ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಡಿ ಕನ್ಯಾಣ ಶನೀಶ್ವರ ದೇಗುಲದ ಸನಿಹದಲ್ಲಿ ಇದೇ ಡಿ.21ರ ಭಾನುವಾರ ತಿರುಪತಿಯ ಶ್ರೀ ದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಉಂಜಾಲೋತ್ಸವ ಸಹಿತ ಪುಷ್ಪಯಾಗ ಮಹೋತ್ಸವದ ಅಂಗವಾಗಿ ಸ್ಥಳೀಯ ಗ್ರಾಮಸ್ಥರ ಹೊರೆಕಾಣಿಕೆ ಸಮರ್ಪಣೆ ಗುರುವಾರ ನಡೆಯಿತು.

ಕೋಡಿ ಶ್ರೀ ರಾಮದೇಗುಲದಲ್ಲಿ ಚಾಲನೆಗೊಂಡ ಹೊರೆಕಾಣಿಕೆಗೆ ಉದ್ಯಮಿ ಧನಂಜಯ ಅಮೀನ್ ಪೇತ್ರಿ ಅವರು ಚಾಲನೆ ನೀಡಿದರು. ಅಲ್ಲದೆ ಕೋಡಿ ಮಹಾಸತೀಶ್ವರಿ ದೇಗುಲದಿಂದ ಸುತ್ತಮುತ್ತಲಿನ ಪರಿಸರದ ಭಕ್ತಾಧಿಗಳು ಹೊರೆಕಾಣಿಕೆಯನ್ನು ಸಮರ್ಪಸಿದರು.
ಈ ಸಂದರ್ಭದಲ್ಲಿ ಉಂಜಲೋತ್ಸವ ಸಮಿತಿಯ ಪದಾಧಿಕಾರಿಗಳು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.










