ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಹ್ಮಾವರ : ವಿದ್ಯಾಲಕ್ಷ್ಮೀ ಗ್ರೂಪ್ ಆಪ್ ಇನ್‌ಸ್ಟಿಟ್ಯೂಷನ್ ಬ್ರಹ್ಮಾವರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇದರ ಸಹಯೋಗದೋಂದಿಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗದ ಮಾಹಿತಿ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇದರ ವೈಧ್ಯಾಧಿಕಾರಿಗಳಾದ ಡಾ.ದೀಕ್ಷಿತಾ ಉದ್ಘಾಟಿಸಿ, ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದರ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಮಂಜುನಾಥರವರು ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಬ್ರಮಣ್ಯರವರು ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿದ್ದು, ಕಾಲೇಜಿನ ನಿರ್ದೇಶಕರಾದ ಮಮತ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರವಿಚಂದ್ರರವರು ಅತಿಥಿಗಳನ್ನು ಸ್ವಾಗತಿಸಿದರು. ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇದರ ಸಿಬ್ಬಂದಿಗಳಾದ ಶ್ರೀಮತಿ ಅನುಷಾ, ಪ್ರಸಾದ, ಭಾರತಿ, ಸ್ನೇಹಲತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರ ವೈದಕೀಯ ತಪಾಸಣೆ ನಡೆಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಪ್ರೋ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೊಡಪಾಡಿ ಸ. ಕಿ. ಪ್ರಾಥಮಿಕ ಶಾಲೆಯಲ್ಲಿ ನೆಹರು ಯುವ ಕೇಂದ್ರ ಉಡುಪಿ ಮತ್ತು ತಾಯಿ ಮಾರಿಕಾಂಬ ಮಹಿಳಾ ಮಂಡಳಿ ಕೊಡಪಾಡಿ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ಕೌಶಲ್ಯ ಅಭಿವೃದ್ಧಿ ದಿನಾಚರಣೆ ಹಾಗೂ ರಾಷ್ಟ್ರೀಯ ಭಾಷೆ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರುಡ್‌ಸೆಡ್ ಸಂಸ್ಥೆಯ ಉಪನ್ಯಾಸಕ ಸಂತೋಷ ಹಾಗೂ ರಾಷ್ಟ್ರೀಯ ಭಾಷೆ ಹಿಂದಿ ದಿನಾಚರಣೆಯ ಕುರಿತು ಸೈಂಟ್ ಮೇರಿಸ ಶಾಲೆಯ ಶಿಕ್ಷಕ ಭಾಸ್ಕರ ಗಾಣಿಗ ಉಪನ್ಯಾಸ ನೀಡಿದರು. ಮಾರಿಕಾಂಬ ಮಹಿಳಾ ಮಂಡಳಿ ಅಧ್ಯಕ್ಷರು ಹಾಗೂ ಮಾರಿಕಾಂಬ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ನೆಹರು ಯವ ಕೇಂದ್ರದ ಪ್ರಶಾಂತ ಇದ್ದರು. ದೇವಕಿ ಸ್ವಾಗತಿಸಿ, ಸುನೀತಾ ಗಾಣಿಗ ವಂದಿಸಿದರು. ಸುಶ್ಮಿತ ಪ್ರಾರ್ಥಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಐಡಿಯಲ್ ಪ್ಲೆ. ಅಬಾಕಸ್ ಇಂಡಿಯಾ ಪ್ರೈ.ಲಿ. ವತಿಯಿಂದ ಮೈಸೂರಿನಲ್ಲಿ ನಡೆದ 14ನೇ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬೈಂದೂರು ಸೆಂಟರ್ ಅಬಾಕಸ್ ವಿದ್ಯಾರ್ಥಿಗಳು ವಿಜೇತರಾಗಿ ತಮಿಳುನಾಡಿನ ಚನೈನಲ್ಲಿ ನಡೆಯುವ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಯಜ್ಞ ಯು ಹೆಗ್ಡೆ ಪ್ರಥಮ ಸ್ಥಾನ, ಸಾನಿಧ್ಯ ಮಯ್ಯ ಹಾಗೂ ಅನುರಾಗ ಪಟಗಾರ ದ್ವಿತೀಯ ಸ್ಥಾನ, ಪ್ರಥ್ವಿ ಶ್ಯಾನುಭಾಗ, ಧಾನ್ವಿ, ಸಾತ್ವಿಕ ಮಯ್ಯ, ಭಾರ್ಗವ ನಾಯಕ್ ತೃತೀಯ ಸ್ಥಾನ ಹಾಗೂ ಶಮನ, ಅಮಯ ಕೆ. ಶೆಟ್ಟಿ, ದಿವ್ಯಾ ಭಟ್, ವಂದಿತಾ ಭಟ್, ಇಶಾನ್ ಪ್ರೇಕ್ಷಾ, ಪ್ರತೀತ್, ಶರಣ್, ರಿತೀಕಾ ಪ್ರಭು ಇತರೆ ಬಹುಮಾನವನ್ನು ಪಡೆದುಕೊಂಡರು. ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ರಾಜ್ಯದ ಹಲವು ಕಡೆಯಿಂದ ಸುಮಾರು ೧೫೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿಗಳನ್ನು ಬೈಂದೂರು ಅಬಾಕಸ್ ವತಿಯಿಂದ ಅಭಿನಂದಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ತುಳುನಾಡಿನ ವೀರಪುರುಷರಾದ ಶ್ರೀ ಕೋಟಿ ಚೆನ್ನಯ್ಯರ ಕೊನೆಯ ಗರಡಿಗೆ ಭಾನುವಾರ ಉದ್ಯಮಿ ಗೋವಿಂದ ಬಾಬು ಪೂಜಾರಿ ಭೇಟಿನೀಡಿ ಕಟ್ಟಡ ಕಾಮಗಾರಿಗಳನ್ನು ವೀಕ್ಷಿಸಿದರು. ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ ಉಪಾಧ್ಯಕ್ಷ ಎಸ್. ವೆಂಕಟ ಪೂಜಾರಿ, ಶಿವರಾಮ ಪೂಜಾರಿ ಯಡ್ತರೆ, ಅಣ್ಣಪ್ಪ ಪೂಜಾರಿ ಯಡ್ತರೆ, ರಾಘವೇಂದ್ರ ಪೂಜಾರಿ ಬಿಜೂರು, ನಾಗರಾಜ ಪೂಜಾರಿ ನಾಗೂರು ಮತ್ತಿತರರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜನರಲ್ಲಿ ಸಾತ್ವಿಕತೆ ಬೆಳೆಯುವ ಉದ್ದೇಶದಿಂದ ಯುವಜನತೆಗೆ ಗುರುಗಳ ಸಂದೇಶವನ್ನು ತಿಳಿಸುವ ಮೂಲಕ ಮುಂದಿನ ಪೀಳಿಗೆಗೂ ವಿಸ್ತರಿಸಬೇಕಾಗಿದೆ. ಪ್ರೀತಿ, ವಿಶ್ವಾಸ ಹಾಗೂ ಮನುಷ್ಯತ್ವದ ಸದೃಢ ವಿಚಾರಗಳಿಂದ ಬಲಿಷ್ಠ ರಾಷ್ಟ್ರ ನಿರ್ಮಿಸಲು ಎಲ್ಲರನ್ನು ಒಟ್ಟುಗೂಡಿಸಲು ಸಾಧ್ಯವಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಯಡ್ತರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಭಾನುವಾರ ಸ್ಥಳೀಯ ಬಿಲ್ಲವ ಸಮಾಜ ಸೇವಾ ಸಂಘ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರು ಜನ್ಮದಿನಾಚರಣೆಯಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎನ್ನುವ ಸರಳ ಸಂದೇಶವನ್ನು ವಿಶ್ವಕ್ಕೆ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಸಾರ್ವಕಾಲಿಕ ಸಿದ್ಧಾಂತ, ಸಾಮಾಜಿಕ ನ್ಯಾಯ ಪರಿಕಲ್ಪನೆಯೊಂದಿಗೆ ಇಂದಿನ ಯುವ ಪೀಳಿಗೆ ಹೆಜ್ಜೆ ಇಡಬೇಕು. ಮನುಷ್ಯ ಮನುಷ್ಯರ ನಡುವೆ ಬಾಂದ್ಯವ ವೃದ್ಧಿಸಬೇಕು. ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಎಂದರು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ಹಾಸ್ಯ ತರಂಗ ಮತ್ತು ವೈ. ಸತ್ಯನಾರಾಯಣ ಕಾಸರಗೋಡು-೮೦ ಅಭಿನಂದನಾ ಸಮಿತಿ ಜಂಟಿಯಾಗಿ ನೀಡಲಿರುವ ರಾಘವಾಂಕ ರಾಜ್ಯ ಪ್ರಶಸ್ತಿಗೆ ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯ ಕವಿ, ಲೇಖಕ ಪುಂಡಲೀಕ ನಾಯಕ್ ಅವರನ್ನು ಆಯ್ಕೆ ಮಾಡಿದೆ. ಅಕ್ಟೋಬರ್ ೫ರಂದು ಕಾಸರಗೋಡು ಬೀರಂತಬೈಲಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಅಭಿನಂದನಾ ಕಾರ್ಯಕ್ರಮ, ನೂತನ ಕೃತಿಗಳ ಬಿಡುಗಡೆ, ಹಾಸ್ಯ ರಸಾಯನ, ಪ್ರಶಸ್ತಿ ಪ್ರದಾನ, ಸನ್ಮಾನ ಮತ್ತು ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರುವುದು ಎಂದು ಪ್ರಕಟಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕ್ರಿಕೆಟಿಗ ಹಾಗೂ ನಟ ಶ್ರೀಶಾಂತ್ ಅವರು ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಪತ್ನಿ ಭುವನೇಶ್ವರಿ ಕುಮಾರಿ ಅವರೊಂದಿಗೆ ಭೇಟಿ ನೀಡಿದ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ. ರಮೇಶ್ ಗಾಣಿಗ ಗೌರವಿಸಿದರು. ಈ ಸಂದರ್ಭ ಆರ್. ಎಸ್. ವೆಂಚರ್ಸ್ ಪ್ರವರ್ತಕ ರಾಜೀವ ಕುಮಾರ್, ಪಾಲುದಾರರಾದ ಕೆ. ವೆಂಕಟೇಶ್ ಕಿಣಿ, ಸಾಜು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯೋಪಧ್ಯಾಯ ಕೆ. ರಾಮಣ್ಣ ನಾಯ್ಕ್ ಅವರಿಗೆ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ. ಬ್ರಹ್ಮಾವರದ ಚೇರ್ಕಾಡಿಯವರಾದ ರಾಮಣ್ಣ ನಾಯ್ಕ್ ಅವರು ಎಸ್‌ಡಿಎಂ ಶಿಕ್ಷಣ ಸಂಸ್ಥೆಯಿಂದಶಿಕ್ಷಕ ವೃತ್ತಿ ಆರಂಭಿಸಿದ್ದರು. ಕಳೆದ ೩೦ ವರ್ಷಗಳಿಂದ ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬಸ್ರೂರು ಶಾರದಾ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕುಸ್ತಿ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ಬಿ. ಎನ್. ಶ್ರೇಯಸ್ 79 ಕೆ.ಜಿ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ತರಬೇತಿ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಂಬೈ: ಸಾಯಿ ಲೀಲಾ ಕ್ಯಾಟರರ‍್ಸ್‌ನ ಹೊಸ ಉತ್ಪನ್ನ ಸ್ವೇಝೋನ್ ಚಾಕಲೇಟ್ ಉತ್ಪಾದನಾ ಘಟಕವು ಇಲ್ಲಿನ ಪೂರ್ವ ಅಂಧೇರಿ ಸಕಿವಿಹಾರ್ ರಸ್ತೆಯ ಅನ್ಸಾ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಲೋಕಾರ್ಪಣೆಗೊಂಡಿತು. ನೂತನ ಉತ್ಪನ್ನದ ಕಛೇರಿಯನ್ನು ಉದ್ಯಮಿ ಸುಧಾಕರ ಕಸ್ತೂರಿ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಸಾಯಿ ಕೇರ್ ಲಾಜಿಸ್ಟಿಕ್ಸ್‌ನ ಸುರೇಂದ್ರ ಪೂಜಾರಿ, ಸಾನ್ವಿ ಸ್ಟಾರ್ ಹಾಸ್ಪಿಟಾಲಿಟಿಯ ಸಂತೋಷ್ ಶೆಟ್ಟಿ, ಗೋವಾ ರಚನಾ ಗ್ರಾಫಿಕ್ಸ್‌ನ ಸಂಜಯ್ ಉಪಾಧ್ಯ, ಯಶವಂತ್ ಪೂಜಾರಿ, ಮಹಾಬಲ ದೇವಾಡಿಗ, ಜಯರಾಮ್ ಕೆ. ಪೂಜಾರಿ, ಹರೀಶ್ ಮೆಂಡನ್, ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಯಿ ಲೀಲಾ ಕ್ಯಾಟರರ‍್ಸ್‌ನ ನಿರ್ದೇಶಕ, ಬೈಂದೂರು ಮೂಲದ ಮಂಜುನಾಥ ಕೆ. ಪೂಜಾರಿ ಅವರು ಸರ್ವರನ್ನು ಸ್ವಾಗತಿಸಿಕೊಂಡರು.
