ಡಾ. ಗಾಯತ್ರೀ ನಾವಡ ಅವರಿಗೆ ಡಾ. ಜೀಶಂಪ ಜಾನಪದ ತಜ್ಞ ರಾಜ್ಯ ಪ್ರಶಸ್ತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡದ ಸ್ತ್ರೀವಾದಿ ಚಿಂತಕಿ, ಜಾನಪದ ವಿದ್ವಾಂಸೆ ಡಾ. ಗಾಯತ್ರೀ ನಾವಡ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ‘ಡಾ. ಜೀಶಂಪ ಜಾನಪದ ತಜ್ಞ ರಾಜ್ಯ ಪ್ರಶಸ್ತಿ’ ಸಂದಿದೆ.

Call us

Click Here

ಚಾಮರಾಜನಗರದಲ್ಲಿ ಕರ್ನಾಟಕ ಅರಣ್ಯ ಮತ್ತು ಕನ್ನಡ ಸಂಸ್ಕ್ರತಿ ಖಾತೆಯ ಸಚಿವರಾದ ಅರವಿಂದ ಲಿಂಬಾಳಿಯವರು ಡಾ. ಗಾಯತ್ರೀ ನಾವಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಫಲಕ, ಗೌರವ ಪತ್ರ ಮತ್ತು ಐವತ್ತು ಸಾವಿರ ರೂಪಾಯಿಯನ್ನು ಒಳಗೊಂಡಿದೆ. ಈ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪೌಢಶಾಲಾ ಶಿಕ್ಷಣ ಖಾತೆ ಹಾಗೂ ಗ್ರಂಥಾಲಯ ಸಚಿವರಾದ ಸುರೇಶ್ ಕುಮಾರ್, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪದ್ಮಶ್ರೀ ಪುರಸ್ಕ್ರತ ಮಂಜಮ್ಮ ಜೋಗತಿ ಹಾಗೂ ಜಿಲ್ಲಾಧಿಕಾರಿ ಡಾ. ರವಿ ಪಾಲ್ಗೊಂಡಿದ್ದರು.

ಡಾ. ಗಾಯತ್ರಿ ನಾವುಡ ಅವರು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಬ್ಬ ಸ್ತ್ರೀವಾದಿ ಚಿಂತಕಿಯಾಗಿ, ಸಂಸ್ಕ್ರತಿ ವಿಮರ್ಶಕಿಯಾಗಿ, ಜಾನಪದ ವಿದ್ವಾಂಸರಾಗಿ ಗುರುತಿಸಿಕೊಂಡವರು. ಕಾಡ್ಯನಾಟ, ಭಾರತೀಯ ಸ್ತ್ರೀವಾದ, ಸಾಂಸ್ಕ್ರತಿಕ ಸಬಲೀಕರಣ, ಸ್ತ್ರೀವಾದಿ ಜಾನಪದದಂತಹ ಹೊಸ ಶೋಧಗಳನ್ನು, ಪರಿಕಲ್ಪನೆಗಳನ್ನು ಸಂಶೋಧನಾ ಲೋಕಕ್ಕೆ ನೀಡಿದವರು. ಬಂಧುತ್ವ ವ್ಯವಸ್ಥೆ ಮತ್ತು ಪಠ್ಯದ ಅಂತರ್ ಸಂಬಂಧವನ್ನು ಕುರಿತ ಸಂಕಥನವನ್ನು ಕಟ್ಟಿಕೊಟ್ಟವರು. ಕರಾವಳಿಯ ಮಾತೃರೂಪಿ ಸಂಸ್ಕ್ರತಿಯ ತುಳು, ಕನ್ನಡ ಮೌಖಿಕ ಪರಂಪರೆಯ ಬಗೆಗೆ ಸ್ತ್ರೀವಾದಿ ದೃಷ್ಟಿಕೋನದಿಂದ ಸಂಶೋಧನೆ ನಡೆಸಿದ ಮೊದಲಿಗರು. ಅದು ಪ್ರಕಟಿಸುವ ಸ್ತ್ರೀತ್ವದ ಶೋಧದ ಮೂಲಕ ಪಾಶ್ಚಾತ್ಯ ಸ್ತ್ರೀವಾದವನ್ನು ಮುರಿದು ಭಾರತೀಯ ಸ್ತ್ರೀವಾದದ ಪರಿಕಲ್ಪನೆಯನ್ನು ಕಟ್ಟಿಕೊಟ್ಟವರು. ಕನ್ನಡ ಸಂದರ್ಭದಲ್ಲಿ ಗುಲ್ಬರ್ಗಾ 1996 ಹಾಗೂ ಮಣಿಪಾಲ 2004 ವಿಶ್ವವಿದ್ಯಾಲಯಗಳಿಂದ ಎರಡು ಪಿ.ಎಚ್.ಡಿ ಪಡೆದ ಹೆಗ್ಗಗಳಿಗೆ ಇವರದು.

ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸಿದ ಡಾ. ಗಾಯತ್ರೀ ನಾವುಡ ಅನೇಕ ಸಂಶೋಧನ ಯೋಜನೆಗಳನ್ನು ಪೂರೈಸಿದವರು. ಸ್ತ್ರೀವಾದ, ಅನುಭಾವ ಸಾಹಿತ್ಯ, ಸಂಸ್ಕ್ರತಿ ವಿಮರ್ಶೆ, ಜಾನಪದ, ಬುಡಕಟ್ಟು ಅಧ್ಯಯನ ಕ್ಷೇತ್ರಗಳಲ್ಲಿ ಹಲವಾರು ಅಧ್ಯಯನಗಳನ್ನು ನಡೆಸಿದವರು. ಅನೇಕ ರಾಜ್ಯಮಟ್ಟದ, ರಾಷ್ಟಮಟ್ಟದ ವಿಚಾರ ಸಂಕಿರಣಗಳಲ್ಲಿ ವಿದ್ವತ್ ಪ್ರಂಬಂಧಗಳನ್ನು ಮಂಡಿಸಿದ ಗಾಯತ್ರೀ ನಾವಡ ಅವರು ನಾಡಿನ ಪತ್ರಿಕೆಗಳಲ್ಲಿ ನೂರಕ್ಕೂ ಮಿಕ್ಕೂ ಪ್ರೌಢ ಲೇಖನಗಳನ್ನು ಪ್ರಕಟಿಸಿದ್ದಾರೆ. ವೈಚಾರಿಕ ಮನೋಭಾವದ ಗಾಯತ್ರೀ ನಾವುಡ ಅವರು ಮಹಿಳಾ ಸಂಘಟನೆಯಲ್ಲಿ ದುಡಿದವರು. ಮಣಿಪಾಲ ವಿಶ್ಷವಿದ್ಯಾಲಯದ ಡಾ.ಟಿ.ಎಂ.ಪೈ ರಾಷ್ಟ್ರೀಯ ಫೆಲೋಶಿಫ್ ಪಡೆದು ಮೂರು ವರ್ಷಗಳ ಕಾಲ ’ಸಿರಿ ಪಂಥ’ದ ಕುರಿತು ಸಂಶೋಧನೆ ನಡೆಸಿದವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ 2002-05), ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ (2006-12), ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಾನಪದ ವಿಶ್ವವಿದ್ಯಾಲಯದ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮೂಕಜ್ಜಿ ಬದುಕು ಸಾಹಿತ್ಯ, ಚಿತ್ತಾರ ಬರೆದ ಬದುಕು, ನಮ್ಮ ಹೆಣ್ಣು ಮಗು, ಕಾಡ್ಯನಾಟ ಪಠ್ಯ ಮತ್ತು ಪ್ರದರ್ಶನ, ಸಾಮೂಹಿಕ ವಿವಾಹ – ಒಂದು ಅಧ್ಯಯನ, ತೇರು, ಸಿರಿಕತೆ, ವಿರಚನೆ, ಭಾರತೀಯ ಸ್ತ್ರೀವಾದ, ಮಹಿಳಾ ಸಂಕಥನ, ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಅಲೆಯೊಸಗೆ, ಸಾವಿರ ಕೀರ್ತನೆಗಳು, ಪಾಣರಾಟ, ಕರಾವಳಿಯ ಮದುವೆ ಹಾಡುಗಳು ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಾಡುವಕ್ಕಿ ಅಂಬುಜವ್ವ ಸಾಕ್ಷ್ಯಚಿತ್ರ ನಿರ್ದೇಶನ ಹಾಗೂ ಮುತ್ತಿನಾರತಿಯ ಎತ್ತಿರೇ.. ದಾಸರಂದರೆ ಪುರಂದರ ದಾಸರಯ್ಯ ಬಾನುಲಿ ರೂಪಕ ನಿರ್ದೇಶನ ಮಾಡಿದ್ದಾರೆ. ದೂರದರ್ಶನ ಹಾಗೂ ಅಕಾಶವಾಣಿಯಲ್ಲಿ ಇವರ ಸಂದರ್ಶನ, ಚರ್ಚೆ ಪ್ರಸಾರಗೊಂಡಿವೆ. ಸದ್ಯ ಕರಾವಳಿ ಅಜ್ಜಿಕತೆಗಳ ಮೇಲೆ ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಇವರ ಬರಹಗಳು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಹಾಗೂ ಗುಲ್ಬರ್ಗಾ ವಿ.ವಿ ಮತ್ತು ಮಂಗಳೂರು ವಿ.ವಿ ಪದವಿ ತರಗತಿಗೆ ಪಠ್ಯಗಳಾಗಿವೆ.

Click here

Click here

Click here

Click Here

Call us

Call us

ಇವರಿಗೆ ಡಾ. ಪೀಟರ್ ಕ್ಲಾಸ್ ಮಹಿಳಾ ಜಾನಪದ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರಾವಳಿ ಲೇಖಕಿ ವಾಚಕಿಯರ ಸಂಘದಿಂದ ಮಹಿಳಾ ಸಂಶೋಧಕಿ ಪುರಸ್ಕಾರ, ಕಾಂತಾವರ ಕನ್ನಡ ಸಂಘದ ಸಂಸ್ಕ್ರತಿ ಸಂಶೋಧಕಿ, ಗುಲ್ಬರ್ಗಾ ವಿ.ವಿಯಿಂದ ರಾಜ್ಯೋತ್ಸವ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ಎಸ್. ಪಾರ್ವತಿ ಪ್ರಶಸಿ, ಕುಸುಮಾಂಜಲಿ ಫೌಂಡೆಶನ್‌ನಿಂದ ಕುಸುಮಶ್ರೀ ಪ್ರಶಸ್ತಿ, ಕುಂದ ಅಧ್ಯಯನ ಕೇಂದ್ರದ ಕುಂದಶ್ರೀ, ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿದೆ.

Leave a Reply