ಕುಂದಾಪುರ: ಕನ್ನಡ, ಇಂಗ್ಲೀಷ್, ಹಿಂದಿ, ಮಲಯಾಳ ಮತ್ತು ತುಳು ಸಹಿತ ಐದು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಲೇಖಕಿ ಇಲ್ಲಿನ ಡಾ| ಪಾರ್ವತಿ ಜಿ. ಐತಾಳ್ ಅವರಿಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇದುವರೆಗೆ ನೀಡಿರುವ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2018ನೇ ಸಾಲಿನ “ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಡೆಮಿಯ ಅಧ್ಯಕ್ಷ ಪ್ರೊ| ಅರವಿಂದ ಮಾಲಗತ್ತಿ, ವಿಧಾನ ಪರಿಷತ್ ಸದಸ್ಯ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಎಂ.ಎ. ಗೋಪಾಲ ಸ್ವಾಮಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್, ಕನ್ನಡ – ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎಂ. ಜಾನಕಿ, ವಿಮರ್ಶಕ ಡಾ| ಸಿ.ಎನ್. ರಾಮಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರಿನ ಕೇಂದ್ರಭಾಗದಲ್ಲಿ ಮೊದಲ ಭಾರಿಗೆ ಆರಂಭಗೊಳ್ಳುತ್ತಿರುವ ’ರುಪೀ ಮಾಲ್’ ಶುಭಾರಂಭಕ್ಕೆ ಸಿದ್ಧತೆ ನಡೆಸಿದ್ದು, ಎಪ್ರಿಲ್ 1ರಿಂದ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲಿದೆ. ’ರುಪೀ ಮಾಲ್’ ಬೈಂದೂರು ಭಾಗದ ಗ್ರಾಹಕರ ಎಲ್ಲಾ ಬಗೆಯ ಅಗತ್ಯತೆಗಳನ್ನು ಪೂರೈಸುವ ಪ್ರಪ್ರಥಮ ಮಾಲ್ ಎಂದೆನಿಸಿಕೊಳ್ಳಲಿದೆ. ಮಾಲ್‌ನಲ್ಲಿ ಸುಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್, ಟೆಕ್ಸ್‌ಟೈಲ್ & ಫ್ಯಾಶನ್, ಹೋಟೆಲ್ ಮತ್ತು ರೆಸ್ಟೋರೆಂಟ್, ತರಕಾರಿ ಅಂಗಡಿ, ಮೀನು ಮತ್ತು ಮಾಂಸದ ಅಂಗಡಿ, ಸೈಕಲ್ ಶಾಪ್, ಚಹಾದ ಅಂಗಡಿ, ಐಸ್‌ಕ್ರೀಮ್ ಪಾರ್ಲರ್, ಬ್ಯೂಟಿ ಪಾರ್ಲರ್ ಇನ್ನಿತರ ಉದ್ಯಮಗಳು ಸೇರಿದಂತೆ ವಿವಿಧ ವ್ಯವಹಾರಗಳು ಆರಂಭಗೊಳ್ಳಲಿದ್ದು ನಿಮ್ಮ ಎಲ್ಲಾ ಅಗತ್ಯಗಳನ್ನೂ ಒಂದೇ ಸ್ಥಳದಲ್ಲಿ ಪೂರೈಸಿಕೊಳ್ಳಬಹುದಾಗಿದೆ. ಪ್ರಸ್ತುತ ಬೈಂದೂರಿನ ಬಹುಪಾಲು ಜನರು ತಮ್ಮ ಅಗತ್ಯ ವಸ್ತುಗಳ ಖರೀದಿಗಾಗಿ ಅಕ್ಕಪಕ್ಕದ ಊರುಗಳನ್ನು ಅವಲಂಭಿಸಿಕೊಂಡಿದ್ದಾರೆ. ಆದರೆ ಬೈಂದೂರು ಹಾಗೂ ಸುತ್ತಲಿನ ಗ್ರಾಮಗಳ ಜನರು ತಮ್ಮ ಅವಶ್ಯಕತೆಗಳಿಗಾಗಿ ಬೈಂದೂರಿಗೆ ಬರುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. 