ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಲ್ಲಿನ ಯುವ ರೆಡ್‌ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ರೋವರ್ ರೇಂಜರ್ ಘಟಕ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಎ. ಮೇಳಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರೆಡ್‌ಕ್ರಾಸ್ ಸಮಿತಿಯ ಅಧ್ಯಕ್ಷರಾದ ಜಯಕರ ಶೆಟ್ಟಿಯವರು, ಖಜಾಂಚಿಗಳಾದ ಶಿವರಾಮ ಶೆಟ್ಟಿ ತಾಲೂಕು ರೆಡ್‌ಕ್ರಾಸ್ ಸಮಿತಿಯ ಸಂಯೋಜನಾಧಿಕಾರಿಗಳಾದ ಎ.ಎಮ್. ಶೆಟ್ಟಿಯವರು ಉಪಸ್ಥಿತರಿದ್ದರು.
ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕರಾದ ಶಿವಕುಮಾರ ಪಿ.ವಿ. ಇವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸದರು, ರೆಡ್ ರಿಬ್ಬನ್ ಕ್ಲಬ್‌ನ ಸಂಯೋಜಕರಾದ ರಘು ನಾಯ್ಕ್ ಸ್ವಾಗತಿಸಿ, ರೋವರ್ ರೇಂಜರ್ ಘಟಕದ ಸಂಯೋಜಕರಾದ ಗಿರೀಶ್ ಕುಮಾರ್ ವಂದಿಸಿದರು.










