ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮುಂದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ 10 ಪ್ರಶ್ನೆಗಳನ್ನಿಟ್ಟಿದ್ದು, ಅವುಗಳಿಗೆ ಉತ್ತರಿಸುವಂತೆ ಕೇಳಿಕೊಂಡಿದ್ದಾರೆ. ಉಡುಪಿ ಪ್ರೆಸ್ ಕ್ಲಬ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಮಿತ್ ಷಾ ಅವರ ಪುತ್ರ ಜೈ ಷಾ ಅಕ್ರಮ ಆಸ್ತಿಯ ಗಳಿಕೆ ತನಿಕೆ ಯಾವಾಗ, ನೀರವ್ ಮೋದಿ 11,000 ಕೋಟಿ ರೂ. ಭಷ್ಟಾಚಾರದ ಬಗ್ಗೆ ತಮ್ಮ ನಿಲುವೇನು, ವಿಜಯ ಮಲ್ಯನ 9,000 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ನಿಲುವೇನು, ಲೋಕಸಭಾ ಚುನಾವಣೆ ವೇಳೆ ತಾವೇ ನೀಡಿದ ಆಶ್ವಾಸನೆಯಂತೆ 2 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಭರವಸೆ ಏನಾಯಿತು, ಗಡಿ ಹಾಗೂ ಸೈನಿಕರ ಸಮಸ್ಯೆಯ ಬಗ್ಗೆ ನೀಡಿರುವ ಆಶ್ವಾಸನೆ ಏನಾಯಿತು, ಲೋಕಪಾಲ್ ಬಿಲ್ ಅನುಷ್ಠಾನ ಮಾಡುವಲ್ಲಿ ವಿಫಲವಾದದ್ದೇಕೆ, ಉಡುಪಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ನಿಲುವೇನು, ಮಂಗಳೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ ವಿಳಂಬಕ್ಕೆ ಏನು ಹೇಳುತ್ತೀರಿ, ಉಡುಪಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೋಣಿ ರಾಜ್ಯ ಹೆದ್ದಾರಿಯಲ್ಲಿ ಫೆ. 14ರ ತಡರಾತ್ರಿ ಬೈಕ್‌ಗೆ ಖಾಸಗಿ ಬಸ್ ಢಿಕ್ಕಿ ಹೊಡೆದ ದುರ್ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ) ಪ್ರಥಮ ವರ್ಷದ ವಿದ್ಯಾರ್ಥಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ತೆಕ್ಕಟ್ಟೆ ಸಮೀಪದ ಕೆದೂರಿನ ಧರ್ಮರಾಜ್ ಮುದ ಲಿಯಾರ್ ಅವರ ಪುತ್ರ ಭರತ್‌ರಾಜ್ ಮುದಲಿಯಾರ್ (20) ಮೃತ ಯುವಕ. ಉಳೂ¤ರಿನಲ್ಲಿ ನಡೆದ ಯಕ್ಷಗಾನವನ್ನು ಮುಗಿಸಿ, ಜತೆಗಿದ್ದ ತನ್ನ ಸ್ನೇಹಿತನನ್ನು ಅಂಪಾರಿನ ಮನೆಗೆ ಬಿಟ್ಟು ವಾಪಸಾಗುತ್ತಿದ್ದ ವೇಳೆ ಫೆ. 14ರ ರಾತ್ರಿ 12.15 ಸುಮಾರಿಗೆ ಶಿವಮೊಗ್ಗ- ಕುಂದಾಪುರ ರಾಜ್ಯ ಹೆದ್ದಾರಿಯ ಕೋಣಿಯಲ್ಲಿ ಖಾಸಗಿ ಬಸ್ ಢಿಕ್ಕಿಯಾಗಿ ಈ ಅವಘಡ ಸಂಭವಿಸಿತ್ತು. ಗಂಭೀರ ಗಾಯಗೊಂಡ ಭರತ್‌ರಾಜ್ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಫೆ. 15ರ ರಾತ್ರಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಪಘಾತದ ರಭಸಕ್ಕೆ ಭರತ್‌ರಾಜ್ ಧರಿಸಿದ್ದ ಹೆಲ್ಮೆಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಚಿತ್ರರಂಗದಲ್ಲಿ ಕೌತುಕವನ್ನು ಹುಟ್ಟುಹಾಕಿರುವ ಬಹುನಿರೀಕ್ಷಿತ ‘ಕತ್ತಲೆಕೋಣೆ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಫೆ.18ರ ಸಂಜೆ 4:30ಕ್ಕೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಡಾ. ಶಶಿಧರ್ ಭಟ್, ಸಂಗೀತಕಾರರಾದ ಬಿ.ಕೆ ಸುಮಿತ್ರ, ವಿ. ಮನೋಹರ್, ಡಾ. ಜಯಲಕ್ಷ್ಮಿ ಆಡಿಯೋ ಬಿಡಗಡೆ ಮಾಡಲಿದ್ದಾರೆ. ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕತ್ತಲೆಕೋಣೆ ಚಿತ್ರದ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ನಿರ್ಮಾಪಕ ಪುರುಷೋತ್ತಮ್ ಅಮೀನ್, ಸಹ ನಿರ್ಮಾಪಕ ಎಂ.ಎನ್. ಶ್ರೀನಿವಾಸ್ ಮೂರ್ತಿ ಶಿವಮೊಗ್ಗ, ಕಾರ್ಯಕಾರಿ ನಿರ್ಮಾಪಕ ರಾಘವೇಂದ್ರ ಎ. ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ಮಾಪಕ ರಾಜೀವ ಕೊಠಾರಿ, ಉದ್ಯಮಿ ರಾಜೇಂದ್ರ ಶೆಟ್ಟಿ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಂಕರ್ ಸುಗದೆ, ವಕೀಲರಾದ ರವಿಕಿರಣ್ ಮುರ್ಡೇಶ್ವರ್, ಮಂಜುನಾಥ ಸಾಲಿಯಾನ್ ತ್ರಾಸಿ…
ಕುಂದಾಪ್ರ ಡಾಟ್ ಕಾಂ ವರದಿ. ಅಮಾಸೆಬೈಲು ಸಂಪೂರ್ಣ ಸೋಲಾರ್ ಅವಳಸಿಕೊಂಡ ರಾಜ್ಯದ ಮೊದಲ ಗ್ರಾಮವಾದರೆ, ಮರವಂತೆ ಗ್ರಾಮ ಪಂಚಾಯಿತಿ ಕಚೇರಿಗೆ ಪರಿಪೂರ್ಣ ಸೋಲಾರ್ ಅಳವಡಿಸಿಕೊಂಡ ರಾಜ್ಯದ ನಾಲ್ಕನೇ ಹಾಗೂ ದ.ಕ, ಉಡುಪಿ ಜಿಲ್ಲೆ ಪ್ರಥಮ ಗ್ರಾಮ ಪಂಚಾಯಿತಿ! ದಕ ಸಂಸದ ನಳಿನ್ ಕುಮಾರ್‌ಕಟೀಲ್ ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿರುವ ಬೆಳ್ಪ ಗ್ರಾಮ ಪಂಚಾಯಿತಿ ಸಂಪೂರ್ಣ ಸೋಲಾರ್ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮರವಂತೆ ಗ್ರಾಮ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಚೇರಿಗೆ ಸಂಪೂರ್ಣ ಸೋಲಾರ್ ಅಳವಡಿಸಿಕೊಂಡಿದೆ. ಸೋಲಾರ್ ಹೊಷ ವರ್ಷದ ಹೊಸ ಕೊಡುಗೆ. ಮರವಂತೆಗ್ರಾಮ ಪಂಚಾಯಿತಿದಾನಿ ಡಾ.ದಯಾನಂದ ಪೈ ಕೊಡುಗೆ ಮೂಲಕ ಕಚೇರಿ, ಹಾಗೂ ಸುವರ್ಣ ಸೌಧ ಸಭಾಭವನನಿರ್ಮಿಸಿಕೊಂಡಿದೆ.ಕಟ್ಟಡಮಾಡಿನ ಮೇಲೆ ಸೋಲಾರ್ ಪ್ಲೇಟ್‌ಗಳ ಅಳವಡಿಸಿಕೊಂಡಿದೆ.