6 ತಿಂಗಳುಗಳ ಅವಧಿಯಲ್ಲಿ ರುಪೀ ಮಾಲ್‌ನಲ್ಲಿ ಪೂಟ್‌ವೇರ್ ಅಂಗಡಿ, ಜಿಮ್, ಸಿನೆಮಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಕ್ಷಿಪ್ರ ಬೆಳವಣಿಗೆಯ ಉದ್ಯಮ ವಿಭಾಗದಲ್ಲಿ ಬಿಜಿನೆಸ್ ಎಕ್ಸ್‌ಲೆಕ್ಸ್ ಅವಾರ್ಡ್ 2019 (ಉದ್ಯಮ ಶ್ರೇಷ್ಠತಾ ಪ್ರಶಸ್ತಿ) ದೊರೆತಿದೆ. ಈ ಪ್ರಶಸ್ತಿಯ ಮೂಲಕ ಆಹಾರ ಮತ್ತು ಅತಿಥಿ ಸತ್ಕಾರ ವಿಭಾಗದಲ್ಲಿ ಗುಣಮಟ್ಟ ಹಾಗೂ ವೇಗದ ಪ್ರಗತಿ ಸಾಧಿಸಿ ಛಾಪು ಮೂಡಿಸಿರುವ ಸಂಸ್ಥೆಯ ಕೀರ್ತಿ ಮುಕುಟಕ್ಕೆ ಗರಿ ಸೇರಿದಂತಾಗಿದೆ. ಮುಂಬೈನ ಬಿಲ್ಲವ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಮಾ.9ರಂದು ಮುಂಬೈನಲ್ಲಿ ಆಯೋಜಿಸಿದ್ದ ಉದ್ಯಮ ಸಮಾವೇಶಲ್ಲಿ ’ಉದ್ಯಮ ಶ್ರೇಷ್ಠತಾ ಪ್ರಶಸ್ತಿ’ಯನ್ನು ಶೆಪ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಪ್ರೈ. ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭ ಆದಿತ್ಯ ಬಿರ್ಲಾ ಲೈಫ್ ಇನ್ಸುರೆನ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಸುವರ್ಣ, ಬಿಲ್ಲವ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಅಧ್ಯಕ್ಷ ಎನ್.ಟಿ ಪೂಜಾರಿ, ಕಾರ್ಯದರ್ಶಿ ಆನಂದ ಪೂಜಾರಿ ಹಾಗೂ ಎಚ್‌ಡಿಎಫ್‌ಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿಯ ಯಶಸ್ಸಿನಲ್ಲಿ ಪ್ರೇಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಸುರಭಿ ಸಂಸ್ಥೆ ೧೯ ವರ್ಷಗಳಿಂದ ಬೈಂದೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಚಟುವಟಿಕೆಗಳ ಜತೆಗೆ ವಿವಿಧ ಕಲೆಗಳಲ್ಲಿ ಮಕ್ಕಳನ್ನು ತರಬೇತಿಗೊಳಿಸುವ ಮೂಲಕ ಸದಭಿರುಚಿಯ ಸಾಂಸ್ಕೃತಿಕ ಎಚ್ಚರ ಮೂಡಿಸಿರುವುದು ದೊಡ್ಡ ಸಾಧನೆ ಎಂದು ವೆಂಕಟೇಶ ಪ್ರಸಾದ್ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ – ೨೦೧೯ ತ್ರಿದಿನ ನಾಟಕೋತ್ಸವದ ಅಂತಿಮ ದಿನವಾದ ಮಂಗಳವಾರ ದಿನದ ನುಡಿ ಆಡಿದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ತಾವು ಅದನ್ನು ತ್ಯಜಿಸಿ ತಮ್ಮ ಆಸಕ್ತಿಯ ರಂಗಭೂಮಿಯಲ್ಲಿ ಪೂರ್ಣಕಾಲಿಕವಾಗಿ ತೊಡಗಿಕೊಂಡಿರುವುದಾಗಿ ಹೇಳಿದ ಅವರು ತಮ್ಮ ತಾಯಿ ಬೈಂದೂರಿನವರಾಗಿರುವುದರಿಂದ ತಮ್ಮಲ್ಲಿ ಈ ಮಣ್ಣಿನ ಗುಣ ಸೇರಿದೆ ಎಂದರು. ಸನ್ಮಾನ ಸ್ವೀಕರಿಸಿದ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಪ್ರವರ್ತಕ ಅರೆಹೊಳೆ ಸದಾಶಿವ ರಾವ್ ತಮ್ಮ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನಲ್ಲಿ ರಂಗಭೂಮಿ ಚಟುವಟಿಕೆಗಳನ್ನು, ನಂದಗೋಕುಲ ಸಂಘಟನೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜನರ ಬೆಂಬಲವಿಲ್ಲದೇ ರಂಗಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿಯೂ ಸಾಂಸ್ಕೃತಿಕ ಚಟುವಟಿಕೆಗೆ ಬೆಂಬಲ ನೀಡುವ ಕೆಲಸ ಮಹತ್ವದ್ದು. ಇದು ಹೀಗೆಯೇ ಮುಂದುವರಿಯಬೇಕಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮಾ ಕೊಡಗು ಆಶಿಸಿದರು. ಅವರು ಸೋಮವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ – 2019 ತ್ರಿದಿನ ನಾಟಕೋತ್ಸವ ಎರಡನೇ ದಿನ ವಿಶೇಷ ರೀತಿಯಲ್ಲಿ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸುರಭಿ ಉಪಾಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಕುಂದಾಪುರ ಕಾರ್ಯದರ್ಶಿ ವೆಂಕಟೇಶ ಕೋಣೆ ಅತಿಥಿಯಾಗಿದ್ದರು. ಸುರಭಿ ನಿರ್ದೇಶಕ ಸುಧಾಕರ ಪಿ. ಸ್ವಾಗತಿಸಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ವಂದಿಸಿದರು. ನಿಶ್ಚಿತಾ ಪಡುವರಿ ಸನ್ಮಾನಿತರ ಪರಿಚಯ ವಾಚಿಸಿದರು. ಸದಸ್ಯರಾದ ಭಾಸ್ಕರ ಬಾಡ, ಗಣೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ಸಂಸದರು ಪ್ರಭುಗಳಲ್ಲ. ಅವರು ಎಂದಿಗೂ ಜನರ ಪ್ರತಿನಿಧಿ ಹಾಗೂ ಉತ್ತರದಾಯಿಗಳು ಎಂಬ ಪ್ರಜ್ಞೆ ಜಾಗೃತಗೊಳ್ಳುವ ಜೊತೆಗೆ ಮತದಾನ ಮಾಡುವ ವಿಧಾನ ಹಾಗೂ ಮತದಾನ ಮಾಡದೇ ಇರುವ ಪ್ರವೃತ್ತಿಯಲ್ಲಿಯೂ ಬದಲಾವಣೆಯಾಗಬೇಕಿದೆ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು. ಅವರು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ನೇತೃತ್ವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗ ಹಾಗೂ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಲಾದ ’ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಬಂಧ, ಜಾತಿ, ಧರ್ಮ, ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುತ್ತೇನೆ ಎಂಬ ಬದ್ದತೆ ಇದ್ದರೇ, ಮತದಾರ ಸ್ಪಂದನೀಯ ಹಾಗೂ ವಿವೇಚನೀಯನೂ ಆದರೆ ಮತ ಮಾರಾಟಕ್ಕಿಲ್ಲ ಎಂಬುದು ಅರ್ಥ ಕಂಡುಕೊಳ್ಳಲಿದೆ ಎಂದರು. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂಚಾಲಕ ದಾಮೋದರ ಆಚಾರ್ಯ ಮಾತನಾಡಿ…
ಕುಂದಾಪುರ: ಹೆಮ್ಮಾಡಿ ಸಮೀಪದ ಕಟ್‌ಬೆಲೂ¤ರಿನ ಸುಳೆÕಯ ಮನೆಯಲ್ಲಿ ಗುಲಾಬಿ (55) ಅವರನ್ನು ಕೊಲೆಗೈದ ಆರೋಪದಲ್ಲಿ ಜಡ್ಕಲ್ ಗ್ರಾಮದ ಸೆಳ್ಕೊàಡು ನಿವಾಸಿ ರವಿರಾಜ್ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಫೆ. 28ರಂದು ರಾತ್ರಿ ಗುಲಾಬಿ ಸಾವನ್ನಪ್ಪಿದ್ದು, ಮಾ. 5ರಂದು ಕೊಲೆಯೆಂದು ದೃಢಪಟ್ಟಿತ್ತು. ತನಿಖೆ ನಡೆಸಿದ ಕುಂದಾಪುರ ಪೊಲೀಸರು, ವಾರದೊಳಗೆ ಆರೋಪಿಯನ್ನು ಸಿದ್ದಾಪುರದ ಪೆಟ್ರೋಲ್ ಬಂಕ್ ಸಮೀಪದಿಂದ ಬಂಧಿಸಿದ್ದಾರೆ. ಆತ ಪರಾರಿಯಾಗಲು ಬಳಸಿದ್ದ ಕಾರನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಆರೋಪಿಯು ಗುಲಾಬಿಯ ಮನೆ ಸಮೀಪ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ಕೊಡುವ ಮನೆಯಲ್ಲಿ ವಾಸಿಸುತ್ತಿದ್ದ. ಆತ ಒಂದು ಕಾರು ಹೊಂದಿದ್ದ, ಆದರೆ ಸರಿಯಾದ ಉದ್ಯೋಗ ಇರಲಿಲ್ಲ. ಈತನ ಪತ್ನಿ ಈ ಕಾರ್ಖಾನೆಯ ಕಾರ್ಮಿಕೆಯಾಗಿದ್ದಾರೆ. ರವಿರಾಜ್ ಹಾಗೂ ಗುಲಾಬಿ 2008ರಿಂದಲೂ ಪರಿಚಿತರಾಗಿದ್ದು, ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರವಿತ್ತು. ಫೆ. 28ರಂದು ರಾತ್ರಿ ಗುಲಾಬಿ ಮನೆಗೆ ಬಂದ ರವಿರಾಜ್, ಸಾಲ ತೀರಿಸಲು ಗುಲಾಬಿಯ ಚಿನ್ನಾಭರಣವನ್ನು ಕೇಳಿದ್ದ. ಇದಕ್ಕೆ ಒಪ್ಪದಿದ್ದಾಗ ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೈಮೇಲಿದ್ದ 1 ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೋಟ ಶಿವರಾಮ ಕಾರಂತ ಕಾದಂಬರಿಯ ಪ್ರತಿ ವಾಕ್ಯ, ವಿಸ್ತಾರಗಳು ನಾಡಿನ ಜನರ ಕಷ್ಟ-ಸುಖ ಹಾಗೂ ಸಾಂಸ್ಕೃತಿಕ ಲೋಕವನ್ನು ತೆರೆದಿಡುವ ಕೆಲಸ ಮಾಡಿದೆ. ಅವರ ಕೃತಿ ಚೋಮನ ದುಡಿ ರಂಗಪ್ರಯೋಗ ಕಂಡುಕೊಂಡಾಗಲೆಲ್ಲಾ ಅದು ನಟರ ನಾಟಕವಾಗಿ ಉಳಿದಿದೆ ಎಂದು ರಂಗಭೂಮಿ ಹಾಗೂ ಶಿಕ್ಷಣ ಚಿಂತನ ಪುತ್ತೂರಿನ ಐ. ಕೆ. ಬೋಳುವಾರು ಹೇಳಿದರು. ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ – ೨೦೧೯ ತ್ರಿದಿನ ನಾಟಕೋತ್ಸವವನ್ನು ಬಾಲ ಕಲಾವಿದ ಪ್ರೀತಮ್ ಮುಖಕ್ಕೆ ಬಣ್ಣ ಹಚ್ಚಿ ಉದ್ಘಾಟಿಸಿ ಮಾತನಾಡಿದರು. ಚೋಮನ ದುಡಿ ಯಾವತ್ತಿಗೂ ಆಸೆಯನ್ನು ಹೇಳಿಕೊಳ್ಳುವ ರೂಪಕವಾಗಿ ಉಳಿಯುತ್ತದೆ. ಚೂಮನಿಗೆ ಭೂಮಿಯ ಮೇಲೆ ಆಸೆ ಇದ್ದರೇ, ರಂಗಕಲಾವಿದರಿಗೆ ಕಲಾಗ್ರಾಮದ ಆಗಬೇಕು ಎಂಬ ಆಸೆ ಇದೆ. ಅದು ಸಾಕಾರಗೊಳ್ಳಲಿ ಎಂದು ಆಶಿಸಿದರು. ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಮಾತನಾಡಿ ಸುರಭಿ ಸಂಸ್ಥೆ ರಂಗಚಟುವಟಿಕೆಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನ ಪ್ರದರ್ಶನದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಏಳಜಿತ ಗ್ರಾಮದ ಜೋಗಿಜೆಡ್ಡು ಎಂಬಲ್ಲಿ ನಡೆದಿದೆ. ಪ್ರಸಿದ್ಧ ಕಲಾವಿದ ಉತ್ತರ ಕನ್ನಡದ ಹುಡುಗೋಡು ನಿವಾಸಿ ಚಂದ್ರಹಾಸ (೫೨) ಮೃತರು. ಯಕ್ಷಗಾನ ಪ್ರದರ್ಶನದ ವೇಳೆ ಒಮ್ಮೆ ಕುಣಿದು ಮಾತು ಮುಗಿಸಿ ಮರಳಿ ಕುಣಿತಕ್ಕೆ ಅಣಿಯಾಗುತ್ತಿದ್ದ ವೇಳೆ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪೂನಾ – ಎರ್ನಾಕುಲಂ – ಪುನಾ ಮಾರ್ಗದ ಪೂರ್ಣಾ ಎಕ್ಸ್‌ಪ್ರೆಸ್ ರೈಲಿಗೆ (11097 / 11098) ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಬೈಂದೂರಿನಲ್ಲಿ ನಿಲುಗಡೆ ನೀಡಲಾಗಿದೆ. ಈ ರೈಲು ಪ್ರತಿ ಶನಿವಾರ ರಾತ್ರಿ 23:30ಕ್ಕೆ ಪೂನಾದಿಂದ ಹೊರಟು ಮರುದಿನ ರಾತ್ರಿ 8:45ಕ್ಕೆ ಬೈಂದೂರು ತಲುಪುತ್ತದೆ. ಮತ್ತು ಪ್ರತಿ ಸೋಮವಾರ ರಾತ್ರಿ 23:25ಕ್ಕೆ ಎರ್ನಾಕುಲಂನಿಂದ ಹೊರಟು ಬೆಳಿಗ್ಗೆ 9:20ಕ್ಕೆ ಬೈಂದೂರು ತಲುಪಲಿದೆ. ಬೈಂದೂರಿನಲ್ಲಿ ರೈಲು ನಿಲುಗಡೆಗೆ ಕೋರಿ ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಬೋರ್ಡ್ ಮೇಲೆ ಒತ್ತಡ ತಂದ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ರಾಷ್ಟ್ರೀಯ ರೈಲ್ವೆ ಪ್ರಯಾಣಿಕರ ಪರಾಮರ್ಷಕ ಸಮಿತಿ ಸದಸ್ಯ ಕೆ. ವೆಂಕಟೇಶ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
