ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶ್ರೀ ವೆಂಕಟೇಶ ಕೃಪಾ ಟ್ರೇಡರ್ಸ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ದೀಪಾವಳಿ ಧಮಾಕಾ ಸಮಾರೋಪ ಸಮಾರಂಭದಲ್ಲಿ ಗಂಗೊಳ್ಳಿ ಗ್ರಾಮದ ಪೌರ ಕಾರ್ಮಿಕರು ಹಾಗೂ ಎಸ್ಎಲ್ಆರ್ಎಂ ಘಟಕದ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಗಂಗೊಳ್ಳಿಯ ಉದ್ಯಮಿ ಜಿ.ರಾಧಾಕೃಷ್ಣ ನಾಯಕ್ ಮಾತನಾಡಿ ಸ್ವಚ್ಛತಾ ಅಭಿಯಾನದಲ್ಲಿ ಪೌರ ಕಾರ್ಮಿಕರ ಸಲ್ಲಿಸುತ್ತಿರುವ ಸೇವೆ ಅತ್ಯುತ್ತವಾದದ್ದು. ಇವರ ಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಗಂಗೊಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಗೌರವಿಸುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಹೇಳಿದರು. ಸಂಸ್ಥೆಯ ಸಂಸ್ಥಾಪಕ ಜಿ.ಭಾಸ್ಕರ ವಿಠಲ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ರತ್ನಾಕರ ಬೈಂದೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಪಾಲುದಾರ ಜಿ.ವೆಂಕಟೇಶ ಶೆಣೈ, ಜಯಶ್ರೀ ಭಾಸ್ಕರ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರ ಜಿ.ವಿಠಲ ಭಾಸ್ಕರ ಶೆಣೈ ಸ್ವಾಗತಿಸಿ ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ – ಶಿಕ್ಷಕರ ಪಾತ್ರ’ಕುರಿತು ವೆಬಿನಾರ್ ನಡೆಯಿತು. ಸುರತ್ಕಲ್ ಎನ್ಐಟಿಕೆಯ ಬೋರ್ಡ್ ಆಫ್ ಗವರ್ನರ್ಸ್ ಅಧ್ಯಕ್ಷ ಡಾ ಕೆ. ಬಲವೀರ ರೆಡ್ಡಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತ ಶೈಕ್ಷಣಿಕ ರಂಗದಲ್ಲಿ ಸಾರ್ವಭೌಮತ್ವ ಸ್ಥಾಪಿಸಿದ್ದು, ಪ್ರಸ್ತುತ ಜಗತ್ತಿಗೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸುವ ಅವಶ್ಯಕತೆ ಇದೆ. ಇದಕ್ಕಾಗಿ ನಮ್ಮ ಸಾಂಪ್ರದಾಯಿಕ ವಿದ್ಯಾ ತತ್ವಗಳನ್ನು ತಳಹದಿಯಾಗಿಸಿ ಸಮಗ್ರ ಹಾಗೂ ಬಹುಶಿಸ್ತೀಯ ವಿಧಾನವನ್ನು ಶಿಕ್ಷಣ ರಂಗಕ್ಕೆ ಪರಿಚಯಿಸುವ ವಿನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ರೂಪಿಸುತ್ತಿದೆ. ಈ ಮೂಲಕ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ತಯಾರಿಗೊಳಿಸಿ ನಾಲ್ಕನೇ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಭಾರತವನ್ನು ಮುಂಚೂಣಿವಾಗಿಸುವ ಯೋಜನೆ ಕೇಂದ್ರದ ಮುಂದಿದೆ” ನೂತನ ಶಿಕ್ಷಣ ನೀತಿಯು ಪಠ್ಯ ಕ್ರಮದಲ್ಲಿ, ಬೋಧನಾ ವಿಧಾನಗಳಲ್ಲಿ ಹಾಗೂ ಉನ್ನತ ಶಿಕ್ಷಣ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತರಲಿದ್ದು, ಬದಲಾದ ಸ್ಪರ್ಧಾತ್ಮಕ ಜಗತ್ತಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ಯುವಕ ಸಂಘಗಳಲ್ಲಿನ ಯುವಕರಿಗೆ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ಅವರಿಗೆ ಅಗತ್ಯ ತರಬೇತಿಗಳನ್ನು ನೀಡುವ ಮೂಲಕ, ಅವರಲ್ಲಿರುವ ಯುವಶಕ್ತಿಯನ್ನು ಜಿಲ್ಲೆಯ ಅಭಿವೃಧ್ದಿ ಕಾರ್ಯಗಳಿಗೆ ಬಳಸಿಕೊಳ್ಳುವಂತಹ ಕಾರ್ಯಕ್ರಮಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ನೆಹರು ಯುವಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಹರು ಯುವಕೇಂದ್ರಂದ ಮೂಲಕ ಜಿಲ್ಲೆಯಲ್ಲಿ ನೊಂದಣಿಯಾಗಿರುವ ಯುವಕ ಸಂಘಗಳ ಸದಸ್ಯರಿಗೆ ಅವರಲ್ಲಿನ ಸಮಾಜಸೇವೆಯ ಗುಣ, ಕೌಶಲ್ಯ ಮತ್ತು ಸಾಹಸ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವಂತೆ ಚಟುವಟಿಕೆಗಳನ್ನು ಏರ್ಪಡಿಸಿ. ಯುವಕ ಯುವತಿಯರಿಗೆ ವಿಕೋಪ ನಿರ್ವಹಣೆ ಸೇರಿದಂತೆ ಅತ್ಯಾವಶ್ಯಕ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಸಮಾಜದ ನೆರವಿಗೆ ಧಾವಿಸುವಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ತುರ್ತು ಸಂದರ್ಭದಲ್ಲಿ ಈ ರೀತಿಯ ತರಬೇತಿ ಪಡೆದ ಯುವಕರ ಸೇವೆಯನ್ನು ಜಿಲ್ಲಾಡಳಿತದ ನೆರವಿಗೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ನೆಹರು ಯುವ ಕೇಂದ್ರದಿದ ಸಿದ್ಧಪಡಿಸುವ ವಾರ್ಷಿಕ ಕಾರ್ಯಕ್ರಮಗಳಲ್ಲಿ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಯುವಕರು ತೊಡಗುವಂತಹ ಕಾರ್ಯಕ್ರಮಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಡಾ. ಅಂಬೇಡ್ಕರ್ ಯುವಕ ಮಂಡಲ , ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಳಿ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯ ಅಂಬೇಡ್ಕರ್ ಭವನದಲ್ಲಿ ಬಿ.ಆರ್ ಅಂಬೇಡ್ಕರ್. ಅವರ 64ನೇ ವರುಷದ ಪರಿನಿರ್ವಾಣ ದಿನಾಚರಣೆ ನಡೆಯಿತು. ಯುವಕ ಮಂಡಲದ ಅಧ್ಯಕ್ಷ ನಟರಾಜ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಭಾಸ್ಕರ್ ಹೆಚ್. ಜಿ, ಕಾರ್ಯದರ್ಶಿ ಸಂದೀಪ್, ಶಶಿ ದೀಪ ಕೆ,ಶಂಕರ, ಮಹಿಳಾ ಮಂಡಲದ ಅನಿತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಸಂಯೋಜಕಿ ರಾಧಾ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೈಲಾರೇಶ್ವರ ಯುವಕ ಮಂಡಲದ ವಾರ್ಷಿಕ ಮಹಾ ಸಭೆಯು ಯುವಕ ಮಂಡಲದ ಕಛೇರಿಯಲ್ಲಿ ನೆಡೆಯಿತು. ಸಭೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ಅರುಣ ಕುಮಾರ್ ಬಾಣ, ಗೌರವ ಅಧ್ಯಕ್ಷ ಕೆ ಆರ್ ಪ್ರದೀಪ್ ಹಿರಿಯ ಸದಸ್ಯ ರಮೇಶ ಬಿಲ್ಲವ, ನಾಗರಾಜ ರಾಯಪ್ಪನ ಮಠ, ಕಾರ್ಯದರ್ಶಿ ಸುಧೀರ್ ಕೃಷ್ಣ ಹಾಜರಿದ್ದರು. 2020-21 ಸಾಲಿನ ನೂತನ ಅಧ್ಯಕ್ಷರಾಗಿ ನಾಗರಾಜ ದಫೇದಾರ್ ಹಾಗೂ ಕಾರ್ಯದರ್ಶಿಯಾಗಿ ಗಣೇಶ್ ಡಿ ನಾಯಕ್ ಆಯ್ಕೆಯಾದರು. ಇದೇ ಸಂದರ್ಭದಲ್ಲಿ 2019-20ರ ಸಾಲಿನ ಲೆಕ್ಕಪತ್ರವನ್ನು ಮಂಡಿಸಲಾಯಿತು. ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಡಿ.ಕೆ ಪ್ರಭಾಕರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ಪ್ರಸಿದ್ದಿ ಪಡೆದಿದ್ದ ರಾಮಕೃಷ್ಣ ಆಸ್ಪತ್ರೆಯು ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆಯಾಗಿ ಡಿ.9ರ ಬುಧವಾರ ಲೋಕಾರ್ಪಣೆಗೊಳ್ಳಲಿದೆ. ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು ಎರಡು ದಶಕಕ್ಕೂ ಹೆಚ್ಚು ಅನುಭವವಿರುವ ಮತ್ತು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮತ್ತು ಪ್ರಸ್ತುತ ಬ್ರಹ್ಮಾವರದ ಕ್ಷೇಮಧಾಮ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಬಿ.ವಿನಯಚಂದ್ರ ಶೆಟ್ಟಿ ತನ್ನ ಅನುಭವಿ ವೈದ್ಯ ತಂಡದೊಂದಿಗೆ ಈ ಆಸ್ವತ್ರೆಯನ್ನು ಮುನ್ನಡೆಸಲಿದ್ದಾರೆ. ಕರ್ನಾಟಕದ ಹೆಸರಾಂತ ವೈದ್ಯರ ಜೊತೆ ಕೇರಳ, ತಮಿಳುನಾಡು, ಪುಣೆ, ಆಂಧ್ರಪ್ರದೇಶದಂತಹ ರಾಜ್ಯಗಳ ಸಂದರ್ಶಕರು ನಿಯಮಿತವಾಗಿ ಸಂದರ್ಶನ ಮತ್ತು ಸಮಾಲೋಚನೆಗೆ ಲಭ್ಯವಿರಲಿದ್ದಾರೆ. ಕೇವಲ ಒಂದು ಪದ್ದತಿಯ ಚಿಕಿತ್ಸೆ ಪರಿಣಾಮಕಾರಿಯಾದ ಫಲಿತಾಂಶ ನೀಡುವಲ್ಲಿ ವಿಫಲವಾಗುತ್ತಿರುವಾಗ ಆಯುರ್ವೇದ, ಯೋಗ ಮತ್ತು ಬೇರೆ ಪಾರಂಪರಿಕ ಚಿಕಿತ್ಸಾ ಪದ್ದತಿಗಳ ಸಂಯೋಜನಾ ಚಿಕಿತ್ಸಾ ಪರಿಕ್ರಮ ನಿರೀಕ್ಷಿತ ಫಲಿತಾಂಶ ತೋರಿಸುತ್ತದೆ. ಆ ಸಂಯೋಜನಾ ಚಿಕಿತ್ಸಾ ಪದ್ದತಿ ಇಲ್ಲಿ ಅಳವಡಿಸಿಕೊಂಡು ಗುಣಾತ್ಮಕ ಫಲಿತಾಂಶ ನೀಡಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ದೇವರ ಕಾರ್ತಿಕ ದೀಪೋತ್ಸವ ಜರಗಿತು. ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ದೀಪೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿತು. ಧಾತ್ರಿ ಹವನ, ವನಭೋಜನ, ದೀಪೋತ್ಸವ, ಮಹಾಪೂಜೆ ಮತ್ತಿತರ ಧಾರ್ಮಿಕ ಅನುಷ್ಠಾನಗಳು ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ.ಪ್ರದೀಪ ಭಟ್ ನೇತೃತ್ವದಲ್ಲಿ ಜರಗಿತು. ದೇವಳದ ತಾಂತ್ರಿಕ ಜಿ.ರಾಘವೇಂದ್ರ ಆಚಾರ್ಯ, ದೇವಳದ ಮೊಕ್ತೇಸರ ಗುಜ್ಜಾಡಿ ನರಸಿಂಹ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ಡಾ.ಕಾಶೀನಾಥ ಪೈ, ಸುದನೇಶ ಶ್ಯಾನುಭಾಗ್, ಸುರೇಶ ಪೈ, ಪುರೋಹಿತರಾದ ಜಿ.