Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ಸಂಸದರು ಪ್ರಭುಗಳಲ್ಲ. ಅವರು ಎಂದಿಗೂ ಜನರ ಪ್ರತಿನಿಧಿ ಹಾಗೂ ಉತ್ತರದಾಯಿಗಳು ಎಂಬ ಪ್ರಜ್ಞೆ ಜಾಗೃತಗೊಳ್ಳುವ ಜೊತೆಗೆ ಮತದಾನ ಮಾಡುವ ವಿಧಾನ ಹಾಗೂ ಮತದಾನ ಮಾಡದೇ ಇರುವ ಪ್ರವೃತ್ತಿಯಲ್ಲಿಯೂ ಬದಲಾವಣೆಯಾಗಬೇಕಿದೆ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು. ಅವರು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ನೇತೃತ್ವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗ ಹಾಗೂ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಲಾದ ’ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಬಂಧ, ಜಾತಿ, ಧರ್ಮ, ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುತ್ತೇನೆ ಎಂಬ ಬದ್ದತೆ ಇದ್ದರೇ, ಮತದಾರ ಸ್ಪಂದನೀಯ ಹಾಗೂ ವಿವೇಚನೀಯನೂ ಆದರೆ ಮತ ಮಾರಾಟಕ್ಕಿಲ್ಲ ಎಂಬುದು ಅರ್ಥ ಕಂಡುಕೊಳ್ಳಲಿದೆ ಎಂದರು. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂಚಾಲಕ ದಾಮೋದರ ಆಚಾರ್ಯ ಮಾತನಾಡಿ…

Read More

ಕುಂದಾಪುರ: ಹೆಮ್ಮಾಡಿ ಸಮೀಪದ ಕಟ್‌ಬೆಲೂ¤ರಿನ ಸುಳೆÕಯ ಮನೆಯಲ್ಲಿ ಗುಲಾಬಿ (55) ಅವರನ್ನು ಕೊಲೆಗೈದ ಆರೋಪದಲ್ಲಿ ಜಡ್ಕಲ್‌ ಗ್ರಾಮದ ಸೆಳ್ಕೊàಡು ನಿವಾಸಿ ರವಿರಾಜ್‌ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಫೆ. 28ರಂದು ರಾತ್ರಿ ಗುಲಾಬಿ ಸಾವನ್ನಪ್ಪಿದ್ದು, ಮಾ. 5ರಂದು ಕೊಲೆಯೆಂದು ದೃಢಪಟ್ಟಿತ್ತು. ತನಿಖೆ ನಡೆಸಿದ ಕುಂದಾಪುರ ಪೊಲೀಸರು, ವಾರದೊಳಗೆ ಆರೋಪಿಯನ್ನು ಸಿದ್ದಾಪುರದ ಪೆಟ್ರೋಲ್‌ ಬಂಕ್‌ ಸಮೀಪದಿಂದ ಬಂಧಿಸಿದ್ದಾರೆ. ಆತ ಪರಾರಿಯಾಗಲು ಬಳಸಿದ್ದ ಕಾರನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಆರೋಪಿಯು ಗುಲಾಬಿಯ ಮನೆ ಸಮೀಪ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ಕೊಡುವ ಮನೆಯಲ್ಲಿ ವಾಸಿಸುತ್ತಿದ್ದ. ಆತ ಒಂದು ಕಾರು ಹೊಂದಿದ್ದ, ಆದರೆ ಸರಿಯಾದ ಉದ್ಯೋಗ ಇರಲಿಲ್ಲ. ಈತನ ಪತ್ನಿ ಈ ಕಾರ್ಖಾನೆಯ ಕಾರ್ಮಿಕೆಯಾಗಿದ್ದಾರೆ. ರವಿರಾಜ್‌ ಹಾಗೂ ಗುಲಾಬಿ 2008ರಿಂದಲೂ ಪರಿಚಿತರಾಗಿದ್ದು, ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರವಿತ್ತು. ಫೆ. 