Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬಸ್ರೂರು ಶಾರದಾ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕುಸ್ತಿ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ಬಿ. ಎನ್. ಶ್ರೇಯಸ್ 79 ಕೆ.ಜಿ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ತರಬೇತಿ ನೀಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಂಬೈ: ಸಾಯಿ ಲೀಲಾ ಕ್ಯಾಟರರ‍್ಸ್‌ನ ಹೊಸ ಉತ್ಪನ್ನ ಸ್ವೇಝೋನ್ ಚಾಕಲೇಟ್‌ ಉತ್ಪಾದನಾ ಘಟಕವು ಇಲ್ಲಿನ ಪೂರ್ವ ಅಂಧೇರಿ ಸಕಿವಿಹಾರ್ ರಸ್ತೆಯ ಅನ್ಸಾ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಲೋಕಾರ್ಪಣೆಗೊಂಡಿತು. ನೂತನ ಉತ್ಪನ್ನದ ಕಛೇರಿಯನ್ನು ಉದ್ಯಮಿ ಸುಧಾಕರ ಕಸ್ತೂರಿ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಸಾಯಿ ಕೇರ್ ಲಾಜಿಸ್ಟಿಕ್ಸ್‌ನ ಸುರೇಂದ್ರ ಪೂಜಾರಿ, ಸಾನ್ವಿ ಸ್ಟಾರ್ ಹಾಸ್ಪಿಟಾಲಿಟಿಯ ಸಂತೋಷ್ ಶೆಟ್ಟಿ, ಗೋವಾ ರಚನಾ ಗ್ರಾಫಿಕ್ಸ್‌ನ ಸಂಜಯ್ ಉಪಾಧ್ಯ, ಯಶವಂತ್ ಪೂಜಾರಿ, ಮಹಾಬಲ ದೇವಾಡಿಗ, ಜಯರಾಮ್ ಕೆ. ಪೂಜಾರಿ, ಹರೀಶ್ ಮೆಂಡನ್, ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಯಿ ಲೀಲಾ ಕ್ಯಾಟರರ‍್ಸ್‌ನ ನಿರ್ದೇಶಕ, ಬೈಂದೂರು ಮೂಲದ ಮಂಜುನಾಥ ಕೆ. ಪೂಜಾರಿ ಅವರು ಸರ್ವರನ್ನು ಸ್ವಾಗತಿಸಿಕೊಂಡರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಸಿಸಿಐ ವಿಧಿಸಿರುವ ನಿರ್ಬಂಧ ಶೀಘ್ರವೇ ತೆರವುಗೊಳಿಸಲಿದ್ದು ಬಳಿಕ ಕ್ರಿಕೆಟ್‌ಗೆ ವಾಪಾಸಾಗಲಿದ್ದೇನೆ ಎಂದು ಕ್ರಿಕೆಟಿಗ ಹಾಗೂ ನಟ ಎಸ್. ಶ್ರೀಶಾಂತ್ ಹೇಳಿದರು. ಅವರು ಬೈಂದೂರು ರುಪೀ ಮಾಲ್ ಉದ್ಘಾಟನೆಯ ಬಳಿಕ ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಂದಾಪ್ರ ಡಾಟ್ ಕಾಂ ಪ್ರಶ್ನೆಗೆ ಉತ್ತರಿಸಿದ ಪ್ರತಿಕ್ರಿಯಿಸಿದ ಆರು ವರ್ಷಗಳಿಂದ ಬದುಕಿನ ಭಾಗವಾಗಿದ್ದ ಕ್ರಿಕೆಟ್‌ನಿಂದ ದೂರವಿದ್ದೇನೆ. ಆದರೆ ಮತ್ತೆ ಕ್ರಿಕೆಟ್ ಆಟಲಿರುವ ಬಗ್ಗೆ ಸಂತಸವಿದೆ. 2012ರಲ್ಲಿ ಕೇರಳ ರಣಜಿ ಮತ್ತು ಅನ್ಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲಿದ್ದು ಫೆಬ್ರವರಿಯಿಂದಲೇ ಪ್ರಾಕ್ಟಿಸ್‌ನಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದರು. ಕನ್ನಡ ಚಿತ್ರರಂಗದಲ್ಲಿ ನಟಸುತ್ತಿರುವ ಬಗ್ಗೆ ಮಾತನಾಡಿ ಕೆಂಪೆಗೌಡ -2 ಚಿತ್ರ ನನಗೆ ಚಿತ್ರರಂಗದಲ್ಲಿ ಬದ್ರ ತಳಪಾಯ ಹಾಕಿಕೊಟ್ಟಿದೆ. ಈಗ ಧೂಮ್ ಅಗೇನ್ ಚಿತ್ರದಲ್ಲಿ ನಡೆಸುತ್ತಿದ್ದೇನೆ. ಇನ್ನು ಕೆಲವು ಸಿನೆಮಾಗಳಲ್ಲಿ ನಟಿಸಲು ಆಹ್ವಾನ ಬಂದಿದೆ. ಬೆಂಗಳೂರು ಈಗ ನನ್ನ ಎರಡನೇ ಮನೆಯಾಗಿದೆ. ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದೇನೆ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದ್ದು, ತಂಡದ ಮೂರು ವಿದ್ಯಾರ್ಥಿನಿಯರು ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ತಂಡದ ದಿವ್ಯ ದ್ವಿತೀಯ ವಾಣಿಜ್ಯ ವಿಭಾಗ, ದೀಪ್ತಿ ದ್ವಿತೀಯ ವಾಣಿಜ್ಯ ವಿಭಾಗ ಹಾಗೂ ಸ್ವಾತಿ ಪ್ರಥಮ ವಾಣಿಜ್ಯ ವಿಭಾಗ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದವರು. ವಿದ್ಯಾರ್ಥಿನಿಯರಿಗೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಗೂಡ್ಸ್ ಲಾರಿಯ ಹಿಂಭಾಗದಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬಿಸ್ಕೆಟ್ ಭಸ್ಮವಾದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ನಡೆಯಿದೆ. ಸಿದ್ದಾಪುರ ಮಾರ್ಗದಲ್ಲಿ ತೆರಳುತ್ತಿದ್ದ ಲಾರಿ ಹಿಂಭಾಗದ ಲೈಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದೆ. ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಿಗೆ ಇದುವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಗುರುವಾರ ಕುಂದಾಪುರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಕುಂದಾಪುರ ತಹಶೀಲ್ದಾರರಿಗೆ ಮನವಿ ನೀಡಿ ಸರ್ಕಾರಕ್ಕೆ ಈಗೀಂದಗಲೇ ಪರಿಹಾರ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಆಗ್ರಹಿಸಲಾಯಿತು. ಪ್ರವಾಹದಿಂದ ಲಕ್ಷಾಂತರ ಜನಸಾಮಾನ್ಯರ ಮನೆಗಳು ಹಾಗೂ ಬದುಕು ನೆಲಕಚ್ಚಿದೆ. ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆಪರೇಶನ್ ಕಮಲಕ್ಕೆ ಸಾವಿರ ಕೋಟಿ ಖರ್ಚು ಮಾಡುವ ಬಿಜೆಪಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅವರದ್ದೆ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಈ ತನಕ ಬಿಡಿಗಾಸು ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಚಂದ್ರಯಾನ ವಿಕ್ಷಣೆಗೆ ರಾಜ್ಯಕ್ಕೆ ಬಂದಿದ್ದ ಪ್ರದಾನಿ ಮೋದಿ ಕಾಟಾಚಾರಕ್ಕೂ ನೆರೆಪೀಡಿತ ಪ್ರದೇಶದ ವೀಕ್ಷಣೆ ಮಾಡಿಲ್ಲ. ನೆರೆಪೀಡಿತ ಪ್ರದೇಶದಲ್ಲಿ ಮಾನವೀಯ ನೆಲೆಯಲ್ಲಿ ಆಹಾರ ಸಾಮಾಗ್ರಿಗಳ ವಿತರಣೆ ಕೂಡಾ ನಡೆಯುತ್ತಿಲ್ಲ. ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಓಡಿದ ಜನರಿಗೆ ಅಕ್ಕಿ ವಿತರಿಸಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ ಹಾಗೂ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪರಿಹಾರ ವಿಳಂಬ ವಿರೋಧಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಬೈಂದೂರು ಬ್ಲಾಕ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ನಡೆಸಿ ಬೈಂದೂರು ತಹಶಿಲ್ದಾರ್ ಬಸಪ್ಪ ಪಿ. ಪೂಜಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್, ಕರ್ನಾಟಕದ ೨೨ ಜಿಲ್ಲೆಗಳಲ್ಲಿ ಭೀಕರ ನೆರೆ ಹಾವಳಿಯ ಪರಿಣಾಮ ಅಪಾರ ಹಾನಿ ಸಂಭವಿಸಿದ್ದರೂ ಸರಕಾರ ಪರಿಹಾರ ನೀಡಲು ವಿಳಂಬ ನೀಡಿ ಅನುಸರಿಸಿ ಸರ್ವಾಧಿಕಾರ ಮೆರೆಯುತ್ತಿದೆ. ತಕ್ಷಣವೇ ನೆರ ಸಂತ್ರಸ್ಥರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ, ಪ್ರಮೀಳಾ ದೇವಾಡಿಗ, ಯಡ್ತರೆ…

