Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ನಡುವಿನ ಜಿದ್ದಾ ಜಿದ್ದಿನ ಕಣವಾಗಿದ್ದ ಯಡ್ತರೆ ಹಾಗೂ ಬೈಂದೂರು ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಯಡ್ತರೆ ಪಂಚಾಯತ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ದೊರೆತಿದ್ದು ನಿರಾಯಸವಾಗಿ ಅಧಿಕಾರ ಹಿಡಿದರೆ, ಬೈಂದೂರು ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದು ಅಧಿಕಾರ ಹಿಡಿಯಲಿದ್ದಾರೆ. ಯಡ್ತರೆ ಪಂಚಾಯತ್‌ನ ಯಡ್ತರೆ ಗ್ರಾ.ಪಂನ 8 ಕ್ಷೇತ್ರಗಳ ಒಟ್ಟು 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 19 ಸ್ಥಾನಗಳನ್ನು ಪಡೆದು ವಿಜಯದ ನಗೆ ಬೀರಿದ್ದರೆ, ಬಿಜೆಪಿ 5, ಹಾಗೂ ಓರ್ವ ಪಕ್ಷೇತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಿಂದಿನ ಅವಧಿಯಲ್ಲಿಯೂ ಕಾಂಗ್ರೆಸ್ 19, ಬಿಜೆಪಿ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಪಂಚಾಯತ್‌ನಲ್ಲಿ 21 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 17 ಸ್ಥಾನಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 4…

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ ರೋಟರಿ ಜಿಲ್ಲಾ ಕಾನ್ಪರೆನ್ಸ್ ಕಮಿಟಿ ಹಾಗೂ ರೋಟರಿ ಜಿಲ್ಲೆ 3182 ಸಾರಥ್ಯದಲ್ಲಿ ಅಭಿಯಾನ ರೋಟರಿ ಜಿಲ್ಲಾ ಸಮ್ಮೇಳನ ಜನವರಿ 4, 5, ಹಾಗೂ 6ರಂದು ಕೋಟೇಶ್ವರದ ಯುವ ಮೆರೀಡಿಯನ್ ಕನ್ವೆನ್‌ಕ್ಷನ್ ಸೆಂಟರ್‌ನಲ್ಲಿ ಜರುಗಲಿದೆ ಎಂದು ರೋಟರಿ 3182 ಜಿಲ್ಲಾ ಗವರ್ನರ್ ಅಭಿನಂದನ್ ಎ. ಶೆಟ್ಟಿ ತಿಳಿಸಿದ್ದಾರೆ.   ಅವರು ಕುಂದಾಪುರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರೋಟರಿ ಸಂಸ್ಥೆಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೋ ಸೇರಿದಂತೆ ಸಾಮಾಜಿಕ ಬದ್ಧತೆಯೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರಸ್ತುತ ವರ್ಷದಲ್ಲಿ 3182ರೋಟರಿ ಜಿಲ್ಲೆಯಲ್ಲಿ ಮೇಕ್ ರೋಡ್ ಸೇಫ್ ಅಭಿಯಾನವನ್ನು ಹಮ್ಮಿಕೊಂಡು ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಸಾಗರ ಹಾಗೂ ತೀರ್ಥಹಳ್ಳಿಯಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಸ್ಥಾಪನೆ, ಹ್ಯಾಪಿ ಸ್ಕೂಲ್ ಯೋಜನೆಯಡಿಯಲ್ಲಿ 60 ಶಾಲೆಗಳನ್ನು ದತ್ತು ಪಡೆದು ಈ ಲರ್ನಿಂಗ್ ಕಿಟ್, ವಾಶಿಂಗ್ ಬೇಸಿನ್ ಒದಗಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮವನ್ನು ಸ್ವಹಿತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ನಾವುಂದ ಗ್ರಾಮದ ಕುದ್ರುಕೋಡು ಎಂಬಲ್ಲಿನ ಹೆದ್ದಾರಿ ವಿಸ್ತರಣೆ ಗುತ್ತಿಗೆದಾರ ಸಂಸ್ಥೆ ಐಆರ್‌ಬಿಯ ಚಾಲಕ ರಹಿತ ಲಾರಿ ಚಲಿಸಿದ ಪರಿಣಾಮ ಮನೆಯ ಆವರಣ ಧ್ವಂಸವಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಇಲ್ಲಿ ಸಂಸ್ಥೆಯ ಬೃಹತ್ ಜಲ್ಲಿ-ಟಾರು ಮಿಶ್ರಣ ಘಟಕ ಇದೆ. ಒಂದು ಲಾರಿಯ ಚಾಲಕ ಎಂದಿನಂತೆ ಮಿಶ್ರಣ ತುಂಬಿಸಿಕೊಂಡು ಬಂದು ಲಾರಿಯನ್ನು ವೇಬ್ರಿಜ್ ಮೇಲೆ ನಿಲ್ಲಿಸಿ ಇಳಿದುಹೋಗಿದ್ದ. ಲಾರಿ ತಂತಾನೆ ಚಲಿಸಿ, ಅಡ್ಡ ಇರುವ ರಸ್ತೆ ದಾಟಿ ಮೂಕಾಂಬಿಕಾ ದೇವಾಡಿಗ ಎಂಬವರ ನಿವೇಶನದ ಕಲ್ಲಿನ ಆವರಣಕ್ಕೆ ಬಡಿದಿದೆ. ಅದರಿಂದಾಗಿ ಆವರಣ ಕುಸಿದು ಬಿದ್ದಿದೆ. ಈ ಅಪಘಾತ ನಡೆದ ಸ್ಥಳದ ಪಕ್ಕದಲ್ಲಿ ಒಂದು ಅಂಗಡಿ ಇದೆ. ಲಾರಿ ಚಲಿಸಿದ ವೇಳೆ ಅದರಲ್ಲಿ ಹತ್ತಾರು ಜನರಿದ್ದರು. ಅದಕ್ಕಿಂತ ಸ್ವಲ್ಪ ಸಮಯದ ಮೊದಲು ಶಾಲಾ ವಾಹನವೊಂದು ಆ ದಾರಿಯಾಗಿ ಹೋಗಿತ್ತು. ಲಾರಿ ಆ ವೇಳೆ ಚಲಿಸಿದ್ದರೆ ಅಥವಾ ಆವರಣದ ಬದಲು ಅಂಗಡಿಗೆ ನುಗ್ಗಿದ್ದರೆ ಭೀಕರ ಅಪಘಾತ ಸಂಭವಿಸುತ್ತಿತ್ತು ಎಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೆಲವು ಸಂಘಟನೆಗಳು ಹಿಂದುಳಿದ ಸಮುದಾಯದ ಯುವಕರ ದಿಕ್ಕು ತಪ್ಪಿಸಿ ತಮ್ಮ ಹೋರಾಟಗಳಲ್ಲಿ ಬಳಸಿಕೊಳ್ಳುತ್ತಿವೆ. ಮುಂದಾಗುವುದರ ಕುರಿತು ವಿವೇಚಿಸದೆ ಮುನ್ನುಗ್ಗುವ ಆ ಯುವಕರು ಬಂಧನ, ಜೈಲುವಾಸ ಅನುಭವಿಸಬೇಕಾಗುತ್ತದೆ. ಸಮುದಾಯ ಸಂಘಟನೆಗಳು ತಮ್ಮ ಯುವಕರನ್ನು ಎಚ್ಚರಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಮರವಂತೆಯ ಸಾಧನಾ ಮಂಟಪದಲ್ಲಿ ಡಿ.28ರಂದು ನಡೆದ ಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು. ’ಸಮುದಾಯದ ದುರ್ಬಲ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಸಂಘಟನೆ ಆದ್ಯತೆ ನೀಡಬೇಕು. ಅಂತವರಿಗೆ ಆರ್ಥಿಕ ನೆರವು ನೀಡಬೇಕು. ಬಿಲ್ಲವರ ಮಾತೃ ಸಂಘ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಅದರ ಮತ್ತು ಸ್ಥಳೀಯ ದಾನಿಗಳ ನೆರವು ಪಡೆಯಬೇಕು. ಯಾವುದೇ ಬಿಲ್ಲವ ಸಂಘ ತನ್ನ ಸ್ವಂತ ನೆಲೆ ನಿರ್ಮಿಸಿಕೊಳ್ಳಲು ಮುಂದಾದರೆ ಅದಕ್ಕೆ ಸರ್ಕಾರದ ನೆರವು ದೊರಕಿಸಿಕೊಡಲಾಗುವುದು’ ಎಂದು ಭರವಸೆಯಿತ್ತರು. ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಬಿಲ್ಲವ ಸ್ವಾಗತಿಸಿ ೨೦ ವರ್ಷಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ:  ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಲೇ ರಾಜ್ಯದಲ್ಲಿ ಹೆಸರು ಮಾಡಿದ್ದ ಐಪಿಎಸ್ ಅಧಿಕಾರಿ, ವಡ್ಡರ್ಸೆ ಮೂಲದ ಮಧುಕರ ಶೆಟ್ಟಿ (೪೯) ಡಿ.೨೮ರ ರಾತ್ರಿ ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಹೃದಯ ಸಂಬಂಧಿ ಖಾಯಿಲೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದದರು ಮೂಲಗಳ ಮಾಹಿತಿ ಪ್ರಕಾರ ಮಧುಕರ್​ ಶೆಟ್ಟಿ ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತುರ್ತು ಚಿಕಿತ್ಸೆಯಲ್ಲಿದ್ದ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳದೇ ಕೊನೆಯುಸಿರೆಳೆದಿದ್ದಾರೆ. ಮಧುಕರ ಶೆಟ್ಟಿ ಅವರ ಚಿಕಿತ್ಸೆಯ ಬಗ್ಗೆ ಖುದ್ದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​, ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕದ ಹಲವು ಐಪಿಎಸ್ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದರು. ಕರ್ನಾಟಕ ಸರ್ಕಾರ ಸಿಐಡಿ ಎಡಿಜಿಪಿ ಪ್ರತಾಪ್​ ರೆಡ್ಡಿಯವರನ್ನು ಚಿಕಿತ್ಸೆ ಮೇಲ್ವಿಚಾರಣೆಗೆ ನೇಮಿಸಿತ್ತು.  ಕುಂದಾಪ್ರ ಡಾಟ್ ಕಾಂ ಸುದ್ದಿ. ಕರ್ನಾಟಕ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟರನ್ನು ಬೇಟೆ ಮಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ). ಬಸ್ರೂರು ಕುಂದಾಪುರ ತಾಲೂಕಿನ ಸಾಧಕರಿಗೆ ನೀಡಲಾಗುತ್ತಿರುವ 2018-19ನೇ ಸಾಲಿನ ಕೊಳ್ಕೇರಿ ರತ್ನಾಕರ ಶೆಟ್ಟಿ ಸಾಧಕ ಪ್ರಶಸ್ತಿಗೆ ಕಂದಾವರ ಸತೀಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಂದಾವರ ಸತೀಶ ಶೆಟ್ಟಿಯವರ ವಿಭಿನ್ನವಾದ ಸಾಧನೆಗಾಗಿ ಯುಎಇ ಸರಕಾರದ 2017ರ ಎನೋಕ್ ಎನರ್ಜಿ ಅವಾರ್ಡನ್ನು ಕೊಟ್ಟು ಗೌರವಿಸಿದೆ. ಯುಎಇ ಫ್ಯುಯಲ್ ಸ್ಟೇಷನ್ನ ಡಿಸೈನ್ ಮತ್ತು ಇಂಜಿನಿಯರಿಂಗ್ ಎನರ್ಜಿ ಸ್ಟ್ಯಾಂಡರ್ಡ್ ತಯಾರಿ ಮಾಡಿದ್ದಕ್ಕಾಗಿ ದುಬೈ ರೋಟನನಲ್ಲಿ ನಡೆದ ಎಕ್ಸ್‌ಕ್ಲೂಸಿವ್ ಸಭೆಯಲ್ಲಿ ಅವರನ್ನು ಗೌರವಿಸಲಾಗಿದೆ. ಮದ್ಯಪ್ರಾಚ್ಯದ ಕೈಗಾರಿಕಾ ಕಂಪನಿಗಳಲ್ಲಿ ಪ್ರತಿಷ್ಟಿತವಾಗಿರುವ ಕ್ಲೈಮೇಟ್ ಕಂಟ್ರೋಲ್ ಅವಾರ್ಡ್ ೨೦೧೭ರ ಆಯ್ಕೆ ಸಮಿತಿಯ ಸದಸ್ಯರಾಗಿ ಯುಎಇ ಸರಕಾರದಿಂದ ನಾಮ ನಿರ್ದೇಶನ ಹೊಂದಿದ್ದಾರೆ. ಸತೀಶ್ ಶೆಟ್ಟಿ ಅವರ ಈ ಸಾಧನೆಯನ್ನು ಪರಿಗಣಿಸಿ ಕೊಳ್ಕೇರಿ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ.) ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಪ್ರಶಸ್ತಿ ನೀಡುತ್ತಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೀದರ್ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ ೫೩ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಉತ್ತರಪ್ರದೇಶದ ಮಥುರಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ೯ ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಬಾಲಕಿಯರ ೧೬ ವಯೋಮಿತಿಯಲ್ಲಿ ದೀಪಾಶ್ರೀ ೩ನೇ ಸ್ಥಾನ, ೧೮ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಮಾಲಾಶ್ರೀ ೪ನೇ ಸ್ಥಾನ, ಚೈತ್ರಾ ಪಿ. ೫ನೇ ಸ್ಥಾನ, ಸಂಧ್ಯಾ ೭ನೇ ಸ್ಥಾನ, ರಕ್ಷಿತಾ ೧೦ನೇ ಸ್ಥಾನ, ೧೮ ವಯೋಮಿತಿ ಬಾಲಕರ ವಿಭಾಗದಲ್ಲಿ ಅಸ್ಲಾಮ್ ಮುಲ್ತಾನಿ ೨ನೇ ಸ್ಥಾನ, ಸತೀಶ್ ೭ನೇ ಸ್ಥಾನ. ೨೦ ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಚೈತ್ರಾ ಡಿ. ಪ್ರಥಮ ಸ್ಥಾನ, ಪ್ರಿಯಾ ಎಲ್.ಡಿ ೩ನೇ ಸ್ಥಾನ, ಜಯಲಕ್ಷ್ಮೀ ೯ನೇ ಸ್ಥಾನ, ರೇಷ್ಮಾ ೧೦ನೇ ಸ್ಥಾನ, ಪುರುಷರ ವಿಭಾಗದಲ್ಲಿ ರಂಜಿತ್ ಸಿಂಗ್ ಪ್ರಥಮ ಸ್ಥಾನ, ಅನಿಲ್ ೯ನೇ ಸ್ಥಾನ, ಪ್ರವೀಣ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವ ಮಾನವತೆ ಸಂದೇಶ ಸಾರಿದ ಮಹಾನ್ ದಾರ್ಶನಿಕ ಕವಿ ಕುವೆಂಪು ಅವರ ಜನ್ಮ ದಿನೋತ್ಸವದ ನೆನಪಿಗಾಗಿ ಪ್ರತಿವರ್ಷ ರಂಗಕಹಳೆ ರಿ. ಮಕ್ಕಳ ರಂಗಶಾಲೆ ಆಯೋಜಿಸುತ್ತಿರುವ ’ಕುವೆಂಪು ನಾಟಕೋತ್ಸವ’ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಆಯೋಜನೆಗೊಂಡಿದ್ದು ಡಿ. 25ರ ಮಂಗಳವಾರದಿಂದ ಡಿ.29ರ ಶನಿವಾರದ ತನಕ ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಡಾ. ಹೆಚ್. ಶಾಂತಾರಾಮ್ ಬಯಲು ರಂಗ ಮಂಟಪದಲ್ಲಿ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗುತ್ತಿರುವ 18ನೇ ಕುವೆಂಪು ನಾಟಕೋತ್ಸವದಲ್ಲಿ ಪ್ರತಿ ದಿನ ಸಂಜೆ 6 ರಿಂದ ಎರಡು ನಾಟಕಗಳು ಪ್ರದರ್ಶನಗೊಳ್ಳಲಿದೆ. ಈ ನಡುವೆ ಕುವೆಂಪು ಜನ್ಮದಿನೋತ್ಸವ, ವಿಚಾರ ಸಂಕಿರಣ, ಸಾಧಕರಿಗೆ ಗೌರವಾರ್ಪಣೆ, ಚಲನಚಿತ್ರ ಪ್ರದರ್ಶನ, ಕುವೆಂಪು ಗೀತ ಗಾಯನ ನಡೆಯಲಿದೆ. ನಾಟಕ , ಚಲನಚಿತ್ರ ಪ್ರದರ್ಶನ: ಡಿ.25ರಂದು ಸಿ. ಲಕ್ಷ್ಮಣ ನಿರ್ದೇಶನದ ರಂಗಕಹಳೆ ತಂಡದ ಪ್ರಸ್ತುತಿಯ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ, ಬಳಿಕ ಓಹಿಲೇಶ್ ಎಲ್. ನಿರ್ದೇಶನದ ಬೆಂಗಳೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡರೆ ದೇಹವು ರೋಗಮುಕ್ತವಾಗಿರುತ್ತೆ. ಮಧ್ಯಪಾನ, ಧೂಮಪಾನದಿಂದ ದೂರವಿದ್ದು, ಪ್ರೀತಿ ಹಂಚುವುದೇ ಆರೋಗ್ಯದ ಗುಟ್ಟು ಎಂದು ಪದ್ಮಶ್ರೀ ಡಾ. ಬಿ. ಎಂ. ಹೆಗ್ಡೆ ಹೇಳಿದರು. ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೪ನೇ ಹುಟ್ಟು ಹಬ್ಬದ ಆಚರಣೆ ಮತ್ತು ದತ್ತಿನಿಧಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯರ ದೊಡ್ಡ ಆಸ್ತಿಯೆಂದರೆ ಪ್ರೀತಿ ಮಾಡುವ ಮಕ್ಕಳು. ಬದುಕಿನಲ್ಲಿ ಆಸ್ತಿ ಮಾಡುವ ಬದಲು ಅವರು ಪ್ರೀತಿಯಿಂದ ನೋಡಿಕೊಳ್ಳುವಂತೆ ಮಾಡಿ. ಆರೋಗ್ಯದಿಂದ ಇರುವುದೆಂದರೆ ಖಾಯಿಲೆಯಿಂದ ದೂರವಿರುವುದಲ್ಲ ಬದಲಿಗೆ ಕೆಲಸ ಮಾಡಲು ಹುಮ್ಮಸ್ಸನ್ನು ತುಂಬಿಕೊಳ್ಳುವ ಸ್ಥಿತಿಯದು. ದಿನದಲ್ಲಿ ಮನಸ್ಫೂರ್ತಿಯಿಂದ ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಿಂದ ಸುಖ, ನೆಮ್ಮದಿಯೂ ದೊರೆಯುತ್ತದೆ ಎಂದವರು ಸಲಹೆಯಿತ್ತ ಅವರು ಅಪ್ಪಣ್ಣ ಹೆಗ್ಡೆ ಅವರ ಆಯೋಗ್ಯದ ಗುಟ್ಟು ಅವರ ಮದಸ್ಮಿತ ಮುಖದಲ್ಲಿದೆ ಎಂದರು. ಕೋಣಿ ರಮಾನಂದ ಕಾರಂತರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ’ಭಾರತ ಸ್ವಾತಂತ್ರ್ಯ ಗಳಿಸಿ ಪ್ರಜಾತಂತ್ರ ವ್ಯವಸ್ಥೆಗೆ ಹೊರಳಿಕೊಂಡಾಗ ಜನರಿಂದ ಆದ ಜನರಿಗಾಗಿ ಇರುವ ಜನರ ಸರ್ಕಾರ ಬಂತೆಂದು ಹಿಗ್ಗಿದೆವು. ಆದರೇ ನಾವೀಗ ಇಲ್ಲಿ ಕೆಲವರಿಂದ ಆದ ಕೆಲವರಿಗಾಗಿ ಇರುವ ಕೆಲವರ ಸರ್ಕಾರವನ್ನು ಕಾಣುತ್ತಿದ್ದೇವೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಯುವ ಜನತೆ ಇದನ್ನು ಬದಲಿಸಬೇಕು’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು. ನಾಗೂರಿನ ಕುಸುಮ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಅವರು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗ್ಡೆ ಅವರಿಗೆ ಈ ಸಾಲಿನ ’ಕುಸುಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ದಿಕ್ಸೂಚಿ ಭಾಷಣ ಮಾಡಿದರು. ಲೋಕಾಯುಕ್ತನಾದ ಬಳಿಕ ನನಗೆ ದೇಶದ ವಾಸ್ತವ ಸ್ಥಿತಿಯ ಅರಿವಾಯಿತು. ಜನರು ಭ್ರಷ್ಟರನ್ನು, ಅಯೋಗ್ಯರನ್ನು, ಅತ್ಯಾಚಾರಿಗಳನ್ನು ಬಹಿಷ್ಕರಿಸುವ ಬದಲಿಗೆ ಪುರಸ್ಕರಿಸುವುದನ್ನು ಕಂಡು ಆಘಾತಗೊಂಡೆ. ಇದರ ಫಲವಾಗಿ ದೇಶ ಅಭಿವೃದ್ಧಿಯಾಗುವುದರ ಬದಲಿಗೆ ಆಡಳಿತಗಾರರಿಂದ ನಡೆಯುತ್ತ ಬಂದ ಹಗರಣಗಳ ಮೊತ್ತ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. ಈ ಪರಿಯ ಸೋರಿಕೆಯಿಂದ ನಿಜವಾದ ಅಭಿವೃದ್ಧಿಗೆ…

Read More