28ರಂದು ರಾತ್ರಿ ಗುಲಾಬಿ ಮನೆಗೆ ಬಂದ ರವಿರಾಜ್‌, ಸಾಲ ತೀರಿಸಲು ಗುಲಾಬಿಯ ಚಿನ್ನಾಭರಣವನ್ನು ಕೇಳಿದ್ದ. ಇದಕ್ಕೆ ಒಪ್ಪದಿದ್ದಾಗ ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೈಮೇಲಿದ್ದ 1 ಲ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೋಟ ಶಿವರಾಮ ಕಾರಂತ ಕಾದಂಬರಿಯ ಪ್ರತಿ ವಾಕ್ಯ, ವಿಸ್ತಾರಗಳು ನಾಡಿನ ಜನರ ಕಷ್ಟ-ಸುಖ ಹಾಗೂ ಸಾಂಸ್ಕೃತಿಕ ಲೋಕವನ್ನು ತೆರೆದಿಡುವ ಕೆಲಸ ಮಾಡಿದೆ. ಅವರ ಕೃತಿ ಚೋಮನ ದುಡಿ ರಂಗಪ್ರಯೋಗ ಕಂಡುಕೊಂಡಾಗಲೆಲ್ಲಾ ಅದು ನಟರ ನಾಟಕವಾಗಿ ಉಳಿದಿದೆ ಎಂದು ರಂಗಭೂಮಿ ಹಾಗೂ ಶಿಕ್ಷಣ ಚಿಂತನ ಪುತ್ತೂರಿನ ಐ. ಕೆ. ಬೋಳುವಾರು ಹೇಳಿದರು. ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ – ೨೦೧೯ ತ್ರಿದಿನ ನಾಟಕೋತ್ಸವವನ್ನು ಬಾಲ ಕಲಾವಿದ ಪ್ರೀತಮ್ ಮುಖಕ್ಕೆ ಬಣ್ಣ ಹಚ್ಚಿ ಉದ್ಘಾಟಿಸಿ ಮಾತನಾಡಿದರು. ಚೋಮನ ದುಡಿ ಯಾವತ್ತಿಗೂ ಆಸೆಯನ್ನು ಹೇಳಿಕೊಳ್ಳುವ ರೂಪಕವಾಗಿ ಉಳಿಯುತ್ತದೆ. ಚೂಮನಿಗೆ ಭೂಮಿಯ ಮೇಲೆ ಆಸೆ ಇದ್ದರೇ, ರಂಗಕಲಾವಿದರಿಗೆ ಕಲಾಗ್ರಾಮದ ಆಗಬೇಕು ಎಂಬ ಆಸೆ ಇದೆ. ಅದು ಸಾಕಾರಗೊಳ್ಳಲಿ ಎಂದು ಆಶಿಸಿದರು. ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಮಾತನಾಡಿ ಸುರಭಿ ಸಂಸ್ಥೆ ರಂಗಚಟುವಟಿಕೆಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನ ಪ್ರದರ್ಶನದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಏಳಜಿತ ಗ್ರಾಮದ ಜೋಗಿಜೆಡ್ಡು ಎಂಬಲ್ಲಿ ನಡೆದಿದೆ. ಪ್ರಸಿದ್ಧ ಕಲಾವಿದ ಉತ್ತರ ಕನ್ನಡದ ಹುಡುಗೋಡು ನಿವಾಸಿ ಚಂದ್ರಹಾಸ (೫೨) ಮೃತರು. ಯಕ್ಷಗಾನ ಪ್ರದರ್ಶನದ ವೇಳೆ ಒಮ್ಮೆ ಕುಣಿದು ಮಾತು ಮುಗಿಸಿ ಮರಳಿ ಕುಣಿತಕ್ಕೆ ಅಣಿಯಾಗುತ್ತಿದ್ದ ವೇಳೆ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪೂನಾ – ಎರ್ನಾಕುಲಂ – ಪುನಾ ಮಾರ್ಗದ ಪೂರ್ಣಾ ಎಕ್ಸ್‌ಪ್ರೆಸ್ ರೈಲಿಗೆ (11097 / 11098) ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಬೈಂದೂರಿನಲ್ಲಿ ನಿಲುಗಡೆ ನೀಡಲಾಗಿದೆ. ಈ ರೈಲು ಪ್ರತಿ ಶನಿವಾರ ರಾತ್ರಿ 23:30ಕ್ಕೆ ಪೂನಾದಿಂದ ಹೊರಟು ಮರುದಿನ ರಾತ್ರಿ 8:45ಕ್ಕೆ ಬೈಂದೂರು ತಲುಪುತ್ತದೆ. ಮತ್ತು ಪ್ರತಿ ಸೋಮವಾರ ರಾತ್ರಿ 23:25ಕ್ಕೆ ಎರ್ನಾಕುಲಂನಿಂದ ಹೊರಟು ಬೆಳಿಗ್ಗೆ 9:20ಕ್ಕೆ ಬೈಂದೂರು ತಲುಪಲಿದೆ. ಬೈಂದೂರಿನಲ್ಲಿ ರೈಲು ನಿಲುಗಡೆಗೆ ಕೋರಿ ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಬೋರ್ಡ್ ಮೇಲೆ ಒತ್ತಡ ತಂದ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ರಾಷ್ಟ್ರೀಯ ರೈಲ್ವೆ ಪ್ರಯಾಣಿಕರ ಪರಾಮರ್ಷಕ ಸಮಿತಿ ಸದಸ್ಯ ಕೆ. ವೆಂಕಟೇಶ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನನೆಗುದಿಗೆ ಬಿದ್ದಿರುವ ನಾಗೂರು-ಹೇರೂರು ರಸ್ತೆಯ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಸುತ್ತಲಿನ ಗ್ರಾಮಸ್ಥರು ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಜನರ ಬೇಡಿಕೆ ಬಗ್ಗೆ ಪತ್ರಕರ್ತರಿಗೆ ವಿವರ ನೀಡಿದ ಹೇರೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ೫ ಕಿಲೋಮೀಟರು ಉದ್ದದ ಈ ರಸ್ತೆಯಲ್ಲಿ ನಡದಾಡಲು ಅಆಧ್ಯವಾಗುವ ರೀತಿಯಲ್ಲಿ ಹಂಡಗುಂಡಿಗಳು ಉಂಟಾಗಿವೆ. ಇದರ ದುರ‍್ಸತಿಗೆ ಎರಡು ವರ್ಷಗಳಿಂದ ಜನ ಆಗ್ರಹಿಸುತ್ತಲೇ ಬಂದಿದ್ದಾರೆ. ಇಲ್ಲಿ ಅನುಮತಿ ಪಡೆದು ಓಡಾಡುತ್ತಿದ್ದ ಎರಡು ಬಸ್‌ಗಳು ಇದೇ ಕಾರಣಕ್ಕೆ ಓಡಾಟ ನಿಲ್ಲಿಸಿವೆ. ಸಂಜೆಯ ಬಳಿಕ ಇಲ್ಲಿ ಆಟೊ ಓಡಿಸುವುದಿಲ್ಲ. ಇಡೀ ರಸ್ತೆಯಲ್ಲಿ ಧೂಳು ಏಳುತ್ತಿದೆ. ಯಡಕಂಟ, ಉಪ್ರಳ್ಳಿ, ಮೇಕೋಡು, ಹೇರೂರು, ನೂಜಾಡಿ, ತಂಕಬೆಟ್ಟು, ಹಳಗೇರಿಯ ೪೦೦೦ ಕುಟುಂಬಗಳು, ರಸ್ತೆಯ ಅಕ್ಕಪಕ್ಕ ಇರುವ ೩ ಹಿರಿಯ ಪ್ರಾಥಮಿಕ, ೨ ಕಿರಿಯ ಪ್ರಾಥಮಿಕ ಶಾಲೆಗಳ, ೪ ಅಂಗನವಾಡಿಗಳ ಸುಮಾರು ೩೦೦ ಮಕ್ಕಳು ಈ ರಸ್ತೆಯನ್ನು