Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕುಂದಾಪುರ ಹಾಗೂ ಬೈಂದೂರು ವಲಯದ ೭ ಮಂದಿ ಶಿಕ್ಷಕರನ್ನು ರೋಟರಿ ಜಿಲ್ಲೆ 3182, ವಲಯ 1ರ ವತಿಯಿಂದ ರೋಟರಿ ವಲಯದ 8 ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಆತಿಥ್ಯದಲ್ಲಿ ನಡೆದ ವಲಯ ಸಾಕ್ಷರತಾ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಜಿಲ್ಲಾ ಲೀಟರಸಿ ಚೇರ್‌ಮನ್ ಕೆ.ಎಸ್. ಸುಬ್ರಮಣ್ಯ ಬಾಸ್ರಿ ಹಾಗೂ ವೈಸ್ ಚೇರ್‌ಮನ್ ಟಿ. ಬಾಲಚಂದ್ರ ಶೆಟ್ಟಿ ಅವರು ಪ್ರಶಸ್ತಿ ವಿಜೇತ ಶಿಕ್ಷಕರಾದ ಸಂತೋಷ್ ಕುಮಾರ ಶೆಟ್ಟಿ, ಚಂದ್ರ ಎನ್. ಬಿಲ್ಲವ, ಶ್ರೀನಿವಾಸ, ಕೃಷ್ಣಮೂರ್ತಿ ಪಿ., ಸುರೇಶ್ ಶೆಟ್ಟಿ, ಶೇಖರ್ ಗಾಣಿಗ ಮತ್ತು ಗಣೇಶ ಹೇರಳೆ ಅವರನ್ನು ಸನ್ಮಾನಿಸಿ ಗೌರವಿಸಿದರು. ರೋಟರಿ ಗಂಗೊಳ್ಳಿ ಅಧ್ಯಕ್ಷ ರಾಜೇಶ್ ಎಂ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ, ತರಬೇತುದಾರ ಸತೀಶ್ ಶೇರುಗಾರ್, ಸಲಹೆಗಾರ ಕೆ. ಕೆ. ಕಾಂಚನ, ವಲಯ ಸೇನಾನಿಗಳಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತರು ಬದುಕಿದ ರೀತಿ, ಅವರು ಜೀವಿತಾವಧಿ ನಂತರ ಬಿಟ್ಟು ಹೋದ ಹೆಜ್ಜೆಗುರುತುಗಳು ಮುಂದಿನ ಜನಾಂಗಕ್ಕೆ ದಾರಿ ದೀಪವಾಗಲಿ, ಅವರ ನೆನಪು ಶಾಶ್ವತವಾಗುವ ನಿಟ್ಟಿನಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್ ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತಿರುವುದು ಸಂಭ್ರಮದ ವಿಷಯ ಎಂದು ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹಿತ್ಯಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದಲ್ಲಿ ನುಡಿ ಚೇತನದಲ್ಲಿ ಮಾತನಾಡಿದರು. ಕಾರಂತ ಸಮಾಧಿ ನಿರ್ಮಾಣವಾಗಲಿ:ಕಾರಂತರು ನಮ್ಮೊಳಗಿನ ಮಹಾನ್ ಚೈತನ್ಯ ಅವರ ಅಂತ್ಯ ಸಂಸ್ಕಾರವಾದ ಸ್ಥಳದಲ್ಲಿ ಸಮಾಧಿ ನಿರ್ಮಾಣವಾಗಿ ಕಾರಂತ ಅಭಿಮಾನಿ-ಸಾಹಿತ್ಯ ಪ್ರೇಮಿಗಳಿಗೆ ನೋಡುವ ಭಾಗ್ಯ ಸಿಗಲಿ ಎಂದು ಹೇಳಿದರು. ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಸರಕಾರದ ಸ್ವಚ್ಚ ಭಾರತ್ ಮಿಷನ್ ಟ್ವಿಟರ್ ಖಾತೆಯಲ್ಲಿ ಗಾಂಧಿ ಜಯಂತಿಯ ದಿನದಂದು ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಪಂನ ಕಸ ವಿಲೇವಾರಿ ಪೋಟೋ ಪ್ರಕಟಗೊಂಡಿರುವುದು ಗಮನ ಸೆಳೆದಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ದೇಶದಲ್ಲಿ ಸ್ವಚ್ಛ ಭಾರತ್ ಮಿಷನ್ ೨೦೨೧ರಲ್ಲಿ ೪೩,೬೧೩ ಗ್ರಾಪಂಗಳು ಪ್ಲಾಸ್ಟಿಕ್ ಮಕ್ತಗ್ರಾಮವಾಗಿದೆ ಎಂದು ಉಲ್ಲೇಕಿಸಿ ಅದರಡಿ ವಂಡ್ಸೆ ಗ್ರಾಮದ ಪೋಟೋ ಅಳವಡಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ಗಣ್ಯರು ಲೈಕ್ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಎಸ್‌ಎಲ್‌ಆರ್‌ಎಂ ಘಟಕ ಆರಂಬಿಸಿದ್ದ ಹೆಗ್ಗಳಿಕೆ ವಂಡ್ಸೆ ಗ್ರಾಮ ಪಂಚಾಯತಿಯದ್ದಾಗಿದೆ. ವೇಸ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಹೊಂದಿದೆ. ಒಣ ಕಸ, ಹಸಿ ಕಸ ಪ್ರತ್ಯೇಕಿಸಿ, ಅದರಿಂದ ಬರುವ ಲಾಭದಲ್ಲಿ ನಡೆಯುತ್ತಿರುವ ಏಕೈಕ ಪೂರ್ಣ ಪ್ರಮಾಣದ ಘಟಕ ನಮ್ಮದು. ದೇಶದ ನಾನಾ ಕಡೆಯ ತಜ್ಞರು ಘಟಕಕ್ಕೆ ಭೇಟಿ ನೀಡಿದ್ದಾರೆ. ಗಾಂಧಿ ಜಯಂತಿಯಂದು ಸ್ವಚ್ಛ ಭಾರತ್ ಟ್ವಿಟರ್ ಖಾತೆಯಲ್ಲಿ ವಂಡ್ಸೆ ಗ್ರಾಪಂನ ಪೋಟೋ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಳೆಅಳಿವೆಯಿಂದ ಕೋಟೇಶ್ವರ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಸಂಜೆ ಕಿನಾರಾ ಬೀಚ್ ರೋಡಿನ ಪೋಸ್ಟ್ ಆಫೀಸ್ ಬಳಿ ನಡೆದಿದೆ. ಬೀಜಾಡಿ ಗ್ರಾಮದ ನಿವಾಸಿ ಬೈಕ್ ಸವಾರ ವಿಜಯೇಂದ್ರ ಪೂಜಾರಿ ಮೃತ ದುರ್ದೈವಿ. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ವಿಜಯೇಂದ್ರ ಅವರು ಮಧ್ಯಾಹ್ನ ಮನೆಗೆ ಬಂದಿದ್ದು ಸಂಜೆ ಮರಳಿ ಕಛೇರಿಗೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ. ಕುಟುಂಬದಲ್ಲಿ ಹಿರಿಯ ಮಗನಾಗಿದ್ದ ವಿಜಯೇಂದ್ರ ಅವರು ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಮಡದಿ ೭ ತಿಂಗಳ ಗರ್ಭಿಣಿಯಾಗಿದ್ದಾರೆ. ಮೃತರು ತಂದೆ ತಾಯಿ, ಪತ್ನಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Read More

