ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್ ಸೋಂಕಿಗೆ 70 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ, ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಬೈಂದೂರು ತಾಲೂಕು ಉಪ್ಪುಂದದ 70 ವರ್ಷದ ವೃದ್ಧರೊಬ್ಬರಿಗೆ ಕಳೆದ 15 ದಿನಗಳ ಹಿಂದೆ ಕೋವಿಡ್ ದೃಢ ಪಟ್ಟ ಹಿನ್ನೆಲೆಯಲ್ಲಿ ಅವರನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ದಿನದಿಂದ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಕೆ ಕಂಡಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ ಎಂದು ಅರೋಗ್ಯ ಇಲಾಖೆ ದೃಢ ಪಡಿಸಿದೆ. ರವಿವಾರ ಉಡುಪಿಯ ಕೋವಿಡ್-19 ಆಸ್ಪತ್ರೆಯಲ್ಲಿ ದಾವಣಗೆರೆ ಮೂಲದ ವೃದ್ಧರೊಬ್ಬರು ಮೃತಪಟ್ಟಿದ್ದರು. ಮೃತಪಟ್ಟ ವ್ಯಕ್ತಿ ದಾವಣಗೆರೆ ಮೂಲದವರಾದ ಕಾರಣ ಉಡುಪಿ ಜಿಲ್ಲೆಯ ಮೃತರ ಪಟ್ಟಿಯಲ್ಲಿ ಇದನ್ನು ಪರಿಗಣಿಸಲಾಗಿಲ್ಲ.
Author: ನ್ಯೂಸ್ ಬ್ಯೂರೋ
ಸಂದೇಶ್ ಶಿರೂರು ಈ ಜಗತ್ತು ಜೀವನವೆಂಬ ಪಯಣದ ಮೊದಲ ಘಟ್ಟ. ಪ್ರಕೃತಿಯೊಂದಿಗಿನ ಕಲಿಕೆಯಿಂದ ಪ್ರಾರಂಭವಾಗುವ ನಮ್ಮ ಬದುಕು, ಸಾವಿನೊಂದಿಗೆ ಅಂತ್ಯವಾಗುವ ಸುಂದರ ಕಥೆಯ ವ್ಯಥೆಯಾಗಿದೆ. ಈ ಬದುಕಿನ ಮೊದಲ ಪುಟದ ಅಧ್ಯಯನವು ಬಹಳ ಸೊಗಸಿನೊಂದಿಗೆ ಪ್ರಾರಂಭವಾಗುವ ಬಾಲ್ಯ, ಸ್ವಚ್ಛಂದ ಪರಿಸರದಲ್ಲಿ ವಿಹರಿಸುತ್ತಾ, ಪ್ರಕೃತಿಯ ಕೌತುಕವನ್ನು ಬೆರಗುಗಣ್ಣಿನಿಂದ ನೋಡುತ್ತಾ, ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಬೆರೆತು ಹೋಗುವ ಬಾಲ್ಯದ ನೆನಪು ವರ್ಣಿಸಲಸದಳ. ಹೀಗೆ ಸುಂದರ ಪುಟಗಳೊಂದಿಗೆ ಆರಂಭವಾಗುವ ಈ ಬದುಕು ನಮ್ಮ ಮುಂದಿನ ಜೀವನ ಪಯಣದ ಆಗುಹೋಗುಗಳ ಬಗ್ಗೆ ತಿಳಿಸುತ್ತದೆ. ಈ ಪ್ರಪಂಚದಲ್ಲಿ ಅದೆಷ್ಟೋ ಜನರಿಗೆ ಬದುಕನ್ನು ಕಟ್ಟಿಕೊಡುವ ನಗರಗಳು ನಮ್ಮ ಪಾಲಿನ ಆಶಾಕಿರಣ. ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ತನ್ನೆಲ್ಲಾ ಕಷ್ಟಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಬದುಕುವ ನಿಷ್ಠಾವಂತ ಜನರ ಬದುಕಿನೊಂದಿಗೆ ಈ ಬದುಕು ಈಗ ದುರಂತದ ಕಥೆಯಾಗಿದೆ. ಮುಂದುವರಿಯುತ್ತಿರುವ ಈ ಜಗತ್ತಿನಲ್ಲಿ ಇಂದು ಕಾಣದ ಸೂಕ್ಷ್ಮ ರೋಗಾಣುಗಳು ಎಷ್ಟೋ ಜನರ ಪಾಲಿಗೆ ಮೊದಲೇ ಹೇಳಿದಂತೆ ನಿಷ್ಠಾವಂತ ಜನರ ಬದುಕಿಗೆ ಮಾರಕವಾಗಿ ಪರಿಣಮಿಸಿದೆ. ದಿನದ ದುಡಿಮೆಯನ್ನು ನಂಬಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.12ರ ಭಾನುವಾರ 41 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ 2 ಮಂದಿ ಮುಂಬೈ, ಓರ್ವ ವ್ಯಕ್ತಿ ಸೌದಿ, 6 ಮಂದಿ ಅಂತರ್ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿದ್ದು, 32 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 26 ಮಂದಿ ಉಡುಪಿ, 11 ಮಂದಿ ಕುಂದಾಪುರ ಹಾಗೂ 4 ಮಂದಿ ಕಾರ್ಕಳ ತಾಲೂಕಿಗೆ ಸೇರಿದ್ದಾರೆ. ಇಂದು 28 ಮಂದಿ ಬಿಡುಗಡೆಗೊಂಡಿದ್ದಾರೆ. ದಾವಣಗೆರೆಯಿಂದ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿಯೋರ್ವ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಮೃತರಾಗಿದ್ದರು. ಅವರ ಕೊವೀಡ್ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ದೃಢವಾಗಿತ್ತು. 573 ನೆಗೆಟಿವ್: ಈ ತನಕ ಒಟ್ಟು 22,327 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 18,863 ನೆಗೆಟಿವ್, 1,608 ಪಾಸಿಟಿವ್ ಬಂದಿದ್ದು, 1,856 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 573 ನೆಗೆಟಿವ್, 41 ಪಾಸಿಟಿವ್ ಬಂದಿದೆ. ಒಟ್ಟು 1,304 ಮಂದಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತಿ ಶಿಕ್ಷಕರ ಸಮಿತಿಯ ವತಿಯಿಂದ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಕ್ಕಳ ಕಥಾ ರಚನೆ ಸ್ಪರ್ಧೆಯಲ್ಲಿ ಉಪನ್ಯಾಸಕ ಮತ್ತು ಯುವ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅವರು ಬರೆದ ‘ಚಂದು ನರಿಯ ಅರಿವಿನ ಕತೆ’ ಕತೆಗೆ ಈ ಬಹುಮಾನ ದೊರೆತಿದೆ. ನರೇಂದ್ರ ಗಂಗೊಳ್ಳಿ, ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿದ್ದು, ಅವರ ‘ಹೇಳದೆ ಹೋದ ಮಗಳಿಗೆ’ ಕೃತಿ ಸಾಹಿತ್ಯ ವಲಯದಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನಲ್ಲಿ ಒಂದು ವಾರ ಲಾಕ್‌ಡೌನ್ ಜಾರಿಯಾಗುವ ಹಿನ್ನೆಲೆಯಲ್ಲಿ, ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುವ ಜನರು ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗುವಂತೆ ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ. ಕುಂದಾಪುರದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ರೋಗಲಕ್ಷಣ ಇರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಅಗತ್ಯ ಬಿದ್ದರೆ ಹಾಸ್ಟೆಲ್ ಗಳನ್ನೂ ಕೋವಿಡ್ ಕೇರ್ ಸೆಂಟರ್ ಗಳಾಗಿ ಪರಿವರ್ತನೆ ಮಾಡಿಕೊಳ್ಳುವ ಚಿಂತನೆಯಿದೆ. ಕೊಲ್ಲೂರು ಲಲಿತಾಂಬಿಕಾ ಗೆಸ್ಟ್ ಹೌಸ್ ಕೋವಿಡ್ ಆಸ್ಪತ್ರೆಯಾಗಿ ಪುನಾರಂಭ ಮಾಡಲಿದ್ದೇವೆ ಎಂದರು. ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆ ಸರ್ವೇ ಮಾಡಲಾಗುವುದು. ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಂದ ಬಂದ ಜನರ ಸಾರಿ, ಐಎಲ್ ಐ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ಹೋಮ್ ಐಸೋಲೇಶನ್ ಬಗ್ಗೆಯೂ ಚಿಂತನೆಯಿದ್ದು, ಸೋಂಕು ಲಕ್ಷಣ ಇರದ ರೋಗಿಗಳ ಮನೆಯಲ್ಲಿ ಸೂಕ್ತ ವ್ಯವಸ್ಥೆ ಇದ್ದರೆ ಹೋಮ್ ಐಸೋಲೇಶನ್ ಮಾಡುವ ಕುರಿತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ದಾವಣಗೆರೆಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಗಂಟಲ ದ್ರವ ಪರೀಕ್ಷೆ ವರದಿಯಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್-19 ಸೋಂಕಿಗೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ದಾವಣಗೆರೆಯ 70 ವರ್ಷದ ವೃದ್ದರೊಬ್ಬರು ಅನಾರೋಗ್ಯ ಕಾರಣದಿಂದ ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದರು. ಕೊನೆಗೆ ಚಿಕಿತ್ಸೆ ಫಲಾಕಾರಿಯಾಗದೇ ಶುಕ್ರವಾರ ಸಾವನ್ನಪ್ಪಿದ್ದಾರೆ. ಅವರ ಗಂಟಲು ದ್ರವ ಪರೀಕ್ಷೆ ನಡೆಸಿದ ಸಂದರ್ಭ ಕೋವಿಡ್-19 ಸೋಂಕು ತಗಲಿರುವುದು ದೃಢವಾಗಿತ್ತು. ಕೋವಿಡ್ ನಿಯಮಾವಳಿಯಂತೆ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಭಾನುವಾರದ ಲಾಕ್ಡೌನ್ ಉಡುಪಿ ಜಿಲ್ಲೆಯಲ್ಲಿಯೂ ಮುಂದುವರಿದಿದ್ದು, ಈ ವಾರ ಅಂಗಡಿ-ಹೋಟೆಲುಗಳಿಗೆ ವಿನಾಯಿತಿ ನೀಡಲಾಗಿದೆ. ಮೆಡಿಕಲ್ ಶಾಪ್, ಆಸ್ಪತ್ರೆ, ಹಾಲು, ಪೇಪರ್’ಗೆ ಅವಕಾಶವಿರುವಂತೆ ದಿನಸಿ ಅಂಗಡಿ, ತರಕಾರಿ ಹಾಗೂ ಮಾಂಸದ ಅಂಗಡಿ, ಹೋಟೆಲ್ ಹಾಗೂ ಬೇಕರಿಗಳಿಗೆ ವಿನಾಯಿತಿ ನೀಡಲಾಗಿದೆ. ಆನ್ಲೈನ್ ಡೆಲಿವರಿಗೆ ರಾತ್ರಿ 8 ಗಂಟೆಯ ಬಳಿಕವೂ ಅವಕಾಶ ನೀಡಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿರುವುದಾಗಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 144 ಜಾರಿಯಲ್ಲಿದ್ದು, ಅನವಶ್ಯಕವಾಗಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಈ ಹಿಂದಿನಂತೆ ರಾತ್ರಿ 8 ರಿಂದ ಬೆಳಿಗ್ಗೆ 5ರ ತನಕ ನೈಟ್ ಕರ್ಪ್ಯೂ ಇರಲಿದೆ. ಇದನ್ನೂ ಓದಿ: ► ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಶನಿವಾರ 90 ಪಾಸಿಟಿವ್ ದೃಢ – https://kundapraa.com/?p=39433 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.11ರ ಶನಿವಾರ 90 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಮಂಗಳೂರು ಹಾಗೂ ರಾಯಚೂರಿನಿಂದ ತಲಾ ಓರ್ವ ವ್ಯಕ್ತಿ, ಮುಂಬೈನಿಂದ 8 ಮಂದಿ, ಬೆಂಗಳೂರಿನಿಂದ 5 ಮಂದಿ ಬಂದಿದ್ದು, ಉಳಿದ ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಬಂದಿದೆ. 60 ಪುರುಷರು, 30 ಮಹಿಳೆಯರಿಗೆ ಪಾಸಿಟಿವ್ ಬಂದಿದ್ದು, ಇವುಗಳಲ್ಲಿ ಉಡುಪಿ ತಾಲೂಕಿನ 66, ಕುಂದಾಪುರ ತಾಲೂಕಿನ 20 ಹಾಗೂ ಕಾರ್ಕಳ ತಾಲೂಕಿನ 4 ಮಂದಿ ಇದ್ದಾರೆ. 