ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಯಡಿಯೂರಪ್ಪ ಪುತ್ರ ಹಾಲಿ ಸಂಸದ ಬಿ. ವೈ ರಾಘವೇಂದ್ರ ಅವರು 2,22,706 ಮತಗಳ ಅಂತರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ವಿರುದ್ಧ ಜಯ ಸಾಧಿಸಿದ್ದಾರೆ.
ರಾಘವೇಂದ್ರ ಅವರ ಗೆಲುವಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ 73,613 ಮತಗಳ ಅಂತರದ ಗರಿಷ್ಠ ಲೀಡ್ ನೀಡಿದ್ದರೇ, ಸೊರಬ ಕ್ಷೇತ್ರ 2,821 ಮತಗಳ ಕನಿಷ್ಠ ಲೀಡ್ ನೀಡಿದೆ.
ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ – 7,29,051, ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ – 5,06,345 ಪಡೆದಿದ್ದಾರೆ. 6866 ನೋಟಾ ಮತಗಳು ಬಿದ್ದಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಲೀಡ್ ಪಡೆದುಕೊಂಡಿದ್ದಾರೆ.
ಬಿಜೆಪಿ ಗೆಲುವಿನ ಸೂಚನೆ ದೊರೆಯುತ್ತಿದ್ದಂತೆ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಲಿದರು.

ಎಲ್ಲೆಲ್ಲಿ ಲೀಡ್ ಎಷ್ಟು?
*ಸಾಗರ – 22,996.
*ಸೊರಬ – 2,821.
*ಬೈಂದೂರು – 73,612.
*ಶಿವಮೊಗ್ಗ ನಗರ – 47,908.
*ಶಿವಮೊಗ್ಗ ಗ್ರಾಮಾಂತರ – 18,126.
*ಭದ್ರಾವತಿ – 5,645.
*ಶಿಕಾರಿಪುರ – 21,670.
*ತೀರ್ಥಹಳ್ಳಿ – 29,532.
