ಪ್ರತಿದಿನ ಬಳಸಬೇಕಾಗಿದೆ. ಇವುಗಳ ಜತೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಸ್ಕೋರ್ಡ್ ಟ್ರಸ್ಟ್ ರಿ. ಹಾಗೂ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ತ್ರಿದಿನ ನಾಟಕೋತ್ಸವ ರಂಗ ಸುರಭಿ – ೨೦೧೯ ಮಾರ್ಚ್ ೧೦ರಿಂದ ೧೨ವರೆಗೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ ಗಂಟೆ ೬-೩೦ಕ್ಕೆ ಜರುಗಲಿದೆ. ಮಾರ್ಚ್ 10ರ ಭಾನುವಾರ ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಸುರಭಿ ರಿ. ಬೈಂದೂರು’ ಪ್ರಸ್ತುತಿಯ ಗಣೇಶ್ ಎಂ. ಉಡುಪಿ ನಿರ್ದೇಶನದ ನಾಟಕ ‘ಚೋಮನ ದುಡಿ’ ಪ್ರದರ್ಶನಗೊಳ್ಳಲಿದೆ. ಮಾರ್ಚ್ 11ರ ಸೋಮವಾರ ಎಸ್. ಎನ್. ಸೇತೂರಾಮ್ ಕಥೆ ಸಂಭಾಷಣೆ ಆಧಾರಿತ ಭೂಮಿಕಾ ಹಾರಾಡಿ ಪ್ರಸ್ತುತಿಯ, ಬಿ.ಎಸ್ ರಾಂ ಶೆಟ್ಟಿ ಹಾರಾಡಿ ನಿರ್ದೇಶನದ ’ಕಾತ್ಯಾಯಿನಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ಮಾಚ್ 12 ಮಂಗಳವಾರ ವಿಜಯ ತೆಂಡುಲ್ಕರ್‌ರವರ ಮರಾಠಿ ಮೂಲಕದ ಕೃತಿ ಆಧಾರಿತ ವೆಂಕಟೇಶ ಪ್ರಸಾದ ಅನುವಾದ ಹಾಗೂ ನಿರ್ದೇಶನದ ’ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಪ್ರಸ್ತುತಿಯ ’ಒಂದು ಪ್ರೀತಿಯ ಕಥೆ’ ನಾಟಕ ಪ್ರದರ್ಶನಗೊಳ್ಳಲಿ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರೋಧಿಸಿ ಬೈಂದೂರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ವಿಜಯ ಬ್ಯಾಂಕ್ ಬೈಂದೂರು ಶಾಖೆಯ ಎದುರು ಪ್ರತಿಭಟನೆ ಜರುಗಿತು. ಪ್ರತಿಭಟನೆಯನ್ನು ಉದ್ದೇಶಿಸಿ ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಷ್ಟದಲ್ಲಿರುವ ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾವನ್ನು ಲಾಭದಾಯಕವಾಗಿ ನಡೆಯುತ್ತಿರುವ ವಿಜಯ ಬ್ಯಾಂಕಿನೊಂದಿಗೆ ವಿಲೀನಗೊಳಿಸುತ್ತಿರುವುದು ಅಕ್ಷಮ್ಯ. ವಿಜಯಾ ಬ್ಯಾಂಕ್ ಕರಾವಳಿಯ ಹೆಮ್ಮೆ ಎನ್ನುವುದನ್ನು ಮರೆಯುವಂತಿಲ್ಲ. ಕೋಟಿ ಕೋಟಿ ಸಾಲ ನೀಡಿ ಓಡಿ ಹೋದ ಉದ್ಯಮಿಯಿಂದಾದ ಆರ್ಥಿಕ ನಷ್ಟದ ಹೊರೆಯನ್ನು ತಗ್ಗಿಸಿಕೊಳ್ಳಲು