Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶುಭದಾ ಆಂಗ್ಲಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಮತದಾನ ಸಾಕ್ಷರತಾ ಕ್ಲಬ್ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ ನಡೆಯಿತು. ಕಿರಿಮಂಜೇಶ್ವರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆರಂಭಗೊಂಡು ಅರೆಹೊಳೆ ಮಾರ್ಗವಾಗಿ ಮೆರವಣಿಗೆಯ ಮೂಲಕ ಶಾಲೆಗೆ ಆಗಮಿಸಿದರು. ಮತದಾನದ ಕುರಿತು ವಿವಿಧ ಘೋಷಣೆಗಳ ನಾಮಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳ ಮೂಲಕ ಮತದಾನದ ಅರಿವು ಮೂಡಿಸಿದರು. ಮುಖ್ಯ ಶಿಕ್ಷಕ ರವಿದಾಸ್ ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಜಾಥಾದಲ್ಲಿ ಸಂಸ್ಥೆಯ ನಿರ್ದೇಶಕರು, ಸಂಚಾಲಕರು, ಶಿಕ್ಷಕರು ,ಶಾಲಾ ವಾಹನಚಾಲಕರು ಭಾಗವಹಿಸಿ ಜಾಥಾಕ್ಕೆ ಮೆರಗು ತಂದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ತಂಪು ಪಾನೀಯ ನೀಡಲಾಯತು. ಶಾಲೆಯ ಸ್ಥಾಪಕ ಅಧ್ಯಕ್ಷ ಡಾ. ಎನ್.ಕೆ.ಬಿಲ್ಲವರು ಜಾಥಾದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ವೀಪ್ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ವಿವಿಧ ಕಾಲೇಜುಗಳ ಸಹಯೋಗದೊಂದಿಗೆ ಮಂಗಳವಾರ ನಡೆದ ಮತದಾನ ಜಾಗೃತಿ ಜಾಥಾ ಪಕ್ಷದ ಪ್ರಚಾರ ವೇದಿಯಾಗಿ ಮಾರ್ಪಟ್ಟು, ಅಧಿಕಾರಿಗಳಿಗೆ ಇರಿಸುಮುರಿಸಾದ ಪ್ರಸಂಗವೊಂದು ನಡೆದಿದೆ. ಕುಂದಾಪುರ ಗಾಂಧಿ ಮೈದಾನಕ್ಕೆ ಬರುವಾಗಲೇ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ಮೋದಿ ಪರ ಘೋಷಣೆ ಕೂಗುತ್ತಲೇ ಆಗಮಿಸಿದ್ದರು. ಮತದಾನ ಜಾಗೃತಿ ಪ್ರತಿಜ್ಞಾವಿಧಿ ಬೋಧನೆಗೂ ಮುನ್ನಾ ಸೇರಿದ ಸಾವಿರಾರು ವಿದ್ಯಾರ್ಥಿಗಳಲ್ಲಿ ಯಾರೋ ಚಿಕ್ಕದಾಗಿ ಉಚ್ಛರಿಸಿದ ಮೋದಿ ಹೆಸರಿಗೆ ನೂರಾರು ವಿದ್ಯಾರ್ಥಿಗಳ ಸ್ವರದ ಮೂಲಕ ಶಕ್ತಿ ತುಂಬಿದರು. ಗಾಂಧಿ ಮೈದಾನದಿಂದ ಹೊರಟ ಜಾಥಾ ಉದ್ದಕ್ಕೂ ಹೌವ್ ಈಸ್ ದ ಜೋಶ್.. ಪದೇ ಪದೇ ಪುನರಾವರ್ತನೆ ಆಗಿ, ದೊಡ್ಡ ಸ್ವರದ ಪ್ರತಿಕ್ರಿಯೆ ಕೂಡಾ ಸಿಕ್ಕಿತು. ವಂದೇ ಮಾತರಂ ಉದ್ಘೋಷ ನಿರಂತರವಾಗಿ ಕೇಳಿ ಬಂತು. ಮತದಾನದ ಜಾಗೃತಿ ಮೂಡಿಸುವ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳ ವಂದೇ ಮಾತರಂ, ಉರಿ ಸಿನಿಮಾದ ಡೈಲಾಗ್, ಮೋದಿ ಬಗ್ಗೆ ಘೋಷಣೆ ಕೂಗಿ ಅಚ್ಚರಿ ಮೂಡಿಸಿದರು. ಕಾರ‍್ಯಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ವೀಪ್ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ವಿವಿಧ ಕಾಲೇಜುಗಳ ಸಹಯೋಗದೊಂದಿಗೆ ಮಂಗಳವಾರ ನಡೆದ ಮತದಾನ ಜಾಗೃತಿ ಜಾಥಾವು ವಿದ್ಯಾರ್ಥಿಗಳಿಂದಾಗಿ ಪಕ್ಷವೊಂದರ ಪ್ರಚಾರ ವೇದಿಯಾಗಿ ಮಾರ್ಪಟ್ಟು, ಅಧಿಕಾರಿಗಳಿಗೆ ಇರಿಸುಮುರಿಸಾದ ಪ್ರಸಂಗವೊಂದು ನಡೆದಿದೆ. ಜಾಥಾದ ಸಲುವಾಗಿ ಕುಂದಾಪುರ ಗಾಂಧಿ ಮೈದಾನಕ್ಕೆ ಬರುವಾಗಲೇ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ಮೋದಿ ಪರ ಘೋಷಣೆ ಕೂಗುತ್ತಲೇ ಆಗಮಿಸಿದ್ದರು. ಮತದಾನ ಜಾಗೃತಿ ಪ್ರತಿಜ್ಞಾವಿಧಿ ಬೋಧನೆಗೂ ಮುನ್ನಾ ಸೇರಿದ ಸಾವಿರಾರು ವಿದ್ಯಾರ್ಥಿಗಳಲ್ಲಿ ಯಾರೋ ಚಿಕ್ಕದಾಗಿ ಉಚ್ಛರಿಸಿದ ಮೋದಿ ಹೆಸರಿಗೆ ನೂರಾರು ವಿದ್ಯಾರ್ಥಿಗಳ ಸ್ವರದ ಮೂಲಕ ಶಕ್ತಿ ತುಂಬಿದರು. ಗಾಂಧಿ ಮೈದಾನದಿಂದ ಹೊರಟ ಜಾಥಾ ಉದ್ದಕ್ಕೂ ಹೌವ್ ಈಸ್ ದ ಜೋಶ್.. ಪದೇ ಪದೇ ಪುನರಾವರ್ತನೆ ಆಗಿ, ದೊಡ್ಡ ಸ್ವರದ ಪ್ರತಿಕ್ರಿಯೆ ಕೂಡಾ ಸಿಕ್ಕಿತು. ವಂದೇ ಮಾತರಂ ಉದ್ಘೋಷ ನಿರಂತರವಾಗಿ ಕೇಳಿ ಬಂತು. ಮತದಾನದ ಜಾಗೃತಿ ಮೂಡಿಸುವ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳ ವಂದೇ ಮಾತರಂ, ಉರಿ ಸಿನಿಮಾದ ಡೈಲಾಗ್, ಮೋದಿ ಬಗ್ಗೆ ಘೋಷಣೆ ಕೂಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ಚುನಾವಣಾ ಆಯೋಗ, ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಉಡುಪಿ ಜಿಲ್ಲೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಮಂಗಳವಾರ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ದೊರೆಯಿತು. ವಿದ್ಯಾರ್ಥಿಗಳು ಹೊಸಬಸ್ ನಿಲ್ದಾಣ ತನಕ ತೆರಳಿ ಅಲ್ಲಿಂದ ಶಾಸ್ತ್ರೀವೃತ್ತಕ್ಕೆ ಮೆರವಣಿಯ ಮೂಲಕವೇ ಮರಳಿ ಮೈದಾನಕ್ಕೆ ಹಿಂತಿರುಗಿ ದಾರಿಯುದ್ದಕ್ಕೂ ಮತದಾನದ ಅರಿವು ಮೂಡಿಸಿದರು. ಜಾಥಾಕ್ಕೆ ಚಾಲನೆ ನೀಡಿದ ಕುಂದಾಪುರ ಎಸಿ ಡಾ. ಮಧುಕೇಶ್ವರ್ ಮಾತನಾಡಿ ನಾವೆಲ್ಲರೂ ನಮ್ಮ ಹಕ್ಕು ಕೇಳುತ್ತೇವೆ. ಹಾಗೆ ಅದರೊಟ್ಟಿಗೆ ನಮ್ಮ ಕರ್ತವ್ಯಗಳೂ ಇವೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮತಾದರರು ಯಾವುದೇ ಆಮಿಷಕ್ಕೊಳಗಾಗದೆ ಮತದಾನ ಮಾಡಬೇಕು ಎಂದರು. ಕುಂದಾಪುರ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿರಣ್ ಫೆಡ್ನೇಕರ್, ತಹಶೀಲ್ದಾರ್ ವಿಜಯೇಂದ್ರ ಬಾಡ್ಕರ್, ಡಿವೈಎಸ್‌ಪಿ ಬಿ.ಪಿ ದಿನೇಶ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ…

Read More

ವಿಶ್ವನಾಥ ನಾಯ್ಕ್ ಬೆಳ್ವೆ || ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ ಕುಂದಾಪುರ: ಫಾಲ್ಗುಣ ಮಾಸದ ಹೋಳಿ ಹುಣ್ಣಿಮೆ ಮತ್ತೆ ಬರುತ್ತಿದೆ. ಕುಡುಬಿ ಸಮುದಾಯದ ಹೋಳಿ ಆಚರಣೆಯ ಪರ್ವಕಾಲವದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಆಕರ್ಷಕ ವೇಷಭೂಷಣಗಳೊಂದಿಗೆ ಕೊಂಕಣಿ ಭಾಷೆಯಲ್ಲಿ ರಾಮಾಯಣ – ಮಹಾಭಾರತದ ಕಥೆಯನ್ನು ಸಾರುವ ಹಾಡು ಗುನುಗುತ್ತಾ, ಗುಮ್ಮಟೆ ನುಡಿಸುತ್ತಾ ಜಾನಪದ ನೃತ್ಯದಲ್ಲಿ ನಿರತರಾಗಿರುವ ಕುಡುಬಿ ಮತ್ತು ಮರಾಟಿ ಸಮುದಾಯದ ಹೋಳಿ ಮೇಳಗಳು ಕಾಣಸಿಗುತ್ತವೆ. ಹೋಳಿ ಪೂರ್ವಸಿದ್ಧತೆ: ಕುಡುಬಿ ಸಮುದಾಯದ ಹೋಳಿ ಆಚರಣೆ ಫಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣಿಮೆಯವರೆಗೆ ಆದರೂ ಕೂಡ ನಿಯಮ ನಿಷ್ಠೆಗಳು ಅiವಾಸ್ಯೆಯಿಂದಲೇ ಆರಂಭವಾಗುತ್ತವೆ. ಅಮವಾಸ್ಯೆಯ ನಂತರ ಮಾಂಸ, ಮದಿರೆಗಳನ್ನು ತ್ಯಜಿಸಿ ಹಬ್ಬಕ್ಕೆ ತಯಾರಿ ನಡೆಸುತ್ತಾರೆ. ಪ್ರತಿ ಗ್ರಾಮದ ಕುಡುಬಿ ಕೂಡುವಳಿಯ (ಕುಡುಬಿ ಸಮುದಾಯದಅಲ್ಲಲ್ಲಿ ಕೂಡು ಕಟ್ಟುಗಳಿರುತ್ತವೆ, ಇದರ ಯಜಮಾನನನ್ನು ಗುರಿಕಾರನೆಂತಲೂ ಅವರ ಮನೆಯನ್ನು ಹತ್ತರಕಟ್ಟೆ ಎಂದು ಕರೆಯಲಾಗುತ್ತದೆ.) ಯಜಮಾನ ಪ್ರತಿ ಮನೆಗೂ ಪಂಚಾಯತಿಯ ಹೇಳಿಕೆ ನೀಡಿ ಕೂಡುಕಟ್ಟಿನ ಮನೆಯಲ್ಲಿ ಎಲ್ಲರನ್ನು ಒಟ್ಟುಗೂಡಿಸುತ್ತಾನೆ. ಕೂಡುವಳಿಯೊಳಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ರಥೋತ್ಸವವು ಮಾ. 28ರಂದು ನಡೆಯಲಿದೆ. ಮಾ. 21ರಿಂದ ಮಾ. 30ರ ವರೆಗೆ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಪ್ರತಿದಿನ ಸಂಜೆ ಸ್ವರ್ಣಮುಖೀ ಸಭಾಭವನದಲ್ಲಿ ಆಯ್ದ ತಂಡಗಳಿಂದ ಭರತನಾಟ್ಯ, ಕೂಚುಪುಡಿ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ ಸಹಿತ ನೃತ್ಯ ಕಾರ್ಯಕ್ರಮ ನಡೆಯಲಿದೆ. ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಕಲ ಸೌಲಭ್ಯ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ವಾಹನ ಸಂಚಾರ ಹಾಗೂ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು ತುರ್ತು ಸೇವೆಗೆ ಗಮನಹರಿಸಲಾಗಿದ್ದು ದೇಗುಲದ ವಸತಿಗೃಹಗಳನ್ನು ಭಕ್ತರಿಗಾಗಿ ಮೀಸಲಿಡಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್‌. ಹಾಲಪ್ಪ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ವಠಾರದಲ್ಲಿ ಶನಿವಾರ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ನೇತೃತ್ವದಲ್ಲಿ ’ಶ್ರೀಮದ್ಭಗವದ್ಗೀತಾ ಭೋದನಾ’ ಕಾರ್ಯಕ್ರಮ ಜರುಗಿತು. ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿಯವರು ಭಗವದ್ಗೀತೆಯ ಸಾಂಖ್ಯಾಯೋಗದಲ್ಲಿ ಬರುವ ಆತ್ಮ-ಪರಮಾತ್ಮ, ಕರ್ತವ್ಯ, ಧರ್ಮ ಹಾಗೂ ಸ್ಥಿತಪ್ರಜ್ಞತೆಯ ಅರ್ಥ ವಿವರಗಳನ್ನು ಬೋದನಾ ವಿವಿಧ ದೃಷ್ಟಾಂತಗಳ ಮೂಲಕ ಅದರ ಮಹತ್ವವನ್ನು ತಿಳಿಸಿದರು. ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಭಗವದ್ಗೀತೆಯಲ್ಲಿನ ತತ್ವ ಸಂದೇಶಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಾರ್ಥಕ್ಯದ ಕ್ಷಣದ ಕಂಡುಕೊಳ್ಳಲು ಸಾಧ್ಯವಿದೆ ಎಂದರು. ಪ್ರತಿ ಶನಿವಾರ ನಡೆಯುತ್ತಿರುವ ಭೋದನಾ ಕಾರ್ಯಕ್ರಮದಲ್ಲಿ ಶ್ರೀ ರಾಮಕ್ಷತ್ರಿಯ ಮಾತೃ ಮಂಡಳಿ ಸದಸ್ಯರು ಹಾಗೂ ಇತರರು ಸತ್ಸಂಗದಲ್ಲಿ ಭಾಗವಹಿಸಿದ್ದರು. ಮುಂದಿನ ವಾರ ಭಗವದ್ಗೀತೆ ಮೂರನೇ ಕರ್ಮಯೋಗದ ಭೋದನೆ ನಡೆಯಲಿದೆ.

Read More

ಕುಂದಾಪುರ: ಕನ್ನಡ, ಇಂಗ್ಲೀಷ್‌, ಹಿಂದಿ, ಮಲಯಾಳ ಮತ್ತು ತುಳು ಸಹಿತ ಐದು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಲೇಖಕಿ ಇಲ್ಲಿನ ಡಾ| ಪಾರ್ವತಿ ಜಿ. ಐತಾಳ್‌ ಅವರಿಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇದುವರೆಗೆ ನೀಡಿರುವ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2018ನೇ ಸಾಲಿನ “ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಡೆಮಿಯ ಅಧ್ಯಕ್ಷ ಪ್ರೊ| ಅರವಿಂದ ಮಾಲಗತ್ತಿ, ವಿಧಾನ ಪರಿಷತ್‌ ಸದಸ್ಯ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಎಂ.ಎ. ಗೋಪಾಲ ಸ್ವಾಮಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಬಿ.ಎಚ್‌. ಅನಿಲ್‌ ಕುಮಾರ್‌, ಕನ್ನಡ – ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎಂ. ಜಾನಕಿ, ವಿಮರ್ಶಕ ಡಾ| ಸಿ.