Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆಂದು ಹೇಳಿಕೊಂಡು ಚುನಾವಣೆ ಎದುರಿಸುತ್ತಿದ್ದ ಬಿಜೆಪಿ ಪಕ್ಷವೀಗ ರಾಮಮಂದಿರವನ್ನು ಮರೆತುಬಿಟ್ಟಿದೆ. ರಾಮ ಈಗ ಬಿಜೆಪಿ ಪಕ್ಷದಲ್ಲಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು. ಅವರು ಮರವಂತೆ ಸಾಧನಾ ಸಭಾಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ರಾಮಮಂದಿರ ಕಟ್ಟುತ್ತೇನೆಂದವರು ಈಗ ಮರೆತಿರುವುದ್ಯಾಕೆ ಎಂದು ಪ್ರಶ್ನಿಸಿದ ಅವರು ಇತರ ಪಕ್ಷದವರ‍್ಯಾರೂ ಹಿಂದುಗಳಲ್ಲ ಎಂದು ಬಿಂಬಿಸುತ್ತಿದ್ದ ಬಿಜೆಪಿ ಹಿಂದುತ್ವವನ್ನು ಬಿಟ್ಟುಬಿಟ್ಟಿದೆ ಎಂದರು. ನಾವೆಲ್ಲ ಹಿಂದುಗಳೇ ಆದರೂ ಎಲ್ಲಾ ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಧರ್ಮದ ಹೆಸರಿದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡಿಲ್ಲ ಎಂದರು. ಬಿಜೆಪಿ 4,500 ಕೋಟಿ ಉದ್ಯಮಿಗಳ ಸಾಲವನ್ನು ಮನ್ನ ಮಾಡಿದೆ. ಆದರೆ ಕುಮಾರಸ್ವಾಮಿ ಅವರು ಕರ್ನಾಟಕದ ರೈತರ ಸಾಲ ಮನ್ನ ಮಾಡಿದರೆ ಇದು ಪಾಪದ ಕೆಲಸ ಎಂದು ಪ್ರಧಾನಿ ಲೇವಡಿ ಮಾಡುತ್ತಾರೆ. ಅವರದ್ದು ಭಾರತೀಯ ಜನತಾ ಪಾರ್ಟಿಯೂ ಅಥವಾ ಬ್ಯುಸಿನೆಸ್ ಜನತಾ ಪಾರ್ಟಿಯೋ ಎಂದು ತಿಳಿಯುತ್ತಿಲ್ಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮುಖ್ಯರಸ್ತೆಯ ಸಿಟಿ ಪಾಯಿಂಟ್‌ನಲ್ಲಿ ಯುಗಾದಿಯಂದು ಶುಭಾರಂಭಗೊಂಡ ’ರುಪೀ ಮಾಲ್’ನಲ್ಲಿ ಗ್ರಾಹಕ ಗಿರೀಶ್ ಗಾಣಿಗ ಅವರಿಗೆ ಕ್ರೆಡಿಟ್ ಕಾರ್ಡ್ ವಿತರಿಸುವ ಮೂಲಕ ಕ್ರೆಡಿಟ್ ಕಾರ್ಡ್ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಕಾಮಾಕ್ಷೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಹಾಗೂ ರುಪೀ ಮಾಲ್‌ನ ಪ್ರವರ್ತಕರಾದ ಸಿ. ರಾಜೀವ್ ಕುಮಾರ್ ಹೆಸರು ನೊಂದಾಯಿಸಿದ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ವಿತರಿಸಿದರು. ರುಪೀ ಮಾಲ್‌ನ ಪ್ರವರ್ತಕ ಸಿ. ರಾಜೀವ ಕುಮಾರ್ ಬಳಿಕ ಮಾತನಾಡಿ ಕಾಮಾಕ್ಷೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಹಯೋಗದಿಂದಗೆ ವಿತರಿಸಲಾಗುತ್ತಿರು ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ರುಪೀ ಮಾಲ್‌ನ ಗ್ರಾಹಕರು ಪಡೆದುಕೊಳ್ಳಬಹುದಾಗಿದ್ದು, ತಮ್ಮ ಅಗತ್ಯ ಉತ್ಪನ್ನಗಳನ್ನು ಕೊಂಡುಕೊಳ್ಳಬುದಾಗಿದೆ. ಇದರಲ್ಲಿ ಇಎಂಐ ಸೌಲಭ್ಯವೂ ಇರುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಎಲ್ಲಾ ವಿಭಾಗದ ವಸ್ತುಗಳು ಮೆಟ್ರೋ ನಗರಗಳಿಗಿಂತ ಕಡಿಮೆ ದರದಲ್ಲಿ ಲಭ್ಯವಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಂಗಳೂರು ವಿ.ವಿ. ತಂಡವನ್ನು ಪ್ರತಿನಿದಿಸಿ ಉತ್ಕೃಷ್ಟ ಸಾಧನೆಗೈದ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ದಿನಕರ- ತೃತೀಯ ಬಿ.