ಜಗತ್ತಿನ ಉದ್ದಗಲಕ್ಕೂ ಲಯನ್ಸ್ ಸಂಸ್ಥೆ ಅತ್ಯುತ್ತಮ ಸೇವೆ ನೀಡುತ್ತಿದೆ: ಡಾ. ತಲ್ಲೂರು ಶಿವರಾಮ ಶೆಟ್ಟಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಯನ್ಸ್ ಒಂದು ಅಂತರಾಷ್ಟ್ರೀಯ ಸಂಸ್ಥೆ ಪ್ರಪಂಚದಾದ್ಯಂತ ಯಾವುದೇ ಅಡೆತಡೆಯಿಲ್ಲದೇ ವಿವಿಧ ರಂಗಗಳಲ್ಲಿ ಸೇವೆಯನ್ನು ಜನತೆಗೆ ನೀಡುತ್ತಿದೆ. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಈ ಸಂಸ್ಥೆ ಕಾರ್ಯವೆಸಗುತ್ತಿದೆ ಎಂದು 371ಸಿ ಲಯನ್ಸ್ ಜಿಲ್ಲೆಯಲ್ಲಿ ಕುಂದಾಪುರ ಕ್ಲಬ್ ಅತ್ಯಂತ ಶಿಸ್ತಿನ ಹಾಗೂ ನಾಯಕತ್ವವನ್ನು ಹೊಂದಿರುವ ಕ್ಲಬ್ ಕಳೆದ 4 ದಶಕಗಳಿಂದ ಅಮೂಲ್ಯವಾದ ಸೇವೆಯನ್ನು ಈ ಭಾಗದ ಜನತೆಗೆ ನೀಡುತ್ತಾ ಬಂದಿದೆ ಎಂದು ಲಯನ್ ಜಿಲ್ಲೆ 312ಸಿ ಯ ಜಿಲ್ಲಾ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ ಕುಂದಾಪುರ ಲಯನ್ಸ್ ಕ್ಲಬಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು.

Call us

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಡಾ. ಶಿವಕುಮಾರರವರು ವಹಿಸಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಎಸ್. ಓ. ಕಕೆರ ಕ್ಲಬಿನ ಚಟುವಟಿಕೆಯನ್ನು ಕೊಂಡಾಡಿದರು. ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ ಮದ್ಯಾಹ್ನದ ಭೋಜನ ನಿಧಿಗೆ ರೂ. ೨೫೦೦೦/- ನ್ನು ನೀಡಲಾಯಿತು. ಸುಶ್ರತಾ ಮತ್ತು ಬಾಬಣ್ಣ ಎನ್ನುವವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಗುರುರಾಜ ಪೂಜಾರಿ ಎಂಬ ಅಂಗವಿಕಲ ಹುಡುಗನಿಗೆ ಟ್ರೈಸಿಕಲನ್ನು ಲಯನ್ ದಯಾನಂದ ಶೆಟ್ಟಿ ಹಾಗೂ ಲಯನ್ ಸಂತೋಷ ಕುಮಾರ ಶೆಟ್ಟಿಯವರ ನೆರೆವಿನಿಂದ ನೀಡಲಾಯಿತು. ಎಚ್.ಐ.ವಿ ಪೀಡಿತ ಮಕ್ಕಳಿಗೆ ಪ್ರೋಟೀನ್‌ಯುಕ್ತ ಆಹಾರ ಮತ್ತಿತರ ಕಿಟ್‌ಗಳನ್ನು ರೆಡ್‌ಕ್ರಾಸ್ ಕುಂದಾಪುರದ ಚೆಯರ್‌ಮ್ಯಾನ್ ಶ್ರೀ. ಜಯಕರ ಶೆಟ್ಟಿಯವರ ಜಂಟಿ ಸಹಯೋಗದೊಂದಿಗೆ ನೀಡಲಾಯಿತು.

ಪರಿಸರ ಸಂರಕ್ಷಣೆ ಕುರಿತು ವಿವಿಧ ಭಾಗಗಳಲ್ಲಿ ಹಾಕಲು ಉದ್ದೇಶಿಸಿರುವ ಬೋರ್ಡಗಳನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಪಿ.ಡಿ.ಜಿ ಲಯನ್ ಪ್ರಕಾಶ್ ಟಿ. ಸೋನ್ಸ್ ಪಿ.ಡಿ.ಜಿ. ಲಯನ್ ಕೆ. ಜಯಕರ ಶೆಟ್ಟಿ ಜಿಲ್ಲಾ ರಾಯಭಾರಿ ಲಯನ್ ಎಂಜಿನೀಯರ್ ರತ್ನಾಕರ ಶೆಟ್ಟಿ ವಲಯ ಅಧ್ಯಕ್ಷ ಲಯನ್ ವೇಣುಗೋಪಾಲ ಶೆಟ್ಟಿ ಲಯನ್ ಗಿರಿಜಾ ಶಿವರಾಮ ಶೆಟ್ಟಿ ಕೋಶಾಧಿಕಾರಿ ಲಯನ್ ರಾಧಾಕೃಷ್ಣ ನಾಯಕ್ರವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಲಯನ್ ನವೀನ ಕುಮಾರ ಶೆಟ್ಟಿ ವಂದಿಸಿದರು. ಲಯನ್ ರಮಾನಂದರವರು ಗವರ್ನರನ್ನು ಪರಿಚಯಿಸಿದರು. ಲಯನ್ ಪ್ರಕಾಶ್ ಬೆಟ್ಟಿನ್ ರವರು ಪ್ರಶಂಸ ಪತ್ರವನ್ನು ವಾಚಿಸಿದರು.

Leave a Reply