Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಗವಂತನ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಅದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ಹೇಳಿದರು. ಬುಧವಾರ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ 14ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಆದರೆ ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ. ಸೂಕ್ತ ವಯಸ್ಸಿನಲ್ಲಿ ವಿವಾಹ ಆಗದಿರುವುದು, ಧರ್ಮ ವಿರೋಧಿ ವಿವಾಹ ವಿಚ್ಛೇದನ ಹೆಚ್ಚುತ್ತಿರುವುದು, ಹಾಗೂ ಸಂತತಿ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿರುವುದೂ ಧರ್ಮವಲ್ಲ. ಇದರಿಂದ ತಲೆಮಾರಿನಿಂದ ತಲೆಮಾರಿಗೆ ಜನಸಂಖ್ಯೆ ಕಡಿಮೆಯಾಗಿ ನಮ್ಮ ದೇಶದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಬಹುದು. ಪ್ರಕೃತಿ ಸಹಜ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮಕ್ಷತ್ರಿಯ ಸಂಘದ ವತಿಯಿಂದ 14ನೇ ವರ್ಷದ ಶ್ರೀ ಸೀತಾರಾಚಂದ್ರ ಕಲ್ಯಾಣೋತ್ಸವ ಬುಧವಾರ ವೈಭದಿಂದ ಜರುಗಿತು. ಶ್ರೀಮದ್ ಸ್ವರ್ಣವಲ್ಲಿ ಮಠಾಧೀಶ ಶ್ರಿಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಸಾನಿಧ್ಯದಲ್ಲಿ ವಿದ್ವಾನ್ ವೇದಮೂರ್ತಿ ಕಟ್ಟೆ ಶಂಕರ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಹಾಗೂ ಬಾಡಾ ಸುಬ್ರಹ್ಮಣ್ಯ ಭಟ್ಟರ ಸಹಭಾಗಿತ್ವದಲ್ಲಿ ವಿವಿಧ ಧಾರ್ಮಿಕ ವಿಧಿಗಳ ಮೂಲಕ ಸೀತಾರಾಮಚಂದ್ರ ದೇವರ ವಿವಾಹ ನಡೆಯಿತು. ಸೇವಾಕರ್ತರಾದ ಚೇತನಾ ಮತ್ತು ವೆಂಕಟರಮಣ ಬಿಜೂರು ಹಾಗೂ ಸುಮಿತಾ ಮತ್ತು ಗುರುಪ್ರಕಾಶ್ ಬಂಗ್ಲಮನೆ ಮಯ್ಯಾಡಿ, ಪರಮೇಶ್ವರ ಹೋಬಳಿದಾರ್, ರಾಮಕೃಷ್ಣ ಶೇರುಗಾರ್ ಮೊದಲಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸತತ 17 ವರ್ಷಗಳಿಂದ ಕಂಪ್ಯೂಟರ್ ಸಾಪ್ಟವೇರ್ ಮತ್ತು ಹಾರ್ಡವೇರ್ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಗುಣಮಟ್ಟದ ಉದ್ಯೋಗಾಧಾರಿತ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದರೊಂದಿಗೆ ಹೊಸ ಇತಿಹಾಸವನ್ನು ಸೃಷ್ಠಿಸುವತ್ತಾ ಸಾಗುತ್ತಿರುವ ಏಕೈಕ ಸಂಸ್ಥೆ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಕುಂದಾಪುರ ಡಿಗ್ರಿಯಾದವರಿಗೆ PGDCA & PGCTTC, ಪಿಯುಸಿಯಾದವರಿಗೆ ADCA & CTTC, SSLCಯಾದವರಿಗೆ, HDCA & DCA ಮತ್ತು ಕಡಿಮೆ ಅವಧಿಯಲ್ಲಿ ಮುಗಿಸಬಹುದಾದ ಕೋರ್ಸುಗಳಾದ MS-Office, DOA, Basics in Computer, DTP( Desktop Publishing), Programming, Tally with GST, Kannada Typings (Nudi-Bharaha), English Speed typing ಕೋರ್ಸುಗಳು ಲಭ್ಯವಿರುತ್ತದೆ. ನಮ್ಮಲ್ಲಿ ಯಾವುದೇ ಕೋರ್ಸಿನ ತರಬೇತಿಯ ನಂತರ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಬೋರ್ಡನಿಂದ Govt Certificate ನೀಡಲಾಗುವುದು. ಪ್ರತಿ ತಿಂಗಳಲ್ಲಿ ಅತ್ಯಂತ ಹೆಚ್ಚು ಹಾಜರಾತಿ ಇರುವ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ಪ್ರತಿಯೊಬ್ಬರಿಗೂ ಪ್ರತ್ಯೇಕ ಕಂಪ್ಯೂಟರ್ ನೀಡಿ ಅನುಭವಿ ಅದ್ಯಾಪಕವೃಂದದಿಂದ ಬೋಧಿಸಲಾಗುವುದು. ಮಹಿಳೆಯರಿಗಾಗಿ “Special…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಮತ್ತು ಬೈಂದೂರು ತಾಲ್ಲೂಕು ನಾಡದೋಣಿ ಮೀನುಗಾರರ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಮರವಂತೆ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಬಳಿ ಸಾಮೂಹಿಕ ಸಮುದ್ರ ಪೂಜೆ ನಡೆಯಿತು. ಮರವಂತೆ ನಾಗೇಂದ್ರ ಭಟ್ ಪೂಜಾವಿಧಿಗಳನ್ನು ನಡೆಸಿಕೊಟ್ಟರು. ಪೂಜೆಯ ಬಳಿಕ ಮೀನುಗಾರ ಪ್ರಮುಖರು ನೀರಿಗಿಳಿದು ಸಮುದ್ರ ದೇವರಿಗೆ ಹೂವು, ಹಣ್ಣು, ಹಾಲು ಸಮರ್ಪಿಸಿದರು. ಉಪಸ್ಥಿತರಿದ್ದ ಮೀನುಗಾರರು ಪ್ರಸಾದ ಸ್ವೀಕರಿಸಿದರು. ಅದರ ಪೂರ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಎರಡೂ ಕಡೆ ಶೀಘ್ರದಲ್ಲಿ ಆರಂಭವಾಗುವ ಹೊಸ ಮೀನುಗಾರಿಕಾ ಋತುವಿನಲ್ಲಿ ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆ ಕರುಣಿಸುವಂತೆ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು. ಬೈಂದೂರು ತಾಲ್ಲೂಕು ಸಂಘಟನೆಯ ಅಧ್ಯಕ್ಷ ಆನಂದ ಖಾರ್ವಿ, ಕಾರ್ಯದರ್ಶಿ ಪುರುಷೋತ್ತಮ ಖಾರ್ವಿ, ಅಣ್ಣಯ್ಯ ಖಾರ್ವಿ, ಮಾಜಿ ಅಧ್ಯಕ್ಷ ಸೋಮಶೇಖರ ಖಾರ್ವಿ, ಕುಂದಾಪುರ ಸಂಘಟನೆಯ ಅಧ್ಯಕ್ಷ ಮಂಜು ಬಿಲ್ಲವ, ಮರವಂತೆ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಎಂ. ಮೋಹನ ಖಾರ್ವಿ, ಉಭಯ ಸಂಘಟನೆಗಳ ಪ್ರಮುಖರು ಹಾಗೂ ಸದಸ್ಯರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ…

Read More

