Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಪ್ಪಿನಕುದ್ರು ಗೊಂಬೆ ಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ ಕುಮಾರಿ ಕೃತಿಕಾ ಶೆಣೈ  ಕುಂದಾಪುರ ಇವರ ಸುಗಮ ಸಂಗೀತ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಇತ್ತೀಚೆಗೆ ಜರಗಿತು. ಸಭಾ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್, ತಲ್ಲೂರು ಸುರೇಶ್, ಸಂತೋಷ್ ಕೋಣಿ, ವಸಂತಿ ಆರ್. ಪಂಡಿತ್, ವಸುಮತಿ ಪುರಾಣಿಕ್, ರಜನಿ ಪ್ರಭುರವರು ಉಪಸ್ಥಿತರಿದ್ದರು. ಕೃತಿಕಾ ಶೆಣೈ  ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಉಪ್ಪಿನಕುದ್ರು ದಿನೇಶ್ ದೇವಾಡಿಗ ಹಾಗೂ ತಂಡದವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ತದನಂತರ ಕೃತಿಕಾ ಶೆಣೈ ಯವರ ಸುಮಧುರ ಸಂಗೀತ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್  ಕಾರ್ಯಕ್ರಮ ನಿರೂಪಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಮತ್ತು ಯು ಚಾನೆಲ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ಜರಗಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಸ್ರೂರು ಶ್ರೀ ಶಾರದಾ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಶ್ರುತಿ ಬಿ. ಗಂಗೊಳ್ಳಿ ಅತ್ಯುತ್ತಮ ನಿರೂಪಕಿಯಾಗಿ ಆಯ್ಕೆಯಾಗಿ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಈಕೆ ಗಂಗೊಳ್ಳಿಯ ಗೀತಾ ಮತ್ತು ಬಿ.ಗಣೇಶ ಖಾರ್ವಿ ದಂಪತಿ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಬಾರ್ ಅಸೋಸೀಯೇಶನ್ ನೂತನ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಎ.ನಿರಂಜನ ಹೆಗ್ಡೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಾಜಿ ಅಬ್ರಾಹಂ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಪ್ರಮೋದ್ ಹಂದೆ, ಜತೆ ಕಾರ್ಯದರ್ಶಿಯಾಗಿ ಪಿಂಕಿ ಕರ್ವೆಲ್ಲೊ ಹಾಗೂ ಕೋಶಾಧಿಕಾರಿಯಾಗಿ ರಾಘವೇಂದ್ರ ಉಪ್ಪುಂದ ಆಯ್ಕೆಯಾಗಿದ್ದಾರೆ. ಬಾರ್ ಅಸೋಸೀಯೇಶ್‌ನ್ ಮಾಜಿ ಅಧ್ಯಕ್ಷರಾದ ಜಿ.ಸಂತೋಷ್‌ಕುಮಾರ ಶೆಟ್ಟಿ ಚುನಾವಣಾಧಿಕಾರಿಯಾಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಮುಖ್ಯ ರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜನ್ನು ಮೇಲ್ದರ್ಜೆಗೇರಿಸಿ ಪ್ರಥಮ ದರ್ಜೆ ಕಾಲೇಜ್ ಆಗಿಸುವಂತೆ ಒತ್ತಾಯಿಸಿ ಕುಂದಾಪುರ ಹೋರಾಟ ಸಮಿತಿ ವತಿಯಿಂದ ಶಿಕ್ಷಣ ಸಚಿವರಿಗೆ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿಯವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮುಖಂಡರಾದ ದಿನೇಶ್ ಬೆಟ್ಟ, ಲಕ್ಷ್ಮಣ ಮೊಗವೀರ, ಚಂದ್ರ ಪೂಜಾರಿ, ಧರ್ಮೇಂದ್ರ, ವಿನಾಯಕ, ಅಕಿಲೇಶ್, ನಿಶಾಂತ್ ಮುಂತಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಗರಿಗಳ ಭಾನುವಾರ ವನ್ನು ಧರ್ಮಗುರು ವಂದನೀಯ ರೋನಾಲ್ಡ್ ಮೀರಾಂದ ರವರ ನೇತ್ರತ್ವದಲ್ಲಿ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡಬಿದಿರೆ: “ಯಾವುದೇ ವಿಚಾರವನ್ನು ಚರ್ಚಿಸದೆ, ಸಂಶ್ಲೇಷಿಸದೆ ನಿರ್ಧಾರ ತೆಗೆದುಕೊಳ್ಳುವುದರಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಭವಿಷ್ಯತ್ತಿನಲ್ಲಿ ಅಪಾಯ ಎದುರಾಗಬಹುದು ” ಎಂದು ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಅಭಿಪ್ರಾಯಪಟ್ಟರು. ಅದಾನಿ ಸಂಸ್ಥೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ವಿದ್ಯಾರ್ಥಿ ವೇದಿಕೆ ಹಾಗೂ ದಿ ಹಿಂದೂ ಗ್ರೂಪ್ ಆಫ್ ಮೀಡಿಯಾ ಸಂಯುಕ್ತ ಆಶ್ರಯದಲ್ಲಿ ದಿ ಹಿಂದೂ- ಅಂತರ್-ಕಾಲೇಜು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯನ್ನು ಆಯೋಜಿಸಿತ್ತು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಚರ್ಚೆ ಎಂಬುದು ಈ ಪ್ರಜಾಪ್ರಭುತ್ವ ಹಾಗೂ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಯಾವುದೇ ವೃತ್ತಿಯಲ್ಲಿ ನಾವು ತೊಡಗಿಸಿಕೊಂಡಿದ್ದರೂ, ಒಂದು ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ಮಾತುಕತೆಯ ಮೂಲಕ ಅದನ್ನು ಚರ್ಚಿಸಬೇಕು. ಎಲ್ಲಾ ಆಯಾಮಗಳಿಂದ ಅದನ್ನು ಪರಿಗಣಿಸಿ ತೀರ್ಮಾನಿಸುವುದು ಅಗತ್ಯ. ಚರ್ಚೆಗಳಿಂದ ಯಾವುದೇ ವಿಚಾರದಲ್ಲಿ ಉತ್ತಮ ಫಲಿತಾಂಶ ಹೊರತರುವಲ್ಲಿ ನಾವು ಸಫಲರಾಗುತ್ತೇವೆ” ಎಂದು ಹೇಳಿದರು. “ಚರ್ಚಾಕೌಶಲ್ಯ ಇದ್ದಲ್ಲಿ ನಮ್ಮ ವಿಚಾರ ವಿನಿಮಯದಲ್ಲಿ ಪೂರ್ಣತೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಯಕ್ಷಗಾನ ಕರ್ನಾಟಕದ ಹೆಮ್ಮೆಯ ಕಲೆ. ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ, ವೇಷಗಾರಿಕೆಗಳಿಂದ ಕೂಡಿದ ಸಮೃದ್ಧ ಕಲೆ. ಯಕ್ಷಗಾನ ಜನಸಾಮಾನ್ಯರ ಕಲೆ. ಅವರಿಗೆ ಮನರಂಜನೆ, ನೀತಿಬೋಧನೆಯನ್ನು ಸಾರುವ ಕಲೆ.ಅವರಿಗೆ ಕಲೆಯ, ಕಲಾವಿದರು, ಕಲಾಪ್ರದರ್ಶನದ ಕುರಿತಾದ ವಿಷಯಗಳನ್ನು ಕುರಿತು ಹೆಚ್ಚೆಚ್ಚು ತಿಳಿಸಬೇಕು ಎಂದು ಕಂದಾವರ ರಘುರಾಮ ಶೆಟ್ಟಿ ಖ್ಯಾತ ಯಕ್ಷಗಾನ ಪ್ರಸಂಗಕರ್ತರು ಅಭಿಪ್ರಾಯಪಟ್ಟರು. ಅವರು ಇಲ್ಲಿನ 23,24ಮತ್ತು 25 ನೇ ಮಾರ್ಚ್ 2018 ರಂದು ಇಲ್ಲಿನ ಭಂಡಾರ್ಕಾರ್ಸ್ಕಾಲೇಜು ಮತ್ತು ಕರ್ನಾಟಕ ಸಾಂಸ್ಕೃತಿಕ ಕಲಾಪ್ರತಿಷ್ಠಾನ ರಿ. ಬೆಂಗಳೂರು ಸಹಯೋಗದಲ್ಲಿ ಕಾಲೇಜಿನಲ್ಲಿ ನಡಯಿತ್ತಿರುವ 13 ನೇ ಅಖಿಲ ಭಾರತ ಯಕ್ಷಗಾನ–ಬಯಲಾಟ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇದು ಹೆಚ್ಚು ಪ್ರಚಾರದಲ್ಲಿರುವುದು ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ. ಹೀಗಾಗಿ ಇದನ್ನು ಕರಾವಳಿಯ ಕಮನೀಯ ಕಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಈ ಕಲೆಯ ಸಮೃದ್ಧಿ, ಸೊಗಸುಗಳಿಗೆ ಮನಸೋತು ನೆರೆಯ ಜಿಲ್ಲೆಗಳಲ್ಲಿಯೂ ಪ್ರಚಾರಗೊಳ್ಳುತ್ತಿವೆ. ಹಲವು ಮೇಳಗಳು ಈ ಕಲೆಯ ಪ್ರಚಾರಕ್ಕ ತಮ್ಮನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತೀಯ ಆಟೋರಿಕ್ಷಾ ಮಜ್ದೂರ್ ಸಂಘ ರಿ. ಇದರ ಸದಸ್ಯರ ಮಕ್ಕಳಿಗೆ ವರ್ಷಂಪ್ರತಿ ನೀಡುವ ವಿದ್ಯಾರ್ಥಿ ವೇತನವನ್ನು ಆರ್.