ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ಆರೋಗ್ಯ ಮಾಹಿತಿ ಅರಿವು ಕಾರ್ಯಾಗಾರ ಪಾಲಕರ ಸಭೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ. ಕಾಶಿನಾಥ್ ಪೈ , ಗಂಗೊಳ್ಳಿ ಇವರು ಎಪಿಲೆಪ್ಸಿ (ಮೂರ್ಛೆ ರೋಗ)ದ ಬಗ್ಗೆ ಮಾಹಿತಿಯನ್ನು ನೀಡಿದರು. ಅದರಲ್ಲೂ ವಿಶೇಷ ಮಕ್ಕಳಲ್ಲಿ ಈ ಕಾಯಿಲೆ ಕಂಡು ಬಂದಾಗ ತೆಗೆದುಕೂಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮತ್ತು ವೈದ್ಯಕೀಯ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಪೋಷಕರ ವಿವಿಧ ಪ್ರಶ್ನೆಗಳಿಗೆ ಸೂಕ್ತವಾದ ವಿವರಣೆಯನ್ನು ನೀಡಿ ಸಂದೇಹಗಳಿಗೆ ಪರಿಹಾರವನ್ನು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ದಾನಿಗಳಾದ ಕಾರ್ತಿಕೇಯ ಶಿರೂರು ಹಾಗೂ ಕಮಲಬಾಯಿ ಟ್ರಸ್ಟ್ ನ ಜೀವಿತೇಶ್ವರ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುರೇಶ್ ತಲ್ಲೂರು ಸ್ವಾಗತಿಸಿದರು, ಟ್ರಸ್ಟೀ ವಸಂತ ಶಾನುಭಾಗ ವಂದಿಸಿದರು. ಮುಖ್ಯ ಶಿಕ್ಷಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶ್ರೀ ಇಂದುಧರ ಯುವಕ ಮಂಡಲ ಗಂಗೊಳ್ಳಿ ಇದರ ನೂತನ ಅಧ್ಯಕ್ಷರಾಗಿ ಸಂದೇಶ ಜಿ.ಟಿ. ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಗುರುರಾಜ್ ಬಿ., ಉಪಾಧ್ಯಕ್ಷರಾಗಿ ಚಂದ್ರ ಬಿ., ಸುದೀಪ್ ಜಿ.ಎಸ್., ಕಾರ್ಯದರ್ಶಿಯಾಗಿ ಸಂದೇಶ, ಜತೆ ಕಾರ್ಯದರ್ಶಿಯಾಗಿ ಸುಧಾಕರ ಜಿ.ಟಿ., ವಿಘ್ನೇಶ ಜಿ.ಟಿ., ಕ್ರೀಡಾ ಕಾರ್ಯದರ್ಶಿಯಾಗಿ ರಾಘವೇಂದ್ರ ಜಿ.ಟಿ., ಸಂದೇಶ ಜಿ.ಟಿ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಕಾಂತ ಎನ್., ಲಕ್ಷಣ ಜಿ., ವಿಶ್ವನಾಥ ಜಿ.ಟಿ., ಪ್ರದೀಪ ಜಿ.ಟಿ., ದಿನೇಶ ಜಿ.ಟಿ. ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯಾದ್ಯಂತ ಕರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಈ ಬಾರಿ ಹೋಳಿ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರಕಾರದ ಆದೇಶವನ್ನು ಮತ್ತು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಹೇಳಿದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪೂರ್ವಭಾವಿಯಾಗಿ ಜರಗಿದ ಕೊಂಕಣಿ ಖಾರ್ವಿ ಸಮಾಜದ ಮುಖಂಡರ ಹಾಗೂ ಹೋಳಿ ಹಬ್ಬ ಕಮಿಟಿಯ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಲಾಗಿದೆ. ನಿಗದಿತ ವೇಳೆಯಲ್ಲಿ ಕಾರ್ಯಕ್ರಮವನ್ನು ಮುಗಿಸಬೇಕು. ಯಾರಿಗೂ ಒತ್ತಾಯಪೂರ್ವಕವಾಗಿ ಬಣ್ಣ ಹಾಕಬಾರದು. ಅನ್ಯ ಧರ್ಮೀಯರಿಗೆ ತೊಂದರೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಮುತುವರ್ಜಿ ವಹಿಸಬೇಕು ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಸರಕಾರ ಹೊರಡಿಸುವ ಆದೇಶಗಳನ್ನು ಪಾಲಿಸಲು ಬದ್ಧರಾಗಿರಬೇಕು ಎಂದು ಹೇಳಿದರು. ಶೀನ ಪಟೇಲ್, ಕೃಷ್ಣ ಪಟೇಲ್, ರಾಮದಾಸ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್ – ಅಕ್ಟೋಬರ್ 2020ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಎಂಟು ರ‍್ಯಾಂಕ್‌ಗಳು ದೊರಕಿವೆ. ವಾಣಿಜ್ಯ ಪದವಿಯಲ್ಲಿ ಯಡ್ತೆರೆಯ ಕುದ್ರಿಸಾಲ್, ವಿಠಲ ಮತ್ತು ಕಾವೇರಿಯವರ ಪುತ್ರಿ ಮಧುಶ್ರೀಗೆ ಎಂಟನೇ ರ‍್ಯಾಂಕ್, ಕಲಾ ಪದವಿಯಲ್ಲಿ ಬಿಜೂರಿನ ಕಂಚಿಕಾನ್ ಶ್ರೀಧರ ಭಟ್ ಮತ್ತು ಕಾತ್ಯಾಯಿನಿ ಭಟ್‌ಯವರ ಪುತ್ರಿ ಕೀರ್ತಿಗೆ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ವಿಜ್ಞಾನ ಪದವಿಯಲ್ಲಿ ಕುಂದಾಪುರದ ಕುಂಭಾಶಿಯ ಮನೋಹರ್ ಪ್ರಭು ಮತ್ತು ಮಲ್ಲಿಕಾ ಪ್ರಭು ಅವರ ಪುತ್ರಿ ಮೇಘನಾ ಪ್ರಭು ಅವರಿಗೆ ನಾಲ್ಕನೇ ರ‍್ಯಾಂಕ್, ಬಳ್ಕೂರಿನ ಹಾಡಿಮನೆ ಅಣ್ಣಪ್ಪ ಶೇರೆಗಾರ್ ಮತ್ತು ಮಾಲತಿಯವರ ಪುತ್ರಿ ನಾಗರತ್ನ ಅವರಿಗೆ ಐದನೇ ರ‍್ಯಾಂಕ್, ಉಪ್ಪುಂದದ ಅಮ್ಮನವರತೊಪ್ಲಿನ ಸುಧಾಕರ ಗಾಣಿಗ ಮತ್ತು ಮೂಕಾಂಬು ಎಸ್. ಗಾಣಿಗ ಅವರ ಪುತ್ರಿ ಗೌತಮಿ ಗಾಣಿಗ ಅವರಿಗೆ ಒಂಬತ್ತನೆ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವಿಯಲ್ಲಿ ಹೊಸಂಗಡಿ ಹೆನ್ನಾಬೈಲಿನ ಕೆ. ಎಂ. ಅಶ್ರಫ್ ಮತ್ತು ರುಬಿನಾ ಬಾನು ಅವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೇರಿಕದ ಕೊಲಂಬಿಯಾ ಮೇಸೊರಿಯನ್ ನಗರದಲ್ಲಿ ಬುಧವಾರ ನಡೆದ ರೀಜನಲ್ ಸ್ಪೆಲ್ಲಿಂಗ್ ಬಿ”ಸ್ಪಧೆ೯ಯಲ್ಲಿ ಜೇಯಾ ಶೆಟ್ಟಿ ಮತ್ತು ಅನ್ಯಾ ಶೆಟ್ಟಿ ವಿಶಿಷ್ಟ ಸಾಧನೆಗೈದಿದ್ದು, ಜೀಯಾ ಶೆಟ್ಟಿ ರೀಜನಲ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಅನ್ಯಾ ಶೆಟ್ಟಿ ಫೈನಲ್ ಹಂತಕ್ಕೆ ತಲುಪಿ ದಾಖಲೆ ಮಾಡಿದ್ದಾರೆ. ಮಿಡ್- ಮೇಸೊರಿಯನ್’ನ 25 ಶಾಲೆಗಳ ವಿದ್ಯಾರ್ಥಿಗಳು ಸ್ಪೆಲ್ ಬೀ ಸ್ವರ್ಧೆಯಲ್ಲಿ ಭಾಗವಹಿಸಿದ್ದು, 94 ಪದಗಳ ಬಳಿಕ 15 ಸ್ಪೆಲ್ಲರ್ ಹಾಗೂ 20 ಸುತ್ತಿನಲ್ಲಿ ಸ್ಮಿಥ್’ಟೋನ್ ಮಿಡಲ್ ಸ್ಕೂಲ್ ವಿದ್ಯಾರ್ಥಿನಿ ಜೀಯಾ ಟಾಪರ್ ಆಗಿ ಹೊರಹೊಮ್ಮಿದರು. ಜೀಯಾ ತನ್ನ ಸಹೋದರಿ, ಮೇರಿ ಪೆಕ್ಸಾನ್ ಕೀಲಿ ಎಲಿಮೆಂಟರಿ ಸ್ಕೂಲ್ ವಿದ್ಯಾರ್ಥಿನಿ ಅನ್ಯಾ ಶೆಟ್ಟಿಯನ್ನು ಮಣಿಸಿದರು. ಜೀಯಾ ಕಳೆದ ವರ್ಷವೂ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಅನ್ಯ ಕಳೆದ ಭಾರಿ ನಾಲ್ಕನೇ ರೌಂಡ್’ಗೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ಜೇಯಾ ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಮ್ಮರ್ ಸ್ಪೆಲ್ಲಿಂಗ್ ಬಿ ಸ್ಪಧಾ೯ಕೂಟಕ್ಕೆ ತಯಾರಿ ನಡೆಸುತ್ತಿದ್ದಾಳೆ. ಈರ್ವರೂ ಕುಂದಾಪುರ ತಾಲೂಕು ಅಂಪಾರಿನ ಬಾಳೆಬೇರು ಮನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಾಸಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಪ.ಜಾತಿ, ಪ.ಪಂಗಡ, ವಿಕಲಚೇತನರ ಕಲ್ಯಾಣ ಕಾರ್ಯಕ್ರಮ ಹಾಗೂ ಶೇ.2ರ ನಿಧಿಯಡಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಡಿ ಸವಲತ್ತು ವಿತರಣೆ ಮತ್ತು ಜಲಜೀವನ್ ಮಿಷನ್ (ಮನೆ ಮನೆಗೆ ಗಂಗೆ) ಅಭಿಯಾನದಡಿ ಅರಿವು ಕಾರ್ಯಕ್ರಮ ತ್ರಾಸಿಯ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಗ್ರಾಪಂ ಉಪಾಧ್ಯಕ್ಷೆ ಹೇಮಾ, ಗ್ರಾಪಂ ಸದಸ್ಯರಾದ ವಿಜಯ ಪೂಜಾರಿ, ರೆನ್ಸಮ್ ಪಿರೇರಾ ಉಪಸ್ಥಿತರಿದ್ದರು. ಜಲ ಜೀವನ್ ಮಿಷನ್ ಕಾರ್ಯಕ್ರಮದ ಬಗ್ಗೆ ಟಿ.ವಿ.ಗಿರೀಶ್ ಮಾಹಿತಿ ನೀಡಿದರು. ತ್ರಾಸಿ ಗ್ರಾಮ ಪಂಚಾಯತ್‌ನ ೨೦೨೦-೨೧ನೇ ಸಾಲಿನ ವಿವಿಧ ಯೋಜನೆಯಡಿ ಪ.ಜಾತಿ, ಪ.