ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸೋಮವಾರ ಬೈಂದೂರು ಪೊಲೀಸ್ ಠಾಣೆಯ ವತಿಯಿಂದ ಡಿಡಿಯುಕೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕಾನೂನಿನ ಬಗೆಗೆ ಅರಿವು ಹಾಗೂ ಅಪರಾಧ ಜರುಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿದ್ದು, ಯುವಶಕ್ತಿ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದರು. ಡಿಡಿಯುಕೆ ವಿದ್ಯಾರ್ಥಿಗಳು ಅಪರಾಧ ತಡೆ ಬಗ್ಗೆ ಅರಿವು ಮೂಡಿಸುವ ಜಾಗೃತಿ ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ಬೈಂದೂರು ಪಿಎಸ್ಐ ಸಂಗೀತಾ, ಎ.ಎಸ್.ಐ ವಿವೇಕ್ ಹಾಗೂ ಶಿಕ್ಷಕರು ವೃಂದದವರು ಪಾಲ್ಗೊಂಡಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ನ್ಯಾಷನಲ್ ಇ ಸ್ಕಾಲರ್ಶಿಪ್ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್: http://disabilityaffairs.gov.in/content, https://scholarships.gov.in ಅಥವಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ‘ಸಿ’ ಬ್ಲಾಕ್, ರಜತಾದ್ರಿ, ಮಣಿಪಾಲ, ದೂರವಾಣಿ ಸಂಖ್ಯೆ: 0820-2574810/811 ಅನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಮೂರ್ತೆದಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಶಂಕರ ಕಲಾ ಮಂದಿರದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮೋಹನ ಪೂಜಾರಿ, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘ ವರದಿ ವರ್ಷದಲ್ಲಿ ರೂ.81.23 ಕೋಟಿ ವ್ಯವಹಾರ ನಡೆಸಿ, ರೂ 32.01ಲಕ್ಷ ನಿವ್ವಳ ಲಾಭ ಗಳಿಸಿದ್ದು, ಮುಂದಿನ ದಿನಗಳಲ್ಲಿ100 ಕೋಟಿ ರೂ. ವ್ಯವಹಾರದ ಗುರಿಯಿರಿಸಿಕೊಳ್ಳಲಾಗಿದೆ, ಸಂಘವು ಪ್ರಾರಂಭದಿಂದಲೂ ಲಾಭದಲ್ಲೆ ಮುನ್ನಡೆಯುತ್ತಿದ್ದು, ಕಳೆದ 28 ವರ್ಷಗಳಿಂದ ನಿರಂತರ ಡಿವಿಡೆಂಟ್ ನೀಡಿರುವ ಹೆಗ್ಗಳಿಕೆ ಗಳಿಸಿದೆ. ಪ್ರಧಾನ ಕಚೇರಿಗೆ ಸುಸಜ್ಜಿತವಾದ ಸಹಕಾರಿ ಸಂಕೀರ್ಣ ನಿರ್ಮಾಣ, ಸಂಘದ ಕಾರ್ಯ ಕ್ಷೇತ್ರದಲ್ಲಿ ಶಾಖೆ ತೆರೆಯುವುದು ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯಕತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ನಿರ್ದೇಶಕರಾದ ಹೆಚ್. ನರಸಿಂಹ ಪೂಜಾರಿ, ಬಿ. ನಾರಾಯಣ ಪೂಜಾರಿ, ಮಂಜ ಪೂಜಾರಿ, ರಾಜು ಪೂಜಾರಿ, ಶೇಷು ಪೂಜಾರಿ, ಸುರೇಶ ಪೂಜಾರಿ, ಸಂತೋಷ, ಶಾರದಾ, ಲಕ್ಷ್ಮೀ ಉಪಸ್ಥಿತರಿದ್ದರು. ಮುಖ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಿಗೆ ಮತ್ತು ಉಪನ್ಯಾಸಕರುಗಳಿಗೆ ‘ತಂಡದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿಕೆ’ ಎಂಬ ವಿಷಯದ ಕುರಿತು ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಯಿತು. ಪಾನ್ ಇಂಡಿಯಾ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಬಿ. ಆರ್. ಕೆ. ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರು ಕಲಿಕೆಯಲ್ಲಿ ನಿರಂತರತೆ, ಹೊಸತನ, ಹುರಿದುಂಬಿಸುವ ಮನೋಭಾವ, ಅಗಾಧವಾದ ಜ್ಞಾನ, ಮಾತನಾಡುವ ಕೌಶಲ್ಯವನ್ನು ತಮ್ಮಲ್ಲಿ ಅಳವಡಿಸಿಕೊಂಡಾಗ ಸಮರ್ಥ ಶಿಕ್ಷಕನಾಗಬಹುದು ಹಾಗೆಯೇ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಹಿಂಜರಿಕೆ ಸಲ್ಲದು ಎಂದು ತಿಳಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಚಿತ್ರಾ ಕಾರಂತ್ ಮಾತನಾಡಿ ಶಿಕ್ಷಕರಾದವರು ತಮ್ಮಲ್ಲಿರುವ ಅಪಾರವಾದ ಜ್ಞಾನದಿಂದ, ಶಿಷ್ಯವಾತ್ಸಲ್ಯದಿಂದ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯಬೇಕೇ ವಿನಹ ವಿದ್ಯಾರ್ಥಿಗಳನ್ನು ದಂಡಿಸುವುದರಿಂದ ಅಲ್ಲ, ಶಿಕ್ಷಕ ದಂಡಾಧಿಕಾರಿಯಾಗಬಾರದು ದೀಪದಾರಿಯಾಗಬೇಕು ಎಂದು ತಿಳಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಶ್ರೀ ಕೆ. ರಾಧಾಕೃಷ್ಣ ಶೆಣೈಯವರು ವಹಿಸಿದರು. ಶ್ರೀ ವೆಂಕಟರಮಣ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಕೃಷ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ದೀಪೋತ್ಸವವು ಕೋಟ ಚಂದ್ರಶೇಖರ ಸೋಮಯಾಜಿ ಅವರ ಮಾರ್ಗದರ್ಶನದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು. ದುರ್ಗಾಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿ ಮದ್ದುಗುಡ್ಡೆಯವರಿಂದ ಭಜನೆ, ರಾತ್ರಿ ರಂಗಪೂಜೆ ಸೇವೆಗಳು ಅಚ್ಚು ಕಟ್ಟಾಗಿ ನಡೆಯಿತು. ಭದ್ರತಾ ವ್ಯವಸ್ಥೆಗೆ ಸೈರನ್ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ದೇವಳದ ಅರ್ಚಕ ಗಣಪತಿ ಸುವರ್ಣ, ಜಲಜ ಸುವರ್ಣ, ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಸೀತಾರಾಮ ಹೇರಿಕುದ್ರು, ಅಧ್ಯಕ್ಷರಾದ ಪ್ರಕಾಶ್ ಕೆ. ಬಿ, ಚಂದ್ರಶೇಖರ್, ಜನಾರ್ಧನ, ರತ್ನಾಕರ ಆಡಳಿತ ಮಂಡಳಿ ಹಾಗೂ ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಲಾಕ್ಷೇತ್ರದಲ್ಲಿ ನಡೆದ 7ನೇ ವರ್ಷದ ರಾಜ್ಯಮಟ್ಟದ ಕಾರ್ಟೂನ್ ಹಬ್ಬಕ್ಕೆ ಬಾಲಿವುಡ್ ನಟ ಸೋನು ಸೂದ್ ವರ್ಚುವಲ್ ಆಗಿ ಚಾಲನೆ ನೀಡಿದರು. ಬಳಿಕ ಅವರು ಗೋ ಕೊರೊನಾ ಗೋ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಕೊರೊನಾ ಮುಕ್ತವಾಗಲು ಎಲ್ಲರೂ ಒಟ್ಟಾಗಬೇಕು. ಕೊರೊನಾ ನಿರ್ಮೂಲನವಾಗಬೇಕು ಕೊರೊನಾ ಕುರಿತಾದ ಕಾರ್ಟೂನ್ಗಳಿಸಿರುವ ಸತೀಶ್ ಆಚಾರ್ಯ ಅವರ ಪುಸ್ತಕ ಬಿಡುಗಡೆ ಮಾಡಲು ಸಂತಸವಾಗುತ್ತಿದೆ ಎಂದು ಹೇಳಿದರು. ಸಹಾಯಕ ಕಮಿಷನರ್ ಕೆ. ರಾಜು ಅವರು ಮಾಸ್ಕ್ ಧರಿಸಿ ಕಿರುನಗೆ ಸೂಸುವ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿ, ಕಾರ್ಟೂನ್ಗಳಿಂದ ದೊರೆಯುವ ಸಂದೇಶ ಅದ್ಭುತವಾದದ್ದು ಈ ಬಾರಿ ಕೊರೊನಾ ಕೇಂದ್ರಿತವಾಗಿ ಕಾರ್ಟೂನ್ ಹಬ್ಬ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಭಯ ಕಡಿಮೆಯಾಗಲು. ನಿಯಂತ್ರಣದಲ್ಲಿರಲು ಸುಶಿಕ್ಷಿತ ಜನರೇ ಕಾರಣ. ಆದ್ದರಿಂದ ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರೇ ಕೊರೊನಾ ಯೋದರು ಎಂದರು. ಕೋವಿಡ್ ಕೇರ್ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ. ನಾಗೇಶ್, ಪಾರಿಜಾತ ಹೋಟೆಲ್ ಮಾಲಕ ಗಣೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂಭಾಶಿಯ ಕೊರಗ ಕಾಲನಿ ಸಮೀಪದ ‘ಮಕ್ಕಳ ಮನೆ’ಗಾಗಿ ಚಾಲೆಂಜರ್ಸ್ ಫೌಂಡೇಶನ್ (ರಿ) ಕೊಡುಗೆಯಾಗಿ ನೀಡಿದ ಪ್ರಾಕೃತಿಕ ಬಯಲು ರಂಗಮಂದಿರ ವೇದಿಕೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಗುರುವಾರ ಸಂಜೆ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಕುಂಭಾಶಿಯ ಮಕ್ಕಳ ಮನೆಗೆ ಪ್ರಾಕೃತಿಕ ಬಯಲು ರಂಗಮಂದಿರದಂತಹ ಅತ್ಯಮೂಲ್ಯ ಆಸ್ತಿ ಮಾಡಿಕೊಟ್ಟಿದ್ದಕ್ಕೆ ಚಾಲೆಂಜರ್ಸ್ ಫೌಂಡೇಶನ್ ಸಂಸ್ಥೆಗೆ ಜಿಲ್ಲಾಡಳಿತವು ಅಭಿನಂದನೆ ಸಲ್ಲಿಸುತ್ತದೆ. ಇದೊಂದು ಅದ್ಭುತ ಪರಿಕಲ್ಪನೆಯಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಮಕ್ಕಳ ಪಾಠ ಹಾಗೂ ಇತರ ಉತ್ತಮ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು. ಚಾಲೆಂಜರ್ಸ್ ಫೌಂಡೇಶನ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಹಾಲಾಡಿ ಮಾತನಾಡಿ, ಚಾಲೆಂಜರ್ಸ್ ಫೌಂಡೇಶನ್ ಸಾಕಷ್ಟು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದೆ. ಯಾರಿಂದಲೂ ದೇಣಿಗೆ, ನಿಧಿ ಸಂಗ್ರಹ, ಮಾಡದೇ ಸಂಸ್ಥೆ ಸದಸ್ಯರ ಆದಾಯದ ಒಂದಷ್ಟು ಭಾಗವನ್ನು ಸಮಾಜಕ್ಕೆ ನೀಡಲಾಗುತ್ತಿದೆ. ಸಮಾಜದಿಂದ ಪಡೆದುದ್ದನ್ನು ಸಮಾಜಕ್ಕೆ ಕೊಡಬೇಕು ಎನ್ನುವುದು ಚಾಲೆಂಜರ್ಸ್ ಫೌಂಡೇಶನ್ ಮೂಲಮಂತ್ರವಾಗಿದ್ದು ಸ್ವಾರ್ಥ ರಹಿತವಾಗಿ ಸಾಧನೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕಳೆದ ವರ್ಷ ರೂ.160 ಕೋಟಿ ವ್ಯವಹಾರ ನಡೆಸಿ ರೂ 47.56 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.11 ಲಾಭಾಂಶ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಶುಕ್ರವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು 18 ವರ್ಷ ಪೂರೈಸಿದೆ. ಐದು ಕಡೆ ಶಾಖೆಗಳನ್ನು ಹೊಂದಿದೆ. ನೂತನವಾಗಿ ತೆರೆದ ಶಿರೂರು, ತೆಕ್ಕಟ್ಟೆ ಶಾಖೆಗಳು ಉತ್ತಮ ಪ್ರಗತಿಯಲ್ಲಿದೆ. ಕುಂದಾಪುರ ಶಾಖೆ ಸ್ವಂತ ನಿವೇಶನ, ಕಟ್ಟಡ ಹೊಂದಿದೆ. ಬೈಂದೂರಿನ ಪ್ರಧಾನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರದಿಂದ ಸೊಸೈಟಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು. ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕುಷ್ಟ ಬಿಲ್ಲವ ವಾರ್ಷಿಕ ವರದಿ, ಲೆಕ್ಕಪತ್ರ, ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು. ಉನ್ನತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳ ಘಟಕದ ಆಶ್ರಯದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ನಡೆಯಿತು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರವೀಣ್ ಮೊಗವೀರ ಗಂಗೊಳ್ಳಿ ಮಾತನಾಡಿ, ಮಾನವ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕು, ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಹಾಗೂ ಶೋಷಣೆ ರಹಿತ ಸಮಾಜವನ್ನು ರೂಪಿಸಲು ಮಾನವ ಹಕ್ಕುಗಳ ಅರಿವು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ನಾವು ನಮ್ಮ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಇತರರ ಹಕ್ಕುಗಳನ್ನು ಗೌರವಿಸಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಮಾನವ ಹಕ್ಕುಗಳ ಘಟಕದ ಸಂಯೋಜಕಿ ಅವಿತಾ ಕೊರೆಯಾ ಸ್ವಾಗತಿಸಿ, ನಿರೂಪಿಸಿದರು. ಸಹ ಸಂಯೋಜಕಿ ಡಾ.ದೀಪಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅರೆಹೊಳೆ ಕ್ರಾಸ್ನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ನಾವುಂದ ಲಯನ್ಸ್ ಕ್ಲಬ್ಗೆ ಸನದು ಪ್ರದಾನ ಕಾರ್ಯಕ್ರಮ ನಡೆಯಿತು. ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಮಂಜುನಾಥ ಹೆಗ್ಡೆ ಮಾತನಾಡಿ, ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ಅತ್ಯುತ್ತಮ ಚಟುವಟಿಕೆ ಮೂಲಕ ಜಿಲ್ಲೆಗೆ ಮಾದರಿಯಾಗಿ ರೂಪುಗೊಳ್ಳುವ ವಿಶ್ವಾಸ ಇದೆ ಎಂದು ಹೇಳಿದರು. ನಾವುಂದ ಕ್ಲಬ್ ಅಧ್ಯಕ್ಷ ಭಾಸ್ಕರ್ ಶೆಟ್ಟಿ ವಕ್ವಾಡಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಹ ದೇವಾಡಿಗ, ಭಾಸ್ಕರ್ ಶೆಟ್ಟಿ, ಶಶಿಧರ ಶೆಟ್ಟಿ, ಮಹಾದೇವ ಮಂಜು, ಎನ್. ಪ್ರಭಾಕರ ಶೆಟ್ಟಿ, ಸಮಥ್ ಶೆಟ್ಟಿ, ವೀರಶೇಖರ್ ಎನ್, ರಘರಾಮ ಶೆಟ್ಟಿ, ಗುರುರಾಜ ಶೇಟ್, ಮಂಜು ಶೆಟ್ಟಿ, ಬಿ. ಸುಬ್ಬಣ್ಣ ಶೆಟ್ಟಿ, ಅಶೋಕ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕಿರಣ ಶೆಟ್ಟಿ, ವಿರೇಂದ್ರ ಹೆಗ್ಡೆ, ಕೆ. ಮನೋಹರ ಶೆಟ್ಟಿ, ರಾಘವೇಂದ್ರ ಪೂಜಾರಿ, ಕೃಷ್ಣಾನಂದ ಕಾಮತ್, ಪ್ರಸನ್ನ ಹೆಗ್ಡೆ ಬೈಂದೂರು -ಉಪ್ಪುಂದ ಕ್ಲಬ್ ಅಧ್ಯಕ್ಷ ಜಯಶೀಲ ಶೆಟ್ಟಿ ಮತ್ತಿತರರು ಇದ್ದರು. ಯಶೋದಾ ನಾವುಂದ, ಕೇಶವ ಪೂಜಾರಿ ನಾವುಂದ…