ಎಸ್.ಎಸ್. ಕಾರ್ಯಾಲಯದಲ್ಲಿ ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಸುರೇಶ್ ಪುತ್ರನ್ ಇವರು ಸಂಘದ ಸದಸ್ಯರಲ್ಲಿ ಗ್ರಾಹಕರೊಂದಿಗೆ ಒಳ್ಳೆಯ ಸೌಹಾರ್ಧಯುತವಾಗಿ ನಡೆದುಕೊಳ್ಳುವುದರ ಮುಖೇನ ನಾವು ಸಮಾಜದ ಒಂದು ಅಂಗ. ನಾವಿರುವುದು ಸಮಾಜ ಸೇವೆಗೆ, ಯಾವ ಪ್ರಯಾಣಿಕರು ಯಾವ ಸ್ಥಿತಿಯಲ್ಲಿ ಇರುತ್ತಾರೆಂದು ಹೇಳಲಾಗುವುದಿಲ್ಲ ಆದ್ದರಿಂದ ಯಾರೇ ಕರೆದರು ಬರುವುದಿಲ್ಲ ವೆಂದು ಮಾತ್ರ ಹೇಳಬೇಡಿ, ನಿಮಗೆ ಹೋಗಲಾರದ ಪಕ್ಷದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಕೆ,ಟಿ.ಸತೀಶ್, ಕಾರ್ಯದರ್ಶಿ ಭಾಸ್ಕರ್ ಖಾರ್ವಿ, ಕೋಶಾಧಿಕಾರಿ ರಾಘವೇಂದ್ರ ಹೆಬ್ಬಾರ್, ಸಹ ಕಾರ್ಯದರ್ಶಿ ಶ್ರೀಧರ್ ಮೋಗವೀರ, ಉಪಾಧ್ಯಕ್ಷ ಅಣ್ಣಪ್ಪ ಶೆಟ್ಟಿ ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪುರಾತನ ಪ್ರಸಿದ್ಧ ಬಿಜೂರು ಶ್ರೀ ನಂದಿಕೇಶ್ವರ ದೈವಸ್ಥಾನ ಮೂರ‍್ಗೋಳಿಹಕ್ಲು ಇಲ್ಲಿ ಏ.14 ರಿಂದ 16 ರ ವರೆಗೆ ನಡೆಯುವ ಶ್ರೀ ನಂದಿಕೇಶ್ವರ ಪರಿವಾರ ದೈವಗಳ ವಾರ್ಷಿಕೋತ್ಸವದ ಅಂಗವಾಗಿ ಚಪ್ಪರ ಮೂಹೂರ್ತ ಕಾರ್ಯಕ್ರಮ ನಡೆಯಿತು. ಉಪ್ಪುಂದ ಸಂದೇಶ ಭಟ್ ನೇತೃತ್ವದಲ್ಲಿ ಧಾರ್ಮಿಕ ಪೂಜೆ ಕಾರ್ಯ ನೆರವೇರಿತು. ಏ.14 ರಂದು ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ನಾಗದೇವರ ವಾರ್ಷಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಏ.15 ರಂದು ಬೆಳಗ್ಗೆ ಗಂಟೆ 11.15 ಕ್ಕೆ ಏಕಾಹ ಅಖಂಡ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡು ಏ.15 ರಂದು ಪ್ರದೀಪ ವಿಸರ್ಜನೆಯೊಂದಿಗೆ ಭಜನಾ ಮಂಗಲೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ನಡೆಯಲಿದ್ದು, ರಾತ್ರಿ 8 ಗಂಟೆಗೆ ಕೆಂಡ ಸೇವೆ ಹಾಗೂ ಮಹಾಮಂಗಳಾರತಿ ನಡೆಯಲಿರುವುದು. ಮೂರು ದಿನದ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭ ದೈವಸ್ಥಾನದ ಅಧ್ಯಕ್ಷ ಕೃಷ್ಣಮೂರ್ತಿ ದೇವಾಡಿಗ ಮತ್ತು ಸಮಿತಿ ಸದಸ್ಯರು ಹಾಗೂ ಊರಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ತಿರುಮಲ ಯುವ ಕ್ರೀಡಾ ಮತ್ತು ಕಲಾ ಸಂಘ ರಿ. ಇದರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬ್ಬಡ್ಡಿ ಪಂದ್ಯಾಟ ಎಪ್ರಿಲ್ 7ರ ಶನಿವಾರ ರಾತ್ರಿ 8ರಿಂದ ತಗ್ಗರ್ಸೆ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಲಿದೆ. ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ 33,333, ದ್ವಿತೀಯ ಬಹುಮಾನವಾಗಿ 22,222, ತೃತೀಯ ಬಹುಮಾನವಾಗಿ 22,222, ಚತುಥ ಬಹುಮಾನವಾಗಿ 5,555 ಹಾಗೂ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸವ್ಯಸಾಚಿ ಪ್ರಶಸ್ತಿಗಳು ಇರಲಿದೆ. ಪಂದ್ಯಾಟಕ್ಕೆ ಪ್ರವೇಶ ಶುಲ್ಕ 2,000ರೂ ಇದ್ದು ಆಸಕ್ತ ತಂಡಗಳು ಹೆಸರು ನೊಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವುದು: 8971411363, 9535259790

Read More