ಕುಂದಾಪ್ರ ಡಾಟ್ ಕಾಂ ಸುದ್ದಿ, ಗಂಗೊಳ್ಳಿ: ಇಲ್ಲಿನ ಟೌನ್ ಸೌಹಾರ್ದ ಸಹಕಾರಿಯ ಪ್ರಧಾನ ಕಛೇರಿಯಲ್ಲಿ ಮಂಗಳವಾರ ಸಹಕಾರಿ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷ ಗಣೇಶ ಕಾಮತ್ ಒಂದು ಕಾಲದಲ್ಲಿ ಬಂದರಿನ ಪಟ್ಟಣವಾಗಿ, ಬೇರೆ ದೇಶಗಳೊಂದಿಗೆ ವ್ಯವಹಾರ ನಡೆಸುತ್ತಿದ್ದ ಗಂಗೊಳ್ಳಿಯಲ್ಲಿ ಫಲಾಪೇಕ್ಷೆ ಇಲ್ಲದೆ ಆರಂಭಿಸಿದ್ದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಇಂದು ಅವರ ಕನಸಿನಂತೆ ಪರಿಸರದ ಜನರ ಆರ್ಥಿಕತೆಯ ಜೀವಸೆಲೆಯಾಗಿ ಎದ್ದುನಿಂತಿದೆ. ಗ್ರಾಹಕರ ಸೇವೆಗೆ ಪ್ರಥಮ ಆದ್ಯತೆ ಎಂಬ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿಯು ಸದೃಢವಾಗಿ ಬೆಳೆದು ನಿಂತು ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ ಶುಭ ಹಾರೈಸಿದರು. ಕರೋನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ ಗಂಗೊಳ್ಳಿ ಅಂಚೆ ಕಛೇರಿಯ ಪೋಸ್ಟ್ಮ್ಯಾನ್ಗಳಾದ ಎಂ.ಬಾಬಣ್ಣ ಬಳೆಗಾರ್ ಮತ್ತು ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಜಿ.ವೆಂಕಟೇಶ ನಾಯಕ್, ಉದಯಶಂಕರ ರಾವ್, ಮಹಾಬಲ ಪೂಜಾರಿ, ನಾರಾಯಣ ಪೂಜಾರಿ, ವತ್ಸಲಾ ಎಸ್.ಕಾಮತ್, ಮಾಲಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತ್ರಾಸಿ ರಾಜ್ಯದ ಅತ್ಯಂತ ಸುಂದರ ಬೀಚ್ಗಳಲ್ಲಿ ಒಂದು. ದಿನವೂ ಸಾವಿರಾರು ಪ್ರವಾಸಿಗಳು ಭೇಟಿ ನೀಡುವ ಇಲ್ಲಿನ ಸ್ವಚ್ಛತೆ ಕಾಪಾಡುವುದು ಸಂಬಂಧಿಸಿದ ಎಲ್ಲರ ಹೊಣೆ’ ಎಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದರು. ಕುಂದಾಪುರ ಮಿಡ್ ಟೌನ್ ರೋಟರಿ ಕ್ಲಬ್, ಕೋಸ್ಟ್ ಗಾರ್ಡ್ ಮತ್ತು ಪರಿಸರ ಇಲಾಖೆ ಸಹಯೋಗದಲ್ಲಿ ತ್ರಾಸಿ ಬೀಚ್ನಲ್ಲಿ ನಡೆದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ 79ನೇ ಸ್ವಚ್ಛತಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹಮ್ಮಿಕೊಂಡಿರುವ ಅಭಿಯಾನ ಶ್ಲಾಘನೀಯ. ಇತರರಿಗೆ ಪ್ರೇರಣೆ ನೀಡುವಂತಹದು. ಸ್ಥಳೀಯರು ಇದನ್ನು ಮುಂದಕ್ಕೆ ಒಯ್ಯಬೇಕು ಎಂದು ಅವರು ಆಶಿಸಿದರು. ಬೀಚಿನ ಪ್ರಾಕೃತಿಕ ಸೌಂದರ್ಯ ಕಸದಿಂದ ಮಲಿನಗೊಂಡಿದೆ. ಬೀಚ್ ಪರಿಸರದಲ್ಲಿ ಕಸ ಎಸೆಯದಂತೆ ಸೂಚಿಸುವ ಫಲಕ ಅಳವಡಿಸಬೇಕು ಅಲ್ಲಲ್ಲಿ ಕಸದ ಡಬ್ಬಿ ಇರಿಸಿ, ಅವು ಭರ್ತಿಯಾದಾಗ ವಿಲೇವಾರಿ ಮಾಡುವ ಕೆಲಸವನ್ನು ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸದಸ್ಯೆ ಸರಸ್ವತಿ ಪುತ್ರನ್ ಹೇಳಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ, ಹಿರಿಯ ನಾಗರಿಕರ ವೇದಿಕೆ ಮತ್ತು ನಿವೃತ್ತ ಸರಕಾರಿ ನೌಕರರ ಸಂಘ ಕುಂದಾಪುರ, ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಶಿಬಿರವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ಕೆ. ರಾಜು, ಕೋವಿಡ್ 19 ಇದರ ನಿರ್ವಹಣೆಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಪರಿಣಾಮಕಾರಿಯಾಗಿದ್ದು ಈಗೀಗ ಹೆಚ್ಛೆಚ್ಚು ಜನರು ಅದರ ಸದುಪಯೋಗ ಮನಗಂಡಿದ್ದಾರೆ. ಹಾಗೆಯೇ ಇನ್ನಿತರ ರೋಗಗಳನ್ನು ನಿಭಾಯಿಸುವಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಪರ್ಯಾಪ್ತವಾಗಿದೆ ಎಂದರು. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಬಿ ವಿನಯಚಂದ್ರ ಶೆಟ್ಟಿ ಮಾತನಾಡಿ, ಹಿರಿಯ ನಾಗರಿಕರ ಮನೋದೈಹಿಕ ಸಮಸ್ಯೆಗಳು, ಅವುಗಳ ಪರಿಣಾಮಕಾರಿ ಚಿಕಿತ್ಸೆ, ಸಂಯೋಜನ ಚಿಕಿತ್ಸಾ ಪದ್ಧತಿಯ ಅಗತ್ಯತೆ ಹಾಗೂ ವೃದ್ದಾಪ್ಯಾದಲ್ಲಿ ಗುಣಮಟ್ಟದ ಅರೋಗ್ಯ ಕಾಪಾಡುವಲ್ಲಿ ಪರ್ಯಾಯ ಚಿಕಿತ್ಸಾ ಪದ್ಧತಿಗಳ ಮಹತ್ವದ ಬಗ್ಗೆ ವಿವರಿಸಿದರು. ಆಯುರ್ವೇದ, ಯೋಗ, ನ್ಯಾಚುರೋಪತಿ, ಫಿಸಿಯೋಥೆರಪಿ, ಮರ್ಮ ಚಿಕಿತ್ಸೆ ಮುಂತಾದ ಚಿಕಿತ್ಸಾ ಪರಿಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಅಳ್ವಾಸ್ನ ಎನ್ಸಿಸಿ ಘಟಕದ ಸಹಯೋಗದೊಂದಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ರಿಜಿನಲ್ ರೆಸ್ಪಾನ್ಸ್ ಸೆಂಟರ್, ಬೆಂಗಳೂರು ಇವರ ವತಿಯಿಂದ ಮೂರು ದಿನಗಳ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಗಾರ ನಡೆಯಿತು. ಮುಖ್ಯ ಅತಿಥಿಯಾಗಿ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜನರು ಎನ್ಸಿಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು ಹಾಗೂ ನೇರನುಡಿಯನ್ನು ಕಲಿಯಲು ಸಾಧ್ಯ ಎಂದು., ದೇಶಸೇವೆ ಹಾಗೂ ಜನರ ರಕ್ಷಣೆ ಮಾಡಲು ಸೇನೆಯಲ್ಲಿ ವಿಪುಲ ಅವಕಾಶಗಳಿವೆ. ಇಂದಿನ ಯುವಜನರು ಸೈನ್ಯ ಸೇರುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅಪಘಾತ ಸಂಭವಿಸಿದಾಗ ತಕ್ಷಣದ ಸಹಾಯ ಮಾಡದೆ, ಹೆಚ್ಚಿನ ಜನರು ಪರಿಸ್ಥಿತಿಯ ತೀವ್ರತೆಯನ್ನು ನೋಡುಗರಾಗಿಯೇ ಉಳಿದುಬಿಡುತ್ತಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ನೀಡುವ ತರಬೇತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತುರ್ತು ಸಂದರ್ಭಗಳಲ್ಲಿ ನೆರವಾಗಬೇಕೆಂದು ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಸಬ್ ಇನ್ಸ್ಪೆಕ್ಟರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೆಶ್ವರ ಗ್ರಾಮದ ನಾಗೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ರಳ್ಳಿ ಕೂಡುರಸ್ತೆಗೆ ಅವೈಜ್ಞಾನಿಕವಾದ ಯೂಟರ್ನ್ ಕೊಡಲಾಗಿದ್ದು, ಇದರಿಂದ ಕಳೆದ ಹಲವಾರು ದಿನಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂಬಂಧ ಪಟ್ಟವರು ತಕ್ಷಣ ಈ ವ್ಯವಸ್ಥೆಯನ್ನು ಸರಿಪಡಿಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೇಂದು ಆಗ್ರಹಿಸಿ ಸೋಮವಾರ ನಾಗೂರು ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಈ ಬಗ್ಗೆ ಮಾತನಾಡಿದ ಗ್ರಾಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಶೇಖರ ಖಾರ್ವಿ, ನಾಗೂರಿನ ಸುತ್ತ ಇರುವ ಹತ್ತು ಹಳ್ಳಿಯ ಜನರು ತಮ್ಮ ದಿನನಿತ್ಯದ ಕಾರ್ಯಗಳಿಗೆ, ಬ್ಯಾಂಕ್, ಸೊಸೈಟಿ ವ್ಯವಹಾರಕ್ಕೆ, ಗ್ರಾಪಂ ಕಚೇರಿ ಕೆಲಸಕ್ಕೆ ಈ ಪೇಟೆಯನ್ನು ಅವಲಂಬಿಸಿದ್ದಾರೆ. ಅಲ್ಲದೇ ದೇವಸ್ಥಾನ, ಮಸೀದಿ ಮತ್ತು ಕಲ್ಯಾಣ ಮಂಟಪಗಳು ಇಲ್ಲಿರುವುದರಿಂದ ಪ್ರತಿದಿನ ಪೇಟೆ ಜನಭರಿತವಾಗಿರುತ್ತದೆ. ಇವರೆಲ್ಲರೂ ಹೆದ್ದಾರಿ ತಲುಪಿದ ತಕ್ಷಣ ಎದುರಾಗುವ ಯೂಟರ್ನ್ ಮೂಲಕ ವಿರುದ್ಧ ದಿಕ್ಕಿನಿಂದ ಸಂಚರಿಸುತ್ತಾರೆ. ಹೆಚ್ಚಾಗಿ ದ್ವಿಚಕ್ರ ಹಾಗೂ ಕಾರುಗಳು ಅನಿವಾರ್ಯವಾಗಿ ಹೆದ್ದಾರಿಗೆ ಬರುವುದರಿಂದ ಹೈವೆಯಲ್ಲಿ ವೇಗವಾಗಿ ಹೋಗುತ್ತಿರುವ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ನೂತನ ಬೈಂದೂರು ತಾಲೂಕು ರಚನೆಯಾದ ಬಳಿಕ ನಾಡ ಗ್ರಾಮ ಪಂಚಾಯತಿಯಿಂದ ವಿಭಜನೆಗೊಂಡು ಕುಂದಾಪುರ ತಾಲೂಕಿನಲ್ಲಿ ಅತಂತ್ರ ಗ್ರಾಮವಾಗಿ ಉಳಿದು ಬಳಿಕ ಹೊಸಾಡು ಗ್ರಾಮ ಪಂಚಾಯತಿಗೆ ಸೇರ್ಪಡೆಗೊಂಡ ಸೇನಾಪುರ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯತಿಯನ್ನಾಗಿ ಘೋಷಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆ ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ. ನಾಡ ಗ್ರಾಮದಿಂದ ಬೇರ್ಪಟ್ಟ ಸಂದರ್ಭದಲ್ಲಿಯೇ ಸೇನಾಪುರವನ್ನು ಪ್ರತ್ಯೇಕ ಗ್ರಾಮ ಪಂಚಾಯತಿಯನ್ನಾಗಿ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆಗೆ ಆರಂಭದಲ್ಲಿ ಸ್ಪಂದನೆ ದೊರೆಯಿತಾದರೂ ಹಣಕಾಸು ಸಚಿವಾಲಯದ ಮಂಜೂರಾತಿ ದೊರೆಯತ ಕಾರಣ ಸೇನಾಪುರ ಗ್ರಾಮವನ್ನು ಹೊಸಾಡು ಗ್ರಾಮ ಪಂಚಾಯತಿಗೆ ಸೇರಿಸಿ ಸರಕಾರ ಆದೇಶಿಸಿತ್ತು. ಇದೀಗ ಆಕ್ಷೇಪಣೆಗೆ ಅವಕಾಶ ನೀಡಿರುವುದರಿಂದ ಬೆಳ್ಳಾಡಿ ಶಂಕರ ಶೆಟ್ಟಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಒಟ್ಟಾಗಿ ಆಪ್ಷೇಪಣೆ ಸಲ್ಲಿಸಿದ್ದಾರೆ. ಪ್ರತ್ಯೇಕ ಗ್ರಾಮಕ್ಕಾಗಿ ಶಾಸಕರು, ಸಚಿವರುಗಳಿಗೂ ಮನವಿ ಸಲ್ಲಿಸಿದ್ದು ಸರಕಾರದಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಸೇನಾಪುರ ಪ್ರತ್ಯೇಕ ಗ್ರಾಮದ ಬೇಡಿಕೆ ಏಕೆ? ಸುಮಾರು 4,000ಕ್ಕೂ ಮಿಕ್ಕಿ ಜನಸಂಖ್ಯೆಯಿರುವ ಸೇನಾಪುರಕ್ಕೆ, ಪ್ರತ್ಯೇಕ ಪಂಚಾಯತಿಯಾಗುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕಾಗೊದಲ್ಲಿ ನಡೆದ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಮಾತುಗಳಿಗೆ ಮಾರು ಹೋಗಿದ್ದ ಜಾನ್ ರೈಟ್, ಸಮ್ಮೇಳನದಲ್ಲಿ ಭಾಗವಹಿಸಲು ನಿಮ್ಮಿಂದ ಗುರುತು ಪತ್ರ ಕೇಳುವುದು, ಸೂರ್ಯನಿಗೆ ನಿನಗ್ಯಾರು ಬೆಳಕು ನೀಡಲು ಅನುಮತಿ ಕೊಟ್ಟವರು ಎಂದು ಕೇಳುವುದು ಒಂದೇ ಎಂದು ಹೇಳಿದ್ದರು ಎಂದು ಆದರ್ಶ ಗೋಖಲೆ ಹೇಳಿದರು. ಇಲ್ಲಿನ ಬಿಜೆಪಿ ಯುವಮೋರ್ಚಾ ಘಟಕ ಆಯೋಜಿಸಿದ್ದ ವಿವೇಕ ಧ್ವನಿ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿ ಕುಂದಾಪುರ ಮಂಡಲ ಸಮಿತಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶಾಂತಿನಿಕೇತನ, ಶರತ್ ಶೆಟ್ಟಿ ಉಪ್ಪುಂದ, ನಗರ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಚೇತನ್ ಬಂಗೇರ, ಸುರೇಶ್ ಶೆಟ್ಟಿ ಗೋಪಾಡಿ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸುಧೀರ್ ಕೆ.ಎಸ್, ಅರುಣ್ ಬಾಣಾ , ಸುನೀಲ್ ಶೆಟ್ಟಿ, ಸುನೀಲ್ ಖಾರ್ವಿ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶದಿಂದ ಆಯೋಜಿಸಲ್ಪಟ್ಟ ‘ಓರಿಯೆಂಟೇಷನ್ ಕಾರ್ಯಕ್ರಮ’ ನಡೆಯಿತು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಗುಣಮಟ್ಟದ ಉನ್ನತ ಶಿಕ್ಷಣ ನಮ್ಮೆಲ್ಲರ ಆದ್ಯತೆಯಾಗಿ, ಶೈಕ್ಷಣಿಕ ಜಗತ್ತಿನ ಮುಂಚೂಣಿಯಲ್ಲಿ ಭಾರತ ನಿಲ್ಲುವಂತಾಗಬೇಕು. ಒಂದು ದೇಶದ ನಿಜವಾದ ಅಭಿವೃದ್ದಿಯನ್ನು ಆ ದೇಶದ ಉನ್ನತ ಶಿಕ್ಷಣದ ಗುಣಮಟ್ಟದ ಸೂಚ್ಯಂಕದ ಮೇಲೆ ನಿರ್ಧರಿಸಲಾಗುತ್ತದೆ. ಈ ಕಾಲಕ್ಕನುಗುಣವಾದ ಮೌಲ್ಯಯುತ ಶಿಕ್ಷಣವನ್ನು ಪಡೆದಾಗ ಮಾತ್ರ ನಮ್ಮ ಬೆಳವಣಿಗೆಯೊಂದಿಗೆ ದೇಶದ ಬೆಳವಣಿಗೆಗೆ ನಾವು ಕೊಡುಗೆ ನೀಡಲು ಸಾಧ್ಯ. ಉನ್ನತ ಶಿಕ್ಷಣ ಪಡೆದ ಪ್ರತಿಯೊಬ್ಬರೂ, ತನ್ನ ಜ್ಞಾನದ ನೆಲೆಯಲ್ಲಿ ಈ ದೇಶಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ನಾವು ಈ ನೆಲದಿಂದ ಪಾಂಡಿತ್ಯವನ್ನು ಪಡೆಯುವವರು ಮಾತ್ರ ಆಗದೆ, ಜ್ಞಾನವನ್ನು ಇನ್ನೊಬ್ಬರಿಗೆ ನೀಡುವವರಾಗಬೇಕು. ಈ ಹಿನ್ನಲೆಯಲ್ಲಿ ನಮ್ಮ ಉನ್ನತ ಶಿಕ್ಷಣದ ತರಗತಿಯ ಬೋಧನೆಗಳು ರಚನಾತ್ಮಕತೆಯಿಂದ ಕೂಡಿರಬೇಕು ಎಂದರು. ವಿದ್ಯಾರ್ಥಿಗಳು