ವಸಂತ ಭಟ್, ಅಜಿತ್ ಭಟ್, ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಭಜಕರು ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಡಿ.22 ಮತ್ತು ರಂದು ಎರಡು ಹಂತಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬoಧಿಸಿದoತೆ ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾ ಮಟ್ಟದಲ್ಲ “ಅಬಕಾರಿ ಉಪ ಆಯುಕ್ತರ ಕಛೇರಿ, ಅಬಕಾರಿ ಭವನ, ಅಜ್ಜರಕಾಡು, ಉಡುಪಿ ಜಿಲ್ಲೆ” ಇಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ಸದರಿ ನಿಯಂತ್ರಣ ಕೊಠಡಿಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ : 0820-2532732 ಆಗಿರುತ್ತದೆ. ಗ್ರಾಮ ಪಂಚಾಯತ್ ಚುನಾವಣೆ ನೀತಿ ಸಂಹಿತೆಯ ಅವಧಿಯಲ್ಲಿ , ಯಾವುದೇ ರೀತಿಯ ಅಬಕರಿ ಅಕ್ರಮಗಳು ಕಂಡು ಬಂದಲ್ಲಿ ಮೇಲ್ಕಂಡ ದೂರವಾಣಿ ಸಂಖ್ಯೆಗೆ ಅಥವಾ ಅಬಕಾರಿ ಇಲಾಖೆಯ ಟೋಲ್ ಫ್ರೀಸಂಖ್ಯೆ: 1800 4252 550 ಕರೆ ಮಾಡಿ ಮಾಹಿತಿ ನೀಡುವಂತೆ ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾದ ರಾಜೀವ ಶ್ರೀಯಾನ್ ಮತ್ತು ಮನೋಹರ ಡಿಸೋಜ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಳಿಕ ಮಾತನಾಡಿದ ಶಾಸಕ ಸುಕುಮಾರ್ ಶೆಟ್ಟಿ, ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಮೆಚ್ಚಿ ಬೇರೆ ಬೇರೆ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಗುಜ್ಜಾಡಿ ಗ್ರಾಮದಲ್ಲಿ ಇಬ್ಬರು ಪ್ರಭಾವಿ ಕಾಂಗ್ರೆಸ್ ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಪಕ್ಷ ಇನ್ನಷ್ಟು ಬಲಿಷ್ಠವಾಗಿದೆ ಎಂದು ಹೇಳಿದರು. ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ. ಗುಜ್ಜಾಡಿ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ರವಿ ಗಾಣಿಗ ಕೆಂಚನೂರು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹರೀಶ ಮೇಸ್ತ, ಬಿಜೆಪಿ ಬೈಂದೂರು ಮಂಡಲ ಉಪಾಧ್ಯಕ್ಷ ವಿನೋದ ಭಂಡಾರಿ, ತ್ರಾಸಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವಿ ಶೆಟ್ಟಿಗಾರ್, ಪಕ್ಷದ ಮುಖಂಡರಾದ ಉಮೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ ಕಾರ್ತಿಕ ದೀಪೋತ್ಸವ ಸರಳವಾಗಿ ಜರುಗಿತು ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ದೀಪೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿತು. ಧಾತ್ರಿ ಹವನ, ವನಭೋಜನ, ದೀಪೋತ್ಸವ, ಮಹಾಪೂಜೆ ಮತ್ತಿತರ ಧಾರ್ಮಿಕ ಅನುಷ್ಠಾನಗಳು ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಜರುಗಿತು ದೇವಳದ ತಾಂತ್ರಿಕ ಜಿ.ವಸಂತ ಭಟ್, ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಆಡಳಿತ ಮಂಡಳಿ ಸದಸ್ಯರು, ಭಜಕರು ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಆಜ್ಞಾನುಸಾರ ದೀಪೋತ್ಸವವನ್ನು ರಥಬೀದಿ ವಠಾರದಲ್ಲಿ ಅತ್ಯಂತ ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
