ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿರುವ ಬಿ.ಎಂ ಸುಕುಮಾರ ಶೆಟ್ಟಿ ಅವರು ಬೈಂದೂರು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ ಸದಸ್ಯ ಶಂಕರ ಪೂಜಾರಿ, ಟಿ.ಬಿ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮೊದಲಾದವರು ಉಪಸ್ಥಿತರಿದ್ದರು. ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ನಾಮಪತ್ರ ಸಲ್ಲಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲಾ ಸಮೀಕ್ಷೆಗಳು ಬಿಜೆಪಿ ವಿರುದ್ಧವಾಗಿದ್ದರೂ, ರಾಜ್ಯದಲ್ಲಿ ಅಧಿಕಾರಿ ಹಿಡಿಯುತ್ತೇವೆ ಎಂಬ ಭ್ರಮಾಲೋಕದಲ್ಲಿ ಬಿಜೆಪಿ ನಾಯಕರಿದ್ದಾರೆ. ನಾಲ್ಕು ಬಾರಿ ಕುಂದಾಪುರದಿಂದ ಆಯ್ಕೆಯಾದ ಶಾಸಕರೇ ತನ್ನ ಜವಾಬ್ದಾರಿ ನಿಭಾಯಿಸದೆ ಶಾಸಕರಿಲ್ಲದ ಕ್ಷೇತ್ರಕ್ಕೆ ಮಲ್ಲಿಯಂತಾ ಸಮರ್ಥ ನಾಯಕನ ನಿಲ್ಲಿಸಿದೆ. ಮಾಜಿ ಶಾಸಕರ ಮನೆಯಲ್ಲಿ ಕುರೋದಕ್ಕೆ ಲಾಯ್ಕಾಗಿದ್ದು, ಮಲ್ಲಿ ಶಾಸಕರ ಕರ್ತವ್ಯ ನಿಭಾಯುಸುವ ತಾಕತ್ತಿದ್ದರಿಂದ ಅವರನ್ನು ಗೆಲ್ಲಿಸಬೇಕು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ. ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಕ್ಕೆ ಕಳೆದ ಐದು ವರ್ಷದಲ್ಲಿ ಕೋಟ್ಯಾಂತರ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದರೆ, ಕುಂದಾಪುರ ಶಾಸಕರು ಮನೆಯಲ್ಲಿ ಕೂತು ಕಲಾಹರಣ ಆಡಿದ್ದು, ಬಿಟ್ಟರೆ ಮತ್ತೇನು ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು. ಅಭ್ಯರ್ಥಿ ರಾಕೇಶ್ ಮಲ್ಲಿ ಮಾತನಾಡಿ, ಕುಂದಾಪುರ ವಿಧಾನ ಸಭೆ ಅಭಿವೃದ್ಧಿ ನನ್ನ ಕನಸಾಗಿದ್ದು, ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಈ ಬಾರಿ ಮತದಾರರು ಕಾಂಗ್ರೆಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವಕ್ಕೆ ಇಂದು ಜರುಗಿತು. ಚಾರಿತ್ರಿಕ ಹಿನ್ನೆಲೆಯುಳ್ಳ ಬೈಂದೂರು ರಥೋತ್ಸವದಲ್ಲಿ ಊರ ಪರವೂರ ಸಾವಿರಾರು ಭಕ್ತಸಮೂಹ ಪಾಲ್ಗೊಂಡು ಪುನೀತರಾಗುತ್ತಾರೆ. ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯಕ್ಕೆ ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡಿತು. ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡಿ ನಗರವೇ ಸಜ್ಜಾಗಿದೆ. ಮಧ್ಯಾಹ್ನ ರಥೋತ್ಸವಕ್ಕೆ ಚಾಲನೆ ನೀಡಿದರೆ, ಸಂಜೆಯ ವೇಳೆಗೆ ರಥವನ್ನು ರಥಬೀದಿಯ ಉದ್ದಕ್ಕೂ ಏಳೆಯಲಾಗುತ್ತದೆ. ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭೃಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ. ರಥೋತ್ಸವದ ಪೂರ್ವದಲ್ಲಿ ಮುಸ್ಲಿಂ ಭಾಂದವರನ್ನು ಆಹ್ವಾನಿಸುವ, ರಥೋತ್ಸವದ ಆರಂಭದಲ್ಲಿ ಬೈಂದೂರಿನ ಪೊಲೀಸ್ ಠಾಣಾಧಿಕಾರಿಯನ್ನು ಕರೆತಂದು ಚಾಲನೆ ದೊರಕಿಸುವ ಸಂಪ್ರದಾಯ ಇಂದಿಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ (ಎಂ) ಪಕ್ಷದ ಅಭ್ಯರ್ಥಿ ಸುರೇಶ್ ಕಲ್ಲಾಗಾರ ಅವರು ಬೈಂದೂರು ಚುನಾವಣಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಶ್ರೀನಿವಾಸ ನಾಮಪತ್ರ ಸ್ವೀಕರಿಸಿದರು. ಈ ಸಂದರ್ಭ ಸಿಪಿಐ(ಎಂ) ಪಕ್ಷದ ಬಾಲಕೃಷ್ಣ ಶೆಟ್ಟಿ, ವೆಂಕಟೇಶ ಕೋಣಿ,ದಾಸ ಭಂಡಾರಿ, ಗಣೇಶ ತೊಂಡೆಮಕ್ಕಿ ಮುಂತಾದವರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರವಿ ಶೆಟ್ಟಿ ಬೈಂದೂರು ಚುನಾವಣಾ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಜೆ.ಡಿ.ಎಸ್ ಪಕ್ಷದ ಕೆಂಚನೂರು ಶಾಲನಿ ಶೆಟ್ಟಿ, ಸಂದೇಶ್ ಭಟ್ ಉಪ್ಪುಂದ, ಯೋಗೀಶ ಶೆಟ್ಟಿ, ಮಂಜಯ್ಯ ಶೆಟ್ಟಿ, ಮನ್ಸೂರ್ ಇಬ್ರಾಹಿಂ ಹಾಜರಿದ್ದರು. ಚುನಾವಣಾಧಿಕಾರಿ ಶ್ರೀನಿವಾಸ ನಾಮಪತ್ರ ಸ್ವೀಕರಿಸಿದರು. ಈ ಸಂದರ್ಭ ಬೈಂದೂರು ತಹಶೀಲ್ದಾರ ಪುರಂದರ ಹೆಗಡೆ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವಿಧಾನ ಸಭಾಕ್ಷೇತ್ರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ಚುನಾವಣೆ ಅಧಿಕಾರಿ ಕಚೇರಿಯಲ್ಲಿ ಕಳೆದ ಬಾರಿಯಂತೆ ಸಿಂಪಲ್ಲಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸೂಚಕರೊಂದಿಗೆ ಮಧ್ಯಾಹ್ನ 12ಕ್ಕೆ ಚುನಾವಣೆ ಅಧಿಕಾರಿ ಕಚೇರಿಗೆ ಆಗಮಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣೆ ಅಧಿಕಾರಿ ಟಿ.ಭೂಬಾಲನ್ ಅವರಿಗೆಮೂರು ಸೆಟ್ ನಾಮಪತ್ರ ಸಲ್ಲಿಸಿದರು. ಮೊದಲೆರಡು ಚುವಾವಣೆಯಲ್ಲಿಅದ್ದೂರಿಯಾಗಿ ನಾಮಪತ್ರ ಸಲ್ಲಿಸಿದ ಹಾಲಾಡಿ ಕಳೆದ ಬಾರಿ ಪಕ್ಷೇತರರಾಗಿ ಸಿಂಪಲ್ಲ್ಲಾಗಿ ನಾಮಪತ್ರ ಸಲ್ಲಿಸಿದ್ದು, ಈ ಬಾರಿ ಕೂಡಾ ಆಡಂಬರವಿಲ್ಲದೆ ನಾಮಪತ್ರ ಸಲ್ಲಿಸಿದರು. ನ್ಯಾಯವಾದಿ ಟಿ.ಬಿ. ಶೆಟ್ಟಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷಕಾಡೂರು ಸುರೇಶ ಶೆಟ್ಟಿ, ಕುಂದಾಪುರತಾಪಂ ಮಾಜಿ ಸದಸ್ಯ ಮಂಜು ಬಿಲ್ಲವ, ಬಿಜೆಪಿ ಕಾರ್ಯಕಾರಿಣಿ ಸದದ್ಯ ಕಿರಣ್ಕುಮಾರ್ ಕೊಡ್ಗಿ, ಯುವ ಮೋರ್ಚಾಅಧ್ಯಕ್ಷ ಸತೀಶ್ ಪೂಜಾರಿ, ಮೀನುಗಾರಿಕ ಪ್ರಕೋಷ್ಠ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಕುಂದಾಪುರತಾಪಂ ಮಾಜಿಅಧ್ಯಕ್ಷ ಭಾಸ್ಕರ ಬಿಲ್ಲವ, ಪ್ರಧಾನ ಕಾರ್ಯದರ್ಶಿ ಶಂಕರಅಂಕದಕಟ್ಟೆ, ಸಾಮಾಜಿಕ ಕಾರ್ಯಕರ್ತ ಶರತ್ ಶೆಟ್ಟಿಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಾಮನ್‌ವೆಲ್ತ್ ಗೇಮ್ಸ್‌ನ ಪಂದ್ಯಾಟದಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿಯ ಸ್ಥಾನ ಪಡೆದುಕೊಂಡು ಹುಟ್ಟೂರಿಗೆ ಹಿಂತಿರುಗಿದ ವಂಡ್ಸೆ ಜಡ್ಡಿನ ಗುರುರಾಜ್ ಪೂಜಾರಿ ಅವರಿಗೆ ಕುಂದಾಪುರ , ವಂಡ್ಸೆ ಹಾಗೂ ಕೊಲ್ಲೂರಿನ ನಾಗರೀಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಕುಂದಾಪುರ ತಾಲೂಕು ಆಡಳಿತ ಕೊಲ್ಲೂರು ದೇವಸ್ಥಾನದ ವತಿಯಿಂದ ಗುರುರಾಜ್ ಪೂಜಾರಿ ಅವರನ್ನು ಗೌರವಿಸಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ಫ್ರೌಡಶಾಲೆ ಹಾಗೂ ಕಾಲೇಜಿನಲ್ಲಿ 5 ವರ್ಷ ವಿದ್ಯಾಭ್ಯಾಸ ಕಲಿಕೆಯ ಜತೆಗೆ ಇಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಗಂಜಿ ಊಟಮಾಡಿ ಕುಸ್ತಿ, ಕಬಡ್ಡಿ ಹಾಗೂ ಇತರ ಕ್ರೀಡೆ ಕಲಿತಿರಿರುವುದರಿಂದ ಇಂದು ಈ ಮಟ್ಟಕ್ಕೇರಲು ಸಹಕಾರಿಯಾಯಿತು. ತಾಯಿ ಮೂಕಾಂಬಿಕೆಯ ಆಶೀರ್ವಾದ ಹಾಗೂ ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಮುಂದಿನ ಒಲಿಂಪಿಕ್ಸ್‌ನಲ್ಲಿಯೂ ಪದಕದ ಬೇಟೆ ಮುಂದುವರಿಸುತ್ತೇನೆ. ಮನದಿಂಗಿತ ವ್ಯಕ್ತಪಡಿಸಿದ ಕ್ರೀಡಾಪಟು: ಹಿಂದೆ ನಾನು ಮೂರು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮೂರು ಪದಕಗಳನ್ನು ಪಡೆದುಕೊಂಡಾಗ ಯಾವುದೆ ಅಭಿಮಾನವನ್ನು ಪ್ರಕಟಿಸದೆ ಇದ್ದ ಹಲವಾರು ಮಂದಿ ಇದೀಗ ಅಭಿಮಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೆದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಅಕ್ಷಯತೃತೀಯದ ಶುಭದಿನ ಉಪ್ಪುಂದ ಜಿಎಸ್‌ಬಿ ಸಮಾಜ ಬಾಂಧವರ ಶ್ರೀ ಲಕ್ಷ್ಮೀವೆಂಕಟರಣ ದೇವರ ಪುನರ್‌ಪ್ರತಿಷ್ಟೆ ದೇವಳದ ಪರ್ಯಾಯ ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ವೈಭವದಿಂದ ಜರುಗಿತು. ಎ.15ರ ಮೇಷ ಸಂಕ್ರಂತಿಯಂದು ದೇವರ ಪ್ರಾರ್ಥನೆಯೊಂದಿಗೆ ಚೋರಶಾಂತಿ, ಶ್ವಾನಶಾಂತಿ, ಗರ್ಭಗೃಹಶುದ್ದಿಯಿಂದ ಆರಂಭಗೊಂಡ ಧಾರ್ಮಿಕ ವಿಧಿಗಳು ಎ.16ರ ಸೋಮವತಿ ಅಮಾವಾಸ್ಯೆಯಂದು ಪಂಚಗವ್ಯ ಹವನ, ಪವಮಾನ ಪಾರಾಯಣ, ಪ್ರಾಯಶ್ಚಿತ ಹವನ, ಶುದ್ಧಕಲಶ, ರಾಕ್ಷೋಘ್ನಹವನ, ವಾಸ್ತುಹವನ, ವಾಸ್ತುಬಲಿ, ಪ್ರಾಕಾರಬಲಿ ನಡೆಯಿತು. ಎ.17ರಂದು ನವಗೃಹಹವನ, ಗರ್ಭಗೃಹ ಪೀಠಕ್ಕೆ ನವಕಲಶ, ಗಣಪತಿಹವನ, ದ್ವಾದಶಕಲಶ ಸಂಪ್ರೋಕ್ಷಣೆ, ವಿಗ್ರಹಗಳ ಸಪ್ತಾಧಿವಾಸ ಪೂಜೆ, ಕಲಶಾಭಿಷೇಕ ನಡೆಯಿತು. ಬುಧವಾರ ಸುಪ್ರಭಾತ ಪೂಜೆ, ನಿಲಂಜನ ಆರತಿ, ಸಾನಿಧ್ಯಹವನ, 108 ಕಲಶಾಭಿಷೇಕ, ಸಾನಿಧ್ಯಹವನ, ಪೂರ್ಣಾಹುತಿಯೊಂದಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಪುನರ್‌ಪ್ರತಿಷ್ಟೆ ನಡೆಯಿತು. ರಾತ್ರಿ ದೀಪೋತ್ಸವ, ಅವಭೃತಸ್ನಾನ, ವಸಂತಪೂಜೆ ಜರುಗಿತು. ಶ್ರೀಲಕ್ಷ್ಮೀವೆಂಕಟರಮಣ ಟ್ರಸ್ಟ್‌ನ ಅಧ್ಯಕ್ಷ ದಾಮೋದರ ಶೆಣೈ, ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್ ಹಾಗೂ ಟ್ರಸ್ಟಿನ ಸದಸ್ಯರ ಮಾರ್ಗದರ್ಶನದಿಂದ ನಡೆದ ಕಾರ್ಯಕ್ರಮಕ್ಕೆ ಊರ-ಪರವೂರ ಸಮಾಜ ಬಾಂಧವರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಶ್ರೀ ಪದ್ಮಾವತಿ ಅಮ್ಮನವರ ಕಲ್ಯಾಣ ಮಂಟಪ ಬೊಳಂಬಳ್ಳಿಯಲ್ಲಿ ‘ಛತ್ರಪತಿ ಯುವ ಸೇನೆ’ ಉಡುಪಿ ಜಿಲ್ಲೆ ಇವರು ಆಯೋಜಿಸಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ‘ಸಡಗರ-2018’, ‘ಅಂಬೇಡ್ಕರ್ ಜಯಂತಿ’ ಆಚರಣೆ ಮತ್ತು ‘ಮಹಿಳಾ ಘಟಕ’ ಉದ್ಘಾಟನಾ ಕಾರ್ಯಕ್ರಮಗಳು ನೆಡೆದವು. ಛತ್ರಪತಿ ಯುವ ಸೇನೆಯ ‘ಮಹಿಳಾ ಘಟಕ’ ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾಲೂಕು ಬಾಲ ಸ್ವಾಸ್ತ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಶ್ರುತಿ ಕನ್ನಂತ, ಸಂಘಟಿತ ಸಮಾಜದ ಉನ್ನತಿಯ ಅಗತ್ಯತೆ, ಅರಿವು, ಕಾರ್ಯ ಮತ್ತು ಕಾರ್ಯಕ್ರಮಗಳು ನೆಡೆದಾಗ ಮಾತ್ರ ಸಾಮಾಜಿಕ ತೊಡಕು ತೊಂದರೆಗಳನ್ನು ನಿವಾರಿಸಿ, ಸಾಂಸ್ಕ್ರತಿಕ ನೆಲೆಯಲ್ಲಿ ಸುಸಂಬದ್ಧ ಜೀವನವನ್ನು ನೆಡೆಸಲು ಸಾಧ್ಯ. ಆ ನೆಲೆಯಲ್ಲಿ ಇಂದಿನ ಸಮಾಜಕ್ಕೆ ಮಹಿಳಾ ಸಂಘಟನೆಗಳು ಅಗತ್ಯ ಮತ್ತು ಅನಿವಾರ್ಯ ಎಂದು ನುಡಿದರು. ಸಂಘಟನೆಗಳು ಯಶಸ್ವಿಯಾಗಿ ಮುನ್ನಡೆಯಬೇಕಾದರೆ, ಪ್ರತಿ ಸದಸ್ಯರ ಸಕರಾತ್ಮಕ ತೊಡಗುವಿಕೆ ಯೋಜನೆ, ಯೊಚನೆ ಮತ್ತು ಆರ್ಥಿಕ ವಿಚಾರಗಳ ಪಾರದರ್ಶಕತೆ ಮತ್ತು ಸಂಘಟಿತ ಮನೋಭಾವ ಬಹಳ ಅಗತ್ಯವೆಂದು ಸಂಪನ್ಮೂಲ ವ್ಯಕ್ತಿಗಳಾದ ಬಸ್ರೂರು ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶಿರೂರು ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಅಷ್ಟಬಂಧ, ಬ್ರಹ್ಮಕಲಶ ಕಾರ್ಯಕ್ರಮ ವೈಭವದಿಂದ ನಡೆಯಿತು.. ವಿಘ್ನೇಶ್ವರ ಭಟ್ ಕತ್‌ಗಾಲ್ ಇವರ ನೇತ್ರತ್ವದಲ್ಲಿ ಹಾಗೂ ದೇವಸ್ಥಾನದ ಅರ್ಚಕರಾದ ರವೀಂದ್ರ ಅಯ್ಯಂಗಾರ್ ಸಹಯೋಗದಲ್ಲಿ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಧಾರ್ಮಿಕ ವಿಧಿಗಳು ಬ್ರಹ್ಮಕಲಶಾಭಿಷೇಕ, ಮಹಾವಿಷ್ಣುಯಾಗ ಅವಭೃತ, ಪೂರ್ಣಾಹುತಿ, ಮಹಾಪೂಜೆ ಮಹಾಪ್ರಾರ್ಥನೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ತೀರ್ಥ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು. ಹಾಗೂ ಮದ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ವೈವಿಧ್ಯ ಮತ್ತು ಶ್ರೀ ವೆಂಕಟೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಸತತ ಮೂರು ದಿನಗಳಿಂದ ನಡೆದ ಈ ದೇವತಾ ಕಾರ್ಯದ ಯಶಸ್ಸಿಗೆ ಸಹಕರಿಸಿದ ದೇವಳದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕವೃಂದ, ಗ್ರಾಮಸ್ಥರು ದಾನಿಗಳು ಹಾಗೂ ಭಕ್ತಾದಿಗಳಿಗೆ ದೇವಳದ ಆಡಳಿತ ಮೊಕ್ತೇಸರ ಎಸ್. ನಾಗಯ್ಯ ಶೆಟ್ಟಿ ಹೊಸ್ಮನೆ ಕೃತಜ್ಞತೆ ಸಲ್ಲಿಸಿದ್ದಾರೆ.