ಜ್ಞಾನದೊಂದಿಗೆ ತಮ್ಮ ಬೆಳವಣಿಗೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಿವೃತ್ತ ಉಪನ್ಯಾಸಕ ಡಾ. ಶ್ರೀಧರ ಉಪ್ಪೂರು(68) ಕೋಟೇಶ್ವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಸ್ರೂರು ಶಾರದಾ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿದ ಶ್ರೀಧರ ಉಪ್ಪೂರು ಯಕ್ಷಗಾನ ಪರಂಪರೆ ಹಾಗೂ ಪ್ರಯೋಗ ಎನ್ನುವ ಮಹಾ ಪ್ರಬಂಧವನ್ನಲ್ಲದೆ ಹಲವಾರು ಪ್ರಸಂಗಗಳನ್ನೂ ಬರೆದಿದಿದ್ದಾರೆ. ಭಾಗವತಿಕೆಯನ್ನೂ ಬಲ್ಲ ಡಾ.ಶ್ರೀಧರ ಉಪ್ಪೂರು ಬಸ್ರೂರು ಶಾರದಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿ ಪ್ರಸ್ತುತ ನಿವೃತ್ತರಾಗಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪೂರ ಮಗರಾಗಿದ್ದು, ಪರಂಪರೆ ಮತ್ತು ಪ್ರಯೋಗ ಎಂಬ ಮಹಾ ಪ್ರಬಂಧ ಬರೆದು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದರು. ಮೃತರು ಪತ್ನಿ ಇಬ್ಬರು ಪುತ್ರರ ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಸಮೀಪದ ರಾಹುತನಕಟ್ಟೆ ಶಾಲೆಯ ಎದುರು ಇನ್ನೋವಾವೊಂದು ದನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ದನಗಳು ಮೃತಪಟ್ಟಿದೆ. ಇನ್ನೋವಾ ವಾಹನವೂ ಸಂಪೂರ್ಣ ಜಖಂಗೊಂಡಿದ್ದು ಅದರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಟ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ರಾಹುತನಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದನಗಳು ಅಡ್ಡ ಬಂದಿದ್ದು, ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಇನ್ನೋವಾ ಕಾರು ದನಕ್ಕೆ ಡಿಕ್ಕಿಯಾಗಿ ಹಾಗೆಯೇ ಬಲಬದಿಯ ರಸ್ತೆಗೆ ಜಿಗಿದು, ಶಾಲೆಯ ಬಳಿಯ ತೋಡಿಗೆ ಬಿದ್ದಿತ್ತು. ವಾಹನದಲ್ಲಿದ್ದವರೆಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರ ತಕ್ಷಣ ಎಲ್ಲರನ್ನೂ ರಕ್ಷಿಸಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತೆರಳಲು ನೆರವಾದರು. ಅಪಾಯಕಾರಿ ವಲಯವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ: ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹಲವಾರು ಅಪಘಾತಗಳು ಸಂಭವಿಸುತ್ತಲೇ ಇದ್ದು, ಗುತ್ತಿಗೆದಾರ ಕಂಪೆನಿ ಮಾತ್ರ ಜಾಣಮೌನ ಅನುಸರಿಸುತ್ತಿದೆ. ಕಳೆದ ಕೆಲವು ತಿಂಗಳಿನಲ್ಲಿ ರಾಹುತನಕಟ್ಟೆ ಭಾಗದಲ್ಲಿಯೇ 5 ದನಗಳು ಅಪಘಾತದಿಂದ ಮೃತಪಟ್ಟಿವೆ. ಯಡ್ತರೆ ಬೈಪಾಸ್ ಬಳಿ ನಿರಂತರವಾಗಿ ಅಫಘಾತ ಸಂಭವಿಸುತ್ತಲೇ…