Read More

ಸೆ. 13ರಂದು ಇಂದು ’ರುಪೀ ಮಾಲ್’ ಶುಭಾರಂಭ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆರ್. ಎಸ್. ವೆಂಚರ‍್ಸ್ ಪ್ರವರ್ತಿತ ಬೈಂದೂರಿನ ಪ್ರಥಮ ವ್ಯಾಪಾರ ಮಳಿಗೆ ’ರುಪೀ ಮಾಲ್’ ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಕ್ರಿಕೆಟ್ ಆಟಗಾರ ಹಾಗೂ ನಟ ಎಸ್. ಶ್ರೀಶಾಂತ್ ರುಪೀ ಮಾಲ್ ಉದ್ಘಾಟನೆಗೈಯಲಿದ್ದಾರೆ. ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟನೆಗೈಯಲಿದ್ದಾರೆ. ಬೈಂದೂರು ಪ್ಯಾಲೇಸ್‌ನ ಮಾದರಿ ಫ್ಲಾಟ್‌ನ್ನು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಉದ್ಘಾಟಿಸಲಿದಾರೆ. ಕಿಡ್ಸ್ ಝೋನ್‌ನ್ನು ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೂಕಾಂಬು ದೇವಾಡಿಗ ಅವರು ಉದ್ಘಾಟಿಸಲಿದ್ದಾರೆ. ಫ್ಯಾಶನ್ ಸ್ಟೋರನ್ನು ಮಿಸ್ ಸೌತ್ ಇಂಡಿಯಾ 2019 ನಿಕಿತಾ ಥೋಮಸ್ ಅವರು ಉದ್ಘಾಟಿಸಲಿದ್ದಾರೆ. 50,000 ಸ್ವ್ಯಾರ್ ಫೀಟ್ ವಿಸ್ತೀರ್ಣದ ಮಾಲ್‌ನ ಎರಡನೇ ಮಳಿಗೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಕರ್ಯಗಳೊಂದಿಗೆ ಕಿಡ್ಸ್ ಝೋನ್ ಆರಂಭಗೊಳ್ಳಲಿದ್ದು ಮಕ್ಕಳಿಗಾಗಿಯೇ ಕ್ರೀಡಾ ಜಗತ್ತು ತೆರೆದುಕೊಳ್ಳಲಿದೆ. ಬೈಂದೂರು ಹಾಗೂ ಸುತ್ತಲಿನ ನಗರಗಳಲ್ಲಿ ಮೊದಲ ಭಾರಿಗೆ ಈ ಎಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜಿನ 1989ರ ಸಾಲಿನ ಬಿ.ಎಸ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುನಮನ ಕಾರ್ಯಕ್ರಮವನ್ನು ಕಾಲೇಜಿನ ರಾಧಾ ಬಾ ರಂಗ ಮಂದಿರ (ಕೋಯಾಕುಟ್ಟಿ ಹಾಲ್)ನಲ್ಲಿಆಯೋಜಿಸಲಾಗಿತ್ತು. 30 ವರ್ಷಗಳ ಹಿಂದೆ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಸಂಘಟನೆಗೊಂಡು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮೊದಲಿಗೆ ಗುರುನಮನ ಕಾರ್ಯಕ್ರಮ ನೇರವೇರಿತು. ಅಂದಿನ ಪ್ರಾಂಶುಪಾಲರಾದ ಪ್ರೊ. ಎ. ನಾರಾಯಣ ಆಚಾರ್ಯರಿಗೆ ಮೊದಲು ಗೌರವಿಸಿ, ’ಗುರುವಂದನೆ’ ಸಲ್ಲಿಸಿದರು. ನಂತರ ಭಾಷಾ ವಿಭಾಗಗಳನ್ನು ಒಳಗೊಂಡು ವಿಜ್ಞಾನದ ಸುಮಾರು 19 ಮಂದಿ ಗುರುಗಳಿಗೆ ’ಗುರುನಮನ’ ಸಲ್ಲಿಸಲಾಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಎ. ನಾರಾಯಣ ಆಚಾರ್ಯ, ವಿಶ್ಯಸ್ಥಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ ಭಾಗವಹಿಸಿದ್ದರು. ದುಬೈನ ಫಾರ್ಚೂನ್ ಗ್ರೂಫ್‌ನ ಚೇರ್‌ಮನ್ ಹಾಗೂ ಉದ್ಯಮಿ ಕೆ. ಪ್ರವೀಣ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಬಾಲಕಿಯರ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ದ್ವಿತೀಯ ಸ್ಥಾನ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ಹಾಗೂ ಉಪನ್ಯಾಸಕರಾದ ನಾಗರಾಜ್ ಅಡಿಗ ಮತ್ತು ಹಳೆ ವಿದ್ಯಾರ್ಥಿ ಪ್ರದೀಪ್ ಭಟ್ ಇದ್ದರು.

Read More