ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ ಹಾಗೂ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪರಿಹಾರ ವಿಳಂಬ ವಿರೋಧಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಬೈಂದೂರು ಬ್ಲಾಕ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ನಡೆಸಿ ಬೈಂದೂರು ತಹಶಿಲ್ದಾರ್ ಬಸಪ್ಪ ಪಿ. ಪೂಜಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್, ಕರ್ನಾಟಕದ ೨೨ ಜಿಲ್ಲೆಗಳಲ್ಲಿ ಭೀಕರ ನೆರೆ ಹಾವಳಿಯ ಪರಿಣಾಮ ಅಪಾರ ಹಾನಿ ಸಂಭವಿಸಿದ್ದರೂ ಸರಕಾರ ಪರಿಹಾರ ನೀಡಲು ವಿಳಂಬ ನೀಡಿ ಅನುಸರಿಸಿ ಸರ್ವಾಧಿಕಾರ ಮೆರೆಯುತ್ತಿದೆ. ತಕ್ಷಣವೇ ನೆರ ಸಂತ್ರಸ್ಥರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ, ಪ್ರಮೀಳಾ ದೇವಾಡಿಗ, ಯಡ್ತರೆ ಪಂಚಾಯತ್ ಅಧ್ಯಕ್ಷೆ ಮುಕಾಂಬು ದೇವಾಡಿಗ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಮೋಹನ್ ಪೂಜಾರಿ, ವಾಸುದೇವ ಪೂಜಾರಿ, ರಾಜ್ಯ ಹಿಂದುಳಿದ ವರ್ಗ ಕಾರ್ಯದರ್ಶಿ ಸುಬ್ರಹ್ಮಣ್ಯ ಪೂಜಾರಿ, ಗಣೇಶ ಪೂಜಾರಿ, ಕಾರ್ಮಿಕ ಘಟಕ ಅಧ್ಯಕ್ಷ ಮಂಜುನಾಥ ಪೂಜಾರಿ, ಮುಖಂಡರುಗಳಾದ ನರಸಿಂಹ ದೇವಾಡಿಗ, ಚಿಕ್ಕು ಪೂಜಾರಿ, ಸುರೇಶ ಹೋಬಳಿದಾರ್, ನಾರಾಯಣ ಖಾರ್ವಿ, ವಿನಾಯಕ್ ರಾವ್, ದೀಪಕ್ ನಾವುಂದ, ವೀರಭದ್ರ ಗಾಣಿಗ, ಮಾಣಿಕ್ಯ, ಉಮೇಶ ದೇವಾಡಿಗ, ಸುರೇಶ ಬೆಸ್ಕೂರು, ರಾಜೇಶ ಕಂಬದಕೋಣೆ, ನಾಗೇಶ ಖಾರ್ವಿ, ಹರೀಶ್ ಮರವಂತೆ ಸೆರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.