Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿ ಐ ಟಿ ಯು)ವಿನ ೪೩ನೇ ವಾರ್ಷಿಕ ಮಹಾಸಭೆಯು ಹಂಚು ಕಾರ್ಮಿಕರ ಭವನದಲ್ಲಿ ಕಾಮ್ರೇಡ್ ಕೆ.ಲಕ್ಷ್ಮಣರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. P ರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿ ಐ ಟಿ ಯುವಿನ ಕರ್ನಾಟಕ ರಾಜ್ಯ ಸಮಿತಿಯ ಉಪಾಧ್ಯಕ್ಷ ಮತ್ತು ಕೆ.ಎಸ್.ಆರ್.ಟಿ.ಸಿ ಕಾರ್ಮಿಕ ಸಂಘದ ಕಾಮ್ರೇಡ್ ಕೆ ಪ್ರಕಾಶ ಚಾಲಕರನ್ನು ಉದ್ದೇಶಿಸಿ ಮಾತನಾಡಿತ್ತಾ ಕೇಂದ್ರ ಸರಕಾರದ ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನಿತಿಯಿಂದ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಹಿಂದಿನ ಕೇಂದ್ರ ಸರಕಾರ ಜಾರಿಗೆ ತಂದಿರುವ ರಸ್ತೆ ಸಾರಿಗೆ ಸುರಕ್ಷ ಮಸುದೆ ಕಾಯ್ದೆಯನ್ನು ಇಂದು ಕೇಂದ್ರ ಸರಕಾರ ಇಂದು ಜಾರಿ ಮಾಡಿರುವುದರಿಂದ ಸಣ್ಣ ಸಣ್ಣ ತಪ್ಪುಗಳಿಗೆ ಅಧಿಕ ದಂಡ ನೀಡುವಂತಾಗಿದೆ. ಇರಿಂದಾಗಿ ಚಾಲಕರಿಗೆ ಹಿಂದಿಗಿಂತಲು ಈಗ ಕಷ್ಟಗಳು ಹೆಚ್ಚಾಗಿವೆ ಇನ್ನು ಕೆಲವು ಕಡೆ ಟ್ಯಾಕ್ಷಿಗಳಿಗೆ ಅಧಿಕ ಟೋಲ್‌ಗಳನ್ನು ವಸೂಲಿ ಮಾಡುತ್ತಿದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 25 ವರ್ಷಗಳಿಂದ ನಡೆದ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ಆಳ್ವಾಸ್ ವಿರಾಸತ್ ಹಾಗೂ 15 ವರ್ಷಗಳಿಂದ ನಡೆದ ಆಳ್ವಾಸ್ ನುಡಿಸಿರಿಯನ್ನು ನ.14ರಿಂದ 17ರವರೆಗೆ ಒಂದೇ ಸಮ್ಮೇಳನವಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ಹೆಸರಿನಲ್ಲಿ ಆಚರಿಸಲಾಗುವುದು. ಆಳ್ವಾಸ್ ನುಡಿಸಿರಿ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಹಗಲು ಹೊತ್ತಿನಲ್ಲಿ ಸಾಹಿತ್ಯಕ ಕಾರ್ಯಕ್ರಮಗಳು, ರಾತ್ರಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ. ಆಯಾ ದಿನಗಳು ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್‍ನಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ಜರುಗಲಿವೆ. ವಿರಾಸತ್‍ನಲ್ಲಿ ದಿನವೊಂದಕ್ಕೆ ಎರಡು ಅವಧಿ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳ ನಡೆಯಲಿದೆ. ನ.14ರಂದು ಆಳ್ವಾಸ್ ವಿದ್ಯಾರ್ಥಿಸಿರಿ, ಅದೇ ದಿನ ಸಾಯಂಕಾಲ ಆಳ್ವಾಸ್ ವಿರಾಸತ್ ಹಾಗೂ ಆಳ್ವಾಸ್ ಕೃಷಿಸಿರಿ’ ಉದ್ಘಾಟನೆಗಳು ನಡೆಯಲಿವೆ. ನ.15ರಂದು ಆಳ್ವಾಸ್ ನುಡಿಸಿರಿ ಉದ್ಘಾಟನೆಗೊಳ್ಳಲಿದ್ದು, ನ.17ರಂದು ಮಧ್ಯಾಹ್ನ ಸಮಾರೋಪಗೊಳ್ಳಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು ಶೀಘ್ರವಾಗಿ ಅಂತಿಮ ಸ್ಪರ್ಶ ನೀಡಲಾಗುವುದು. ಅರ್ಥವತ್ತಾಗುವಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಪತ್ರಕರ್ತರಾದವರಿಗೆ ವರದಿಗಾರಿಕೆ ಎನ್ನುವಂತದ್ದು ಕೇವಲ ವಿಷಯವನ್ನು ಪ್ರಸ್ತುತಪಡಿಸುವಿಕೆಯ ಮಾಧ್ಯಮವಾಗದೇ, ಓದುಗಾರರ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುವಂತಹ ಸಾಧನವಾಗಬೇಕು ಎಂದು ಮಂಗಳೂರಿನ ಗ್ಲೋಬಲ್ ಟಿ.ವಿಯ ಸಂಸ್ಥಾಪಕ ಹಾಗೂ ನಿರ್ದೇಶಕರಾದ ಎನ್.ವಿ ಪಾವ್ಲೋಸ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ ‘ಪತ್ರಿಕೋದ್ಯಮ ದಿನಾಚರಣೆ’ಯ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ಸಂಗ್ರಹಣೆಗೆ ಸಂವಹನದ ಅವಶ್ಯಕತೆಯಿದ್ದರೂ, ಸಂವಹನಕ್ಕೆ ಯಾವುದೇ ಭಾಷೆಯ ಅಗತ್ಯವಿಲ್ಲ, ಬದಲಾಗಿ ಹಾವ-ಭಾವಗಳ ಮುಖಾಂತರವೂ ವಿಷಯಗಳನ್ನು ಪ್ರಸ್ತುತಪಡಿಸಬಹುದು. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಜೀವನವನ್ನು ಸುಖಮಯವನ್ನಾಗಿಸಿಕೊಳ್ಳುವ ಆತುರದಲ್ಲಿದ್ದಾರೆ. ಅಡ್ಡದಾರಿಗಳಿಲ್ಲದೆ ಯಶಸ್ಸನ್ನು ಪಡೆಯಲು ಜೀವನದ ಪ್ರತಿ ಹಂತದಲ್ಲೂ ಹೋರಾಟ ನಡೆಸಬೇಕು. ಇಂದಿನ ಜಗತ್ತಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಗತ್ಯವಿದ್ದು, ಇಂತಹ ವಿಮೋಚನೆಯಿಂದ ಜೀವನದಲ್ಲಿ ಎನಾದರೂ ಸಾಧಿಸಬಹುದು. ಪ್ರಾಯೋಗಿಕ ಜ್ಞಾನದ ಜೊತೆಗೆ, ವಿಷಯಗಳನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸಿದಾಗ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ನಮ್ಮದಾಗಿಸಕೊಳ್ಳಬಹುದು. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಬೋಧಿಸುವ ಜೊತೆಗೆ ಪ್ರೇರೇಪಿಸುವ ಅಗತ್ಯವಿದೆ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪೋಷಿಸುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುಸ್ತಕದಿಂದ ಸಿಗುವ ಜ್ಞಾನ ಬೇರೆ ಎಲ್ಲಿಯೂ ಸಿಗುವುದಿಲ್ಲ ಆದ್ದರಿಂದ ಪುಸ್ತಕಗಳ ಬಗ್ಗೆ ಇರುವ ಉದಾಸೀನ ಮನೋಭಾವ ದೂರವಾಗಬೇಕು ಎಂದು ಸಾಹಿತಿ ಪಾರ್ವತಿ ಜಿ ಐತಾಳ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅವರು ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಕುಂದಾಪುರ ಶಾಖಾ ಗ್ರಂಥಾಲಯದಲ್ಲಿ, ಭಾರತ ಸರ್ಕಾರದ ನೀತಿ ಆಯೋಗ, ನವದೆಹಲಿ ಇದರ ಸೂಚನೆಯಂತೆ ಸಾರ್ವಜನಿಕರಲ್ಲಿ ಓದುವ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಓದುಗ ತಿಂಗಳು ಕಾರ್ಯಕ್ರಮದ ನಿಮಿತ್ತ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮಟ್ಟದಿಂದ ಕಾಲೇಜು ಮಟ್ಟದವರೆಗೂ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ನಿಗದಿತ ಅಧ್ಯಯನದಿಂದ ಮಾತ್ರ ನಮ್ಮ ವ್ಯಕ್ತಿತ್ವದ ವಿಕಸನ, ಪರಿವರ್ತನೆ ಸಾಧ್ಯವಾಗುತ್ತದೆ. ಟಿ.ವಿ. ಇಂಟರ್‌ನೆಟ್‌ನತ್ತ ಜನರ ಒಲವು ಜಾಸ್ತಿಯಾಗಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತಿದೆ ಎಂದು ವಿಷಾಧಿಸಿದ ಅವರು ಪುಸ್ತಕ ಓದುವ ಹವ್ಯಾಸ ಬೆಳೆಸಕೊಳ್ಳಬೇಕು ಎಂದು ಸಲಹೆ ನೀಡಿದರು. ಕುಂದಾಪುರ ದಕ್ಷಿಣ ರೋಟರಿ ಮಾಜಿ ಅಧ್ಯಕ್ಷ ಕೆ. ಪಾಂಡುರಂಗ ಭಟ್ ಮಾತನಾಡಿ, ವಿದ್ಯಾರ್ಥಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಹೋದರತ್ವದ ಬಾವನೆ ಇಡೀ ಜಗತ್ತಿನಲ್ಲಿ ಬೆಳೆಯಬೇಕು. ರೋವರ‍್ಸ್ ಮತ್ತು ರೇಂಜರ‍್ಸ್ ಗಳು ಈ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡು ದೇಶದ ಉಜ್ವಲ ಭವಿಷ್ಯಕ್ಕಾಗಿ ದುಡಿಯುವ ಮನೋಭಾವನೆಯನ್ನು ಹೊಂದಬೇಕು ಎಂದು ಜಿಲ್ಲಾ ಗೌರವಾಧ್ಯಕ್ಷರಾಗಿರುವ ಗುಣರತ್ನ ಅವರು ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ರೋವರ‍್ಸ್ ಮತ್ತು ರೇಂಜರ‍್ಸ್ ಘಟಕದ ಉದ್ಘಾಟನಾ ಮತ್ತು ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾಲೇಜಿನಲ್ಲಿ ಗಿಡ ನೆಡುವ ಮೂಲಕ ಜಿಲ್ಲಾ ರೋವರ‍್ಸ್ ಮತ್ತು ರೇಂಜರ‍್ಸ್ ಜಿಲ್ಲಾ ತರಬೇತುದಾರಾದ ಕೊಗ್ಗ ಗಾಣಿಗ ಮತ್ತು ಗುಣರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋವರ‍್ಸ್ ಮತ್ತು ರೇಂಜರ‍್ಸ್ ನ ಕೊಗ್ಗ ಗಾಣಿಗ ರೋವರ‍್ಸ್ ಮತ್ತು ರೇಂಜರ‍್ಸ್ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಸಾಯನಶಾಸ್ತ್ರ ವಿಭಾಗದ ನಿಶಾ ಎಂ, ಕಾಲೇಜಿನ ರೋವರ‍್ಸ್ ಮತ್ತು ರೇಂಜರ‍್ಸ್ ಘಟಕದ ರಿತಿನ್ ಶೆಟ್ಟಿ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಶ್ರೀಮಠ ಸಾಣೆಹಳ್ಳಿ ಇವರ ಸಹಯೋಗದಲ್ಲಿ ಮತ್ತೆ ಕಲ್ಯಾಣಶೀರ್ಷಿಕೆಯಲ್ಲಿ ವಚನಕಾರರ ಬದುಕು-ಬರಹದ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಗಳಾಗಿ ಆಗಮಿಸಿದ್ದ ನಾವುಂದ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸುಧಾಕರ ದೇವಾಡಿಗರವರು ವಚನಕಾಲವು ೯೦೦ ವರುಷಗಳ ಹಿಂದೆ ನಡೆದ ವಚನಗಳ ಚಳುವಳಿ. ಈ ನಾಡಿನ ಇತಿಹಾಸದಲ್ಲಿ ಬಹಳ ಮಹತ್ವವಾದುದು. ಜೇಡ, ಬೇಡ, ಮಡಿವಾಳ, ಮಾದರ, ಅಂಬಿಗ ಹೀಗೆ ಬಹುರೂಪಿ ನೆಲೆಯಲ್ಲಿದ್ದ ದುಡಿಮೆಗಾರರು ಶಿವಭಕ್ತಿ ಎಂಬ ಮಹಾಮನೆಯೊಳಗೆ ಒಂದಾಗಿ ತಮ್ಮ ಚಿಂತನೆ ಮತ್ತು ಅನುಭವಗಳಿಗೆ ಅಭಿವ್ಯಕ್ತಿಸಿದ ಕಾಲವದು. ದಾಸೋಹ, ದಯೇಯ ಧರ್ಮ ಮುಂತಾದ ಜೀವಪರ ಚಿಂತನೆಗಳೇ ಅವರ ಪರಮ ಧ್ಯೇಯವಾಗಿತ್ತು. ಅದೊಂದು ಸಂಘಟನಾತ್ಮಕ ಪರಿಸರವಾಗಿದ್ದು, ಸಾಮಾಜಿಕ ವ್ಯವಸ್ಥೆ, ಧರ್ಮ, ದೇವರುಗಳ ಕುರಿತು ಅವರು ನಡೆಸಿದ ಸಂವಾದ, ಮರುಶೊಧನೆಗಳು ಇಂದಿಗೂ ಪ್ರಸ್ತುತವೆನಿಸಿದೆ. ತಮ್ಮ ಬದುಕಿನ ಅನುಭವಗಳ ಮಖೇನ ಉದ್ದಕ್ಕೂ ಸಾಮಾಜಿಕ ಸಂಗತಿಗಳಿಗೆ ಮುಖಾಮುಖಿಯಾಗುತ್ತಾ ಸಾಗಿರುತ್ತಾರೆ. ಅವರಲ್ಲಿ ನುಡಿ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ, ಜು. 24: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಕೊಡಮಾಡುವ ‘ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಜು.೨೪ ರಂದು ರಘುರಾಮ ಶೆಟ್ಟರ ವಡ್ಡರ್ಸೆಯ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯ ಅತಿಥಿಗಳು ಜತೆಯಾಗಿ ಆಮಂತ್ರಣ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಮಾತನಾಡಿ, ರಘುರಾಮ ಶೆಟ್ಟರ ಹೆಸರಿನಲ್ಲಿ ಅದ್ಬುತವಾದ ಶಕ್ತಿ ಇದೆ. ಅವರ ಹೆಸರನ್ನು ಉಳಿಸಿ-ಬೆಳೆಸುವ ಸಲುವಾಗಿ ಬ್ರಹ್ಮಾವರ ಪತ್ರಕರ್ತರ ಸಂಘ ನಡೆಸುತ್ತಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ಸಾಮಾಜಿಕ ಚಿಂತಕ ಉದಯ ಶೆಟ್ಟಿ ಪಡುಕರೆ ಮಾತನಾಡಿ, ಇಂದಿನ ಪ್ರತಿಕೋದ್ಯಮ ಕ್ಷೇತ್ರಕ್ಕೆ ವಡ್ಡರ್ಸೆಯವರ ಚಿಂತನೆಗಳನ್ನು ಅತೀ ಅಗತ್ಯ .ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಆ.೪ರಂದು ಬ್ರಹ್ಮಾವರ ಬಂಟರಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ…

Read More

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪ್ರ ಕನ್ನಡದ್ ತಾಕತ್ತೇ ಹಾಂಗ್ ಕಾಣಿ. ಅದ್ರ ಹೆಸ್ರಂಗ್ ಎಂತ ಮಾಡುಕ್ ಹ್ವಾರೂ ಸುದ್ದಿ ಆತ್ತ್. ಅಂತದ್ರಗೆ ನಮ್ ಯುವಕ್ರೆಲ್ಲಾ ಸೇರ್ಕಂಡ್ ನಮ್ ಕುಂದಾಪ್ರ ಕನ್ನಡಕ್ಕೂ ಒಂದು ದಿನು ಇಲ್ರಿ, ಕುಂದಾಪ್ರ ಭಾಷಿ ಮಾತಾಡ್ವರ್ ಯಾರ್ ಯಾರ್ ಎಲ್ಲೆಲ್ಲಿದ್ರೋ ಅಲ್ಲಲ್ಲೇ ಕುಂದಾಪ್ರ ಕನ್ನಡದ್ ಸಲುವಾಯಿ ಒಂಚೂರ್ ಆರೂ ಸಮಯ್ ಕೊಡ್ಲಿ ಅಂದೇಳಿ ಆಟಿ ಅಮಾಸಿ ದಿನವೇ ’ವಿಶ್ವ ಕುಂದಾಪ್ರ ಕನ್ನಡ ದಿನ’ಅಂದೇಳಿ ಮಾಡುಕ್ ಹೊರ್ಟಿರ್. ನಮ್ ಕುಂದಾಪ್ರದರ್ ಬಗ್ಗೆ ಕೇಣ್ಕಾ? ಸು ಅಂದ್ರೆ ಸುಕ್ಕಿನುಂಡಿ ಅಂತ್ರ್. ಅಂತದ್ರಗ್ ಕುಂದಾಪ್ರ ಕನ್ನಡ ದಿನು ಅಂದಂದೆ ಸೈ, ಬ್ರಹ್ಮಾವರದಿಂದ್ ಬೈಂದೂರು ಶಿರೂರ್ ತನಕ್ ಎಲ್ಲಾ ಕಡೆ ಕಾರ್ಯಕ್ರಮ ಮಾಡುಕ್ ತಯಾರಿ ಮಾಡ್ಕಂತಿದ್. ಸೋಶಿಯಲ್ ಮೀಡಿಯಾದಗಂತೂ ಭಾರಿ ಸದ್ದ್ ಮಾಡ್ತಿತ್. ವಿಶ್ವ ಕುಂದಾಪ್ರ ಕನ್ನಡ ದಿನ: ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಕನ್ನಡ ಭಾಷೆಯ ಅತ್ಯಂತ ಸರಳ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾದಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಅವರ ಪಟ್ಟ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಬದ್ರಿನಾಥದ ಶ್ರೀ ಬದ್ರಿನಾಥ ದೇವಾಲಯಕ್ಕೆ ಬುಧವಾರ ಸಂಜೆ ಭೇಟಿ ನೀಡಿದರು. ದೇವಾಲಯಕ್ಕೆ ಭೇಟಿ ನೀಡಿದ ಗುರುವರ್ಯರು ಶ್ರೀದೇವರ ದರ್ಶನ ಪಡೆದು ದೇವಾಲಯದ ಪರಿಸರವನ್ನು ವೀಕ್ಷಿಸಿದರು. ಬಳಿಕ ಅಲಕಾನಂದ ಹಾಗೂ ಬ್ರಹ್ಮಕಪಾಲ ಪ್ರದೇಶಕ್ಕೆ ಭೇಟಿ ನೀಡಿದರು. ಹನುಮಂತ ಪುತ್ತು ಪೈ ಭಟ್ಕಳ, ಯು.ಗಣೇಶ ಮಲ್ಯ ದೆಹಲಿ, ಎಸ್.ಪ್ರಭಾಕರ ಕಾಮತ್ ಮಂಗಳೂರು, ಜಿ.ಎಸ್.ಕಾಮತ್ ಕುಮಟಾ, ಮಹೇಶ ಎಸ್.ನಾಯಕ್ ಯಲ್ಲಾಪುರ, ಡಾ.ಕಾಶೀನಾಥ ಪೈ ಗಂಗೊಳ್ಳಿ, ಯೋಗೇಶ್ ಜಿ.ಕಾಮತ್ ಕುಮಟಾ, ನಾರಾಯಣ ಪೈ ಮತ್ತಿತರರು ಶ್ರೀಗಳೊಂದಿಗೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತಿಚಿಗೆ ರಚನೆಗೊಂಡ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 1982-90ರ ಅವಧಿಯಲ್ಲಿ ಸೇವೆಗೈದ ಉಪನ್ಯಾಸಕರಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣಚಂದ್ರ ಶೆಟ್ಟಿ ಮಾತನಾಡಿ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿ ಸಂಘವನ್ನು ಸೇರ್ಪಡೆಗೊಳ್ಳುವಂತೆ ಕರೆ ನೀಡಿ, ಹಳೆ ವಿದ್ಯಾರ್ಥಿಗಳ ಪುನರ್ ಮಿಲನದಿಂದ ಸಾಮಾಜಿಕವಾಗಿ, ವ್ಯಾವಹಾರಿಕವಾಗಿ ಮತ್ತಷ್ಟು ಕೆಲಸಗಳನ್ನು ಮಾಡಲು ಸಾಧ್ಯವಿದೆ ಎಂದರು. ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಿ. ಎ. ಮೇಳಿ ಮಾತನಾಡಿ ಶುಭಹಾರೈಸಿದರು. ನಿವೃತ್ತ ಉಪನ್ಯಾಸಕರಾದ ಎಮ್. ಎನ್. ಹೆಗ್ಡೆ, ಬಿ. ಜಗದೀಶ್ ರಾವ್, ಮೊಹಮ್ಮದ್ ಹಬೀಬ್, ಡಾ. ಶ್ಯಾಮ್ ಸುಂದರ್, ದಯಾಕರ್ ಮೊದಲಾದವರನ್ನು ಸನ್ಮಾನಿಸಲಾಯಿತು. ಸಿಎ ರಾಮಚಂದ್ರ ಪ್ರಭು, ಮುತ್ತಯ್ಯ ಎಸ್., ಮೋಹನ ಪೂಜಾರಿ ಉಪ್ಪುಂದ ಮೊದಲಾದವರು ಇದ್ದರು. ಹಳೆ ವಿದ್ಯಾರ್ಥಿ ಸಂಘದ ಸಲಹೆಗಾರ ರಮೇಶ್ ಭಟ್ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಲ್. ಹರೀಶ್…

Read More