ತಾಯಿಯ ಉದರದಿಂದ ಹೊರಬಂದು ಪ್ರಪಂಚಕ್ಕೆ ಇದಿರುಗೊಳ್ಳುವ ಪ್ರತಿ ಮಗುವಿಗು ತಾಯಿಯ ಹಾಲೇ ಅಮೃತಪಾನ. ಮಗು ದೊಡ್ಡದಾಗುವ ತನಕವೂ ಎಲ್ಲಾ ಹೊತ್ತಿನಲ್ಲಿಯೂ ಅಗತ್ಯವಿರುವಷ್ಟು ಎದೆಹಾಲನ್ನು ತಾಯಿ ಹೊಂದಿರಬೇಕಾಗುತ್ತದೆ. ಕೆಲವರಿಗೆ ಎದೆಹಾಲಿನ ಪ್ರಮಾಣ ಕಡಿಮೆ ಇರುತ್ತದೆ. ಹಾಲಿನ ಪ್ರಮಾಣವು ಹೆಚ್ಚಾಗಬೇಕು. ಅದರಲ್ಲಿ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳು ಹೇರಳವಾಗಿರಬೇಕು ಎನ್ನುವುದಾದರೆ ಮೊದಲು ಆಹಾರ ಕ್ರಮದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳುವುದು ಅಗತ್ಯ. ಮಗು ಕೇವಲ ತಾಯಿಯ ಎದೆಹಾಲಿಗೆ ಅವಲಂಭಿತವಾಗಿರುವುದರಿಂದ, ತಾಯಿ ಸೇವಿಸುವ ಆಹಾರದ ಗುಣಗಳು ಹಾಲಿನ ಮುಖಾಂತರ ಮಗುವನ್ನು ತಲುಪುತ್ತದೆ. ಮಗುವಿಗೆ ಹಸಿವಾದ ಸಂದರ್ಭದಲ್ಲೆಲ್ಲಾ ತಾಯಿಯ ಎದೆ ಹಾಲು ಧಾರಾಳವಾಗಿ ಸಿಗುವಂತಾಗಬೇಕೆಂದರೆ ಕೆಲವು ವಿಶೇಷ ಆಹಾರವನ್ನು ಸೇವಿಸಬೇಕು. ಅವು ಯಾವುವು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಓಟ್ ಮೀಲ್:ಓಟ್ ಮೀಲ್ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಿ ಆರೋಗ್ಯಕರ ರಕ್ತದೊತ್ತಡವನ್ನು ನಿರ್ವಹಿಸುವುದು. ಇದೊಂದು ಆರೋಗ್ಯ ಪೂರ್ಣ ಆಹಾರ. ಇದು ತಾಯಿಯ ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಹಾಲಿನ ಉತ್ಪಾದನೆಗೆ ಸಹಾಯಮಾಡುವ ಆಕ್ಸಿಟೋಸಿನ್ ಹಾರ್ಮೋನ್ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕೋಡಿ ಬ್ಯಾರೀಸ್ ಬ್ಯಾರೀಸ್ ಶಿಕ್ಷ ಮತ್ತು ಸುರಕ್ಷಾ ಫೌಂಡೇಶನ್‌ನಿಂದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಬ್ಯಾರೀಸ್ ಸಂಸ್ಥೆಗಳ ಸಿಬ್ಬಂದಿಯ ಮಕ್ಕಳ ವಿದ್ಯಾಭಾಸಕ್ಕಾಗಿ ಪ್ರತಿ ವರ್ಷ ಕೊಡಮಾಡುವ ಸಹಾಯ ಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾರೀಸ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ದೋಮ ಚಂದ್ರಶೇಖರ್ ಅವರು “ಗಾಂಧಿ ಜಯಂತಿ ಆಚರಣೆಯ ಸಂಧರ್ಭದಲ್ಲಿ ನಡೆದ ಈ ಸಹಾಯ ಧನ ವಿತರಣೆ ಬಹಳ ಔಚಿತ್ಯಪೂರ್ಣವಾದುದು ಎಂದು ಹೇಳುತ್ತಾ ಗಾಂಧೀಜಿಯವರ ಶಿಕ್ಷಣದ ಕಲ್ಪನೆಯ ಕುರಿತು ಮಾತನಾಡಿದರು. ಧೀಮಂತ ನಾಯಕ ಲಾಲ್ ಬಹುದ್ದೂರ್ ಶಾಸ್ತ್ರೀ ಯವರನ್ನು ನೆನಪಿಸಿಕೊಳ್ಳುತ್ತಾ, ಇಂತಹ ಅಪೂರ್ವ ಮಹಾನ್ ವ್ಯಕ್ತಿಗಳ ಚರಿತ್ರೆ ಓದುವ ಹವ್ಯಾಸವನ್ನು ಬೆಳೆಯಿಸಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಅಬ್ದುಲ್ ರೆಹಮಾನ್ ಸಹಾಯ ಧನವನ್ನು ವಿತರಿಸಿ ಗಾಂಧೀಜಿ ಮತ್ತು ಇತರ ನಾಯಕರ ಹೋರಾಟದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಿತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ನಮ್ಮ ದೇಶವನ್ನು ಕಟ್ಟೋಣ ಎಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಮ್ಮಾಡಿ ಜನತಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಾದ ಶಂಕರ ಪಿ. ಹೆಚ್, ಶ್ರೀಧರ ರಾವ್ ಹಾಗೂ ದಾನಿಗಳಾದ ಬಾಲ್ತು ಲೋಬೊ ಅವರು ನೀಡಿದ ಸಮವಸ್ತ್ರ ವಿತರಣೆ ಹಾಗೂ ನೋಟ್ಸ್ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ. ವಿ. ವಿ. ಮಂಡಳಿ ರಿ. ಹೆಮ್ಮಾಡಿ ಇದರ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಮವಸ್ತ್ರ ಮತ್ತು ನೋಟ್ಸ್ ಪುಸ್ತಕ ನೀಡಿದ ದಾನಿಗಳಿಗೆ ಗೌರವಿಸಿದರು. ಈ ಸಂರ್ಭ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಖ್ಯೋಪಾಧ್ಯಾಯರಾದ ಮಂಜು ಕಾಳಾವರ ಪ್ರಸ್ತಾವಿಸಿ, ಸ್ವಾಗತಿಸಿದರು. ಗಣಿತ ಶಿಕ್ಷಕರಾದ ಶ್ರೀಧರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕರಾದ ದಿನಕರ ಧನ್ಯವಾದ ಸರ್ಮಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ಗಳು ಕಸ ಸಂಗ್ರಹಣೆ ಮತ್ತು ವಿಲೇವಾರಿ ಹಾಗೂ ಕಸ ಸಂಗ್ರಹಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಹೊಂದುವ ಮೂಲಕ ಉಡುಪಿ ಜಿಲ್ಲೆಯನ್ನು ಓಡಿಎಫ್+1 ಜಿಲ್ಲೆಯನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದರು. ಅವರು ಇಂದು , ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ,ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯನ್ನು ಓಡಿಎಫ್+1 ಜಿಲ್ಲೆಯನ್ನಾಗಿ ಘೋಷಿಸಲಾಗಿದ್ದು, ಎಲ್ಲಾ ಗ್ರಾಮ ಪಂಚಾಯತ್ ಗಳು ತಮ್ಮ ವ್ಯಾಪ್ತಿಯಲ್ಲಿನ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ತಿಳಿಸಿದ ಸಿಇಓ, ಎಸ್ಎಲ್ಆರ್ಎಂ ಘಟಕಗಳು ಕಸದಿಂದ ಆದಾಯವನ್ನು ಸಂಗ್ರಹಿಸಿ, ತಮ್ಮ ವೆಚ್ಚಗಳನ್ನು ನಿಭಾಯಿಸಿಕೊಂಡುವ ಲಾಭದಾಯಕವಾಗಿ ನಡೆಸುವಂತೆ ಹೇಳಿದರು. ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಿ, ತಮಗೆ ಈಗಾಗಲೇ ನೀರಿನ ಸಂಪರ್ಕ ಇದೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆಯುರ್ವೇದದಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಪೌಷ್ಠಿಕ ಆಹಾರ ಸೇವನೆಯು ಆಯುರ್ವೇದದ ಭಾಗವಾಗಿದೆ. ಹಾಗಾಗಿ ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸಿ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ಗ್ರಾಮ ಪಂಚಾಯತ್ ಕಿರಿಮಂಜೇಶ್ವರ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ನಾಗೂರು ಶ್ರೀ ಗೋಪಾಲಕೃಷ್ಣ ಕಲಾ ಮಂದಿರ ಒಡೆಯರ ಮಠದಲ್ಲಿ ಜರಗಿದ ಪೋಷಣ್ ಮಾಸಾಚರಣೆ ಸಮಾರೋಪ ಸಮಾರಂಭ ಉದ್ಘಾಟಿಸಿ, ಗರ್ಭಿಣಿಯರಿಗೆ ಆಯುಷ್ ಕಿಟ್ ವಿತರಿಸಿ ಅವರು ಮಾತನಾಡಿದರು. ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಶುಭಾಶಂಸನೆಗೈದರು. ಕಾಲ್ತೋಡು ಸರಕಾರಿ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಅವರು ನಮ್ಮ ಸುತ್ತಮುತ್ತಲಿರುವ ಪೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ನೀಡಿ ಗರ್ಭೀಣಿಯರಿಗೆ ಹಾಗೂ ಕಡಿಮೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ವರದಿಗಾರಿಕೆಯ ಸವಾಲುಗಳು ಮತ್ತು ಸುದ್ದಿ ಮನೆಯ ವೈವಿಧ್ಯತೆ’ ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡೆಪ್ಯುಟಿ ಚೀಫ್ ರಿಪೋರ್ಟರ್ ಹಾಗೂ ಅಂಕಣಕಾರ ರಂಜಿತ್ ಎಚ್ ಅಶ್ವತ್ ಮಾತನಾಡಿ, ವರದಿಗಾರಿಕೆ ಮಾಡುವಾಗ ಮುಂದಾಗುವ ಸವಾಲುಗಳನ್ನು ಎದುರಿಸಲು ವರದಿಗೆ ಹೋಗುವ ಮೊದಲೇ ವರದಿಗಾರರು ಮಾನಸಿಕವಾಗಿ ದೈಹಿಕವಾಗಿ ಸಿದ್ಧರಿರಬೇಕು. ವರದಿಗೆ ಬಳಸುವ ಮೂಲಗಳ ಬಗ್ಗೆ ಸ್ಪಷ್ಟ ಜ್ಞಾನ ಮತ್ತು ನಿಖರತೆಯನ್ನು ಹೊಂದಿರಬೇಕು. ಯಾವುದು ಸುದ್ದಿ ಯಾವುದು ಸುದ್ದಿಯಲ್ಲ ಎಂಬುದನ್ನು ಗ್ರಹಿಸುವ ದೃಷ್ಟಿಕೋನ ವರದಿಗಾರರಿಗೆ ಮುಖ್ಯವಾಗಿರಬೇಕು. ಪತ್ರಕರ್ತನಾದವನಿಗೆ ಸಾಹಿತ್ಯ ಜ್ಞಾನ, ಓದುಗಾರಿಕೆ, ಬರಹ, ವಿಷಯ ಜ್ಞಾನ, ಪದಗಳ ಮಿತಿ, ಅಕ್ಷರ ಜ್ಞಾನ ಅಗತ್ಯವಾಗಿರಬೇಕು. ಇವೆಲ್ಲ ಇಲ್ಲದಿದ್ದಲ್ಲಿ ಅಂತಹ ವರದಿ ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಅಲ್ಲದೆ ಉತ್ತಮ ವರದಿಗಾರನಾಗಲು ವರದಿ ಕೌಶಲ್ಯ ಮಾತ್ರವಲ್ಲದೆ ಇದರ ಜೊತೆಗೆ ವಿನಯತೆ, ನೈತಿಕತೆ, ಉತ್ತಮ ಮಾತುಗಾರಿಕೆ ಹಾಗು ಉಡುಗೆ…

Read More