ಕಾಂ. ’ಬಿ’ (ಸಾಫ್ಟ್‌ಬಾಲ್), ಶಶಿಕಾಂತ್ ಶೆಟ್ಟಿ, ತೃತೀಯ ಬಿ.ಸಿ.ಎ. (ಸಾಫ್ಟ್‌ಬಾಲ್), ಸುಷ್ಮಾ , ತೃತೀಯ ಬಿ.ಸಿ.ಎ. (ಸಾಫ್ಟ್‌ಬಾಲ್), ಸುಕನ್ಯಾ ಶೆಟ್ಟಿ, ತೃತೀಯ ಬಿ.ಕಾಂ. ’ಸಿ’ ( ಚೆಸ್ – ವಿ.ವಿ. ತಂಡದ ನಾಯಕಿ), ರೂಪಾ ಶೆಟ್ಟಿ, ದ್ವಿತೀಯ ಬಿ.ಕಾಂ. ’ಬಿ’ (ಚೆಸ್), ಶ್ರಾವ್ಯ – ದ್ವಿತೀಯ ಬಿ.ಕಾಂ. ’ಸಿ’, ಸುಬ್ರಹ್ಮಣ್ಯಾ – ಪ್ರಥಮ ಬಿ.ಕಾಂ. ’ಡಿ’ (ನೆಟ್‌ಬಾಲ್ ಮತ್ತು ಕುಸ್ತಿಯಲ್ಲಿ ರಜತ ಪದಕ) ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿಗಳಾದ ಕುಂದಾಪುರ ನ್ಯೂ ಮೆಡಿಕಲ್‌ನ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಕಂದಾವರ, ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಪ್ರೊ. ಎ.ಪಿ. ಮಿತಂತ್ತಾಯ, ಆಡಳಿತ ಮಂಡಳಿಯ ಸದಸ್ಯರುಗಳಾದ ವಿನತಾ ಪಿ. ರೈ, ಅರುಣ್ ಕುಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಲ್ಲಿನ ಯುವ ರೆಡ್‌ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ರೋವರ್ ರೇಂಜರ್ ಘಟಕ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಎ. ಮೇಳಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರೆಡ್‌ಕ್ರಾಸ್ ಸಮಿತಿಯ ಅಧ್ಯಕ್ಷರಾದ ಜಯಕರ ಶೆಟ್ಟಿಯವರು, ಖಜಾಂಚಿಗಳಾದ ಶಿವರಾಮ ಶೆಟ್ಟಿ ತಾಲೂಕು ರೆಡ್‌ಕ್ರಾಸ್ ಸಮಿತಿಯ ಸಂಯೋಜನಾಧಿಕಾರಿಗಳಾದ ಎ.ಎಮ್. ಶೆಟ್ಟಿಯವರು ಉಪಸ್ಥಿತರಿದ್ದರು. ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕರಾದ ಶಿವಕುಮಾರ ಪಿ.ವಿ. ಇವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸದರು, ರೆಡ್ ರಿಬ್ಬನ್ ಕ್ಲಬ್‌ನ ಸಂಯೋಜಕರಾದ ರಘು ನಾಯ್ಕ್ ಸ್ವಾಗತಿಸಿ, ರೋವರ್ ರೇಂಜರ್ ಘಟಕದ ಸಂಯೋಜಕರಾದ ಗಿರೀಶ್ ಕುಮಾರ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲೋಕ ಸಭಾ ಚುನಾವಣೆ ಪ್ರಯುಕ್ತ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಕುಂದಾಪುರ ಪುರಸಭೆಯ ಕಂದಾಯ ನಿರೀಕ್ಷಕರಾದ ಜ್ಯೋತಿ ಎಚ್. ಇವರಿಂದ ಕುಂದಾಪುರ ಪುರಸಭಾ ವ್ಯಾಪ್ತಿಯ ಶಾಸ್ತ್ರಿ ಸರ್ಕಲ್ ಹತ್ತಿರ ರಿಕ್ಷಾ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಕುರಿತು ಪ್ರತೀಜ್ಞಾ ವಿಧಿಯನ್ನು ಬೋದಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚುನಾವಣಾ ಆಯೋಗವು ಶಿವಮೊಗ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಎಪ್ರಿಲ್ 23 ರಂದು ಮತದಾನ ನಡೆಸಲು ಚುನಾವಣಾ ವೇಳಾ ಪಟ್ಟಿಯನ್ನು ಘೋಷಿಸಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ, ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ, ಮತದಾನ ಪ್ರಾರಂಭವಾಗುವ ದಿನಾಂಕಕ್ಕೆ 48 ಗಂಟೆಗಳ ಮುಂಚಿತವಾಗಿ ಮತ್ತು ಮತದಾನದ ದಿನ ಅಂದರೆ ಎಪ್ರಿಲ್ 21 ರಂದು ಸಂಜೆ 6 ರಿಂದ ಎಪ್ರಿಲ್ 23 ರ ಮಧ್ಯರಾತ್ರಿ 12 ರ ವರೆಗೆ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಿಲರಿಗಳನ್ನು, ಸ್ಟಾರ್ ಹೋಟೆಲ್‌ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಸಾರ್ವತ್ರಿಕ ಚುನಾವಣೆ 2019 ಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ಮತದಾನ ನಡೆಸಲು ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಮತದಾನ ಪ್ರಾರಂಭವಾಗುವ ದಿನಾಂಕದ ೪೮ ಗಂಟೆಗಳ ಮುಂಚಿತವಾಗಿ ಅಂದರೆ ಎಪ್ರಿಲ್ 16 ರಂದು ಸಂಜೆ 6 ರಿಂದ ಮತದಾನದ ದಿನ ಅಂದರೆ ಎಪ್ರಿಲ್ 18 ರ ಮಧ್ಯರಾತ್ರಿ 12 ರ ವರೆಗೆ ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಿಲರಿಗಳನ್ನು, ಸ್ಟಾರ್ ಹೋಟೆಲ್‌ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ. ಈ ಆದೇಶದಂತೆ ಸೂಚಿಸಿರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಯಾವುದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯು.ಕೆ.ಜಿ. ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಉದ್ಘಾಟಕರಾಗಿ ಆಗಮಿಸಿದ ಖಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ಪ್ರತಿಯೊಂದು ಮಗುವು ದೇವರುಕೊಟ್ಟ ವರ, ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೊಡಬೇಕಾಗಿದೆ. ಅವರ ಬುದ್ಧಿಮತ್ತೆಯ ಕುರಿತು ಶಿಕ್ಷಕರು ಹಾಗೂ ಪೋಷಕರಿಗೆ ಅರಿವಿರಬೇಕು. ಅಂಕಗಳಿಂದ ವಿದ್ಯಾರ್ಥಿಗಳ ಬುದ್ಧಿವಂತಿಕೆ ಅಳೆಯದೆ, ಅವರನ್ನು ಸರ್ವತೋಮುಖವಾಗಿ ಪ್ರತಿಭಾವಂತರಾಗುವಂತೆ ಮಾಡಬೇಕು. ಮಕ್ಕಳಿಗೆ ಪ್ರೀತಿಯ ಸ್ಪರ್ಶ ನೀಡಿ ಅವರನ್ನು ಆದರದಿಂದ ನಡೆಸಿಕೊಳ್ಳಬೇಕು ಗುರುಹಿರಿಯರಿಗೆ ಗೌರವಕೊಡುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಶಿಕ್ಷಣವೆಂಬುದು ಹಣಕೊಟ್ಟು ಖರೀದಿಸುವ ಸರಕಲ್ಲ. ಅದು ವಿದ್ಯಾರ್ಥಿಗಳು ಶ್ರಮಪಟ್ಟು ಅಧ್ಯಯನ ಮಾಡಿದಾಗ ದೊರೆಯು ಜ್ಞಾನ ಸಂಪತ್ತು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರವಂತೆಯ ಖ್ಯಾತ ವೈದ್ಯೆ ಡಾ. ರೂಪಶ್ರೀ ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಇಂದಿನ ಶಿಕ್ಷಣದ ಜೊತೆಗೆ ದೈಹಿಕ, ಮಾನಸಿಕ, ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಮಕ್ಕಳ ಆರೋಗ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶೋಭಾ ಕರಂದ್ಲಾಜೆ ಯಡಿಯೂರಪ್ಪನವರ ಜೊತೆಗೆ ಕೇರಳದ ದೇವಸ್ಥಾನಕ್ಕೆ ಹೋಗಿ ತಾಳಿ ಕಟ್ಟಿಸಿಕೊಂಡು ಬಂದಿದ್ದಾರೆಂದು ಜನರು ಆಡಿಕೊಳ್ಳುತ್ತಿದ್ದಾರೆ. ಆಗಾಗ್ಗೆ ಯಡಿಯೂರಪ್ಪನವರ ಒಟ್ಟಿಗೆ ಪೂಜೆ ಪುನಸ್ಕಾರಗಳಿಗೆ ತೆರಳುತ್ತಾರೆ. ಆದರೆ ಅವರು ಮಾತ್ರ ತಾನು ಮಗಳು ಎನ್ನುತ್ತಿದ್ದಾರೆ. ಮಗಳಾದರೂ, ಮಡದಿಯಾದರೂ ಅವರದ್ದೂ ವಂಶಪಾರಂಪರ್ಯ ರಾಜಕಾರಣ ಆಗಲಿಲ್ಲವೇ? ಯಡಿಯೂರಪ್ಪನವರ ಕುಟುಂಬದವರಾಗಿದ್ದೂ ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಉಡುಪಿಯಲ್ಲಿ ಶೋಭಾ ಚುನಾವಣೆಗೆ ನಿಲ್ಲಬಹುದೇ ಎಂದು ಎಂಎಲ್‌ಸಿ ಭೋಜೆಗೌಡ ಅವರು ಖಾರವಾಗಿ ತಿವಿದಿದ್ದಾರೆ. ಶೋಭಾ ಕರಂದ್ಲಾಜೆ ಅವರ ಕುಟುಂಬ ರಾಜಕಾರಣ ಹೇಳಿಕೆಗೆ ಬೈಂದೂರಿನಲ್ಲಿ ಪ್ರತಿಕ್ರಿಯಿಸಿದ ಎಂಎಲ್‌ಸಿ ಹಾಗೂ ಜೆಡಿಎಸ್ ವಕ್ತಾರ ಭೋಜೆಗೌಡ ಪ್ರತಿಕ್ರಿಯಿಸಿ ನಿಖಿಲ್ ಹಾಗೂ ಪ್ರಜ್ವಲ್ ದೇವೇಗೌಡರ ಮೊಮ್ಮಕ್ಕಳಾಗಿದ್ದೇ ತಪ್ಪಾಯಿತೆ. ಅವರು ದೇವೆಗೌಡರ ಮೊಮ್ಮಕ್ಕಳಾದರೂ ರಾಜ್ಯಸಭಾ ಸೀಟು ಕೇಳಿಲ್ಲ, ಎಂಎಲ್‌ಸಿ ಸೀಟ್ ತೆಗೆದುಕೊಂಡಿಲ್ಲ, ಕಾರ್ಯಕರ್ತನಿಗೆ ಸಿಗುವ ಸೀಟನ್ನು ತಮಗೆ ಬೇಕೆಂದು ಕೇಳಿಲ್ಲ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಜನರ ಮುಂದೆ ಹೋಗಿ ಮತ ಕೇಳುತ್ತಿದ್ದಾರೆ. ಜನ ಇಷ್ಟವಾದರೆ ಮತ ಹಾಕುತ್ತಾರೆ. ಇಲ್ಲದಿದ್ದರೆ ತಿರಸ್ಕಾರ ಮಾಡುತ್ತಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ, ಬೈಂದೂರು, ಎ.4: ರಾಜ್ಯದಲ್ಲಿ ಮೈತ್ರಿ ಸರಕಾರ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೇ ಬಯಲಿಗೆಳೆಯಲಿ. ಸುಮ್ಮನೆ ಬಾಯಿ ಚಲಪಕ್ಕೆ ಮಾತನಾಡುವುದಲ್ಲ ಎಂದು ಸಿಎಂ ಹೆಚ್. ಡಿ ಕುಮಾರಸ್ವಾಮಿ ಬೈಂದೂರಿನಲ್ಲಿ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಬೈಂದೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು. ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವುದು ವಂಶ ಪಾರಂಪರ್ಯವನ್ನು ಮುಂದುವರಿಸಲು ಹಾಗೂ ಭ್ರಷ್ಟಾಚಾರ ನಡೆಸಲು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯಂತೆ ಈ ಮಟ್ಟಿಗೆ ಕೀಳು ಮಟ್ಟದ ರಾಜಕೀಯ ಯಾರೂ ಮಾಡಿರಲಿಲ್ಲ. ಅಧಿಕಾರ ಹಿಡಿಯುವುದೆಂದರೆ ಆಳ್ವಿಕೆ ಮಾಡುವುದಕ್ಕಷ್ಟೇ ಅಲ್ಲ, ಒಳ್ಳೆಯ ಕೆಲಸಗಳ ಮೂಲಕ ರಾಜ್ಯದ ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶ ಇರುತ್ತದೆ. ಅಧಿಕಾರದಲ್ಲಿದ್ದಾಗಲೆಲ್ಲಾ ಹಾಗೆ ಮಾಡಿದ್ದೇವೆ ಎಂಬ ಭರವಸೆ ಇದೆ ಎಂದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಹುಮತದಿಂದ ಗೆಲ್ಲುತ್ತೇವೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಹೆಚ್ಚಿನ ಮತಗಳನ್ನು ಪಡೆದುಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ ಜೆಡಿಎಸ್…

Read More