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಕಂಬದಕೋಣೆ ಶಾಖೆ ಲೋಕಾರ್ಪಣೆ ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಹಕಾರ ಸಂಸ್ಥೆಗಳನ್ನು ಹುಟ್ಟುಹಾಕಿ ಮುನ್ನಡೆಸುವುದು ಅಧಿಕಾರದ ಆಸೆಯಿಂದ ಅಲ್ಲ. ಅವುಗಳ ಮೂಲಕ ಜನರ ಸೇವೆ ಮಾಡಲು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ. ಎನ್. ರಾಜೇಂದ್ರಕುಮಾರ್ ಹೇಳಿದರು. ಖಂಬದಕೋಣೆ ಉಡುಪ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸಲಿರುವ ಬೈಂದೂರಿನ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋಪರೇಟಿವ್‌ನ ಐದನೆ ಶಾಖೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಸೌಹಾರ್ದ ಪದ ಸರ್ವರನ್ನು ಒಳಗೊಂಡು ಮುಂದಡಿ ಇಡಬೇಕು ಎಂಬ ಅರ್ಥ ನೀಡುತ್ತದೆ. ಹತ್ತು ವರ್ಷಗಳ ಹಿಂದೆ ಸಹಕಾರಿ ರಂಗದ ಅನುಭವಿ ಎಸ್. ರಾಜು ಪೂಜಾರಿ ಅವರಿಂದ ಆರಂಭವಾದ ಶ್ರೀರಾಮ ಸೌಹಾರ್ದ ಕೋಪರೇಟಿವ್ ಆ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಆರಂಭದ ವರ್ಷದಿಂದಲೇ ಲಾಭ ಗಳಿಸಲಾರಂಭಿಸಿದ ಸಂಸ್ಥೆ ಈಗ ಐದು ಶಾಖೆಗಳೊಂದಿಗೆ ದಶಮಾನೋತ್ಸವ ಆಚರಿಸುವ ಹೊಸ್ತಿಲಲ್ಲಿ ನಿಂತಿದೆ. ಶೀಘ್ರ ರಾಜ್ಯದ ಸರ್ವಶ್ರೇಷ್ಠ ಸಂಸ್ಥೆಯಾಗಿ ಬೆಳೆಯಲಿ ಎಂದು ಅವರು ಹಾರೈಸಿದರು. ಭದ್ರತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜದ ಸ್ವಸ್ಥ ಹಾಳು ಮಾಡುವವರನ್ನು ಎಲ್ಲರು ಒಟ್ಟಾಗಿ ವಿರೋಧಿಸಿ ಬಹಿಷ್ಕರಿಸಬೇಕು. ದೌರ್ಜನ್ಯ ಎಸಗುವ ಹಾಗೂ ಇದಕ್ಕೆ ಪ್ರೇರಣೆ ನೀಡುವ ವ್ಯಕ್ತಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸ ಬೇಕು ಎಂದು ಶಂಕರ ದೇವಾಡಿಗ ಹೇಳಿದರು. ಅವರು ನಾಗೂರು ಗೋಪಾಲಕೃಷ್ಣ ಕಲ್ಚರಲ್ ಸಭಾಭವನದಲ್ಲಿ ಕಿರಿಮಂಜೇಶ್ವರ ಗ್ರಾಮದ ಗಂಗೆಬೈಲು ಗಾಂಧಿನಗರದ ಕಾಲೋನಿಯಲ್ಲಿ ಮೇ.18ರಂದು ರಾತ್ರಿ ದೇವಾಡಿಗ ಕುಟುಂಬದವರ ಮೇಲೆ ನಡೆದ ಆಯುಧದಿಂದ ಹಲ್ಲೆ ಘಟನೆಯನ್ನು ಖಂಡಿಸಿ ಉಡುಪಿ ಹಾಗೂ ಬೈಂದೂರು ಎಲ್ಲ ದೇವಾಡಿಗ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಹಿಳೆಯರು ಇರುವ ಮನೆಯ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡುವುದು ಆಮಾನವೀಯ ಕೃತ್ಯವಾಗಿದ್ದು, ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಪುರಷ್ಕರಿಸಬಾರದು. ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು. ಇಂತಹ ದುರ್ಘಟನೆ ಮರುಕಳಿಸದಿರಲು ಎಲ್ಲ ಸಮಾಜ ಭಾಂದವರು ಒಗ್ಗಟ್ಟಾಗಿರಬೇಕು ಎಂದು ತಿಳಿಸಿದರು. ಸಭೆಯಲ್ಲಿ ಈ ಹೇಯ್ಯ ಕೃತ್ಯವನ್ನು ಖಂಡಿಸಲಾಯಿತು. ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕರ್ತ್ಯವ್ಯವನ್ನು ಅಭಿನಂದಿಸಲಾಯಿತು. ಉಳಿದ ಆರೋಪಿಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು 3,49,599 ಮತಗಳ ಅಂತರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 7,18,916, ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಅವರು 3.69.317 ಪಡೆದಿದ್ದಾರೆ. 7,510 ನೋಟಾ ಮತಗಳು ಬಿದ್ದಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಲೀಡ್ ಪಡೆದುಕೊಂಡಿದೆ. ಬಿಜೆಪಿ ಗೆಲುವಿನ ಸೂಚನೆ ದೊರೆಯುತ್ತಿದ್ದಂತೆ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಲಿದರು. ► ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿ.ವೈ. ರಾಘವೇಂದ್ರಗೆ ವಿಜಯಮಾಲೆ – https://kundapraa.com/?p=32250 

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಯಡಿಯೂರಪ್ಪ ಪುತ್ರ ಹಾಲಿ ಸಂಸದ ಬಿ. ವೈ ರಾಘವೇಂದ್ರ ಅವರು 2,22,706 ಮತಗಳ ಅಂತರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ರಾಘವೇಂದ್ರ ಅವರ ಗೆಲುವಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ 73,613 ಮತಗಳ ಅಂತರದ ಗರಿಷ್ಠ ಲೀಡ್ ನೀಡಿದ್ದರೇ, ಸೊರಬ ಕ್ಷೇತ್ರ 2,821 ಮತಗಳ ಕನಿಷ್ಠ ಲೀಡ್ ನೀಡಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ – 7,29,051, ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ – 5,06,345 ಪಡೆದಿದ್ದಾರೆ. 6866 ನೋಟಾ ಮತಗಳು ಬಿದ್ದಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಲೀಡ್ ಪಡೆದುಕೊಂಡಿದ್ದಾರೆ. ಬಿಜೆಪಿ ಗೆಲುವಿನ ಸೂಚನೆ ದೊರೆಯುತ್ತಿದ್ದಂತೆ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಲಿದರು. ಎಲ್ಲೆಲ್ಲಿ ಲೀಡ್ ಎಷ್ಟು? *ಸಾಗರ – 22,996. *ಸೊರಬ – 2,821. *ಬೈಂದೂರು – 73,612. *ಶಿವಮೊಗ್ಗ ನಗರ – 47,908.