ಸೋಲಾರ್‌ರೂಪ್‌ಟಾಪ್‌ಹೆಸರಲ್ಲಿ೧೦ ವೋಲ್ಟ್ ಕೆವಿ ನಾಲ್ಕು ಪ್ಲೇಟ್ ಅಳವಡಿಸಿ ೨೫೦ ವ್ಯಾಟ್‌ಪೀರ್ (ಡಬ್ಲ್ಯೂಪಿ) ಶಕ್ತಿ ಪಡೆಯಲಾಗುತ್ತದೆ.ಕಚೇರಿ ಫ್ಯಾನ್, ಲೈಟ್‌ಕಂಪ್ಯೂಟರ್ ಸಿಸ್ಟಮ್ ಎಲ್ಲವೂ ಸೋಲಾರ್ ಮೂಲಕ ನಡೆಯುತ್ತದೆ.ಕಚೇರಿಗೆಕತ್ತಲೆಂಬುದೇಇಲ್ಲಾ! ಮರವಂತೆಗ್ರಾಮ ಪಂಚಾಯಿತಿ ೧೪ನೇ ಹಣಕಾಸುಯೋಜನೆಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿದ್ದು, ಅದಕ್ಕೆ ೧,೪,೮೦೦ ಲಕ್ಷಖರ್ಚು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಪಂ ಆಸ್ತಿ ಪರಬಾರೆ.. ಇಒ ಕರ್ತವ್ಯ ಲೋಪ.. ಆಡಳಿತ ಪಕ್ಷ ಸದಸ್ಯರ ನಡುವೆಯೇ ಪರ,ವಿರೋಧ. ಅಜೆಂಡದಲ್ಲಿ ಕಾಣೆಯಾದ ಲೋಕಾಯುಕ್ತ ತನಿಖೆ ಸರ್ವಾನುಮತ ನಿರ್ಣಯ. ಮಂಡಿಸಿದ ನಿರ್ಣಯ ಅಂಗೀಕರಿಸದಿದ್ದರೆ ಬಾವಿಗಿಳಿದ ಪ್ರತಿಭಟನೆ, ಒಂದೇ ವಿಷಯ ಹಿಡಿದುಕೊಂಡ ಬೇರೆ ವಿಷಯ ಚರ್ಚೆಗೆ ಅವಕಾಶ ಕೊಡದಿದ್ದರೆ ಪ್ರತಭಟನೆ ಮಾಡುವವರ ವಿರುದ್ಧವೇ ಪ್ರತಿಭಟನೆ ಎಚ್ಚರಿಕೆ! ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಂಡುಬಂದ ಪ್ರಮುಖ ವಿಷಯ. ಕಳೆದ ಸಾಮಾನ್ಯ ಸಭೆಯಲ್ಲಿ ಹೊಟೇಲ್ ಒಂದರ ಬಾಡಿಗೆ ಹಾಗೂ ಜಾಗದ ಒತ್ತುವರಿ ಬಗ್ಗೆ ಲೋಕಾಯುಕ್ತ ತನಿಖೆಗೆ ಸರ್ವಾನುಮತದ ನಿರ್ಣಯ ಮಾಡಲಾಗಿತ್ತು. ಆದರೆ ಅಜೆಂಡಾದಲ್ಲಿ ವಿಷಯವೇ ಇಲ್ಲ. ತಾಪಂ ಆಸ್ತಿ ಪರಬಾರೆ ಮಾಡಲು ಹೊಟೇಲ್ ಜೊತೆ ಅಧಿಕಾರಿಗಳು ಶ್ಯಾಮೀಲಾಗಿದ್ದಾರೆ. ಒತ್ತುವರಿ ಜಾಗ ಹಿಂದಕ್ಕೆ ಪಡೆಯಬೇಕು. ಹೊಟೇಲ್ ಬಾಡಿಗೆ ಸ್ಥಳ ಒತ್ತುವರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಒತ್ತಾಯಿಸಿದರು. ಹೊಟೇಲ್ ಜಾಗ ಒತ್ತುವರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಊಟಬಲ್ಲವನಿಗೆರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲಾ ಎನ್ನೋದುಗಾದೆ ಮಾತು.ಪ್ರಸಕ್ತಯೋಗ ಬಲ್ಲವನಿಗೆರೋಗಇಲ್ಲಾಎಂದು ಬದಲಾಯಿಸುವಕಾಲ ಬಂದಿದೆ.ಯೋಗ ನಮ್ಮ ಪರಂಪರೆಯಅತ್ಯಾಮೂಲ್ಯಕೊಡುಗೆಯಾಗಿದ್ದು, ಗುರುತಿಸುವಲ್ಲಿ ನಾವು ಎಡವುತ್ತಿದ್ದೇವೆಎಂದುಕಾರ್ತಿಕೇಯ ಸ್ಕ್ಯಾನಿಂಗ್ ಸೆಂಟರ್‌ವೈದ್ಯಾಧಿಕಾರಿ ಡಾ. ಬಿ.ವಿ.