Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ಮತ್ತು ಬೈಂದೂರು ತಾಲೂಕಿನ ಮರಾಠಿ ಜನಾಂಗದವರು ಶ್ರಮ ಜೀವಿಗಳು ಮತ್ತು ನಂಬಿಕಸ್ಥರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದುವರಿಯಬೇಕಾದ್ದು ಬಹಳಿಷ್ಟಿದೆ. ಆ ನಿಟ್ಟಿನಲ್ಲಿ ಮರಾಟಿಗರ ಏಳಿಗೆಗೆ ಸರ್ವ ರೀತಿಯಲ್ಲಿ ಸಹಕರಿಸುವೆ ಎಂದು ಶಾಸಕ ಬಿ ಎಂ ಸುಕುಮಾರ ಶೆಟ್ಟಿಯವರು ನುಡಿದರು. ಗೋಳಿಹೊಳೆ ಮಹಿಷಾಮರ್ದಿನಿ ಸಭಾ ಭವನದಲ್ಲಿ ಜರುಗಿದ ಮರಾಠಿಗರ ಸಾಂಸ್ಕೃತಿಕ ಪರಂಪರೆಯನ್ನ ಬಿಂಬಿಸುವ ಛತ್ರಪತಿ ಯುವ ಸೇನೆ ಸಡಗರ 2019 ಉದ್ಘಾಟಿಸಿ ಮಾತನಾಡಿದರು. ಛತ್ರಪತಿ ಯುವ ಸೇನೆ ಸಾಂಸ್ಕೃತಿಕ ವೈಭವದಲ್ಲ್ಲಿ ಕುಂದಾಪುರ ತಾಲೂಕಿನ ಮೊಟ್ಟ ಮೊದಲ ವೈದ್ಯ ಪದವಿದರೆ ಡಾ, ನಿವೇದಿತ ನಂದಿಗದ್ದೆ ಮತ್ತು ಅಂತರ್ ರಾಷ್ಟ್ರೀಯ ಕ್ರೀಡಾಪಟು ಮಂಜುನಾಥ ಮರಾಟಿ ಹೊಸೇರಿ ಹಾಗು ವಿದ್ಯಾರ್ಥಿ ಸಾಧಕರದ ಭುವನೇಶ್ವರಿ ಕನ್ಕಿಮಡಿ, ವಿನೋದ ನಾಗರಮಕ್ಕಿ ಸುಬ್ರಮಣ್ಯ ಮಂಗಳಮಕ್ಕಿ, ಕಿಶನ್ ಹಾಲಾಡಿ, ರಾಜೇಶ ಹಾಲ್ಕಲ್, ರಜನಿ ಕೊಲ್ಲೂರುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬೈಂದೂರು ವಲಯ ಮರಾಠಿ ಸಮಾಜ ಸುಧಾರಕರ ಸಂಘದ ಅಧ್ಯಕ್ಷರಾದ ಬೋಜು ನಾಯ್ಕ ಜಾಂಬ್ಳಿಹೊಂಡ. ಉಪಾಧ್ಯಕ್ಷರಾದ ನಾಗೇಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗೌಡ ಸಾರಸ್ವತ ಸಮಾಜದ ಹನ್ನೆರೆಡು ಮಂದಿ ಗಂಗೊಳ್ಳಿಯ ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವರ ಸನ್ನಿಧಿಯಿಂದ ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಸನ್ನಿಧಿಗೆ ಗುರುವಾರ ಪಾದಯಾತ್ರೆ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಯಾತ್ರಾರ್ಥಿಗಳು ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಸನ್ನಿಧಾನಕ್ಕೆ ಪಾದಯಾತ್ರೆ ಆರಂಭಿಸಿದರು. ಗೌಡ ಸಾರಸ್ವತ ಸಮಾಜದ ಉನ್ನತಿ, ಗ್ರಾಮದ ಶ್ರೇಯೋಭಿವೃದ್ಧಿ, ಮತ್ಸ್ಯಕ್ಷಾಮ ನಿವಾರಣೆ ಹಾಗೂ ಗ್ರಾಮದಲ್ಲಿ ಸರ್ವರಿಗೂ ಸುಖಶಾಂತಿ ಲಭಿಸುವಂತಾಗಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕರಮಣ ಆಚಾರ್ಯ ನೇತೃತ್ವದಲ್ಲಿ ಮಹಾಪ್ರಾರ್ಥನೆ ನಡೆಯಿತು. ದೇವಳದ ಆಡಳಿತ ಮಂಡಳಿಯ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಜಿ.ವೆಂಕಟೇಶ ನಾಯಕ್, ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ಡಾ.ಕಾಶೀನಾಥ ಪೈ, ಬಿ.ರಾಘವೇಂದ್ರ ಪೈ, ಎಂ.ಮುಕುಂದ ಪೈ, ಎನ್.ತಿಮ್ಮಪ್ಪ ನಾಯಕ್, ಜಿ.