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮರವಂತೆಯ ಮೀನುಗಾರಿಕಾ ಹೊರಬಂದರು ಕಾಮಗಾರಿ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಲಾರಿಯೊಂದು ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಡಲಿಗೆ ಇಳಿದಿದೆ. ಲಾರಿಯ ಮುಂಭಾಗ ನೀರಿನಲ್ಲಿ ಮುಳುಗುವ ಮುನ್ನ ಚಾಲಕ ವಾಹನದಿಂದ ಹೊರಕ್ಕೆ ಜಿಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಮಾರು ಎಂಟು ವರ್ಷಗಳ ಹಿಂದೆ ಆರಂಭವಾದ ಬಂದರಿನ ಕಾಮಗಾರಿ ದೀರ್ಘ ಸಮಯದಿಂದ ಸ್ಥಗಿತವಾಗಿದೆ. ಮಾಡಿದ ಕಾಮಗಾರಿಯೂ ಸಮರ್ಪಕವಾಗಿಲ್ಲ ಎಂದು ಇಲ್ಲಿನ ಮೀನುಗಾರರು ದೂರುತ್ತಿದ್ದಾರೆ. ಕಾಮಗಾರಿಯ ವಿನ್ಯಾಸದಲ್ಲಿ ಬದಲಾವಣೆ ಮಾಡಿದ ಕಾರಣ ಅದಕ್ಕೆ ತಗಲುವ ಹಣವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲವಾದ್ದರಿಂದ ಗುತ್ತಿಗೆ ವಹಿಸಿಕೊಂಡ ತಮಿಳುನಾಡಿನ ಎನ್‌ಎಸ್‌ಕೆ ಬಿಲ್ಡರ‍್ಸ್ ಎಂಬ ಸಂಸ್ಥೆ ಒಂದು ವರ್ಷದ ಹಿಂದೆಯೇ ಕೆಲಸ ನಿಲ್ಲಿಸಿತ್ತು. ಅದರ ಪರಿಣಾಮವಾಗಿ ಸಂಸ್ಥೆಯ ಯಂತ್ರೋಪಕರಣಗಳು, ವಾಹನಗಳು ತುಕ್ಕು ಹಿಡಿದು ಬಳಸಲಾರದ ಸ್ಥಿತಿಗೆ ತಲಪಿವೆ. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಸಂಸದ ಬಿ. ವೈ. ರಾಘವೇಂದ್ರ ಈ ಹಿಂದೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳಿಗೆ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಸ್ರೂರು ಮಾರ್ಕೋಳಿ ಪಾಳುಬಿದ್ದ ಚಿತ್ತೇರಿ ಬ್ರಹ್ಮಗುಂಡದಲ್ಲಿ ತುಳು ನಾಡ ಸಿರಿಯ ಬದುಕಿನ ಪೂರ್ವಾಧ ಭಾಗದ ಪ್ರಾಚೀನ ಕಾಲದ ಬ್ರಹ್ಮ (ಬೆರ್ಮರ್) ಮೂರ್ತಿ ಹತ್ತೆಯಾಗಿದ್ದು, ಹಿಂದೆ ಬ್ರಹ್ಮನ ಆರಾಧನೆ ಮಾಡುತ್ತಿದ್ದರು ಎನ್ನೋದಕ್ಕೆ ಮೂರ್ತಿ ಸಾಕ್ಷಿಯಾಗಿದೆ. ಪತ್ತೆಯಾದ ಬ್ರಹ್ಮನ ಶಿಲಾಮೂರ್ತಿ ಕುದುರೆಯೇರಿದ ಯೋಧನಂತಿದ್ದು, ಕೈಯಲ್ಲಿ ಛಾವಟಿ ಹಿಡಿದಿ ಭಂಗಿಯಲ್ಲಿದೆ. ಕಾಲಬಳಿಯಲ್ಲಿ ಹುಲಿಯಿದೆ. ಯೋಧ ಕಿರೀಟ ಧರಿಸಿದ್ದು.ಯೋಗ್ಯವಾದ ಉಡುಗೆ ತೊಡಿಗೆ ಧರಿಸಿದ್ದಾನೆ. ಕುದುರೆ ಏರಿದ ಬ್ರಹ್ಮನ ಕೈಯಲ್ಲಿ ಛಾವಟಿಯಿದ್ದು, ಪ್ರಭಾವಳಿಯಲ್ಲಿ ನಾಗನಂತೆ ಗುರುತಿಸುವ ಕೆತ್ತನೆ ಇದೆ. ಕಾಲಬಳಿ ಹುಲಿ ಸಹಿತ ಈ ಎಲ್ಲಾ ಕುರುಹುಗಳು ಜೈನ ಬ್ರಹ್ಮ ಹಾಗೂ ಯಕ್ಷ ಬ್ರಹ್ಮನ ಕಲ್ಪನೆಯಿಂದ ಭಿನ್ನವಾಗಿದ್ದು ಪುರಾತನ ತುಳು ಕ್ರಮ ಎಂದು ಗುರುತಿಸಬಹುದು. ಲಾಂಛನದಲ್ಲಿ ಅವಳಿ ನಾಗನ ಹೆಡೆಯಿದ್ದು, ನಾಗ ಹಾಗೂ ಬ್ರಹ್ಮನ ಸಂಯಕ್ತವಾಗಿ ಆರಾಧನ ಮಾಡುತ್ತಿರುವ ಪದ್ದತಿಗೆ ಪೂರಕವಾಗಿದೆ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜ್ ಪ್ರೊ. ಪುರುಷೋತ್ತಮ ಬಲ್ಲಾಯ ಹೇಳಿದ್ದಾರೆ. ಸುಮಾರು ಎಂಟನೇ ಶತಮನಾದ ಕಾಲದ…

Read More