ವಚನಕಾರರ ಬದುಕು-ಬರಹದ ಕುರಿತು ಅರಿವು ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಶ್ರೀಮಠ ಸಾಣೆಹಳ್ಳಿ ಇವರ ಸಹಯೋಗದಲ್ಲಿ ಮತ್ತೆ ಕಲ್ಯಾಣಶೀರ್ಷಿಕೆಯಲ್ಲಿ ವಚನಕಾರರ ಬದುಕು-ಬರಹದ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

Call us

Click Here

ಕಾರ್ಯಕ್ರಮದ ಮುಖ್ಯ ಅತಿಥಗಳಾಗಿ ಆಗಮಿಸಿದ್ದ ನಾವುಂದ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸುಧಾಕರ ದೇವಾಡಿಗರವರು ವಚನಕಾಲವು ೯೦೦ ವರುಷಗಳ ಹಿಂದೆ ನಡೆದ ವಚನಗಳ ಚಳುವಳಿ. ಈ ನಾಡಿನ ಇತಿಹಾಸದಲ್ಲಿ ಬಹಳ ಮಹತ್ವವಾದುದು. ಜೇಡ, ಬೇಡ, ಮಡಿವಾಳ, ಮಾದರ, ಅಂಬಿಗ ಹೀಗೆ ಬಹುರೂಪಿ ನೆಲೆಯಲ್ಲಿದ್ದ ದುಡಿಮೆಗಾರರು ಶಿವಭಕ್ತಿ ಎಂಬ ಮಹಾಮನೆಯೊಳಗೆ ಒಂದಾಗಿ ತಮ್ಮ ಚಿಂತನೆ ಮತ್ತು ಅನುಭವಗಳಿಗೆ ಅಭಿವ್ಯಕ್ತಿಸಿದ ಕಾಲವದು. ದಾಸೋಹ, ದಯೇಯ ಧರ್ಮ ಮುಂತಾದ ಜೀವಪರ ಚಿಂತನೆಗಳೇ ಅವರ ಪರಮ ಧ್ಯೇಯವಾಗಿತ್ತು. ಅದೊಂದು ಸಂಘಟನಾತ್ಮಕ ಪರಿಸರವಾಗಿದ್ದು, ಸಾಮಾಜಿಕ ವ್ಯವಸ್ಥೆ, ಧರ್ಮ, ದೇವರುಗಳ ಕುರಿತು ಅವರು ನಡೆಸಿದ ಸಂವಾದ, ಮರುಶೊಧನೆಗಳು ಇಂದಿಗೂ ಪ್ರಸ್ತುತವೆನಿಸಿದೆ. ತಮ್ಮ ಬದುಕಿನ ಅನುಭವಗಳ ಮಖೇನ ಉದ್ದಕ್ಕೂ ಸಾಮಾಜಿಕ ಸಂಗತಿಗಳಿಗೆ ಮುಖಾಮುಖಿಯಾಗುತ್ತಾ ಸಾಗಿರುತ್ತಾರೆ. ಅವರಲ್ಲಿ ನುಡಿ ಮತ್ತು ನಡೆಯಲ್ಲಿ ಭಿನ್ನತೆಗಳಿರದೇ ಅಭಿನ್ನವಾಗಿದ್ದು ಅಂತಹ ವ್ಯಕ್ತಿತ್ವವನ್ನು ಸಾಮಾಜದಿಂದ ಅವರು ನಿರೀಕ್ಷಿಸುತ್ತಿದ್ದರು. ಶೀಲ, ಪ್ರಾಮಾಣಿಕತೆ, ವೃತ್ತಿಗಳ ಮೂಲಕವೇ ತಮ್ಮ ಆಸ್ಮಿತೆಯನ್ನು ಕಂಡುಕೊಂಡವರು ವಚನಕಾರರು. ಮತ್ತೆ ಕಲ್ಯಾಣಕ್ಕೆ ಎಂಬ ಪರಿಕಲ್ಪನೆ ಒಂದು ರೂಪಕ. ಇಂದು ನಾವು ಅಂದಿನ ವೈಚಾರಿಕತೆಯೊಂದಿಗೆ ಲಿಂಗ ,ಜಾತಿ ವರ್ಗ ಧರ್ಮದ ನೆಲೆಯಲ್ಲಿ ಸಾಮರಸ್ಯವನ್ನು ಕಂಡುಕೊಳ್ಳಬೇಕಾದ ಅಗತ್ಯ ಅತಿ ಮುಖ್ಯ ಎಂದರು.

ನಿವೃತ್ತ ಪ್ರಾಧ್ಯಾಪಕರಾದ ಡಾ.ಹಯವದನ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಸಂಘಟಿಸಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಸ್ವಾಗತಿಸಿದರು.ಕನ್ನಡ ಉಪನ್ಯಾಸಕರಾದ ಪ್ರೊ.ಗಣಪತಿ ಭಟ್ ವಂದಿಸಿದರು. ವಿದ್ಯಾರ್ಥಿನಿ ಕೀರ್ತಿ ಎಸ್. ಕಾರ್ಯಕ್ರಮ ನಿರ್ವಹಿಸಿದರು. ವಿಧ್ಯಾರ್ಥಿ ನಿಖಿಲ್ ಎ.ಎಂ ತೃತೀಯ ಬಿ.ಎಸ್.ಸಿ ಮತ್ತು ಬಳಗವು ವಿವಿಧ ವಚನಕಾರರ ವಚನಗಳನ್ನು ಪ್ರಸ್ತುತಪಡಿಸಿದರು.

Leave a Reply