ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಭಾನುವಾರದ ಲಾಕ್ಡೌನ್ ಉಡುಪಿ ಜಿಲ್ಲೆಯಲ್ಲಿಯೂ ಮುಂದುವರಿದಿದ್ದು, ಈ ವಾರ ಅಂಗಡಿ-ಹೋಟೆಲುಗಳಿಗೆ ವಿನಾಯಿತಿ ನೀಡಲಾಗಿದೆ.
ಮೆಡಿಕಲ್ ಶಾಪ್, ಆಸ್ಪತ್ರೆ, ಹಾಲು, ಪೇಪರ್’ಗೆ ಅವಕಾಶವಿರುವಂತೆ ದಿನಸಿ ಅಂಗಡಿ, ತರಕಾರಿ ಹಾಗೂ ಮಾಂಸದ ಅಂಗಡಿ, ಹೋಟೆಲ್ ಹಾಗೂ ಬೇಕರಿಗಳಿಗೆ ವಿನಾಯಿತಿ ನೀಡಲಾಗಿದೆ. ಆನ್ಲೈನ್ ಡೆಲಿವರಿಗೆ ರಾತ್ರಿ 8 ಗಂಟೆಯ ಬಳಿಕವೂ ಅವಕಾಶ ನೀಡಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿರುವುದಾಗಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 144 ಜಾರಿಯಲ್ಲಿದ್ದು, ಅನವಶ್ಯಕವಾಗಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಈ ಹಿಂದಿನಂತೆ ರಾತ್ರಿ 8 ರಿಂದ ಬೆಳಿಗ್ಗೆ 5ರ ತನಕ ನೈಟ್ ಕರ್ಪ್ಯೂ ಇರಲಿದೆ.
ಇದನ್ನೂ ಓದಿ:
► ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಶನಿವಾರ 90 ಪಾಸಿಟಿವ್ ದೃಢ – https://kundapraa.com/?p=39433 .