ಎನ್‌. ರಾಮಚಂದ್ರನ್‌ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರಿನ ಕೇಂದ್ರಭಾಗದಲ್ಲಿ ಮೊದಲ ಭಾರಿಗೆ ಆರಂಭಗೊಳ್ಳುತ್ತಿರುವ ’ರುಪೀ ಮಾಲ್’ ಶುಭಾರಂಭಕ್ಕೆ ಸಿದ್ಧತೆ ನಡೆಸಿದ್ದು, ಎಪ್ರಿಲ್ 1ರಿಂದ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲಿದೆ. ’ರುಪೀ ಮಾಲ್’ ಬೈಂದೂರು ಭಾಗದ ಗ್ರಾಹಕರ ಎಲ್ಲಾ ಬಗೆಯ ಅಗತ್ಯತೆಗಳನ್ನು ಪೂರೈಸುವ ಪ್ರಪ್ರಥಮ ಮಾಲ್ ಎಂದೆನಿಸಿಕೊಳ್ಳಲಿದೆ. ಮಾಲ್‌ನಲ್ಲಿ ಸುಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್, ಟೆಕ್ಸ್‌ಟೈಲ್ & ಫ್ಯಾಶನ್, ಹೋಟೆಲ್ ಮತ್ತು ರೆಸ್ಟೋರೆಂಟ್, ತರಕಾರಿ ಅಂಗಡಿ, ಮೀನು ಮತ್ತು ಮಾಂಸದ ಅಂಗಡಿ, ಸೈಕಲ್ ಶಾಪ್, ಚಹಾದ ಅಂಗಡಿ, ಐಸ್‌ಕ್ರೀಮ್ ಪಾರ್ಲರ್, ಬ್ಯೂಟಿ ಪಾರ್ಲರ್ ಇನ್ನಿತರ ಉದ್ಯಮಗಳು ಸೇರಿದಂತೆ ವಿವಿಧ ವ್ಯವಹಾರಗಳು ಆರಂಭಗೊಳ್ಳಲಿದ್ದು ನಿಮ್ಮ ಎಲ್ಲಾ ಅಗತ್ಯಗಳನ್ನೂ ಒಂದೇ ಸ್ಥಳದಲ್ಲಿ ಪೂರೈಸಿಕೊಳ್ಳಬಹುದಾಗಿದೆ. ಪ್ರಸ್ತುತ ಬೈಂದೂರಿನ ಬಹುಪಾಲು ಜನರು ತಮ್ಮ ಅಗತ್ಯ ವಸ್ತುಗಳ ಖರೀದಿಗಾಗಿ ಅಕ್ಕಪಕ್ಕದ ಊರುಗಳನ್ನು ಅವಲಂಭಿಸಿಕೊಂಡಿದ್ದಾರೆ. ಆದರೆ ಬೈಂದೂರು ಹಾಗೂ ಸುತ್ತಲಿನ ಗ್ರಾಮಗಳ ಜನರು ತಮ್ಮ ಅವಶ್ಯಕತೆಗಳಿಗಾಗಿ ಬೈಂದೂರಿಗೆ ಬರುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. 6 ತಿಂಗಳುಗಳ ಅವಧಿಯಲ್ಲಿ ರುಪೀ ಮಾಲ್‌ನಲ್ಲಿ ಪೂಟ್‌ವೇರ್ ಅಂಗಡಿ, ಜಿಮ್, ಸಿನೆಮಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಕ್ಷಿಪ್ರ ಬೆಳವಣಿಗೆಯ ಉದ್ಯಮ ವಿಭಾಗದಲ್ಲಿ ಬಿಜಿನೆಸ್ ಎಕ್ಸ್‌ಲೆಕ್ಸ್ ಅವಾರ್ಡ್ 2019 (ಉದ್ಯಮ ಶ್ರೇಷ್ಠತಾ ಪ್ರಶಸ್ತಿ) ದೊರೆತಿದೆ. ಈ ಪ್ರಶಸ್ತಿಯ ಮೂಲಕ ಆಹಾರ ಮತ್ತು ಅತಿಥಿ ಸತ್ಕಾರ ವಿಭಾಗದಲ್ಲಿ ಗುಣಮಟ್ಟ ಹಾಗೂ ವೇಗದ ಪ್ರಗತಿ ಸಾಧಿಸಿ ಛಾಪು ಮೂಡಿಸಿರುವ ಸಂಸ್ಥೆಯ ಕೀರ್ತಿ ಮುಕುಟಕ್ಕೆ ಗರಿ ಸೇರಿದಂತಾಗಿದೆ. ಮುಂಬೈನ ಬಿಲ್ಲವ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಮಾ.9ರಂದು ಮುಂಬೈನಲ್ಲಿ ಆಯೋಜಿಸಿದ್ದ ಉದ್ಯಮ ಸಮಾವೇಶಲ್ಲಿ ’ಉದ್ಯಮ ಶ್ರೇಷ್ಠತಾ ಪ್ರಶಸ್ತಿ’ಯನ್ನು ಶೆಪ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಪ್ರೈ. ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭ ಆದಿತ್ಯ ಬಿರ್ಲಾ ಲೈಫ್ ಇನ್ಸುರೆನ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಸುವರ್ಣ, ಬಿಲ್ಲವ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಅಧ್ಯಕ್ಷ ಎನ್.ಟಿ ಪೂಜಾರಿ, ಕಾರ್ಯದರ್ಶಿ ಆನಂದ ಪೂಜಾರಿ ಹಾಗೂ ಎಚ್‌ಡಿಎಫ್‌ಸಿ…

Read More