ಇಂತಹ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದರು. ಕೇಂದ್ರ ಸರಕಾರ ಮಾಡುತ್ತಿರುವ ಜನವಿರೋಧಿ ಕೆಲಸಗಳನ್ನು ವಿಪಕ್ಷ ಟೀಕೆ ಮಾಡಿದರೆ ಅದು ದೇಶದ್ರೋಹದ ಕೆಲಸ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು. ಬೈಂದೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರಸ್ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನಕುಮಾರ್ ಉಪ್ಪುಂದ, ಜಿಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ನೂತನ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ನೂತನ ಎಸ್ಪಿ ನಿಶಾ ಜೇಮ್ಸ್ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರನ್ನು ಉಡುಪಿ ಅತಿಥಿ ಗೃಹದಲ್ಲಿ ಭೇಟಿಯಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ದಂಪತಿ ಚಿತ್ರಾ-ಆನಂದ ಮೊಗವೀರ ಅವರು ತಮ್ಮ ಪುತ್ರಿ ಆದ್ಯಾಳ ಹುಟ್ಟುಹಬ್ಬದ ಪ್ರಯುಕ್ತ ಪ್ರಾಯೋಜಿಸಿ, ರೂಪಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ ಮೂರನೇ ಸಂಪುಟದ ಮೊದಲ ಸಂಚಿಕೆ ಅನಾವರಣ, ಶಾಲಾ ಹಳೆವಿದ್ಯಾರ್ಥಿ ಸುದೀಪ ಆಚಾರ್ಯ ಅವರ ಚೊಚ್ಚಲ ಕೃತಿ ಪರಿಚಯ ಕವನಸಂಕಲನ ವಿತರಣೆ, ತಿಂಗಳ ಕಲಿಕಾ ಪ್ರದರ್ಶನ, ಸರ್ವಪೋಷಕರ ಸಭೆ ಹಾಗೂ ಸಂವಿದಾನ ಓದು ಕಾರ್ಯಕ್ರಮವು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಾಂತಾರಾಮ ಅಧ್ಯಕ್ಷತೆಯಲ್ಲಿ ಜರುಗಿತು. ನಿವೃತ್ತ ತಹಸೀಲ್ದಾರರಾದ ಶ್ರೀ ಆನಂದ ಶೆಟ್ಟಿಯವರು ಉಪಸ್ಥಿತರಿದ್ದು, ಚಾರಣ ಸಂಚಿಕೆಯನ್ನು ಅನಾವರಣ ಗೊಳಿಸಿ ಚಾರಣ ಸಂಚಿಕೆಯ ಮಹತ್ವ ಮತ್ತು ಅದು ವಿದ್ಯಾರ್ಥಿಗಳ ಕಲಿಕೆಗೆ ಹೇಗೆ ಪೂರಕವಾಗಿದೆ ಎಂಬುದನ್ನು ಸವಿಸ್ತಾರವಾಗಿ ಮಕ್ಕಳ ಮನಮುಟ್ಟುವಂತೆ ತಿಳಿಸಿದರು. ಶಾಲೆಯ ಎಲ್ಲ ಶಿಕ್ಷಕರು ಜೊತೆಗೂಡಿ ಸಂವಿದಾನ ಓದು ಕಾರ್ಯಕ್ರಮವನ್ನು ನಡೆಸಿಕೊಟ್ಟು, ಸಂವಿದಾನದ ಆಶಯ ಮತ್ತು ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸುಧಾಕರ, ಪರಿಚಯ…

Read More