿದೆ. ಗ್ರಾಹಕರ ಸೇವೆಗೆ ಪ್ರಥಮ ಆದ್ಯತೆ ಎಂಬ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿಯು ಸದೃಢವಾಗಿ ಬೆಳೆದು ನಿಂತು ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ ಶುಭ ಹಾರೈಸಿದರು. ಕರೋನಾ ವಾರಿಯರ‍್ಸ್‌ಗಳಾಗಿ ಸೇವೆ ಸಲ್ಲಿಸಿದ ಗಂಗೊಳ್ಳಿ ಅಂಚೆ ಕಛೇರಿಯ ಪೋಸ್ಟ್‌ಮ್ಯಾನ್‌ಗಳಾದ ಎಂ.ಬಾಬಣ್ಣ ಬಳೆಗಾರ್ ಮತ್ತು ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಜಿ.ವೆಂಕಟೇಶ ನಾಯಕ್, ಉದಯಶಂಕರ ರಾವ್, ಮಹಾಬಲ ಪೂಜಾರಿ, ನಾರಾಯಣ ಪೂಜಾರಿ, ವತ್ಸಲಾ ಎಸ್.ಕಾಮತ್, ಮಾಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತ್ರಾಸಿ ರಾಜ್ಯದ ಅತ್ಯಂತ ಸುಂದರ ಬೀಚ್ಗಳಲ್ಲಿ ಒಂದು. ದಿನವೂ ಸಾವಿರಾರು ಪ್ರವಾಸಿಗಳು ಭೇಟಿ ನೀಡುವ ಇಲ್ಲಿನ ಸ್ವಚ್ಛತೆ ಕಾಪಾಡುವುದು ಸಂಬಂಧಿಸಿದ ಎಲ್ಲರ ಹೊಣೆ’ ಎಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದರು. ಕುಂದಾಪುರ ಮಿಡ್ ಟೌನ್ ರೋಟರಿ ಕ್ಲಬ್, ಕೋಸ್ಟ್ ಗಾರ್ಡ್ ಮತ್ತು ಪರಿಸರ ಇಲಾಖೆ ಸಹಯೋಗದಲ್ಲಿ ತ್ರಾಸಿ ಬೀಚ್‌ನಲ್ಲಿ ನಡೆದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ 79ನೇ ಸ್ವಚ್ಛತಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹಮ್ಮಿಕೊಂಡಿರುವ ಅಭಿಯಾನ ಶ್ಲಾಘನೀಯ. ಇತರರಿಗೆ ಪ್ರೇರಣೆ ನೀಡುವಂತಹದು. ಸ್ಥಳೀಯರು ಇದನ್ನು ಮುಂದಕ್ಕೆ ಒಯ್ಯಬೇಕು ಎಂದು ಅವರು ಆಶಿಸಿದರು. ಬೀಚಿನ ಪ್ರಾಕೃತಿಕ ಸೌಂದರ್ಯ ಕಸದಿಂದ ಮಲಿನಗೊಂಡಿದೆ. ಬೀಚ್ ಪರಿಸರದಲ್ಲಿ ಕಸ ಎಸೆಯದಂತೆ ಸೂಚಿಸುವ ಫಲಕ ಅಳವಡಿಸಬೇಕು ಅಲ್ಲಲ್ಲಿ ಕಸದ ಡಬ್ಬಿ ಇರಿಸಿ, ಅವು ಭರ್ತಿಯಾದಾಗ ವಿಲೇವಾರಿ ಮಾಡುವ ಕೆಲಸವನ್ನು ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸದಸ್ಯೆ ಸರಸ್ವತಿ ಪುತ್ರನ್ ಹೇಳಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ, ಹಿರಿಯ ನಾಗರಿಕರ ವೇದಿಕೆ ಮತ್ತು ನಿವೃತ್ತ ಸರಕಾರಿ ನೌಕರರ ಸಂಘ ಕುಂದಾಪುರ, ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಶಿಬಿರವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ಕೆ. ರಾಜು, ಕೋವಿಡ್ 19 ಇದರ ನಿರ್ವಹಣೆಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಪರಿಣಾಮಕಾರಿಯಾಗಿದ್ದು ಈಗೀಗ ಹೆಚ್ಛೆಚ್ಚು ಜನರು ಅದರ ಸದುಪಯೋಗ ಮನಗಂಡಿದ್ದಾರೆ. ಹಾಗೆಯೇ ಇನ್ನಿತರ ರೋಗಗಳನ್ನು ನಿಭಾಯಿಸುವಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಪರ್ಯಾಪ್ತವಾಗಿದೆ ಎಂದರು. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಬಿ ವಿನಯಚಂದ್ರ ಶೆಟ್ಟಿ ಮಾತನಾಡಿ, ಹಿರಿಯ ನಾಗರಿಕರ ಮನೋದೈಹಿಕ ಸಮಸ್ಯೆಗಳು, ಅವುಗಳ ಪರಿಣಾಮಕಾರಿ ಚಿಕಿತ್ಸೆ, ಸಂಯೋಜನ ಚಿಕಿತ್ಸಾ ಪದ್ಧತಿಯ ಅಗತ್ಯತೆ ಹಾಗೂ ವೃದ್ದಾಪ್ಯಾದಲ್ಲಿ ಗುಣಮಟ್ಟದ ಅರೋಗ್ಯ ಕಾಪಾಡುವಲ್ಲಿ ಪರ್ಯಾಯ ಚಿಕಿತ್ಸಾ ಪದ್ಧತಿಗಳ ಮಹತ್ವದ ಬಗ್ಗೆ ವಿವರಿಸಿದರು. ಆಯುರ್ವೇದ, ಯೋಗ, ನ್ಯಾಚುರೋಪತಿ, ಫಿಸಿಯೋಥೆರಪಿ, ಮರ್ಮ ಚಿಕಿತ್ಸೆ ಮುಂತಾದ ಚಿಕಿತ್ಸಾ ಪರಿಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಅಳ್ವಾಸ್‌ನ ಎನ್‌ಸಿಸಿ ಘಟಕದ ಸಹಯೋಗದೊಂದಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ರಿಜಿನಲ್ ರೆಸ್ಪಾನ್ಸ್ ಸೆಂಟರ್, ಬೆಂಗಳೂರು ಇವರ ವತಿಯಿಂದ ಮೂರು ದಿನಗಳ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಗಾರ ನಡೆಯಿತು. ಮುಖ್ಯ ಅತಿಥಿಯಾಗಿ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜನರು ಎನ್ಸಿಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು ಹಾಗೂ ನೇರನುಡಿಯನ್ನು ಕಲಿಯಲು ಸಾಧ್ಯ ಎಂದು., ದೇಶಸೇವೆ ಹಾಗೂ ಜನರ ರಕ್ಷಣೆ ಮಾಡಲು ಸೇನೆಯಲ್ಲಿ ವಿಪುಲ ಅವಕಾಶಗಳಿವೆ. ಇಂದಿನ ಯುವಜನರು ಸೈನ್ಯ ಸೇರುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅಪಘಾತ ಸಂಭವಿಸಿದಾಗ ತಕ್ಷಣದ ಸಹಾಯ ಮಾಡದೆ, ಹೆಚ್ಚಿನ ಜನರು ಪರಿಸ್ಥಿತಿಯ ತೀವ್ರತೆಯನ್ನು ನೋಡುಗರಾಗಿಯೇ ಉಳಿದುಬಿಡುತ್ತಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ನೀಡುವ ತರಬೇತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತುರ್ತು ಸಂದರ್ಭಗಳಲ್ಲಿ ನೆರವಾಗಬೇಕೆಂದು ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಸಬ್ ಇನ್ಸ್ಪೆಕ್ಟರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೆಶ್ವರ ಗ್ರಾಮದ ನಾಗೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ರಳ್ಳಿ ಕೂಡುರಸ್ತೆಗೆ ಅವೈಜ್ಞಾನಿಕವಾದ ಯೂಟರ್ನ್ ಕೊಡಲಾಗಿದ್ದು, ಇದರಿಂದ ಕಳೆದ ಹಲವಾರು ದಿನಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂಬಂಧ ಪಟ್ಟವರು ತಕ್ಷಣ ಈ ವ್ಯವಸ್ಥೆಯನ್ನು ಸರಿಪಡಿಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೇಂದು ಆಗ್ರಹಿಸಿ ಸೋಮವಾರ ನಾಗೂರು ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಈ ಬಗ್ಗೆ ಮಾತನಾಡಿದ ಗ್ರಾಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಶೇಖರ ಖಾರ್ವಿ, ನಾಗೂರಿನ ಸುತ್ತ ಇರುವ ಹತ್ತು ಹಳ್ಳಿಯ ಜನರು ತಮ್ಮ ದಿನನಿತ್ಯದ ಕಾರ್ಯಗಳಿಗೆ, ಬ್ಯಾಂಕ್, ಸೊಸೈಟಿ ವ್ಯವಹಾರಕ್ಕೆ, ಗ್ರಾಪಂ ಕಚೇರಿ ಕೆಲಸಕ್ಕೆ ಈ ಪೇಟೆಯನ್ನು ಅವಲಂಬಿಸಿದ್ದಾರೆ. ಅಲ್ಲದೇ ದೇವಸ್ಥಾನ, ಮಸೀದಿ ಮತ್ತು ಕಲ್ಯಾಣ ಮಂಟಪಗಳು ಇಲ್ಲಿರುವುದರಿಂದ ಪ್ರತಿದಿನ ಪೇಟೆ ಜನಭರಿತವಾಗಿರುತ್ತದೆ. ಇವರೆಲ್ಲರೂ ಹೆದ್ದಾರಿ ತಲುಪಿದ ತಕ್ಷಣ ಎದುರಾಗುವ ಯೂಟರ್ನ್ ಮೂಲಕ ವಿರುದ್ಧ ದಿಕ್ಕಿನಿಂದ ಸಂಚರಿಸುತ್ತಾರೆ. ಹೆಚ್ಚಾಗಿ ದ್ವಿಚಕ್ರ ಹಾಗೂ ಕಾರುಗಳು ಅನಿವಾರ್ಯವಾಗಿ ಹೆದ್ದಾರಿಗೆ ಬರುವುದರಿಂದ ಹೈವೆಯಲ್ಲಿ ವೇಗವಾಗಿ ಹೋಗುತ್ತಿರುವ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ನೂತನ ಬೈಂದೂರು ತಾಲೂಕು ರಚನೆಯಾದ ಬಳಿಕ ನಾಡ ಗ್ರಾಮ ಪಂಚಾಯತಿಯಿಂದ ವಿಭಜನೆಗೊಂಡು ಕುಂದಾಪುರ ತಾಲೂಕಿನಲ್ಲಿ ಅತಂತ್ರ ಗ್ರಾಮವಾಗಿ ಉಳಿದು ಬಳಿಕ ಹೊಸಾಡು ಗ್ರಾಮ ಪಂಚಾಯತಿಗೆ ಸೇರ್ಪಡೆಗೊಂಡ ಸೇನಾಪುರ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯತಿಯನ್ನಾಗಿ ಘೋಷಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆ ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ. ನಾಡ ಗ್ರಾಮದಿಂದ ಬೇರ್ಪಟ್ಟ ಸಂದರ್ಭದಲ್ಲಿಯೇ ಸೇನಾಪುರವನ್ನು ಪ್ರತ್ಯೇಕ ಗ್ರಾಮ ಪಂಚಾಯತಿಯನ್ನಾಗಿ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆಗೆ ಆರಂಭದಲ್ಲಿ ಸ್ಪಂದನೆ ದೊರೆಯಿತಾದರೂ ಹಣಕಾಸು ಸಚಿವಾಲಯದ ಮಂಜೂರಾತಿ ದೊರೆಯತ ಕಾರಣ ಸೇನಾಪುರ ಗ್ರಾಮವನ್ನು ಹೊಸಾಡು ಗ್ರಾಮ ಪಂಚಾಯತಿಗೆ ಸೇರಿಸಿ ಸರಕಾರ ಆದೇಶಿಸಿತ್ತು. ಇದೀಗ ಆಕ್ಷೇಪಣೆಗೆ ಅವಕಾಶ ನೀಡಿರುವುದರಿಂದ ಬೆಳ್ಳಾಡಿ ಶಂಕರ ಶೆಟ್ಟಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಒಟ್ಟಾಗಿ ಆಪ್ಷೇಪಣೆ ಸಲ್ಲಿಸಿದ್ದಾರೆ. ಪ್ರತ್ಯೇಕ ಗ್ರಾಮಕ್ಕಾಗಿ ಶಾಸಕರು, ಸಚಿವರುಗಳಿಗೂ ಮನವಿ ಸಲ್ಲಿಸಿದ್ದು ಸರಕಾರದಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಸೇನಾಪುರ ಪ್ರತ್ಯೇಕ ಗ್ರಾಮದ ಬೇಡಿಕೆ ಏಕೆ? ಸುಮಾರು 4,000ಕ್ಕೂ ಮಿಕ್ಕಿ ಜನಸಂಖ್ಯೆಯಿರುವ ಸೇನಾಪುರಕ್ಕೆ, ಪ್ರತ್ಯೇಕ ಪಂಚಾಯತಿಯಾಗುವ…

Read More