ಅರೆಶಿರೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಹೇಳಿದರು.

Call us

Click Here

ದೇವಸ್ಥಾನ ಅಧೀನದ ಅರೆಶಿರೂರು ಪ್ರೌಢಶಾಲೆಯ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ದೇವಳ ವತಿಯಿಂದ ಬುಧವಾರ ಉಚಿತ ನೋಟ್ ಬುಕ್ ವಿತರಿಸಿ ಅವರು ಮಾತನಾಡಿದರು.

ಗುರುಹಿರಿಯರನ್ನು ಗೌರವಿಸಬೇಕು. ಕಷ್ಟದಲ್ಲಿರುವವರಿಗೆ ನೆರವಾಗಬೇಕು. ವ್ಯಕ್ತಿ ಕರುಣೆ, ಮಾನವ ಸಂಬಂಧ, ಸತ್ಯ, ನ್ಯಾಯಪರತೆ, ಸಾಮಾಜಿಕ ಕಳಕಳಿ ಹೊಂದಿದ್ದರೆ ಜೀವನದಲ್ಲಿ ವಿಶೇಷ ಸಾಧನೆ ಮಾಡಬಹುದು ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಎ. ಶಿವರಾಮ ಸ್ವಾಗತಿಸಿದರು. ಶಿಕ್ಷಕ ಉದಯ ನಾಯ್ಕ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ಶೆಟ್ಟಿ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿಯ ಸದ್ಯರಾದ ಜಯಾನಂದ ಹೋಬಳಿದಾರ್, ಶಿಕ್ಷಕರಾದ ಪ್ರಶಾಂತ ಶ್ಯಾನುಭಾಗ್, ಗೀತಾ ಎಚ್, ಗೋವಿಂದ ಗೊಂಡ, ವೇಣುಗೋಪಾಲ ಶೆಟ್ಟಿ, ಸುಧೀಂದ್ರ ಗೊಂಡ ಉಪಸ್ಥಿತರಿದ್ದರು.

Leave a Reply