Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಶಂಕರನಾರಾಯಣ: ಇಲ್ಲಿಗೆ ಸಮೀಪದ ಕುಳ್ಳುಂಜೆ ಗ್ರಾಮದ ಕೋವಿನಗುಡ್ಡೆ ಎಂಬಲ್ಲಿ ಚಿಕ್ಕ ಗುಡಿಸಿಲಿನಲ್ಲಿ ದಯಾನೀಯ ಬದುಕು ಸಾಗಿಸುತ್ತಿದ್ದ ಸಾಂತು ಅಜ್ಜಿ ಎಂಬುವವರಿಗೆ ನೆಟ್ಟಿಗರು, ದಾನಿಗಳು, ಸರ್ಕಾರದ ನೆರವಿನಿಂದ ತಾ.ಪಂ ಸದಸ್ಯ ಕಲ್ಗದ್ದೆ ಉಮೇಶ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸುಂದರ ಹಾಗೂ ಸುಸಜ್ಜಿತವಾದ ಮನೆ ಸಿದ್ಧಗೊಂಡು ಸೋಮವಾರ ಗೃಹ ಪ್ರವೇಶ ನೆರವೇರಿದೆ. ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನೂತನ ಮನೆಯೊಳಕ್ಕೆ ದೀಪ ಬೆಳಗಿ, ವಯೋವೃದ್ದೆ ಸಾಂತಜ್ಜಿಯನ್ನು ಗೌರವಿಸಿದರು. ಬಳಿಕ ಅವರು ಮಾತನಾಡಿ, ಇದು ಪರಮಾತ್ಮನ ಪೂರ್ಣಾನುಗ್ರಹಕ್ಕೆ ಪಾತ್ರವಾಗುವ ಮಾನವೀಯ ಕಾರ್ಯ. ಉಮೇಶ ಶೆಟ್ಟರು ಅವರ ಸ್ನೇಹಿತರ ಪರಿಶ್ರಮವನ್ನು ಈ ಕುಟುಂಬ ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದರು. ಮನೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ತಾ.ಪಂ. ಸದಸ್ಯ ಕಲ್ಗದ್ದೆ ಉಮೇಶ್ ಶೆಟ್ಟಿ ಮಾತನಾಡಿ, ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಂದಾಗ ಸಾಂತಜ್ಜಿ ಟಾರ್ಪಲ್ ಸೂರಿನ ಮನೆ ನೋಡಿದೇವು. ಸಾಂತಜ್ಜಿ ಅವರ ಮಗಳು, ಮೊಮ್ಮಗಳು ಬಿಟ್ಟು ಮತ್ಯಾರೂ ಇಲ್ಲ. ಮನೆ ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿಯೂ ಇರಲಿಲ್ಲ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪ್ರ ಕನ್ನಡದ ಮೊದಲ ಹಾಗೂ ಪ್ರಸಿದ್ಧ ಆಲ್ಬಂ ಸಾಂಗ್ ‘ಪಣ್ಕ್ ಮಕ್ಕಳ್’ಗೆ ಸಾಹಿತ್ಯ ಬರೆದಿದ್ದ ಅಶೋಕ್ ನೀಲಾವರ (45) ಸೋಮವಾರ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ನೀಲಾವರದವರಾದ ಅಶೋಕ್ ಅವರು ಬೆಳಗಾವಿ ಜಿಲ್ಲೆ ಗೋಕಾಕ್‌ಗೆ ಬೇಕರಿಯ ಇಂಟೀರಿಯರ್ ಡಿಸೈನ್ ಕೆಲಸಕ್ಕಾಗಿ ತೆರಳಿದ್ದ ಸಂದರ್ಭ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅಶೋಕ್ ಅವರು, ಪಣ್ಕ್ ಮಕ್ಕಳ್ ಭಾಗ -1 ಹಾಗೂ ಪಣ್ಕ ಮಕ್ಕಳ್ ಭಾಗ-2ರ ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದಿದ್ದರು. ಮೃಗಶಿರ, ಕತ್ತಲೆಕೋಣೆ, ಬೀಟ್ ಚಿತ್ರದ ಒಂದೊಂದು ಹಾಡಿಗೂ ಸಾಹಿತ್ಯ ಬರೆದಿದ್ದರು. ಮೃತರು ಮಗಳು, ಮಡದಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಕರ್ನಾಟಕ ಸರಕಾರವು ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ-1 ಅವರು ರಾಜ್ಯಪಾಲರ ಆದೇಶಾನುಸಾರ ಅಧಿಸೂಚನೆ ಪ್ರಕಟಿಸಿದ್ದಾರೆ. ಕೆ. ಜಯಪ್ರಕಾಶ್ ಹೆಗ್ಡೆ ಅವರು ಮೂರು ಬಾರಿ ಶಾಸಕರಾಗಿ, ಒಂದು ಭಾರಿ ಮೀನುಗಾರಿಕಾ ಸಚಿವರಾಗಿ,  ಉಡುಪಿ ಚಿಕ್ಕಮಗಳೂರು ಸಂಸದರಾಗಿಯೂ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ವರ್ಷಂಪ್ರತಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ ಸೇವೆಯು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ಸ್ವಾಮೀಜಿಯವರ ಆಜ್ಞಾನುಸಾರ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳು ವಿಧಿವಿಧಾನಗಳೊಂದಿಗೆ ಜರಗಿದವು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್, ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ ನಾಯಕ್, ಸೇನಾಪುರ ಹಾಗೂ ಗಂಗೊಳ್ಳಿ ಆಚಾರ್ಯ ಕುಟುಂಬಸ್ಥರು, ಊರಿನ ಹತ್ತು ಸಮಸ್ತರು, ದೇವಳದ ಆಡಳಿತ ಮಂಡಳಿ ಸದಸ್ಯರು, ಭಜಕರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರಸ್ತುತ ಸಾಲಿಗೆ ಇ-ವಾಣಿಜ್ಯ ಸಂಸ್ಥೆಗಳಾದ zomato, Swiggy, Uber ets, Amazon ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ 2ಎ, 3ಎ ಮತ್ತು 3ಬಿಗೆ ಸೇರಿದ ಯುವಕರಿಗೆ ಬೈಕ್ ಕೊಂಡುಕೊಳ್ಳಲು ನಿಗಮದಿಂದ 25,000 ರೂ. ಗಳ ಸಹಾಯಧನ ಹಾಗೂ ಉಳಿಕೆ ಮೊತ್ತ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸಾಲ ಸೌಲಭ್ಯ ಪಡೆಯಲು ಇಚ್ಚಿಸುವ ಫಲಾಫೇಕ್ಷಿಗಳು, ಅರ್ಜಿಗಳನ್ನು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಉಡುಪಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅಥವಾ ನಿಗಮದ ವೆಬ್‌ಸೈಟ್ http://www.dbcdc.karnataka.gov.in ನಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಡಿಸೆಂಬರ್ 19 ರ ಒಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ ಅಥವಾ ಡಿ.ದೇವರಾಜ ಅರಸು ಹಿಂದುಳಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಮತ್ತು ಗೆಳೆಯರ ಬಳಗ ಬೈಂದೂರು ಇವರ ಆಶ್ರಯದಲ್ಲಿ ಬಿ. ಪ್ರವೀಣ ಶೆಟ್ಟಿ ಅವರ ‘ತುಂಬಿ ತುಳುಕಿದ ಸಾಲು’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಕಿಶೋರ ಕುಮಾರ ಶೆಟ್ಟಿ ಮಾತನಾಡಿ, ತನ್ನ ಸಮಾಜದ ಕುರಿತು ಚಿಂತಿಸುವ, ಬಡವರ ಕಷ್ಟಕ್ಕೆ ಮಿಡಿಯುವ ಸಾಹಿತ್ಯದಿಂದ ಸಾಮಾಜಿಕ ಸುಧಾರಣೆಗೆ ಹೊಸ ಸಾಧ್ಯತೆಗಳು ತೆರೆಯಲ್ಪಡುತ್ತದೆ. ಮನಸ್ಸಿನ ಯೋಚನೆ, ಹೃದಯದ ಭಾವನೆ ಆರೋಗ್ಯಕರವಾಗಿ ಬೆರೆತಾಗ ಸೃಜನಶೀಲ ಕವನ ಮೂಡಿಬರುತ್ತದೆ. ಆಧುನಿಕತೆಯ ಭರಾಟೆಯಲ್ಲಿ ನಮ್ಮನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ನಾವು ಕಲೆ, ಸಾಹಿತ್ಯ, ಸಂಗೀತ ಮೊದಲಾದ ಪ್ರಕಾರಗಳಿಂದ ನೆಮ್ಮದಿ, ಸಂತೋಷವನ್ನು ಹುಡುಕಿಕೊಳ್ಳಬೇಕಾಗಿದೆ ಇಂಜಿನಿಯರ್ ಆಗಿದ್ದರು ಸಹ ತಾವು ಹೊರ ಪ್ರಪಂಚದಲ್ಲಿ ಕಂಡು, ಕೇಳಿದ ವಿಚಾರಗಳನ್ನು ಆಂತರಂಗಿಕವಾಗಿ ವಿಮರ್ಶಿಸಿ ಕವನ ರೂಪದಲ್ಲಿ ಹೊರಹಾಕಿದ್ದಾರೆ. ಇಂದಿನ ಯುವ ಬರಹಗಾರರಿಗೆ ಇವರ ಕವಿತೆಗಳು ಹೊಸ ಆಯಾಮವನ್ನು ತೋರಿಸುತ್ತದೆ. ವಿಭಿನ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರು ತಮ್ಮ ಪತ್ನಿ ಜಿಲ್ ಬೈಡನ್ ಅವರ ನೀತಿ ನಿರ್ದೇಶಕ ಸ್ಥಾನಕ್ಕೆ ಕುಂದಾಪುರ ಮೂಲದ ಅಮೆರಿಕನ್ ಮಾಲಾ ಅಡಿಗ ಅವರನ್ನು ಶುಕ್ರವಾರ ನೇಮಕ ಮಾಡಿದ್ದು, ಮಾಲಾ ಅವರ ಕುಟುಂಬಿಕರಲ್ಲಿ ಸಂಭ್ರಮ ಮನೆಮಾಡಿದೆ. ಅಮೆರಿಕದಲ್ಲೇ ಹುಟ್ಟಿ ಬೆಳೆದ ಮಾಲಾ ಅವರು ಕುಂದಾಪುರದ ಕಕ್ಕುಂಜೆಯ ರಮೇಶ್ ಅಡಿಗ ಹಾಗೂ ಜಯಾ ಅಡಿಗ ದಂಪತಿಯ ಹಿರಿಯ ಪುತ್ರಿ. ಅವರು ಕಾನೂನು ಪದವಿ ಪಡೆದು ವಕೀಲಿ ವೃತ್ತಿಯಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ತಂದೆ ರಮೇಶ್ ಅಡಿಗರು ಬೆಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿದ ಕೂಡಲೇ ಅಮೆರಿಕಕ್ಕೆ ತೆರಳಿ ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾಗಿದ್ದಾರೆ. ಜಿಲ್ ಬೈಡನ್ ನೀತಿ ನಿರ್ದೇಶಕಿಯಾಗಿ ಮಾಲಾ ನೇಮಕವಾದ ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ದಲ್ಲಿರುವ ಅವರ ಸೋದರತ್ತೆ ನಿರ್ಮಲಾ ಉಪಾಧ್ಯಾಯ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ಸಂದರ್ಭ ಸಂಭ್ರಮ ಹಂಚಿಕೊಂಡ ನಿರ್ಮಲಾ ‘ಮಾಲಾ ಹುಟ್ಟಿ ಬೆಳೆದಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದಿವ್ಯ ಮತ್ತು ನಾಗರಾಜ್ ಇವರ ಚಿತ್ತೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಏಳು ವರುಷದ ಕಿರಿಯ ಸ್ಯಾಕ್ಸೋಫೋನ್ ಪ್ರತಿಭೆ ಗಂಗೊಳ್ಳಿಯ ಮಾಧವ ದೇವಾಡಿಗರ ಪುತ್ರ ಸಂಜಿತ್ ಎಂ. ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಕಾಶ್ ಕಮಲಶಿಲೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Read More

ಕುದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ತ್ರಾಸಿ ಮಂಜು ದೇವಾಡಿಗರ ಮನೆ ವಠಾರದಲ್ಲಿ ಭಾರತೀಯ ಜನತಾ ಪಕ್ಷದ ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಚಟುವಟಿಕೆ ಇರುವುದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಪರಿಕಲ್ಪನೆ ಸಾಕಾರವಾಗಬೇಕಾದರೆ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್‌ನ್ನು ಕಿತ್ತೊಗೆಯಬೇಕು. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಬೇಕು. ಇದಕ್ಕಾಗಿ ಎಲ್ಲರೂ ಒಂದೇ ಮನೆ ಒಂದೇ ಕುಟುಂಬ ಎನ್ನುವ ಕಲ್ಪನೆಯೊಂದಿಗೆ ಒಗ್ಗಟ್ಟಿನಿಂದ ದುಡಿದು ಭಾರತೀಯ ಜನತಾ ಪಕ್ಷವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್, ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚೈಲ್ಡ್ ಲೈನ್-1098 ಉಡುಪಿಯ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಮಕ್ಕಳಮನೆ ಕುಂಭಾಶಿಯಲ್ಲಿ ಇತ್ತಿಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಂಭಾಶಿ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ ಕುಂದಾಪುರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ ರಾಘವೇಂದ್ರ ವರ್ಣೇಕರ್, ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ, ಮಕ್ಕಳಮನೆ ಸಂಸ್ಥೆಯ ಸಿಬ್ಬಂದಿ ವಿನೀತಾ, ಕುಂದಾಪುರ ಪೋಲಿಸ್ ಠಾಣೆಯ ಸಿಬ್ಬಂದಿ ಅಶ್ವಿನ್ ಕುಮಾರ್, ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿಗಳು, ಮಕ್ಕಳ ಮನೆಯ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿರಿದ್ದರು. ಗಣೇಶ ಕುಂಭಾಶಿ ಇವರನ್ನು ಚೈಲ್ಡ್‌ಲೈನ್-1098 ಉಡುಪಿಯ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳ ಮನೆಯಲ್ಲಿರುವ ಮಕ್ಕಳಿಗೆ ಚಿತ್ರಕಲೆ ಹಾಗೂ ಕ್ರಾಫ್ಟ್ ಸ್ಪರ್ಧೆ ಏರ್ಪಡಿಸಲಾಗಿದ್ದು ವಿಜೇತರಿಗೆ ಈ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು ಹಾಗೂ ಮಕ್ಕಳ ಮನೆಯಲ್ಲಿರುವ ಎಲ್ಲಾ ಮಕ್ಕಳಿಗೆ ಉಪಯುಕ್ತ ವಸ್ತುಗಳ ಕಿಟ್‌ನ್ನು ವಿತರಿಸಲಾಯಿತು. ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಬಗ್ಗೆ…

Read More