ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಂಪ್ರದಾಯಿಕ ಶಕ್ತಿಮೂಲಗಳು ಕ್ಷಯಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಪರ್ಯಾಯ ಮೂಲಗಳ ಅವಲಂಬನೆ ಅನಿವಾರ್ಯವೆನಿಸಿದೆ. ಧಾರಾಳವಾಗಿ, ಉಚಿತವಾಗಿ ಲಭ್ಯವಿರುವ ಹಾಗೂ ಪರಿಸರ ಸ್ನೇಹಿಯಾಗಿರುವ ಸೌರಶಕ್ತಿಯನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಿರುವುದರಿಂದ ಜನರು ಅದರತ್ತ ಹೊರಳಬೇಕು ಎಂದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಹೇಳಿದರು. ಗೋಳಿಹೊಳೆಯ ಮಹಿಷಾಸುರ ಮರ್ಧಿನಿ ಸಭಾಭವನದಲ್ಲಿ ಬ್ಯಾಂಕ್ ಮತ್ತು ಸೆಲ್ಕೋ ಸೋಲಾರ್ ಲೈಟ್ ಜಂಟಿ ಆಶ್ರಯದಲ್ಲಿ ಬುಧವಾರ ನಡೆದ ’ವಿಕಾಸ ಸೌರ ಸ್ವಾವಲಂಬನೆಯ ಮೊದಲ ಸಾಧನೆ’ಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮೆಲ್ಲ ದಿನಬಳಕೆಯ ಉಪಕರಣಗಳಿಗೆ ಈಗ ವಿದ್ಯುತ್ ಅನಿವಾರ್ಯ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸುಲಭ ಲಭ್ಯವಲ್ಲ. ಆದುದರಿಂದ ಸೆಲ್ಕೋ ಸೋಲಾರ್ ಲೈಟ್ಸ್ ಸಂಸ್ಥೆ ಬೆಳಕಿಗೆ ಮಾತ್ರವಲ್ಲದೆ ಸ್ವೋದ್ಯೋಗ ನಡೆಸಲು ಅಗತ್ಯವಿರುವ ೬೦ ಯಂತ್ರಗಳಿಗೆ ಸೌರಶಕ್ತಿ ಅಳವಡಿಸುತ್ತಿದೆ. ಅವುಗಳನ್ನು ಅಳವಡಿಸಿಕೊಳ್ಳಲು ಗ್ರಾಮೀಣ ಬ್ಯಾಂಕ್ ಸಹಾಯಧನ ಸಹಿತವಾದ ಸಾಲ ನೀಡುತ್ತದೆ. ಜನರು ಈ ಸೌಲಭ್ಯದ ಗರಿಷ್ಠ ಲಾಭ ಪಡೆಯಬೇಕು ಎಂದ ಅವರು, ಸ್ಥಳೀಯರ ಕೋರಿಕೆಯನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ನೆಹರು ಯುವ ಕೇಂದ್ರ ಉಡುಪಿ ಹಾಗೂ ನವಶಕ್ತಿ ಮಹಿಳಾ ವೇದಿಕೆ ರಿ. ಕೊಲ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರಿನಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಸೈಕಲ್ ರ‍್ಯಾಲಿಗೆ ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಚಾಲನೆ ನೀಡಿದರು. ಕೊಲ್ಲೂರು ದೇವಳದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ ವ್ಯಾಯಾಮದ ಮೂಲಕ ಶರೀರದ ಫಿಟ್ನೆಸ್‌ಗೆ ಸೈಕ್ಲಿಂಗ್ ಅತ್ಯಂತ ಉಪಯೋಗಕಾರಿದೆ. ಈಗಿನ ಕಾಲದಲ್ಲಿ ಎಲ್ಲರೂ ಕುಳಿತಲ್ಲೇ ಕೆಲಸ ಮಾಡುವುದು, ವ್ಯಾಯಾಮ ಮಾಡದೆ ಇರುವುದು ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದರಿಂದ ಖಾಯಿಲೆಗಳು ಅವರನ್ನು ಕಾಡುತ್ತಿದೆ. ಸದೃಢ ದೇಹದಿಂದ, ಸದೃಢ ಮನಸ್ಸು, ಸದೃಢ ಭಾರತ ಸೃಷ್ಟಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮೂಕಾಂಬಿಕ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಗ್ರೀಷ್ಮಾ ಗಿರಿಧರ ಭಿಡೆ, ಶಾಲಾ ಮುಖ್ಯೋಪಾಧ್ಯಾಯರಾದ…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಕೊಲ್ಲೂರು: ಸ್ಯಾಂಡಲ್‍ವುಡ್ ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು. ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಬಳಿಕ ರಚಿತಾ ರಾಮ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದರು. ಶ್ರೀ ಮೂಕಾಂಬಿಕೆ ದೇವರಿಗೆ ವಿಶೇಷ ಸೇವೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ರಚಿತಾ ರಾಮ್ ಅವರಿಗೆ ಫಲ-ಪ್ರಸಾದಗಳನ್ನು ನೀಡಿ ಗೌರವ ಸಲ್ಲಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕುಂದಪ್ರಭ ಸಂಸ್ಥೆ ಕೊಡ ಮಾಡುವ ೨೦ನೇ ವರ್ಷದ “ಕೋ.ಮ.ಕಾರಂತ” ಪ್ರಶಸ್ತಿಯನ್ನು ಕಾಂಕ್ರಿಟ್ ತಾಂತ್ರಿಕ ತಜ್ಞರೆಂದೇ ಖ್ಯಾತಿ ಗಳಿಸಿದ ಭಾರತ ಸರಕಾರದ ರಕ್ಷಣಾ ಇಲಾಖೆಯ ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗ್‌ನ ನಿವೃತ್ತ ಹಿರಿಯ ಪ್ರೊಫೆಸರ್, ಕೋಟೇಶ್ವರದ ಪ್ರೊ. ಎಂ.ಎಸ್. ಶೆಟ್ಟಿಯವರಿಗೆ ಸ.ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಮುಜುರಾಯಿ, ಬಂದರು, ಒಳನಾಡು ಜಲಸಾರಿಗೆ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಪ್ರಶಸ್ತಿಗಾಗಿ ತಡಕಾಟ, ಪ್ರಭಾವ ಬೀರುವ ಈ ಕಾಲದಲ್ಲಿ ಎಂ.ಎಸ್.ಶೆಟ್ಟಿಯಂತಹ ನೈಜ ಸಾಧಕರನ್ನು ಈ ಪ್ರಶಸ್ತಿಯೇ ಅರಸಿಕೊಂಡು ಬಂದಿದೆ. ಇವರ ಜೀವನಾನುಭವ, ತಾಂತ್ರಿಕ ಪರಿಣತಿಯನ್ನು ಸರಕಾರ ಸಮಾಜಕ್ಕೆ ಪ್ರಯೋಜನವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳಲು ಚಿಂತಿಸಲಾಗುವುದು. ಕುಂದಪ್ರಭ ಕಳೆದ ಮೂರು ದಶಕಗಳಲ್ಲಿ ಸಮಾಜಕ್ಕೆ ಅನುಕೂಲವಾಗುವ ಹಲವು ಕಾರ್ಯಗಳನ್ನು ಮಾಡಿದೆ, ಅಪೂರ್ವ ಸಾಧಕರನ್ನು ಗುರುತಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು,ಜ.21: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕಳ್ಳಂಗಡಿ ಸಮೀಪದ ರೈಲ್ವೆ ಟ್ರ್ಯಾಕ್‌ನಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತನನ್ನು ಕಿರಿಮಂಜೇಶ್ವರ ಸಮೀಪದ ಶಾಲೆಬಾಗಿಲು ರಸ್ತೆ ನಿವಾಸಿ ರಾಮ ಪೂಜಾರಿ (32) ಎಂದು ಗುರುತಿಸಲಾಗಿದೆ. ಈ ಪ್ರಕರಣದ ಪೂರ್ವದಲ್ಲಿ ಪೊಲೀಸರ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಕುಟುಂಬಿಕರು ಶವವನ್ನು ರೈಲ್ವೆ ಹಳಿಯ ಪಕ್ಕಕ್ಕಿಟ್ಟು ಮಧ್ಯಾಹ್ನದ ತನಕವೂ ಪ್ರತಿಭಟಿಸಿದ ಘಟನೆಯೂ ನಡೆಯಿತು. ಘಟನೆಯ ವಿವರ: ಚಾಲಕ ವೃತ್ತಿ ಮಾಡಿಕೊಂಡಿರುವ ರಾಮ ಪೂಜಾರಿಯನ್ನು ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ಪೊಲೀಸರು ಗಂಗೊಳ್ಳಿ ಠಾಣೆಗೆ ಕರೆದೊಯ್ದಿದ್ದರು. ಈ ಬಗ್ಗೆ ಅವರ ಸ್ನೇಹಿತರು ವಿಚಾರಿಸಿದಾಗ, ರಾಮ ಪೂಜಾರಿ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದು, ಅದರ ವಿಚಾರಣೆಗೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದರು ಎನ್ನಲಾಗಿದೆ. ವಿಚಾರಣೆಯ ಬಳಿಕ ರಾತ್ರಿ ರಾಮ ಪೂಜಾರಿ ಮನೆಗೆ ಮರಳಿದ್ದು, ಸೋಮವಾರ ಬೆಳಿಗ್ಗೆ ನಾಗೂರು ಸಮೀಪದ ರೈಲ್ವೇ ಟ್ರ್ಯಾಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಅವರ ಛಿದ್ರಗೊಂಡ ದೇಹ ಪತ್ತೆಯಾಗಿದೆ. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಭಟ್ಕಳ: ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಜೆಇಇ) ಮೈನ್ಸ್ ಇದರ 2020ನೇ ಸಾಲಿನ ಪ್ರಥಮ ಹಂತದ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳ ತಾಲೂಕಿನ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ 30ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿ, 10ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಶೇಕಡಾವಾರು 90ಕ್ಕಿಂತ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಅಭಿಷೇಕ ಎನ್.ಎನ್ 98%, ಅಭಿಷೇಕ್ ವಿ. ನಾಯ್ಕ್ 98%, ಜಯದೀಪ ಪ್ರಭು 95%, ಆದರ್ಶ ಎಸ್. ನಾಯ್ಕ್ 94%, ಪ್ರಸನ್ನ ನಾಯ್ಕ್ 94%, ಅಶ್ವಿನಿ 93%, ಪ್ರಶಾಂತ ನಾಯ್ಕ್ 94%, ಸಾಗರ್ ಎಸ್. ನಾಯ್ಕ್ 89%, ಪುಂಡಲೀಕ ನಾಯಕ್ 86%, ದರ್ಶನ್ 82% ಫಲಿತಾಂಶ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕ್ಯಾ. ಕೆ.ಆರ್. ನಾಯ್ಕ್ ಹಾಗೂ ಸದಸ್ಯರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ನೇತೃತ್ವದ ತಂಡಕ್ಕೆ ಜಯ ದೊರಕಿದ್ದು, ಈ ಹಿಂದಿನ ಆಡಳಿತ ಮಂಡಳಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಪ್ರಕಾಶ್ಚಂದ್ರ ಶೆಟ್ಟಿ, ಬಿ. ರಘುರಾಮಶೆಟ್ಟಿ, ಬಿ. ಎಸ್. ಸುರೇಶ್ ಶೆಟ್ಟಿ, ಗುರುರಾಜ್ ಹೆಬ್ಬಾರ್, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ ಹಾಗೂ ಮೋಹನ ಪೂಜಾರಿ ಚುನಾವಣೆಯಲ್ಲಿ ಜಯಗಳಿಸಿ ನೂತನ ಆಡಳಿ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 2200 ಮತಗಳಿದ್ದು, ಅದರಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ 1920 ಮತಗಳು ಚಲಾವಣೆಗೊಂಡು ಶೇ.92 ಮತದಾನವಾಗಿತ್ತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಒಟ್ಟು 13 ಸದಸ್ಯರ ನಿರ್ದೇಶಕ ಮಂಡಳಿ ಇದ್ದು ಹಿಂದಿನಿಂದಲೂ ಇಲ್ಲಿ ಚುನಾವಣೆ ನಡೆದಿರಲಿಲ್ಲ. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಇವರ ನೇತೃತ್ವದ ತಂಡಕ್ಕೆ ಈ ಬಾರಿಯ ಚುನಾವಣೆ ಸವಾಲಾಗಿ ಪರಿಣಮಿಸಿತ್ತು. ಆದರೆ ರಾಜಕೀಯ ಕಸರತ್ತಿನ ಬಳಿಕ ಮೀಸಲು ಕ್ಷೇತ್ರಗಳಲ್ಲಿ ಬಹುತೇಕ ಎಲ್ಲಾ ಸ್ಥಾನಗಳಿಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವವರು ಕೀಳರಿಮೆ ಹೊಂದಬೇಕಾಗಿಲ್ಲ. ಅಲ್ಲಿ ಓದಿದ ಅದೆಷ್ಟೋ ಮಂದಿ ದೊಡ್ಡ ಸಾಧನೆ ಮಾಡಿದ್ದಾರೆ ಎನ್ನುವುದಕ್ಕೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐ.ಪಿ.ಎಸ್ ಅಧಿಕಾರಿಯಾಗಿರುವ ನಾನು ಉದಾಹರಣೆ ಎಂದು ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಹೇಳಿದರು. ಈಚೆಗೆ ನಡೆದ ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳು ಸಾಧನೆಯ ಆಕಾಂಕ್ಷೆ ಇರಿಸಿಕೊಂಡು ಅಧ್ಯಯನ ನಡೆಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು. ಅಂತವರಿಗೆ ಅವಕಾಶದ ಹಲವು ಬಾಗಿಲುಗಳು ತೆರೆದುಕೊಳ್ಳುತ್ತವೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದೂ ಅವುಗಳಲ್ಲಿ ಒಂದು ಎಂದು ಅವರು ಹೇಳಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಯ ಗಣಪತಿ ಎಸ್. ಭಟ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸಂಸ್ಥೆಯ ಈ ವರೆಗಿನ ಪ್ರಗತಿಯನ್ನು ವಿವರಿಸಿ,…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಟಾರ್ ರಸ್ತೆಯ ಬಾಳಿಕೆ ಹೆಚ್ಚಿಸಲು ಟಾರ್‌ಗೆ ಪ್ಲಾಸ್ಟಿಕ್ ಹುಡಿ ಸೇರಿಸುವ ಕೆರಳ ಮಾದರಿಯ ಪ್ರಯೋಗ ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಈಚೆಗೆ ಅಲ್ಲಿನ 160 ಮೀಟರ್ ಉದ್ದದ ರಸ್ತೆಗೆ ಟಾರ್ ಹಾಕುವಾಗ ಈ ಪ್ರಯೋಗ ನಡೆಸಲಾಗಿದೆ. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಟಾರ್ ರಸ್ತೆಯ ಮೇಲ್ಮೈ ಸವಕಳಿಯಾಗಿ, ಎರಡು, ಮೂರು ವರ್ಷಗಳಲ್ಲಿ ಕಿತ್ತುಹೋಗಿ ಗುಂಡಿಗಳು ಬೀಳುತ್ತವೆ. ಕೇರಳದಲ್ಲಿ ಟಾರ್‌ಗೆ ಪ್ಲಾಸ್ಟಿಕ್ ಸೇರಿಸಿ ರಸ್ತೆ ನಿರ್ಮಿಸುವ ಪ್ರಯೋಗ ನಡೆದಿದ್ದು, ಅದು ಯಶಸ್ವಿಯಾಗಿದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಅಲ್ಲಿ ಈ ಪ್ರಯೋಗ ನಡೆಸಿ ಯಶಸ್ಸು ಕಂಡ ಸ್ವಾಮಿನಾಥನ್ ಎಂಬವರನ್ನು ಈಚೆಗೆ ಉಡುಪಿಗೆ ಕರೆಸಿ ಜಿಲ್ಲೆಯ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗಿತ್ತು. ಉಡುಪಿಯ ಅಲೆವೂರು ಗ್ರಾಮ ಪಂಚಾಯಿತಿ ಈ ಕ್ರಮವನ್ನು ಅನುಸರಿಸಿ ಮೊದಲಾಗಿ ರಸ್ತೆ ನಿರ್ಮಿಸಿತ್ತು. ಅದರಿಂದ ಪ್ರೇರಿತವಾದ ಮರವಂತೆ ಗ್ರಾಮ ಪಂಚಾಯಿತಿ ಹೆಚ್ಚು ಮಳೆನೀರಿನ ಬಾಧೆಗೆ ಒಳಗಾಗುವ ಊರಿನ ಒಂದು ರಸ್ತೆಯಲ್ಲಿ ಅದನ್ನು ಮಾಡಿದೆ. ಅಲೆವೂರಿನಲ್ಲಿ ಬಳಸಿ ಉಳಿದಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನಿಲ್ ಪುರಾಣಿಕ ಅವರು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶಿಸಿರುವ ಬ್ಯಾರಿ ಭಾಷೆಯ ‘ಟ್ರಿಪಲ್ ತಲಾಖ್ ‘ ಸಿನಿಮಾದ ಫಸ್ಟ್‌ಲುಕ್/ಪೋಸ್ಟರನ್ನು ಬೆಂಗಳೂರಿನ ಅಕಾಡೆಮಿಯ ಕಛೇರಿಯಲ್ಲಿ ಬಿಡುಗಡೆ ಮಾಡಿದರು. ಯಾಕೂಬ್ ಖಾದರ್ ಗುಲ್ವಾಡಿ ಅವರು ಈ ಮೊದಲು ರಾಷ್ಟ್ರಪ್ರಶಸ್ತಿ ಪುರಸ್ಕೃತ ರಿಸರ್ವೇಶನ್ ಸಿನೆಮಾವನ್ನು ನಿರ್ಮಿಸಿದ್ದರು.
