Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಎಲ್ಲಾ ಹದಿನಾರು ಆಪಾದಿತರ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ಜನರಿಗೆ ಮಾ.೧ರ ತನಕ ನ್ಯಾಯಾಂಗ ಬಂಧನ ಹಾಗೂ ಇಬ್ಬರಿಗೆ ಫೆ.20ರ ತನಕ ಪೊಲೀಸ್ ಕಸ್ಟಿಡಿಗೆ ಒಪ್ಪಿಸಲಾಗಿದೆ. ಕೋಟ ಪೊಲೀಸ್ ಠಾಣೆ ಸರಿಹದ್ದಿನ ಮಣೂರು ಚಿಕ್ಕಿನಕರೆ ಸಮೀಪ ಸ್ನೇಹಿತರಾದ ಭರತ್ ಶ್ರೀಯಾನ್ ಹಾಗೂ ಯತೀಶ್ ಕರ್ಕೇರ ಎಂಬವರ ತಲವಾರಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ನಡೆದ ನಂತರ ಆಪಾದಿತರು ತಲೆ ಮರೆಸಿಕೊಂಡಿದ್ದು, ವಿವಿಧ ಸ್ಥಳದಲ್ಲಿ ಕೊಲೆಗೆ ಸಂಬಂಧಿಸಿದ ವ್ಯಕ್ತಿಗಳ ಪೊಲೀಸರು ಬಂಧಿಸಿದ್ದರು. ಕೊಲೆಯಲ್ಲಿ ಭಾಗಿ ಹಾಗೂ ಸಾಕ್ಷಿನಾಶ ಮತ್ತು ಕೊಲೆಗಾರರಿಗೆ ಸಹಕಾರ ಮಾಡಿದ ಆರೋಪದಡಿ ಒಟ್ಟು ೧೬ಜನರ ಬಂಧಿಸಿದ್ದು, ಎಲ್ಲರನ್ನು ಕುಂದಾಪುರ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಶ್ರೀಕಾಂತ್ ಮುಂದೆ ಹಾಜರು ಪಡಿಸಲಾಗಿತ್ತು. ಅಭಿಷೇಕ್ ಪಾಲನ್, ರೊಟ್ಟಿ ನಾಗರಾಜ್, ಸಂತೋಷ್ ಕುಂದರ್, ಪ್ರಣವ್ ರಾವ್, ಪವನ್ ಅಮೀನ್, ವಿರೇಂದ್ರ ಆಚಾರ್ಯ, ರಿತೀಶ್ ಕರ್ಕೇರಾ, ಶಂಕರ ಮೊಗವೀರ, ರಾಜಶೇಖರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದ ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಯಾಗಿದ್ದ ಎಚ್‌.ರಾಮಚಂದ್ರ ಭಟ್‌ (72) ಅಲ್ಪ ಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾಡಿನ ಹಲವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಯ ಪದಾಧಿಕಾರಿಯಾಗಿ ದುಡಿದಿದ್ದ ಅವರ ಅಧಿಕಾರವಧಿಯಲ್ಲಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕಂಡಿತ್ತು. ತಂದೆ ಗಣಪಯ್ಯ ಭಟ್ಟರ ಕಾಲಾನಂತರ ದೇವಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಅವರು ದೇಶಾದ್ಯಾಂತ ಭಕ್ತರನ್ನು ಕ್ಷೇತ್ರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು. ಶ್ರೀ ಸಿದ್ಧಿವಿನಾಯಕ ಶೈಕ್ಷಣಿಕ ಪ್ರತಿಷ್ಠಾನದ ಅಡಿಯಲ್ಲಿ ಐಸಿಎಸ್‌ಇ ಮಾನ್ಯತೆ ಹೊಂದಿರುವ ಆಂಗ್ಲ ಮಾಧ್ಯಮ ವಸತಿ ಶಾಲೆ. ಪ್ರಾಥಮಿಕ ಶಾಲೆ ಹಾಗೂ ಗೋ ಶಾಲೆಯನ್ನು ನಡೆಸುತ್ತಿದ್ದಾರೆ. ಅಪರೂಪದ ಗಿಡಮೂಲಿಕೆಗಳ ರಕ್ಷಣೆಗಾಗಿ ಮೂಲಿಕಾ ವನವನ್ನು ಸ್ಥಾಪಿಸಿದ್ದರು. ಗ್ರಾಮೀಣ ಭಾಗದ ಜನರಿಗಾಗಿ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಹಾಗೂ ವೃತ್ತಿ ಪರ ತರಬೇತಿ ಕೋರ್ಸ್‌ಗಳನ್ನು ಆರಂಭಿಸಬೇಕು ಎನ್ನುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ನವೆಂಬರ್ ೨೦೧೮ ರಲ್ಲಿ ನಡೆಸಿರುವ ಸಿಎ ಪರೀಕ್ಷೆಯಲ್ಲಿ ಮರವಂತೆ ಉಷಾ ಪೂಜಾರಿ ತೇರ್ಗಡೆಯಾಗಿದ್ದಾರೆ. ಅವರು ಮರವಂತೆಯ ನಾಗಮ್ಮ ಮತ್ತು ನರಸಿಂಹ ಪೂಜಾರಿ ಅವರ ಪುತ್ರಿಯಾಗಿದ್ದು, ಪದವಿಯ ಬಳಿಕ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇದನ್ನೂ ಓದಿ: ► ಸಿಎ ಪರೀಕ್ಷೆ ತೇರ್ಗಡೆಯಾದ ಉಷಾ ಪೂಜಾರಿಗೆ ಸನ್ಮಾನ – https://kundapraa.com/?p=31254 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೆಯ ತರಗತಿಯ ವಿದ್ಯಾರ್ಥಿನಿ ಫಾತಿಮಥುಲ್ ಶಹನಃ ರಾಜ್ಯಮಟ್ಟದ ನವೋದಯ ಕನ್ನಡ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು. ಗಂಗೊಳ್ಳಿಯ ಅಬ್ದುಲ್ ಸಲಾಂ ಮತ್ತು ಸುನೀರಾ ದಂಪತಿಯ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಒಂದು ಅಂತರಾಷ್ಟ್ರೀಯ ಸಂಸ್ಥೆ ಪ್ರಪಂಚದಾದ್ಯಂತ ಯಾವುದೇ ಅಡೆತಡೆಯಿಲ್ಲದೇ ವಿವಿಧ ರಂಗಗಳಲ್ಲಿ ಸೇವೆಯನ್ನು ಜನತೆಗೆ ನೀಡುತ್ತಿದೆ. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಈ ಸಂಸ್ಥೆ ಕಾರ್ಯವೆಸಗುತ್ತಿದೆ ಎಂದು 371ಸಿ ಲಯನ್ಸ್ ಜಿಲ್ಲೆಯಲ್ಲಿ ಕುಂದಾಪುರ ಕ್ಲಬ್ ಅತ್ಯಂತ ಶಿಸ್ತಿನ ಹಾಗೂ ನಾಯಕತ್ವವನ್ನು ಹೊಂದಿರುವ ಕ್ಲಬ್ ಕಳೆದ 4 ದಶಕಗಳಿಂದ ಅಮೂಲ್ಯವಾದ ಸೇವೆಯನ್ನು ಈ ಭಾಗದ ಜನತೆಗೆ ನೀಡುತ್ತಾ ಬಂದಿದೆ ಎಂದು ಲಯನ್ ಜಿಲ್ಲೆ 312ಸಿ ಯ ಜಿಲ್ಲಾ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ ಕುಂದಾಪುರ ಲಯನ್ಸ್ ಕ್ಲಬಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಡಾ. ಶಿವಕುಮಾರರವರು ವಹಿಸಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಎಸ್. ಓ. ಕಕೆರ ಕ್ಲಬಿನ ಚಟುವಟಿಕೆಯನ್ನು ಕೊಂಡಾಡಿದರು. ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ ಮದ್ಯಾಹ್ನದ ಭೋಜನ ನಿಧಿಗೆ ರೂ. ೨೫೦೦೦/- ನ್ನು ನೀಡಲಾಯಿತು. ಸುಶ್ರತಾ ಮತ್ತು ಬಾಬಣ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ದಿವಾಕರ ಎನ್.ಖಾರ್ವಿ ಆಯ್ಕೆಯಾಗಿದ್ದಾರೆ. ಎಚ್.ಗಣೇಶ ಕಾಮತ್ (ಗೌರವಾಧ್ಯಕ್ಷ), ಶೇಖರ ಜಿ., ಸತೀಶ ಜಿ., ಬಿ.ಪ್ರಕಾಶ ಶೆಣೈ, ಬಿ.ರಾಘವೇಂದ್ರ ಪೈ (ಉಪಾಧ್ಯಕ್ಷರು), ಬಿ.ಲಕ್ಷ್ಮೀಕಾಂತ ಮಡಿವಾಳ (ಪ್ರಧಾನ ಕಾರ್ಯದರ್ಶಿ), ಭಾಸ್ಕರ ಎಚ್.ಜಿ. (ಕಾರ್ಯದರ್ಶಿ), ಟಿ.ಶ್ರೀಕರ ಶೆಣೈ, ಪ್ರಕಾಶ ಪಡಿಯಾರ್, ಕೃಷ್ಣಾನಂದ ಮಡಿವಾಳ, ನಾಗರಾಜ ಕಲೈಕಾರ್, ಮಹಮ್ಮದ್ ಹುಸೇನ್, ಪಾಂಡುರಂಗ ಮಡಿವಾಳ (ಜತೆ ಕಾರ್ಯದರ್ಶಿಗಳು), ಜಿ.ಸುದನೇಶ ಶ್ಯಾನುಭಾಗ್ (ಖಜಾಂಚಿ) ಇತರ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಹತ್ತನೇ ವರ್ಷದ ಬ್ರಹ್ಮರಥೋತ್ಸವದ ಅಂಗವಾಗಿ ಕವಿತಾ ಶೆಣೈ ಮಂಗಳೂರು ಇವರಿಂದ ಭಜನ ಸಂಧ್ಯಾ ಕಾರ್ಯಕ್ರಮ ಜರಗಿತು. ತಬಲಾದಲ್ಲಿ ವಿಘ್ನೇಶ ಕಾಮತ್ ಕೋಟೇಶ್ವರ ಹಾಗೂ ಹಾರ್ಮೋನಿಯಂನಲ್ಲಿ ನಾಗರಾಜ ಶೆಣೈ ಕಾರ್ಕಳ ಸಹಕರಿಸಿದರು. ದೇವಳದ ಧರ್ಮದರ್ಶಿಗಳು, ಊರ ಪರ ಊರಿನ ಭಜಕರು, ಕುಳಾವಿಗಳು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಾಕುಹಿತ್ಲು ಫ್ರೆಂಡ್ಸ್ ಗಂಗೊಳ್ಳಿ ಇವರ ವತಿಯಿಂದ ಮಂಗಳ ಖಾರ್ವಿ, ಮನೋಜ ಪೂಜಾರಿ, ಉತ್ತ ಶ್ರೀನಿವಾಸ ಖಾರ್ವಿ, ಪ್ರರ್ವಿಣ ಪೂಜಾರಿ ಇವರ ಸ್ಮರಣಾರ್ಥ ನಡೆದ ಕಬಡ್ಡಿ ಪಂದ್ಯದಿಂದ ಬಾಕಿ ಉಳಿದ ಮೊತ್ತವನ್ನು ೪ ಕುಟುಂಬಗಳಿಗೆ ಸಮನಾಗಿ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ವಾಂಟು ಚಂದ್ರ ಖಾರ್ವಿ ಅವರ ಮೂಲಕ ಹಸ್ತಾಂತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಸಂದೀಪ್ ಗಂಗೋಳ್ಳಿ, ಸುನೀಲ್ ಖಾರ್ವಿ, ಸಂದೇಶ ಖಾರ್ವಿ ಉಪಸ್ಥಿತರಿದ್ದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಿನ್ನೆ ಪಾಕಿಸ್ತಾನ ಪ್ರೇರಿತ ಕಾಶ್ಮೀರ ಉಗ್ರನೊಬ್ಬ ಬಾಂಬ್ ದಾಳಿ ನಡೆಸಿ 40ಸಿಆರ್‌ಪಿಎಫ್ ಯೋದರ ಹತ್ಯೆಗೆ ಕಾರಣವಾಗಿರುವ ಘಟನೆಯನ್ನು ಕಾಂಗ್ರೆಸ್ ಪಕ್ಷವು ಅತ್ಯುಗ್ರವಾಗಿ ಖಂಡಿಸುತ್ತದೆ ಮತ್ತು ಈ ಘಟನೆಯು ಕಾಶ್ಮೀರದಲ್ಲಿ ಕಳೆದ 20ವರ್ಷಗಳಲ್ಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ ಆ ಕಾರಣಕ್ಕಾಗಿ ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುವ ಯೋದರ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಈಗಿಂದೀಗಲೇ ಕೈಗೊಳ್ಳಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಆಗ್ರಹಿಸಿದ್ದಾರೆ. ಅವರು ಇಂದು ಕಾಂಗ್ರೆಸ್ ಕಛೇರಿ ಇಂದಿರಾ ಪ್ರಿಯದರ್ಶಿನಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಘಟನೆಯನ್ನು ಖಂಡಿಸಿ ಮಾತನಾಡುತ್ತಿದ್ದರು. ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ಗೋಪಾಲ್ ಕೃಷ್ಣ ಶೆಟ್ಟಿ, ಕೃಷ್ಣದೇವ ಕಾರಂತ, ನಾರಾಯಣ ಆಚಾರ್, ವಿನೋದ್ ಕ್ರಾಸ್ಟೊ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಧರ್ಮ ಪ್ರಕಾಶ್, ಶೋಬಾ ಸಚ್ಚಿದಾನಂದ, ಅಶೋಕ್ ಸುವರ್ಣ, ಕೇಶವ ಭಟ್, ಶಿವಾನಂದ ಕೆ. ಜ್ಯೋತಿ ಡಿ. ನಾಯ್ಕ್, ಚಂದ್ರಕಾಂತ ಖಾರ್ವಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಳ್ಳಿಹಬ್ಬ ಆಚರಿಸುತ್ತಿರುವ ಕಿರಿಮಂಜೇಶ್ವರ ಶುಭದಾ ಶಾಲೆಗೆ ಈ ಶೈಕ್ಷಣಿಕ ವರ್ಷದಲ್ಲೇ ಗ್ರಾಮೀಣ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದನ್ನು ಪರಿಗಣಿಸಿ ಡೈಮಂಡ್ ಆಫ್ ಏಷ್ಯಾ ಇಂಟರ್‌ನ್ಯಾಶನಲ್ ಅವಾರ್ಡ್ ಫಾರ್ ಕ್ವಾಲಿಟಿ ಏಜ್ಯುಕೇಶನ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಫೆಬ್ರವರಿ 15 ರಂದು ಥೈಲಾಂಡ್ ರಾಜಧಾನಿಯಾದ ಬ್ಯಾಂಕಾಕ್‌ನಲ್ಲಿ ನಡೆದ ಹೋಲಿಡೇ ಇನ್ ಹೋಟೇಲ್ ಬ್ಯಾಂಕಾಕ್ ಕಾರ್ಯಕ್ರಮದಲ್ಲಿ ಶುಭದಾ ಶಾಲೆಗಳ ಸಂಸ್ಥಾಪಕರಾದ ಡಾ| ಎನ್. ಕೆ. ಬಿಲ್ಲವ ಹಾಗೂ ಸಂಚಾಲಕ ಶಂಕರ ಎಸ್. ಪೂಜಾರಿ ಸ್ವೀಕರಿಸಿದರು. ಡಾ| ಎನ್. ಕೆ. ಬಿಲ್ಲವರು ಶೈಕ್ಷಣಿಕ, ಸಾಮಾಜಿಕ, ಸಹಕಾರಿ, ಧಾರ್ಮಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ.

Read More