ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ‘ಪ್ರವಾದಿ ಮುಹಮ್ಮದರ ಜೀವನ ಮತ್ತು ಸಂದೇಶ ಪರಿಚಯ’ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ, ಕೆಲವೇ ಕುತರ್ಕಿಗಳ ಅವಹೇಳನ, ಅಗೌರವದ ಕೃತಿಗಳಿಂದ ಜಗತ್ತಿಗೆ ಬೆಳಕು ನೀಡಿದ ಪ್ರವಾದಿ ಮತ್ತು ಮಹಾತ್ಮರ ವ್ಯಕ್ತಿತ್ವ ಮತ್ತು ಸಂದೇಶಗಳಿಗೆ ಚ್ಯುತಿ ಉಂಟಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನೊಂದವರು ಅಷ್ಟೇ ಕೀಳುಮಟ್ಟದ ಪ್ರತಿಕ್ರಿಯೆ ನೀಡಬಾರದು, ಮಹಾನ್ ವ್ಯಕ್ತಿಗಳು ಯಾವ ಮತ, ಪಂಥಗಳಿಗೆ ಸೇರಿದ್ದರೂ ಅವರು ಸಾರುವ ಸಂದೇಶಗಳ ಸಾರ ಜಗತ್ತಿಗೇ ಮಾರ್ಗದರ್ಶಕ ಆಗಿರುತ್ತದೆ. ಪ್ರವಾದಿ ಮುಹಮ್ಮದರು ಈ ಸಾಲಿಗೆ ಸೇರಿದವರು. ಒಕ್ಕೂಟ ನಡೆಸುವ ಇಂತಹ ಕಾರ್ಯಕ್ರಮಗಳು ವಾಸ್ತವ ವಿಚಾರಗಳನ್ನು ಪ್ರಚುರಪಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು. ನಾವುಂದ ಆಕಳಬೈಲು ಜುಮ್ಮಾ ಮಸೀದಿಯ ಖತೀಬ್ ಮೌಲಾನಾ ಇಸ್ಮಾಯಿಲ್ ಮುಸ್ಲಿಯಾರ್, ಪ್ರವಾದಿ ಮುಹಮ್ಮದರ ಜೀವನ ಮತ್ತು ಸಂದೇಶಗಳನ್ನು ವಿವರಿಸಿದರು. ಬೈಂದೂರು ಹೋಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮರವಂತೆ ಮೀನುಗಾರರ ಸಹಕಾರಿ ಸಂಘದ ನೂತನ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ ಇತ್ತಿಚೆಗೆ ನಡೆಯಿತು. ಶಂಕು ಸ್ಥಾಪನೆ ಮಾಡಿ ಮಾತನಾಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಕರಾವಳಿಯ ಆರ್ಥಿಕ ಜೀವನಾಡಿಯಾಗಿರುವ ಮೀನುಗಾರಿಕೆಗೆ ಮೀನುಗಾರರ ಸಹಕಾರ ಸಂಘಗಳು ದೀರ್ಘ ಕಾಲದಿಂದ ಹಣಕಾಸಿನ ಹಾಗೂ ಅಗತ್ಯ ಪರಿಕರಗಳನ್ನು ಪೂರೈಸುವ ಮೂಲಕ ಬೆಂಬಲ ನೀಡುತ್ತ ಬಂದಿವೆ ಎಂದು ಹೇಳಿದರು. ಮರವಂತೆಯ ಸಂಘವು ಜಿಲ್ಲೆಯ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದು. ಅದರಿಂದ ಪರಿಸರದ ಮೀನುಗಾರರು ಹೆಚ್ಚಿನ ಸೇವೆ ನಿರೀಕ್ಷಿಸುತ್ತಾರೆ. ಅದಕ್ಕೆ ಅನುಗುಣವಾಗಿ ಸಂಘ ತನ್ನ ವ್ಯವಹಾರವನ್ನು ವಿಸ್ತರಿಸಿಕೊಳ್ಳಬೇಕು. ಅದರ ನೂತನ ಕಟ್ಟಡ ಮತ್ತು ಅನ್ಯ ಚಟುವಟಿಕೆಗಳಿಗೆ ಸರ್ಕಾರದಿಂದ ಸಿಗುವ ಎಲ್ಲ ನೆರವನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಸಂಘದ ಅಧ್ಯಕ್ಷ ಪ್ರವೀಣ ಖಾರ್ವಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತ್ರಾ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಖಾರ್ವಿ, ಭಾಗ್ಯಾ, ನಿರ್ದೇಶಕ ಮಂಡಳಿಯ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ‘ಯಕ್ಷಗಾನಕ್ಕೆ ಅದರದ್ದೇ ಆದ ಪರಂಪರೆ ಇದೆ. ಹಿಮ್ಮೇಳ ಹಾಗೂ ಮುಮ್ಮೇಳಗಳ ಮೂಲಕ ಶ್ರೋತೃಗಳನ್ನು ಸಂಪ್ರೀತಗೊಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು’ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಭಿಪ್ರಾಯಪಟ್ಟರು. ಇಲ್ಲಿಗೆ ಸಮೀಪದ ಕೊಲ್ಲೂರಿನ ಮೂಕಾಂಬಿಕಾ ಸಭಾಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ಶನಿವಾರ ನಡೆದ 2019ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’, ‘ಯಕ್ಷಸಿರಿ’ ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಮ್ಮ ಸಾಂಸ್ಕೃತಿಕ ರಾಯಭಾರಿಗಳಾಗಿರುವ ಯಕ್ಷಗಾನ ಕಲಾವಿದರ ಶ್ರಮ ಹಾಗೂ ಕಲಾರಾಧನೆಗೆ ಸೂಕ್ತ ಗೌರವ ದೊರಕಬೇಕು. ಕಾಲಮಿತಿ ಯಕ್ಷಗಾನ ಪ್ರದರ್ಶನಗಳ ಮೂಲಕ ಹೆಚ್ಚು ಶ್ರೋತೃಗಳನ್ನು ಸೆಳೆಯುವಂತಾಗಬೇಕು. ಯಕ್ಷಗಾನ ಪ್ರದರ್ಶನದ ಹಳೆಯ ವೈಭವ ಮರುಕಳಿಸಬೇಕು. ಸಜ್ಜನ ಅಂಬಾತನಯ ಮುದ್ರಾಡಿಯಂತಹ ಹಿರಿಯ ಸಾಹಿತಿಯನ್ನು ಕೊಲ್ಲೂರು ಕ್ಷೇತ್ರದಲ್ಲಿ ಗೌರವಿಸುವ ಮೂಲಕ ಯಕ್ಷಗಾನ ಅಕಾಡೆಮಿಯ ಗೌರವ ಹೆಚ್ಚಾಗಿದೆ’ ಎಂದು ಹೇಳಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ. ಎ. ಹೆಗಡೆ ಅಧ್ಯಕ್ಷತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಕೊಡೇರಿ ಕಿರು ಬಂದರಿನಲ್ಲಿ ಮೀನು ಹರಾಜು ಪ್ರಕ್ರಿಯೆಯಗೆ ಸಂಬಂಧಿಸಿದಂತೆ ಉಪ್ಪುಂದ ಹಾಗೂ ಕೊಡೇರಿ ಭಾಗದ ಮೀನುಗಾರರ ನಡುವೆ ಘರ್ಷಣೆ ತಾರಕಕ್ಕೇರಿ, ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಶನಿವಾರ ನಡೆದಿದೆ. ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಾಣದಲ್ಲಿ ಮೀನು ಹರಾಜು ಮಾಡಲು ಉಪ್ಪುಂದ, ಕೊಡೇರಿ ಹಾಗೂ ಮರವಂತೆ ಭಾಗದ ಮೀನುಗಾರರಿಗೆ ಮೀನುಗಾರಿಕಾ ಇಲಾಖೆ ತಾತ್ಕಲಿಕ ಅನುಮತಿ ನೀಡಿತ್ತು, ಉಪ್ಪುಂದ ಭಾಗದ ಸುಮಾರು 100ಕ್ಕೂ ಹೆಚ್ಚು ದೋಣಿಗಳು ಶನಿವಾರ ಮಧ್ಯಾಹ್ನದ ಮೀನುಗಾರಿಕೆ ನಡೆಸಿ, ಎಡಮಾವಿನ ಹೊಳೆಯ ಮೂಲಕ ಮೀನು ಮಾರಾಟ ಮಾಡಲು