ವೆಂಕಟೇಶ ಮಲ್ಯ, ಎಂ.ಜಿ. ಜಗದೀಶ ಭಂಡಾರ್‌ಕಾರ್, ಕೆ.ಸುಧೀಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಮರವಂತೆ ಮೀನುಗಾರಿಕಾ ಹೊರಬಂದರು ಕಾಮಗಾರಿ ಒಂದು ವರ್ಷದಿಂದ ಅಪೂರ್ಣ ಸ್ಥಿತಿಯಲ್ಲಿ ನಿಂತುಹೋಗಿದೆ. ಅದನ್ನು ಪೂರ್ಣಗೊಳಿಸಲು ಅಗತ್ಯವಿರುವ ರೂ. 35 ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಒಪ್ಪಿಸಿದ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ಪಡೆಯಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಮರವಂತೆ ಕರಾವಳಿ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದ ವೇಳೆ ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದರು. ಮರವಂತೆಯ ಹಲವೆಡೆ ನಡೆಯುತ್ತಿರುವ ಕಡಲ್ಕೊರೆತ, ಅದನ್ನು ತಡೆಯುವ ಮತ್ತು ಕೆಟ್ಟು ಹೋಗಿರುವ ಕರಾವಳಿ ಮಾರ್ಗದ ದುರಸ್ತಿ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ, ಮೀನುಗಾರರೊಡನೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತೀರ ಅಪಾಯಕಾರಿಯಾಗಿ ಕಂಡುಬಂದಿರುವ 110 ಮೀಟರ್ ಉದ್ದದ ತೀರದಲ್ಲಿ ಈಗಾಗಲೆ ನಿರ್ಮಿಸಿರುವ ತಡೆಗೋಡೆಯನ್ನು ಇನ್ನೂ ಒಂದೂವರೆ ಮೀಟರ್ ಎತ್ತರಿಸಲು ಯಾವುದಾದರೂ ಮೂಲದಿಂದ ಪ್ರಕೃತಿವಿಕೋಪ ಅಥವಾ ಅನ್ಯ ತುರ್ತು ಪರಿಹಾರ ನಿಧಿಯಿಂದ ಹಣ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗೆ ಹಾಗೂ ನಾಬಾರ್ಡ್ ಆರ್‌ಎಡಿ ನಿಧಿಯಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕುಂದಾಪುರ ಕನ್ನಡ ಭಾಷಿಕರ ಹೆಮ್ಮೆಯ ಸಂಸ್ಥೆಯ ಎಂದೆನಿಸಿಕೊಂಡಿರುವ ನಮ್ಮ ಕುಂದಾಪ್ರ ಕನ್ನಡ, ದುಬಾಯಿ ಇದರ ಎರಡನೇ ವಾರ್ಷಿಕೋತ್ಸವ ಸಮಾರಂಭ ಜೂನ್ 14ರಂದು ನಡೆಯಲಿದೆ. ದುಬಾಯಿ ಅಜಮನ್‌ನ ಹ್ಯಾಬಿಟೆಟ್ ಸ್ಕೂಲ್ ತಲ್ಲಹ ಇಲ್ಲಿನ ನಡೆಯಲಿರುವ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಕುಟುಂಬ ಮಿಲನ, ಸ್ನೇಹ ಮಿಲನ ಕಾರ್ಯಕ್ರಮಗಳು ನಡೆಯಲಿದ್ದು ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ಯುಎಇ ರಾಮೀ ಗ್ರೂಪ್ ಆಫ್ ಹೋಟೆಲ್ ಮಾಲಿಕ ವರದರಾಜ ಶೆಟ್ಟಿ, ಸಮಾಜ ಸೇವಕ ಮಣೆಗಾರ್ ಮೀರಾ ಸಾಹೇಬ್, ಎಲಿಗೆಂಟ್ ಕಿಚನ್ ಇಕ್ಯೂಪ್‌ಮೆಂಟ್‌ನ ಮುಖ್ಯಸ್ಥ ದಿನೇಶ್ ದೇವಾಡಿಗ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕುಂದಾಪ್ರ ಕನ್ನಡ ಉದ್ಯಮ ರತ್ನ ಪ್ರಶಸ್ತಿಯನ್ನು ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಮುಖ್ಯಸ್ಥ ಪ್ರವೀಣ ಶೆಟ್ಟಿ ವಕ್ವಾಡಿ ಅವರಿಗೆ ಪ್ರದಾನಿಸಲಾಗುತ್ತಿದ್ದು, ಕುಂದಾಪ್ರ ಕನ್ನಡ ಭಾಷಾ ರತ್ನ ಪ್ರಶಸ್ತಿಯನ್ನು ಹಿರಿಯ ವಕೀಲ ಎಎಸ್‌ಎನ್ ಹೆಬ್ಬಾರ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಕುಂದಾಪ್ರ ಕನ್ನಡದ ಔದ್ಯಮಿಕ ಸಾಧನಾ ಪುರಸ್ಕಾರವನ್ನು ಗಲದಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಜೂ.8: ಇತ್ತಿಚಿಗೆ ಉಪ್ಪುಂದದಲ್ಲಿ ನಡೆದ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಉಪ್ಪುಂದ ಕಳಿಮನೆ ಜಾನಕಿ ಮಂಜುನಾಥ ದೇವಾಡಿಗರ ಪುತ್ರ ನಿತೀಶ್ (10 ವರ್ಷ) ಮಣಿಪಾಲದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತುರ್ತು ಚಿಕಿತ್ಸೆಯ ಅನಿವಾರ್ಯತೆ ಎದುರಾಗಿದೆ. ಇದನ್ನು ಮನಗಂಡ ಕಂಬದಕೊಣೆ ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಹಾಗೂ ನಾಗರತ್ನ ಪೂಜಾರಿ, ಸೀತು ದೇವಾಡಿಗ, ಮರ್ಲಿ ದೇವಾಡಿಗ, ಗುಲಾಬಿ ದೇವಾಡಿಗ ಮೊದಲಾದವರು ಇಂದು ರೂ. 55,000 ಮೊತ್ತವನ್ನು ಒಟ್ಟುಗೂಡಿಸಿ ಕುಟುಂಬಿಕರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಅಪಘಾತದಲ್ಲಿ ನಿತೀಶ್‌ನ ಕಾಲು ಮೂಳೆ ಮುರಿದು, ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟಿ ಮತ್ತು ಹಲ್ಲಿನ ಸೆಟ್ ಕಳಚಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು, ಚಿಕಿತ್ಸೆಗೆ ರೂ. 3,50,000 ಲಕ್ಷಕ್ಕೂ ಅಧಿಕ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ದಿನಗೂಲಿ ಮಾಡಿ ಜೀವನ ಸಾಗಿಸುತ್ತಿರುವ ಇವರಿಗೆ ದಿಕ್ಕೆ ತೋಚದಂತಾಗಿ ದಾನಿಗಳ ನೆರವನ್ನು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಗೌರಿ ದೇವಾಡಿಗ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಸಂಬಂಧಿ ಕೌಶಲ್ಯಾಭಿವೃದ್ಧಿ ತರಬೇತಿ ಆಂದೋಲನ ರೂಪದಲ್ಲಿ ನಡೆಯುತ್ತಿದ್ದು, ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡಿರುವುದಲ್ಲದೇ ಸ್ವವಲಂಭಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ತೆಂಗು, ಅಡಿಕೆ ಮರ ಹತ್ತುವ ತರಬೇತಿ ಪಡೆಯುವುದರಿಂದ ಉತ್ತಮ ದುಡಿಮೆ ಮಾಡುವುದರ ಜೊತೆಗೆ ಕೃಷಿ ಕಾರ್ಮಿಕರ ಕೊರತೆಯೂ ನೀಗುತ್ತದೆ ಎಂದು ಮಂಗಳೂರು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಹೇಳಿದರು. ಅವರು ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ, ರೈತ ಶಕ್ತಿ ರೈತ ಸೇವಾ ಒಕ್ಕೂಟ ಉಪ್ಪುಂದ, ತೋಟಗಾರಿಕಾ ಇಲಾಖೆ ಕುಂದಾಪುರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಾಗೂ ಯುವ ಫ್ರೆಂಡ್ಸ್ ಮೇಕೋಡು ೧೧ನೇ ಉಳ್ಳೂರು ಆಶ್ರಯದಲ್ಲಿ ತೆಂಗು ಮತ್ತು ಅಡಿಕೆ ಮರ ಹತ್ತುವ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಕೃಷಿ ಉಪಕರಣ ಪ್ರದರ್ಶನ ಮಾರಾಟ ತರಬೇತಿ ಉದ್ಘಾಟಿಸಿ ಮಾತನಾಡಿದರು. ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರಗಳಿಗೆ ಮಾತ್ರವೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಹಟ್ಟಿಯಂಗಡಿ ಮೇಳ ಹಾಗೂ ಅತಿಥಿ ಕಲಾವಿದರಿಂದ ಮೊದಲ ಭಾರಿಗೆ ಶನಿವಾರ ರಾತ್ರಿ ೧೦ ಗಂಟೆಗೆ ’ಕೃಷ್ಣ ಸಂಧಾನ – ಮಂತ್ರ ಮಯೂರಿ’ ಯಕ್ಷಗಾನ ಪ್ರದರ್ಶನಗೊಳ್ಳಿದೆ. ಯಕ್ಷ ಸಿಂಧೂರದ ಸಾರಥ್ಯದಲ್ಲಿ ಒಂದೇ ರಾತ್ರಿ ಅವಳಿ ಆಖ್ಯಾನ ನಡೆಯಲಿದ್ದು ಯಕ್ಷಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಪೌರಾಣಿಕ ಮತ್ತು ಸಾಮಾಜಿಕ ಉಭಯ ಪ್ರೇಕ್ಷಕ ವರ್ಗಕ್ಕೂ ಒಂದೇ ದಿನ ಸವಿ ಉಣಬಡಿಸಲು ಯಕ್ಷಸಿಂಧೂರ ತಂಡ ಸಜ್ಜಾಗಿದೆ. ತೆಂಕುತಿಟ್ಟಿನ ಭಾರಿ ಬಿಸಿಯ ವಾಕ್ ವೈಖರಿಯ ಜೋಡಿ ಪೆರ್ಮದೆ ಜಯಪ್ರಕಾಶ್ ಶೆಟ್ಟರ ಕೌರವನಿಗೆ ರಂಗಾಭಟ್ಟರ ಕೃಷ್ಣ, ಇದು ಈಗಾಗಲೇ ಪ್ರೇಕ್ಷಕರಲ್ಲಿ ಚರ್ಚೆಯಾಗುತ್ತಿದೆ. ಇಬ್ಬರು ಅತ್ಯುತ್ತಮ ಕೂಟದ ಕಲಾವಿದರು ಆಟದಲ್ಲಿ ಅದೂ ಬಡಗಿನಲ್ಲಿ ಹಿಲ್ಲೂರು ಗಾನ ಸಾರಥ್ಯದಲ್ಲಿ ಹೇಗೆ ಸಂಧಾನ ಮಾತುಕತೆ ಮಾಡಲಿದ್ದಾರೆ ಎನ್ನುವುದಕ್ಕೆ ನೀವು ಸಾಕ್ಷಿಯಾಗಬೇಕು. ಇನ್ನು ಊರಿನ ತಿರುಗಾಟದಲ್ಲಿ ಜನಮೆಚ್ಚುಗೆಯ ಪ್ರಸಂಗ ಮಂತ್ರ ಮಯೂರಿ . ಈಗ ಚಾಲ್ತಿಯಲ್ಲಿರುವ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಹಟ್ಟಿಯಂಗಡಿ ಮೇಳದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಗವಂತನ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಅದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ಹೇಳಿದರು. ಬುಧವಾರ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ 14ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಆದರೆ ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ. ಸೂಕ್ತ ವಯಸ್ಸಿನಲ್ಲಿ ವಿವಾಹ ಆಗದಿರುವುದು, ಧರ್ಮ ವಿರೋಧಿ ವಿವಾಹ ವಿಚ್ಛೇದನ ಹೆಚ್ಚುತ್ತಿರುವುದು, ಹಾಗೂ ಸಂತತಿ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿರುವುದೂ ಧರ್ಮವಲ್ಲ. ಇದರಿಂದ ತಲೆಮಾರಿನಿಂದ ತಲೆಮಾರಿಗೆ ಜನಸಂಖ್ಯೆ ಕಡಿಮೆಯಾಗಿ ನಮ್ಮ ದೇಶದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಬಹುದು. ಪ್ರಕೃತಿ ಸಹಜ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮಕ್ಷತ್ರಿಯ ಸಂಘದ ವತಿಯಿಂದ 14ನೇ ವರ್ಷದ ಶ್ರೀ ಸೀತಾರಾಚಂದ್ರ ಕಲ್ಯಾಣೋತ್ಸವ ಬುಧವಾರ ವೈಭದಿಂದ ಜರುಗಿತು. ಶ್ರೀಮದ್ ಸ್ವರ್ಣವಲ್ಲಿ ಮಠಾಧೀಶ ಶ್ರಿಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಸಾನಿಧ್ಯದಲ್ಲಿ ವಿದ್ವಾನ್ ವೇದಮೂರ್ತಿ ಕಟ್ಟೆ ಶಂಕರ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಹಾಗೂ ಬಾಡಾ ಸುಬ್ರಹ್ಮಣ್ಯ ಭಟ್ಟರ ಸಹಭಾಗಿತ್ವದಲ್ಲಿ ವಿವಿಧ ಧಾರ್ಮಿಕ ವಿಧಿಗಳ ಮೂಲಕ ಸೀತಾರಾಮಚಂದ್ರ ದೇವರ ವಿವಾಹ ನಡೆಯಿತು. ಸೇವಾಕರ್ತರಾದ ಚೇತನಾ ಮತ್ತು ವೆಂಕಟರಮಣ ಬಿಜೂರು ಹಾಗೂ ಸುಮಿತಾ ಮತ್ತು ಗುರುಪ್ರಕಾಶ್ ಬಂಗ್ಲಮನೆ ಮಯ್ಯಾಡಿ, ಪರಮೇಶ್ವರ ಹೋಬಳಿದಾರ್, ರಾಮಕೃಷ್ಣ ಶೇರುಗಾರ್ ಮೊದಲಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸತತ 17 ವರ್ಷಗಳಿಂದ ಕಂಪ್ಯೂಟರ್ ಸಾಪ್ಟವೇರ್ ಮತ್ತು ಹಾರ್ಡವೇರ್ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಗುಣಮಟ್ಟದ ಉದ್ಯೋಗಾಧಾರಿತ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದರೊಂದಿಗೆ ಹೊಸ ಇತಿಹಾಸವನ್ನು ಸೃಷ್ಠಿಸುವತ್ತಾ ಸಾಗುತ್ತಿರುವ ಏಕೈಕ ಸಂಸ್ಥೆ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಕುಂದಾಪುರ ಡಿಗ್ರಿಯಾದವರಿಗೆ PGDCA & PGCTTC, ಪಿಯುಸಿಯಾದವರಿಗೆ ADCA & CTTC, SSLCಯಾದವರಿಗೆ, HDCA & DCA ಮತ್ತು ಕಡಿಮೆ ಅವಧಿಯಲ್ಲಿ ಮುಗಿಸಬಹುದಾದ ಕೋರ್ಸುಗಳಾದ MS-Office, DOA, Basics in Computer, DTP( Desktop Publishing), Programming, Tally with GST, Kannada Typings (Nudi-Bharaha), English Speed typing ಕೋರ್ಸುಗಳು ಲಭ್ಯವಿರುತ್ತದೆ. ನಮ್ಮಲ್ಲಿ ಯಾವುದೇ ಕೋರ್ಸಿನ ತರಬೇತಿಯ ನಂತರ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಬೋರ್ಡನಿಂದ Govt Certificate ನೀಡಲಾಗುವುದು. ಪ್ರತಿ ತಿಂಗಳಲ್ಲಿ ಅತ್ಯಂತ ಹೆಚ್ಚು ಹಾಜರಾತಿ ಇರುವ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ಪ್ರತಿಯೊಬ್ಬರಿಗೂ ಪ್ರತ್ಯೇಕ ಕಂಪ್ಯೂಟರ್ ನೀಡಿ ಅನುಭವಿ ಅದ್ಯಾಪಕವೃಂದದಿಂದ ಬೋಧಿಸಲಾಗುವುದು. ಮಹಿಳೆಯರಿಗಾಗಿ “Special…

Read More