ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶಾಸ್ತ್ರೀ ವೃತ್ತಿದ ಬಳಿಕ ಪಲ್ವಮಾ ಬಾಂಬ್ ದಾಳಿ ಘಟನೆಯನ್ನು ಖಂಡಿಸಿ ಮತ್ತು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು. ಕುಂದಾಪುರದ ವಿವಿಧ ಸಂಘಟನೆಗಳು ಸೈದ್ಧಾಂತಿಕ ಭೇದವನ್ನು ಮೀರಿ ಒಂದಾಗಿ ಮೊಂಬತ್ತಿ ಬೆಳಗಿ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟದಲ್ಲಿ ನಡೆದ ಅವಳಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್‌ನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಳಿಸಿ ಆದೇಶ ಹೊರಡಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಕೋಟ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಘವೇಂದ್ರ ಕಾಂಚನ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ. ಕೋಟದ ಮಣೂರು ಚಿಕ್ಕನಕೆರೆ ಎಂಬಲ್ಲಿ ಜ.೨೬ರಂದು ಯತೀಶ್ ಹಾಗೂ ಭರತ್ ಎಂಬ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಚಂದ್ರಶೇಖರ ರೆಡ್ಡಿಯನ್ನು ಫೆ.೧೪ರಂಡು ಪೊಲೀಸರು ಬಂಧಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ಆರೋಪಿಗಳಿಗೆ ನೆರವಾದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳನ್ನೂ ಬಂಧಿಸಲಾಗಿದ್ದು, ಇದುವರೆಗೆ ೧೬ ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇದನ್ನೂ ಓದಿ: ► ಕೋಟದಲ್ಲಿ ಯುವಕರಿಬ್ಬರ ಬರ್ಬರ ಕೊಲೆ – https://kundapraa.com/?p=30959 .…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಎಲ್ಲಾ ಹದಿನಾರು ಆಪಾದಿತರ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ಜನರಿಗೆ ಮಾ.೧ರ ತನಕ ನ್ಯಾಯಾಂಗ ಬಂಧನ ಹಾಗೂ ಇಬ್ಬರಿಗೆ ಫೆ.20ರ ತನಕ ಪೊಲೀಸ್ ಕಸ್ಟಿಡಿಗೆ ಒಪ್ಪಿಸಲಾಗಿದೆ. ಕೋಟ ಪೊಲೀಸ್ ಠಾಣೆ ಸರಿಹದ್ದಿನ ಮಣೂರು ಚಿಕ್ಕಿನಕರೆ ಸಮೀಪ ಸ್ನೇಹಿತರಾದ ಭರತ್ ಶ್ರೀಯಾನ್ ಹಾಗೂ ಯತೀಶ್ ಕರ್ಕೇರ ಎಂಬವರ ತಲವಾರಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ನಡೆದ ನಂತರ ಆಪಾದಿತರು ತಲೆ ಮರೆಸಿಕೊಂಡಿದ್ದು, ವಿವಿಧ ಸ್ಥಳದಲ್ಲಿ ಕೊಲೆಗೆ ಸಂಬಂಧಿಸಿದ ವ್ಯಕ್ತಿಗಳ ಪೊಲೀಸರು ಬಂಧಿಸಿದ್ದರು. ಕೊಲೆಯಲ್ಲಿ ಭಾಗಿ ಹಾಗೂ ಸಾಕ್ಷಿನಾಶ ಮತ್ತು ಕೊಲೆಗಾರರಿಗೆ ಸಹಕಾರ ಮಾಡಿದ ಆರೋಪದಡಿ ಒಟ್ಟು ೧೬ಜನರ ಬಂಧಿಸಿದ್ದು, ಎಲ್ಲರನ್ನು ಕುಂದಾಪುರ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಶ್ರೀಕಾಂತ್ ಮುಂದೆ ಹಾಜರು ಪಡಿಸಲಾಗಿತ್ತು. ಅಭಿಷೇಕ್ ಪಾಲನ್, ರೊಟ್ಟಿ ನಾಗರಾಜ್, ಸಂತೋಷ್ ಕುಂದರ್, ಪ್ರಣವ್ ರಾವ್, ಪವನ್ ಅಮೀನ್, ವಿರೇಂದ್ರ ಆಚಾರ್ಯ, ರಿತೀಶ್ ಕರ್ಕೇರಾ, ಶಂಕರ ಮೊಗವೀರ, ರಾಜಶೇಖರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದ ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಯಾಗಿದ್ದ ಎಚ್.ರಾಮಚಂದ್ರ ಭಟ್ (72) ಅಲ್ಪ ಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾಡಿನ ಹಲವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಯ ಪದಾಧಿಕಾರಿಯಾಗಿ ದುಡಿದಿದ್ದ ಅವರ ಅಧಿಕಾರವಧಿಯಲ್ಲಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕಂಡಿತ್ತು. ತಂದೆ ಗಣಪಯ್ಯ ಭಟ್ಟರ ಕಾಲಾನಂತರ ದೇವಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಅವರು ದೇಶಾದ್ಯಾಂತ ಭಕ್ತರನ್ನು ಕ್ಷೇತ್ರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು. ಶ್ರೀ ಸಿದ್ಧಿವಿನಾಯಕ ಶೈಕ್ಷಣಿಕ ಪ್ರತಿಷ್ಠಾನದ ಅಡಿಯಲ್ಲಿ ಐಸಿಎಸ್‌ಇ ಮಾನ್ಯತೆ ಹೊಂದಿರುವ ಆಂಗ್ಲ ಮಾಧ್ಯಮ ವಸತಿ ಶಾಲೆ. ಪ್ರಾಥಮಿಕ ಶಾಲೆ ಹಾಗೂ ಗೋ ಶಾಲೆಯನ್ನು ನಡೆಸುತ್ತಿದ್ದಾರೆ. ಅಪರೂಪದ ಗಿಡಮೂಲಿಕೆಗಳ ರಕ್ಷಣೆಗಾಗಿ ಮೂಲಿಕಾ ವನವನ್ನು ಸ್ಥಾಪಿಸಿದ್ದರು. ಗ್ರಾಮೀಣ ಭಾಗದ ಜನರಿಗಾಗಿ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಹಾಗೂ ವೃತ್ತಿ ಪರ ತರಬೇತಿ ಕೋರ್ಸ್‌ಗಳನ್ನು ಆರಂಭಿಸಬೇಕು ಎನ್ನುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ನವೆಂಬರ್ ೨೦೧೮ ರಲ್ಲಿ ನಡೆಸಿರುವ ಸಿಎ ಪರೀಕ್ಷೆಯಲ್ಲಿ ಮರವಂತೆ ಉಷಾ ಪೂಜಾರಿ ತೇರ್ಗಡೆಯಾಗಿದ್ದಾರೆ. ಅವರು ಮರವಂತೆಯ ನಾಗಮ್ಮ ಮತ್ತು ನರಸಿಂಹ ಪೂಜಾರಿ ಅವರ ಪುತ್ರಿಯಾಗಿದ್ದು, ಪದವಿಯ ಬಳಿಕ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇದನ್ನೂ ಓದಿ: ► ಸಿಎ ಪರೀಕ್ಷೆ ತೇರ್ಗಡೆಯಾದ ಉಷಾ ಪೂಜಾರಿಗೆ ಸನ್ಮಾನ – https://kundapraa.com/?p=31254 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೆಯ ತರಗತಿಯ ವಿದ್ಯಾರ್ಥಿನಿ ಫಾತಿಮಥುಲ್ ಶಹನಃ ರಾಜ್ಯಮಟ್ಟದ ನವೋದಯ ಕನ್ನಡ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು. ಗಂಗೊಳ್ಳಿಯ ಅಬ್ದುಲ್ ಸಲಾಂ ಮತ್ತು ಸುನೀರಾ ದಂಪತಿಯ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಒಂದು ಅಂತರಾಷ್ಟ್ರೀಯ ಸಂಸ್ಥೆ ಪ್ರಪಂಚದಾದ್ಯಂತ ಯಾವುದೇ ಅಡೆತಡೆಯಿಲ್ಲದೇ ವಿವಿಧ ರಂಗಗಳಲ್ಲಿ ಸೇವೆಯನ್ನು ಜನತೆಗೆ ನೀಡುತ್ತಿದೆ. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಈ ಸಂಸ್ಥೆ ಕಾರ್ಯವೆಸಗುತ್ತಿದೆ ಎಂದು 371ಸಿ ಲಯನ್ಸ್ ಜಿಲ್ಲೆಯಲ್ಲಿ ಕುಂದಾಪುರ ಕ್ಲಬ್ ಅತ್ಯಂತ ಶಿಸ್ತಿನ ಹಾಗೂ ನಾಯಕತ್ವವನ್ನು ಹೊಂದಿರುವ ಕ್ಲಬ್ ಕಳೆದ 4 ದಶಕಗಳಿಂದ ಅಮೂಲ್ಯವಾದ ಸೇವೆಯನ್ನು ಈ ಭಾಗದ ಜನತೆಗೆ ನೀಡುತ್ತಾ ಬಂದಿದೆ ಎಂದು ಲಯನ್ ಜಿಲ್ಲೆ 312ಸಿ ಯ ಜಿಲ್ಲಾ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ ಕುಂದಾಪುರ ಲಯನ್ಸ್ ಕ್ಲಬಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಡಾ. ಶಿವಕುಮಾರರವರು ವಹಿಸಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಎಸ್. ಓ. ಕಕೆರ ಕ್ಲಬಿನ ಚಟುವಟಿಕೆಯನ್ನು ಕೊಂಡಾಡಿದರು. ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ ಮದ್ಯಾಹ್ನದ ಭೋಜನ ನಿಧಿಗೆ ರೂ. ೨೫೦೦೦/- ನ್ನು ನೀಡಲಾಯಿತು. ಸುಶ್ರತಾ ಮತ್ತು ಬಾಬಣ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ದಿವಾಕರ ಎನ್.ಖಾರ್ವಿ ಆಯ್ಕೆಯಾಗಿದ್ದಾರೆ. ಎಚ್.ಗಣೇಶ ಕಾಮತ್ (ಗೌರವಾಧ್ಯಕ್ಷ), ಶೇಖರ ಜಿ., ಸತೀಶ ಜಿ., ಬಿ.ಪ್ರಕಾಶ ಶೆಣೈ, ಬಿ.ರಾಘವೇಂದ್ರ ಪೈ (ಉಪಾಧ್ಯಕ್ಷರು), ಬಿ.ಲಕ್ಷ್ಮೀಕಾಂತ ಮಡಿವಾಳ (ಪ್ರಧಾನ ಕಾರ್ಯದರ್ಶಿ), ಭಾಸ್ಕರ ಎಚ್.ಜಿ. (ಕಾರ್ಯದರ್ಶಿ), ಟಿ.ಶ್ರೀಕರ ಶೆಣೈ, ಪ್ರಕಾಶ ಪಡಿಯಾರ್, ಕೃಷ್ಣಾನಂದ ಮಡಿವಾಳ, ನಾಗರಾಜ ಕಲೈಕಾರ್, ಮಹಮ್ಮದ್ ಹುಸೇನ್, ಪಾಂಡುರಂಗ ಮಡಿವಾಳ (ಜತೆ ಕಾರ್ಯದರ್ಶಿಗಳು), ಜಿ.ಸುದನೇಶ ಶ್ಯಾನುಭಾಗ್ (ಖಜಾಂಚಿ) ಇತರ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಹತ್ತನೇ ವರ್ಷದ ಬ್ರಹ್ಮರಥೋತ್ಸವದ ಅಂಗವಾಗಿ ಕವಿತಾ ಶೆಣೈ ಮಂಗಳೂರು ಇವರಿಂದ ಭಜನ ಸಂಧ್ಯಾ ಕಾರ್ಯಕ್ರಮ ಜರಗಿತು. ತಬಲಾದಲ್ಲಿ ವಿಘ್ನೇಶ ಕಾಮತ್ ಕೋಟೇಶ್ವರ ಹಾಗೂ ಹಾರ್ಮೋನಿಯಂನಲ್ಲಿ ನಾಗರಾಜ ಶೆಣೈ ಕಾರ್ಕಳ ಸಹಕರಿಸಿದರು. ದೇವಳದ ಧರ್ಮದರ್ಶಿಗಳು, ಊರ ಪರ ಊರಿನ ಭಜಕರು, ಕುಳಾವಿಗಳು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಾಕುಹಿತ್ಲು ಫ್ರೆಂಡ್ಸ್ ಗಂಗೊಳ್ಳಿ ಇವರ ವತಿಯಿಂದ ಮಂಗಳ ಖಾರ್ವಿ, ಮನೋಜ ಪೂಜಾರಿ, ಉತ್ತ ಶ್ರೀನಿವಾಸ ಖಾರ್ವಿ, ಪ್ರರ್ವಿಣ ಪೂಜಾರಿ ಇವರ ಸ್ಮರಣಾರ್ಥ ನಡೆದ ಕಬಡ್ಡಿ ಪಂದ್ಯದಿಂದ ಬಾಕಿ ಉಳಿದ ಮೊತ್ತವನ್ನು ೪ ಕುಟುಂಬಗಳಿಗೆ ಸಮನಾಗಿ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ವಾಂಟು ಚಂದ್ರ ಖಾರ್ವಿ ಅವರ ಮೂಲಕ ಹಸ್ತಾಂತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಸಂದೀಪ್ ಗಂಗೋಳ್ಳಿ, ಸುನೀಲ್ ಖಾರ್ವಿ, ಸಂದೇಶ ಖಾರ್ವಿ ಉಪಸ್ಥಿತರಿದ್ದರು