ಬಂದರಿನ ಪ್ರಾಂಗಾಣ ಪ್ರವೇಶಿಸುವಾಗ, ಕೊಡೇರಿ ಭಾಗದ ಮೀನುಗಾರರು ಇಲ್ಲಿನ ಪ್ರಾಂಗಾಣದಲ್ಲಿ ಮೂಲಸೌಕರ್ಯ ಕಲ್ಪಿಸದ ಹಾಗೂ ಕೊಡೇರಿ ಭಾಗದ ಮೀನುಗಾರರಿಗೆ ಅನುಕೂಲವಾಗುವಂತೆ ಎಡಮಾವಿನ ಹೊಳೆಯಲ್ಲಿ ಸೇತುವೆ ನಿರ್ಮಾಣ ಮಾಡುವವರೆಗೆ ಪ್ರಾಂಗಣದಲ್ಲಿ ಮೀನು ಹರಾಜಿಗೆ ಅವಕಾಶ ನೀಡುವುದಿಲ್ಲ ಎಂದು ಎಡಮಾವಿನ ಹೊಳೆಯಲ್ಲಿ ಉಪ್ಪುಂದ ಭಾಗದ ದೋಣಿಗಳು ಸಂಚರಿಸದಂತೆ ತಮ್ಮ ದೋಣಿಯನ್ನು ಅಡ್ಡಲಾಗಿರಿಸಿ, ಮೀನು ಹರಾಜು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೆಹರು ಯವ ಕೇಂದ್ರ ಉಡುಪಿ ಹಾಗೂ ಸ್ನೇಹ ಮಹಿಳಾ ಮಂಡಲ ರಿ. ಮರವಂತೆ ಇವರ ಸಹಯೋಗದಲ್ಲಿ ಮಹಿಳಾ ಮಂಡಲದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಕೋವಿಡ್- 19 ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ಇಲ್ಲಿನ ಮರವಂತೆಯ ಸುಭಾಶ್ಚಂದ್ರ ಬೋಸ್ ಸರಕಾರಿ ಫ್ರೌಡಶಾಲೆಯ ವಠಾರದಲ್ಲಿ ಜರುಗಿತು. ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸ್ವಚ್ಛತೆ ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವ ಪದ್ದತಿ ಮೊದಲಿನಿಂದಲೂ ಇದೆ. ಇಂತಹ ಗಂಭೀರ ಸಂಧರ್ಭಗಳಲ್ಲಿ ಅದನ್ನು ಚಾಚು ತಪ್ಪದೆ ಪಾಲಿಸುವುದು ಅಗತ್ಯ. ಕೋವಿಡ್-19ಗೆ ಸೂಕ್ತ ಲಸಿಕೆ ದೊರೆಯುವ ತನಕ ನಿರ್ಲಕ್ಷ ವಹಿಸುವುದು ಸರಿಯಲ್ಲ. ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ತಪ್ಪು ಸಂದೇಶಗಳಿಗೆ ಕಿವಿಗೊಡದೇ ಸರಕಾರ ನೀಡಿರುವ ಅಧಿಕೃತ ಮಾಹಿತಿಯನ್ನು ಅನುಸರಿಸಬೇಕು. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದುವುದಲ್ಲದೇ ನಮ್ಮ ಸುತ್ತಮುತ್ತಲಿನವರ ಆರೋಗ್ಯ ಕಾಳಜಿಯೂ ಬಹುಮುಖ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುರಭಿ ರಿ. ಬೈಂದೂರು ಮತ್ತು ನೆಹರು ಯುವ ಕೇಂದ್ರ ಸಹಯೋಗದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಇಲ್ಲಿನ ರೋಟರಿ ಭವನದಲ್ಲಿ ಜರುಗಿತು. ಬೈಂದೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶದ ಏಕತೆ ಮತ್ತು ಐಕ್ಯತೆಗಾಗಿ ನಿರಂತರವಾಗಿ ಶ್ರಮಿಸಿದವರು. ಮೊದಲ ಗೃಹಮಂತ್ರಿಯಾಗಿ ಬೇರೆ ಬೇರೆ ಇದ್ದ ಸಂಸ್ಥಾನಗಳನ್ನು ಒಗ್ಗೂಡಿಸಿ ಒಂದೇ ರಾಷ್ಟ್ರವನ್ನು ಕಟ್ಟುವಲ್ಲಿ ಶ್ರಮಿಸಿದ್ದರು. ತಾನು ಕೈಗೊಂಡ ಕಾರ್ಯವನ್ನು ಪೂರ್ಣಗೊಳಿಸದೆ ಬಿಡುತ್ತಿರಲಿಲ್ಲ ಎಂದರು. ಸುರಭಿ ಬೈಂದೂರು ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೆಂದ್ರದ ಸ್ವಯಂಸೇವಕ ಸುನಿಲ್ ಪ್ರ್ರಾಸ್ತಾವಿಕ ಮಾತುಗಳನ್ನಾಡಿದರು ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಸುಧಾಕರ ಪಿ. ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕೊಡೇರಿ ಮೀನುಗಾರಿಕಾ ಕಿರು ಬಂದರು ಕಾಮಗಾರಿಯಲ್ಲಿ ಲೋಪ ಉಂಟಾಗಿದ್ದರಿಂದ ಕಿರಿಮಂಜೇಶ್ವರ ಗ್ರಾಮದ ಜನರು ಅನುಭವಿಸುತ್ತಿರುವ ತೊಂದರೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಮೀನುಗಾರರು ಬಂದರ್ನಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಮದ ಶ್ರೀರಾಮ ಸೇವಾ ಸಮಿತಿ ಮತ್ತು ಮಹಾಗಣಪತಿ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ಬಂದರು ಮತ್ತು ಮೀನುಗಾರಿಕಾ ಇಲಾಖೆ ಯಾವುದೇ ಮೂಲಸೌಲಭ್ಯಗಳನ್ನು ಕಲ್ಪಿಸದೆ ಬಂದರಿನ ಪಶ್ಚಿಮ ಭಾಗದಲ್ಲಿ ತಾತ್ಕಾಲಿಕ ಮೀನು ಹರಾಜಿಗೆ ಅನುಮತಿ ನೀಡಿದೆ. ದಂಡೆಗಳ ಬದಿಗಳ ರಿವೆಟ್ಮೆಂಟ್ ಮಾಡದೆ 2.5 ಮೀಟರ್ ಡ್ರೆಜಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಪೂರ್ವ ಭಾಗದಲ್ಲಿ ವಾಸಿಸುವ ಕೊಡೇರಿ ಭಾಗದ ಜನರ ಆಸ್ತಿಗೆ ನಷ್ಟ ಉಂಟಾಗಲಿದೆ. ಕುಡಿವ ನೀರಿನ ಬಾವಿಗಳಲ್ಲಿ ಉಪ್ಪು ನೀರು ಬರುವ ಸಾಧ್ಯತೆ ಇದೆ. ಪಶ್ಚಿಮದ ದಂಡೆ ಕುಸಿದಿದೆ. ತಕ್ಷಣವೇ ಕ್ರಮ ಕೈಗೊಳ್ಳದೇ ಇದ್ದರೆ ಇನ್ನಷ್ಟು ಕುಸಿಯಲಿದೆ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಆಗ್ರಹಿಸಿದರು. ಬಂದರು ಕಾಮಗಾರಿ ಆರಂಭವಾದಾಗಲೇ ಈ ಭಾಗದ ಜನರಿಗೆ ಎದುರಾಗುವ ಸಮಸ್ಯೆಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ನೇತಾಜಿ ಯುವಕ ಮಂಡಲದಿಂದ ಗೋಳಿಗುಂಡಿ ಅಮೃತಧಾರಾ ಗೋಶಾಲೆಗೆ ಒಂದು ಟೆಂಪೊ ಒಣ ಹುಲ್ಲನ್ನು ದಾನ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹೆರಿಯ ದೇವಾಡಿಗ, ನೇತಾಜಿ ಯುವಕ ಮಂಡಲದ ಅಧ್ಯಕ್ಷ ರಾಘವೆಂದ್ರ ಪೂಜಾರಿ, ಕಾರ್ಯದರ್ಶಿ ವಿಶ್ವನಾಥ ದೇವಾಡಿಗ, ಸದಸ್ಯರಾದ ವಿರೇಂದ್ರ ಬಿಲ್ಲವ, ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಸಂಘಟಕರಾದ ಮಲ್ಪೆ ವಾಸುದೇವ ಸಾಮಗ ಅವರು ಅಲ್ಪ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರ ಬೆಳಿಗ್ಗೆ ಕೋಟೇಶ್ವರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಾಕ್ಪಟುತ್ವದಿಂದ ಹೆಸರು ಗಳಿಸಿದ್ದ ವಾಸುದೇವ ಸಾಮಗ (72) ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ತೆಂಕು-ಬಡಗು ತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಗುರುತಿಸಲ್ಪಟ್ಟ ವಾಸುದೇವ ಸಾಮಗರ ತಂದೆ ಮತ್ತು ದೊಡ್ಡಪ್ಪ ಆಗಿನ ಮಹಾನ್ ಕಲಾವಿದರು ಮತ್ತು ಹರಿದಾಸರಾದ ಕಾರಣ ಇವರು ಸಹಜವಾಗಿಯೇ ಯಕ್ಷಗಾನದ ಒಲವು ಹೊಂದಿದ್ದರು. ಕೋಟ ಶ್ರೀಧರ ಹಂದೆಯವರ ಒತ್ತಾಸೆಯ ಮೇರೆಗೆ ಪ್ರಥಮ ಬಾರಿಗೆ ದೊಡ್ಡ ಕೂಟದಲ್ಲಿ ಅರ್ಥದಾರಿಯಾಗಿ ಗಮನ ಸೆಳೆದು ಅವರದ್ದೇ ಯಜಮಾನಿಕೆಯ ಅಮೃತೇಶ್ವರಿ ಮೇಳದಲ್ಲಿ ವೃತ್ತಿರಂಗಕ್ಕೆ ಕಾಲಿಟ್ಟರು. ನಾರಣಪ್ಪ ಉಪ್ಪೂರರ ಒಡನಾಟದದಲ್ಲಿ ಪರಿಪೂರ್ಣ ಕಲಾವಿದರಾಗಿ ಆ ಮೇಳದಲ್ಲಿ ಗುರುತಿಸಿಕೊಂಡರು. ಅಲ್ಲಿ ದೊಡ್ಡ ಸಾಮಗರು, ಚಿಟ್ಟಾಣಿಯವರು, ಕೋಟ ವೈಕುಂಠ, ಎಂ.ಎ.ನಾಯಕ್, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆಯವರಂತ ಘಟಾನುಘಟಿಗಳ ಸಾಂಗತ್ಯ ದೊರೆಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ (ಟಿಎಪಿಸಿಎಂಎಸ್) ನಿರ್ದೇಶಕ ಮಂಡಳಿಗೆ ಶುಕ್ರವಾರ ಅವಿರೋಧ ಆಯ್ಕೆ ನಡೆಯಿತು. ‘ಎ’ ವರ್ಗದ ಸದಸ್ಯ ಕ್ಷೇತ್ರದಿಂದ ಹೆಚ್. ಹರಿಪ್ರಸಾದ್ ಶೆಟ್ಟಿ ಮೊಳಹಳ್ಳಿ ವ್ಯ.ಸೇ.ಸ.ಸಂಘ ನಿ. ಬಿದ್ಕಲ್ಕಟ್ಟೆ, ಎಸ್. ರಾಜು ಪೂಜಾರಿ ಮರವಂತೆ ಬಡಾಕೆರೆ ವ್ಯ.ಸೇ.ಸ.ಸಂಘ ನಿ. ನಾವುಂದ, ಮೋಹನ್ ದಾಸ್ ಶೆಟ್ಟಿ ಎಂ ಕೋಟೇಶ್ವರ ವ್ಯ.ಸೇ.ಸ.ಸಂಘ ನಿ. ಕೋಟೇಶ್ವರ, ಶರತ್ ಕುಮಾರ್ ಶೆಟ್ಟಿ ಪಂಚಗಂಗಾ ವ್ಯ.ಸೇ.ಸ.ಸಂ ನಿ ಹೆಮ್ಮಾಡಿ, ಕೆ. ಭುಜಂಗ ಶೆಟ್ಟಿ ವಂಡ್ಸೆ ಸಿ.ಎ ಸಂಘ ನಿ, ವಂಡ್ಸೆ, ರವಿ ಗಾಣಿಗ ಮಾನಂಜೆ ವ್ಯ.ಸೇ.ಸ.ಸಂಘ ನಿ., ಕಮಲಶಿಲೆ, ಕೆ.ಮೋಹನ್ ಪೂಜಾರಿ ಖಂಬದಕೋಣೆ ರೈ ಸೇ.ಸ.ಸಂಘ ನಿ. ಉಪ್ಪುಂದ, ಆನಂದ ಬಿಲ್ಲವ ಗಂಗೊಳ್ಳಿ ಸೇವಾ ಸಹಕಾರಿ ಸಂಘ ನಿ. ಗಂಗೊಳ್ಳಿ, ಕೆ. ಸುಧಾಕರ ಶೆಟ್ಟಿ ಕರ್ಕುಂಜೆ ಸಹಕಾರಿ ವ್ಯ.ಸಂಘ ನಿ. ಕರ್ಕುಂಜೆ, ಪ್ರಭಾಕರ ಶೆಟ್ಟಿ ಜಡ್ಕಲ್ ವ್ಯ.ಸೇ.ಸ.ಸಂಘ ನಿ. ಜಡ್ಕಲ್, ಎಸ್. ಜಯರಾಮ ಶೆಟ್ಟಿ ಬೆಳ್ವೆ…