ಉಡುಪ ಅಭಿಪ್ರಾಯಪಟ್ಟರು. ಕುಂದಾಪುರಯೋಗಬಂಧುಆಶ್ರಯದಲ್ಲಿಪರಿಜಾತಾ ಹೊಟೇಲ್ ಪದ್ಮಾವತಿಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸನ್ಮಾನಕಾರ‍್ಯಕ್ರಮಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಗ ಸ್ಪರ್ಧೆಯಲ್ಲಿ ಪಾಲ್ಗೊಂಡುಜಿಲ್ಲೆ ಹಾಗೂ ಕುಂದಾಪುರತಾಲೂಕುಹೆಸರು ವಿಶ್ವಮಟ್ಟಕ್ಕೆ ಏರಿಸಿದ ಕುಶ ಪೂಜಾರಿ ಸಾಧನೆ ಶ್ಲಾಘನೀಯಎಂದಅವರು, ಆರಂಭದಲ್ಲೇ ಪ್ರತಿಭೆಗಳ ಗುರುತಿಸಿ ಪ್ರೋತ್ಸಾಹಿಸಿದರೆ, ಯೋಗಕ್ಷೇತ್ರದಲ್ಲಿಇನ್ನಷ್ಟು ಪ್ರತಿಭೆಗಳು ಹೊರ ಬರಲು ಸಾಧ್ಯಎಂದರು. ಅಂತಾರಾಷ್ಟ್ರೀಯಯೋಗ ಸ್ಪರ್ಧೆಯಲ್ಲಿತೃತೀಯ ಸ್ಥಾನ ಪಡೆದ ಕುಶ ಪೂಜಾರಿಮರವಂತೆಅವರಕುಂದಾಪುರಯೋಗ ಬಂದು ಪರವಾಗಿ ಸನ್ಮಾನಿಸಲಾಯಿತು. ಯೋಗಗುರು ಬಿ.ಎಂ.ಲಮಾಣಿ ಹಾಗೂ ಕುಶ ಪೂಜಾರಿ, ಮಾತೃಶ್ರೀ ಲೀಲಾವತಿ ಆರ್.ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಪಾರಿಜಾತಾ ಹೊಟೇಲ್ ಮಾಲಕg ಮಚಂದ್ರ ಭಟ್ ನೀಡಿದ ೧೦ ಸಾವಿರ ನಗದು ಪುರಸ್ಕಾರಹಸ್ತಾಂತರಿಸಲಾಯಿತು. ಆಧ್ಯಾತ್ಮ ಪತ್ರಿಕೆ ಸಂಪಾದಕ ಸತೀಶ್ ಶೆಟ್ಟಿ, ಹಿರಿಯ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ, ಯೋಗಬಂಧು ಸಂಜೀವಣ್ಣ, ಸಂತೋಷ್ ಹಾಗೂ ಇನ್ನಿತರರು ಇದ್ದರು. ಪೂರ್ವಿಚಾತ್ರ ಪ್ರಾರ್ಥಿಸಿದರು.ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾವನಾತ್ಮಕ ನೆಲೆಗಳಸ್ಪೂರ್ತಿ ಮತ್ತು ಕಲ್ಪನೆಗಳಿಂದ ಕವಿತೆಗಳು ಹುಟ್ಟುತ್ತವೆ. ಕಾವ್ಯ ಮನಸ್ಸಿನ ಒಳಗಿನಿಂದ ಬರಬೇಕು. ಅದಕ್ಕೊಂದು ಸೌಂದರ್ಯ, ಲವಲವಿಕೆ ಜೀವನ ಪ್ರೀತಿ ಉತ್ಸಾಹವಿದೆ ಎಂದು ಲೇಖಕಿ ಮತ್ತು ಕವಯತ್ರಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿಪ್ರಾಯಪಟ್ಟರು. ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಆಶ್ರಯದಲ್ಲಿ ನಡೆದ ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾವ್ಯ ಹುಟ್ಟುವುದಕ್ಕೆ ಪ್ರೇರಣೆಯೊಂದಿಗೆ ಆಸ್ವಾದಿಸುವ ಸೌಂದರ್ಯವೂ ಬೇಕು. ಅದಕ್ಕೆ ಸ್ಪಂದಿಸಿದಾಗ ಅಭೂತಪೂರ್ವವಾದ ಚೆಂದದ ಕವನಕೂಂದು ಜೀವಂತಿಕೆ ಬರುತ್ತದೆ. ಅದಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ. ಕವನಕ್ಕೆ ಅಂತಃಸ್ಸತ್ವ , ಉತ್ಸಾಹ ಮಾನವೀಯ ನೆಲೆಗಳ ಧ್ವನಿ ಇರಬೇಕು. ದ್ರಾವಣವನ್ನು ಬೇರೆ ಬೇರೆ ಪಾತ್ರೆಯಲ್ಲಿ ನೋಡುವಾಗ ಬೇರೆಯದೇ ಆಕೃತಿ ಪಡೆಯುವಂತೆ ಕವಿಯ ಮನಸಿನಾಳದ ರಚನೆಯಲ್ಲಿ ನಿಸರ್ಗ ವ್ಯಕ್ತಿ, ವಸ್ತು –ವಿಷಯಗಳು ಕವಿಯ ಅನುಭವಕ್ಕೆಪೂರಕವಾಗಿಬೇರೆಬೇರೆಆಕೃತಿಯನ್ನುಭಾವವನ್ನುಅರ್ಥವನ್ನುಪಡೆದುಕೊಳ್ಳುತ್ತದೆ. ಕಾವ್ಯದಧ್ವನಿಹೆಚ್ಚಿರುತ್ತದೆ. ಕಾವ್ಯಮೈಮರೆಯಲುಹೇಳುತ್ತದೆ. ಕಾವ್ಯಸಾಹಿತ್ಯದಲ್ಲಿಲಯ, ತಾಳ, ನಾದ, ಸ್ವರ, ಸಂಗೀತ,ಪ್ರೀತಿಎಲ್ಲವನ್ನೂಏಕಕಾಲದಲ್ಲಿಸೆರೆಹಿಡಿಯುವಸಾಮರ್ಥ್ಯವಿದೆಎಂದುಉದಾಹರಣೆಸಹಿತಹೇಳಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣಶೆಟ್ಟಿವಹಿಸಿದ್ದರು. ಕವಿಗೋಷ್ಠಿಯನ್ನು ವಿದ್ಯಾರ್ಥಿಗಳಾದ ಸವಿತಾ, ಪ್ರಜ್ವಲ್ಶೆಟ್ಟಿಗಾರ್, ಶ್ರಿರಾಜ್ಆಚಾರ್ಯ, ವಿನಯಾ, ರಶ್ಮಿತಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಸಂಪದ್ಭರಿತ ದೇಶ. ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಅತೀ ಶ್ರೇಷ್ಠ ರಾಷ್ಟ್ರವಾಗಿರುವ ನಮ್ಮ ದೇಶದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ. ಅನೇಕ ವಿಶಿಷ್ಟತೆಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಸ್ವಾಮಿ ವಿವೇಕಾನಂದರ ಸದೃಢ ವಿಚಾರಧಾರೆಗಳು ಆದರ್ಶಪ್ರಾಯ ವಿಚಾರಗಳು ಯುವಜನರಿಗೆ ಸ್ಫೂರ್ತಿ ನೀಡುತ್ತಿದೆ. ವಿವೇಕಾನಂದರ ಆದರ್ಶಗಳು ಯುವಜನತೆಯನ್ನು ಸೆಳೆಯುತ್ತಿದೆ ಎಂದು ಯುವ ಧಾರ್ಮಿಕ ಚಿಂತಕಿ ವಿಜೇತ ಶೆಟ್ಟಿ ಉಡುಪಿ ಹೇಳಿದರು. ಅವರು ಕ್ರಾಂತಿವೀರರ ಅಭಿಮಾನಿ ಬಳಗದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ೪ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಗುರುವಾರ ಜರಗಿದ ವಿವೇಕ ಸ್ಮರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ನಮ್ಮ ದೇಶದ ಪ್ರತಿಯೊಬ್ಬರಲ್ಲೂ ದೇಶಪ್ರೇಮ ಗಟ್ಟಿಯಾಗಿದೆ ಆದರೆ ಅದನ್ನು ಪ್ರಚುರಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ ಮುಂತಾದವುಗಳು ಅಭಿವೃದ್ಧಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ. ಪ್ರೀತಿ, ವಿಶ್ವಾಸ ಹಾಗೂ ಮನುಷ್ಯತ್ವದ ಸದೃಢ ವಿಚಾರಗಳಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ರಾಜ್ಯ ಮಟ್ಟದ ಉತ್ತಮ ಅಂಗನಾಡಿ ಕಾರ್ಯಕರ್ತೆ ಪ್ರಶಸ್ತಿ ವಿಜೇತ ಗಂಗೊಳ್ಳಿ ದಾಕುಹಿತ್ಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್ ಅವರನ್ನು ಗಂಗೊಳ್ಳಿಯ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಜರಗಿದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಮ ಪಂಚಾಯತ್ ಸದಸ್ಯರಾದ ಯೂನಿಸ್ ಸಾಹೇಬ್, ಸಾಯಿರಾ ಬಾನು, ಸುಶೀಲ ಶೇರುಗಾರ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಾ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಅಧ್ಯಕ್ಷ ಶ್ರೀನಾಥ ರಾವ್, ಶಾಲೆಯ ಹಳೆ ವಿದ್ಯಾರ್ಥಿ ಶಿವಾನಂದ ಪೂಜಾರಿ, ತಾಲೂಕು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗರಾಜ್ ಪೂಜಾರಿ, ಶ್ರೀರಾಮ್ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರಾದ ಗೀತಾ ಸುನೇತ್ರ ಬಿಲ್ಲವ, ಶಾರದಾ ಗೋವಿಂದ ಪೂಜಾರಿ, ಸಿಆರ್‌ಪಿ ತಿಲೋತ್ತಮ, ಸಹಶಿಕ್ಷಕಿ ಪ್ರೇಮಲತಾ, ಗೌರವ ಶಿಕ್ಷಕಿ ವಿನಯಾ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದಲ್ಲಿ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತವನ್ನು ಜಾರಿಗೆ ತರುವ ಘೋಷಿಸಿದ್ದು, ಅಧಿಕಾರಿಗಳು ತೊಡಗಿಸಿಕೊಳ್ಳುವಿಕೆಯಿಂದ ಇದು ಯಶಸ್ವಿಯಾಗಲಿದೆ. ಭೂಮಿಯಲ್ಲಿ ಬದುಕುವ ಯಾರೊಬ್ಬರೂ ತಮ್ಮ ಹಕ್ಕಿನಿಂದ ವಂಚಿತರಾಗಬಾರದು. ಅಧಿಕಾರಿಗಳು ಉದಾಸಿನ ಮಾಡುವ ಪ್ರವೃತ್ತಿ ಬಿಡಿ, ಸರಕಾರದ ಆದೇಶದಂತೆ ಕೆಲಸ ಮಾಡಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಅವರು ನೂತನ ಬೈಂದೂರು ತಾಲೂಕು ಲೋಕಾರ್ಪಣೆ ಮಾಡಿ ಮಾತನಾಡಿ ರಾಜ್ಯದಲ್ಲಿ ಅಕ್ರಮ ಸಕ್ರಮ, ಡೀಮ್ಡ್ ಫಾರೆಸ್ಟ್, ಕುಮ್ಕಿ ಭೂಮಿ ಸಮಸ್ಯೆಯನ್ನು ಸರಳೀಕರಿಸುವ ಪ್ರಯತ್ನ ಮಾಡಲಾಗಿದ್ದು, ಭೂಮಿಯ ಹಕ್ಕಿನಿಂದ ವಂಚತರಿಗೆ ಭೂಮಿ ನೀಡಲು ಸರಕಾರ ಬದ್ಧವಾಗಿದೆ ಎಂದರು. ರಾಜ್ಯದಲ್ಲಿ ನೂತನ ತಾಲೂಕು ರಚನೆಗೆ ಚಾಲನೆ ನೀಡಿದ ಬಳಿಕ ಉದ್ಘಾಟಿಸಲಾಗುತ್ತಿರುವ ಮೊದಲ ತಾಲೂಕು ಬೈಂದೂರು ಆಗಿದೆ ಎಂದ ಅವರು ಶಾಸಕರ ಬೇಡಿಕೆಯಂತೆ ಮಿನಿವಿಧಾನಸೌಧ ಮಂಜೂರು ಮಾಡಿಸುವ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಬೈಂದೂರು ನಾಗಕರಿಕರ ಬಹುಕಾಲದ…