ಪಂಗಡ ಹಾಗೂ ವಿಕಲಚೇತನರಿಗೆ ಮತ್ತು ಶಾಲೆ ಹಾಗೂ ಅಂಗನವಾಡಿಗಳಿಗೆ ಸುಮಾರು ೩ ಲಕ್ಷ ರೂ. ಮೌಲ್ಯದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯ ಬೆಳ್ವೆ ಗಣೇಶ್ ಕಿಣಿ ರಾಜೀನಾಮೆ ನೀಡಿದ್ದಾರೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಕೊಲ್ಲೂರು ದೇವಳದ ಸಮಿತಿಗೆ ಸದಸ್ಯನಾಗಿ ಆಯ್ಕೆಯಾಗಿದ್ದು ದೇವರ ಸೇವೆಗೆ ಸಿಕ್ಕ ಅವಕಾಶ ಎಂದು ತಿಳಿದುಕೊಂಡಿದ್ದೆ ಆದರೆ ಸಮಿತಿ ರಚನೆಗೊಂಡು 5 ತಿಂಗಳು ಕಳೆದರೂ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಸಮಿತಿಯ ಸಭೆ ನಡೆದಿಲ್ಲ, ಇದು ಖೇದಕರ. ಸಮಿತಿ ರಚನೆಗೊಂಡು ಸೇವೆಗೆ ಈವರೆಗೆ ಅವಕಾಶ ಸಿಗದಿರುದರಿಂದ ಇಂತಹ ವ್ಯವಸ್ಥೆಯಲ್ಲಿ ಮುಂದುವರಿಯುವುದು ಸರಿಯಿಲ್ಲ ಅನಿಸಿತು ಎಂದು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಸಮಾಜಸೇವೆ, ಧಾರ್ಮಿಕ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಬೆಳ್ವೆ ಗಣೇಶ್ ಕಿಣಿಯವರ ಹಠಾತ್ ರಾಜೀನಾಮೆ ಸಂಚಲನ ಮೂಡಿಸಿದೆ. ಕೆಲವೊಬ್ಬರ ಪ್ರತಿಷ್ಠೆಗಾಗಿ ದೇವಳದ ಕಾರ್ಯ ಚಟುವಟಿಕೆ ಕುಂಠಿತಾಗುತ್ತಿದೆ ಎಂಬ ಆರೋಪ ಈಗ ಭುಗಿಲೆದ್ದಿದೆ. ಕಿಣಿಯವರು ರಾಜೀನಾಮೆ ಹಿಂಪಡೆಯುವಂತೆ ಅನೇಕರು ಒತ್ತಡ ಹೇರುತ್ತಿದ್ದರೂ, ಇದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ದೇವರ ಸೇವೆಗೆ ಅವಕಾಶ ಇಲ್ಲದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ತಗ್ಗರ್ಸೆ ಎಂಬಲ್ಲಿ ನಡೆದಿದೆ. ತಗ್ಗರ್ಸೆ ನಿವಾಸಿ ದಾಸಪ್ಪ (42) ಮೃತ ದುರ್ದೈವಿ. ಕೊಲ್ಲೂರು ಕಡೆಯಿಂದ ಬರುತ್ತಿದ್ದ ಬೆಂಗಳೂರು ನೊಂದಣಿಯ ಸ್ವಿಫ್ಟ್ ಕಾರು ತಗ್ಗರ್ಸೆಯಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ದಾಸಪ್ಪ ಎಂಬುವವರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ತಲೆಯ ಭಾಗಕ್ಕೆ ಗಂಭೀರ ಗಾಯವಾದ ಅವರನ್ನು ಸ್ಥಳಯರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು. ಡಿಕ್ಕಿ ಹೊಡೆದ ಕಾರಿನ ಚಾಲಕ ಎಲ್ಲಿಯೂ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದು ಶಿರೂರು ತೂದಳ್ಳಿ ಮೂಲಕ ಭಟ್ಕಳ ಕಡೆಗೆ ತೆರಳಿದ್ದ ಎನ್ನಲಾಗಿದೆ. ಘಟನೆಯ ಮಾಹಿತಿ ಪಡೆದುಕೊಂಡ ಬೈಂದೂರು ಪೊಲೀಸರು ತಕ್ಷಣ ಕಾರನ್ನು ಹಿಂಬಾಲಿಸಿ ಹೋಗಿದ್ದು ಅಷ್ಟರಲ್ಲೇ ಕಾರನ್ನು ಭಟ್ಕಳದ ಬೇಲಂದೂರು ಎಂಬಲ್ಲಿ ನಿಲ್ಲಿಸಿ, ಚಾಲಕ ಪರಾರಿಯಾಗಿದ್ದ. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿಎಸ್ಐ ಸಂಗೀತಾ ಅವರ ತಂಡ ಕಾರ್ಯಾಚರಣೆಯಲ್ಲಿದ್ದು ತಕ್ಷಣ ಕಾರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಾದದ್ದು ಎಲ್ಲರ ಕರ್ತವ್ಯ ಆದರೆ ಕೋವಿಡ್ ಮಾರ್ಗಸೂಚಿ ಹೆಸರಿನಲ್ಲಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಸಾರಿಗೆ ಉದ್ಯಮದಾರರಿಗೆ ಅಧಿಕಾರಿಗಳು ದಂಡದ ಹೆಸರಿನಲ್ಲಿ ಅನಗತ್ಯ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ವಿಕಾಸ್ ಹೆಗ್ಡೆ ತಿಳಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಸಾವಿರಾರು ರೂಪಾಯಿಯ ದಂಡವೊಂದೇ ಪರಿಹಾರವಲ್ಲ. ದಂಡ ಹಾಕುವ ಮೊದಲು ಜಾಗೃತಿ ಮೂಡಿಸುವ ಕೆಲಸವಾಗಲಿ. ಈಗಾಗಲೇ ಲಾಕ್’ಡೌನ್, ಸೀಲ್ಡೌನ್ ಮುಂತಾದವುಗಳಿಂದ ಎಲ್ಲಾ ಉದ್ದಿಮೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದಿ. ಸ್ವಲ್ಪ ಪ್ರಮಾಣದ ಚೇತರಿಕೆ ಕಾಣುವಾಗ ಸರ್ಕಾರ ಅವರ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಮಾರ್ಗಸೂಚಿಗನ್ನು ರಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಗುರುವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕುಂದಾಪರ ನಗರದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕಿದ್ದ ವಿದ್ಯಾರ್ಥಿಗಳ ಬೆನ್ನುತಟ್ಟಿ ಹುರಿದುಂಬಿಸಿದರೆ, ಮಾಸ್ಕ್ ಧರಿಸದವರಿಗೆ ಫೈನ್ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ತಾಲೂಕು ಆಸ್ಪತ್ರೆಯಿಂದ ಶಾಸ್ತ್ರಿ ವೃತ್ತದವರಗೆ ತೆರಳಿದ ಡಿಸಿ ಜಿ. ಜಗದೀಶ್ ಮುಖ್ಯರಸ್ತೆ ಅಕ್ಕಪಕ್ಕ ಇರುವ ಎಲ್ಲಾ ಅಂಗಡಿಗೆ ಹೋಗಿ ಕರೋನಾ ಏರುಗತಿಯಲ್ಲಿರುವುದರಿಂದ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸೂಚಿಸಿ, ಪಾರಿಜಾತ ವೃತ್ತದ ಬಳಿ ಕಾರ್ ಪಾರ್ಕಿಂಗ್‌ಗೆ ಭೇಟಿ ನೀಡಿದಾಗ ಮಾಸ್ಕ್ ಧರಿಸದೆ ಇದ್ದ ಕಾರ್ ಚಾಲಕರಿಗೆ ಮಾಸ್ಕ್ ಎಲ್ಲಿ ಎಂದು ಗರಮ್ ಆದರು. ಕಿಸೆಯಲ್ಲಿರುವ ಮಾಸ್ಕ್ ತೆಗೆದು ಧರಿಸಿದ ಚಾಲಕರಿಗೆ ಮಾಸ್ಕ್ ಇರಬೇಕಿರುವುದು ಮುಖದ ಮೇಲೆ, ಕಿಸೆಯಲ್ಲಲ್ಲ. ಮಾಸ್ಕ್ ಹಾಕದೆ ಅಸಹಾಕರ ತೋರಿಸಿದರೆ ಕರೋನ ನಿಯಂತ್ರಣ ಹೇಗೆ ಎಂದು ಪ್ರಶ್ನಿಸಿ, ಬಾಡಿಗೆ ಮಾಡುವ ಕಾರ್…