573 ನೆಗೆಟಿವ್: ಈ ತನಕ ಒಟ್ಟು 21,678 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 18,081ನೆಗೆಟಿವ್, 1,567 ಪಾಸಿಟಿವ್ ಬಂದಿದ್ದು, 2,030 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 573 ನೆಗೆಟಿವ್, 90 ಪಾಸಿಟಿವ್ ಬಂದಿದೆ. ಒಟ್ಟು 1,285 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 319 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,567 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,245 ಮಂದಿ ಬಿಡುಗಡೆಯಾಗಿದ್ದು, 319…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್‌ನ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ವೈದ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಪ್ರತಿಯೊಬ್ಬ ನಾಗರಿಕನು ಕೂಡ ಸ್ವಯಂ ಜಾಗೃತಿ ವಹಿಸುವ ಅಗತ್ಯತೆ ಇವತ್ತು ಇದೆ. ವಿವಿಧತೆಯಲ್ಲಿ ಏಕತೆ ಎನ್ನುವ ಧ್ಯೇಯದಡಿಯಲ್ಲಿ ವಿಭಿನ್ನ ಸಮಾಜಮುಖಿ ಕಾರ್ಯಕ್ರಮಗಳನ್ನು ಸೌಹಾರ್ದ ಸಹಕಾರಿ ಮಾಡುತ್ತಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕ ಮಂಜುನಾಥ ಎಸ್.ಕೆ. ಹೇಳಿದರು. ಕುಂದಾಪುರ ಸೌಹಾರ್ದ ಕ್ರೆಡಿಟ್ ಕೊ-ಅಪರೇಟಿವ್ ಲಿ., ಕುಂದಾಪುರ ವತಿಯಿಂದ ಕೋವಿಡ್-19 ಇದರ ಸಾಮಾಜಿಕ ಕಳಕಳಿ ಪ್ರಯುಕ್ತ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಜರ್ ಡಿಸ್ಪೆಂಸರ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರಿನ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ವಹಿಸಿದ್ದರು. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೆಶ್ವರ್, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೊ-ಅಪರೇಟಿವ್ ಲಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋರೋನಾ ಪಾಸಿಟಿವ್ ಪ್ರಕರಣಗಳನ್ನು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಸಾರ್ವಜನಿಕರ ಹಿತ ರಕ್ಷಣೆಗಾಗಿ ಜುಲೈ.13 ರಿಂದ ಜುಲೈ.31 ತನಕ ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್ಲ ಅಂಗಡಿಗಳು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಿದ್ದು, ಆ ಬಳಿಕ ಮೆಡಿಕಲ್, ಹಾಲು, ಹೋಟೆಲ್ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಲಾಗುತ್ತಿದೆ. ಕುಂದಾಪುರದ ಶೆರೋನ್ ಹೋಟೆಲ್ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುಂದಾಪುರದ ಸಮಾನ ಮನಸ್ಕ ವರ್ತಕರು ಈ ನಿರ್ಣಯ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ವ್ಯಾಪಾರಸ್ಥ ರಾಧಾಕೃಷ್ಣ ಅವರು ಮಾತನಾಡಿ ಕೊರೊನಾ ಸಮುದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಸುಮಾರು 150 ಹೆಚ್ಚು ಮಂದಿ ಸಮಾನ ಮನಸ್ಕ ವ್ಯಾಪಾರಸ್ಥರು ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೂ ಮೊದಲು ಎಲ್ಲ ಅಂಗಡಿಗಳಿಗೂ ಭೇಟಿ ಕೊಟ್ಟು ಮನವಿ ಮಾಡಿದ್ದೇವೆ. ಸ್ವಯಂ ಪ್ರೇರಿತ ಬಂದ್ಗೆ ಎಲ್ಲರ ಬೆಂಬಲ ಸಿಕ್ಕಿದೆ ಎಂದವರು ಹೇಳಿದರು. ಕುಂದಾಪ್ರ…
