Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಸರ್ಕಾರ ವಿಧಿಸಿದ ಹಲವು ನಿರ್ಭಂದಗಳಿ0ದ, ದೈನಂದಿನ ಸಂಪಾದನೆಯನ್ನು ನಂಬಿಕೊ0ಡಿದ್ದ ಅಸಂಖ್ಯಾತ ಕೂಲಿ ಕಾರ್ಮಿಕರಿಗೆ , ಜೀವನ ನಿರ್ವಹಣೆಗೆ ತೊಂದರೆಗಳಾದವು, ಆದರೆ ಈ ಸಮಯದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ , ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಒದಗಿಸುವ ಮೂಲಕ ಅವರ ಮೊಗದಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯಲ್ಲಿ ಕೊರೊನಾ ಕಾರಣದಿ0ದ ಸಾಕಷ್ಟು ಕಾರ್ಮಿಕರು, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತ0ಕದಲ್ಲಿದ್ದು, ಹೆಚ್ಚಿನ ಯುವಕರು ಮನೆಯಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಗ್ರಾಮೀಣ ಭಾಗದ ಜನರನ್ನು ಹಾಗೂ ಊರು ಸೇರಿರುವ ನಗರವಾಸಿಗಳಿಗೆ ಮಹಾತ್ಮಗಾ0ಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಉದ್ಯೋಗ ಭಾಗ್ಯ ಕರುಣಿಸಿದೆ. ಕೊರೊನಾ ಲಾಕ್ ಡೌನ್ ಸ0ದರ್ಭದಲ್ಲಿ ತೊ0ದರೆಗೊಳಗಾದ , ಜಿಲ್ಲೆಯ ಕೂಲಿ ಕಾರ್ಮಿಕರಿಗೆ , ಒಟ್ಟು 10,632 ಕುಟು0ಬಗಳ 18,503 ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವನ್ನು ಒದಗಿಸಲಾಗಿದ್ದು, 3046 ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ,…

Read More

ಗೋಡೆಯ ಮೇಲೆ ಹಲ್ಲಿ ಕಂಡರೆ ಹಾವು ಕಂಡಷ್ಟೇ ಭಯವಾಗುತ್ತದೆ. ಗೋಡೆಯಲ್ಲಿ ತುಂಬಿಕೊಂಡಿರುವ ಹಲ್ಲಿಗಳ ಕಾಟವನ್ನು ತಡೆಯುವುದಾದರೂ ಹೇಗೆ? ನಾವು ಮನೆಯಲ್ಲೇ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಹಲ್ಲಿಗಳನ್ನು ಬಹಳ ಸುಲಭವಾಗಿ ಓಡಿಸಬಹುದು. ಮುಖ್ಯವಾದ ವಿಚಾರವೆಂದರೆ ಆಹಾರವನ್ನು ತೆರೆದಿಟ್ಟರೆ ಅದು ಹಲ್ಲಿಗಳಿಗೆ ಅಚ್ಚುಮೆಚ್ಚು. ಇದರಿಂದ ಮನೆಯಲ್ಲಿ ಹಲ್ಲಿಗಳು. ಸಂತಾನೋತ್ಪತ್ತಿ ಮಾಡಲು ಸಹಾಯವಾಗುತ್ತದೆ. ಆದ್ದರಿಂದ ಉಳಿದಿರುವ ಆಹಾರವನ್ನು ಎಂದಿಗೂ ಮನೆಯಲ್ಲಿ ತೆರೆದಿಡಬೇಡಿ. ಇದು. ನೊಣಗಳು ಮತ್ತು ಇರುವೆಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಹಲ್ಲಿಗಳನ್ನು ಪರೋಕ್ಷವಾಗಿ ಆಕರ್ಷಿಸುತ್ತದೆ. ಹಲ್ಲಿಗಳು ಹಾವುಗಳಷ್ಟು ಅಪಾಯಕಾರಿಯಲ್ಲ, ಆದರೆ ಅವುಗಳು ನಾವು ತಿನ್ನುವ ಆಹಾರದಲ್ಲಿ ಬಿದ್ದರೆ ಮಾತ್ರ ನಮಗೆ ಅಪಾಯ. ಹಲ್ಲಿಗಳು ನಮ್ಮ ಮನೆಯ ಹತ್ತಿರ ಸುಳಿಯದಂತೆ ಮಾಡಲು, ನಮ್ಮಿಂದ ದೂರ ಹೋಗುವಂತೆ ಮಾಡಲು ಕೆಲವು ಉಪಾಯಗಳಿವೆ. ಈ ಸಣ್ಣ ಸರೀಸೃಪಗಳನ್ನು ಕೊಲ್ಲದೆ, ಮನೆಯಿಂದ ಹೊರಗೆ ಓಡಿಸುವುದಕ್ಕೆ ಕೆಲವು ಸರಳ ಮನೆಮದ್ದುಗಳನ್ನು ಕೊಡುತ್ತಿದ್ದೇವೆ ನೋಡಿ. ಪೆಪ್ಪರ್ ಸ್ಪ್ರೇ ಬಳಸಿ: ಕಾಳುಮೆಣಸು ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಇರುತ್ತದೆ. ಈ ಕಾಳು ಮೆಣಸು ಹಲ್ಲಿಗಳಿಗೆ ಕಿರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪಶು ಪಾಲನಾ ಇಲಾಖಾ ವತಿಯಿಂದ, ಮೈಸೂರಿನ ಪಿಂಜರಾಪೋಲ್ ಹಾಗೂ ಇತರ ಗೋಶಾಲೆಗಳಿಗೆ ಬೆಂಬಲ ನೀಡುವ ಯೋಜನೆಯಡಿ ನೋಂದಾಯಿತ ಟ್ರಸ್ಟ್‌ನ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಯವರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಮೂರು ವರ್ಷಗಳಿಂದ 50 ಕ್ಕೂ ಹೆಚ್ಚು ಸ್ವದೇಶಿ ಜಾನುವಾರುಗಳನ್ನು ಪೋಷಿಸುತ್ತಿರುವ ಅರ್ಹ ನೋಂದಾಯಿತ ಟ್ರಸ್ಟ್‌ಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜೂನ್ 22 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ: 0820-2534024 ಅನ್ನು ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗ್ರಾಮ ಪಂಚಾಯತ್‌ನ ದಾರಿದೀಪ ನಿರ್ವಹಣೆಗಾಗಿ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ 25 ಸಾವಿರ ರೂ. ಕೊಡುಗೆಯಾಗಿ ನೀಡಲಾಯಿತು. ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ ಸುವರ್ಣ ಬ್ಯಾಂಕಿನ ವತಿಯಿಂದ 25 ಸಾವಿರ ರೂ. ಚೆಕ್‌ನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅವರಿಗೆ ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಹಸ್ತಾಂತರಿಸಿದರು. ಗ್ರಾಮ ಪಂಚಾಯತ್ ಕೋರಿಕೆ ಮೇರೆಗೆ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿದೀಪ ನಿರ್ವಹಣೆಗೆ ಬ್ಯಾಂಕ್ ವತಿಯಿಂದ ಕೊಡುಗೆಯನ್ನು ನೀಡಲಾಗಿದ್ದು, ಉತ್ತಮ ಗುಣಮಟ್ಟದ ದಾರಿದೀಪಗಳನ್ನು ಅಳವಡಿಸಿ ಸುವ್ಯವಸ್ಥಿತವಾಗಿ ಇದರ ನಿರ್ವಹಣೆ ಮಾಡಬೇಕು. ಗಂಗೊಳ್ಳಿ ಗ್ರಾಮದ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಹಾಗೂ ವೈಯಕ್ತಿಕವಾಗಿ ಸಹಕಾರ ನೀಡಲಾಗುವುದು ಎಂದರು. ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಸದಸ್ಯರಾದ ಬಿ.ಗಣೇಶ ಶೆಣೈ, ಬಿ.ಲಕ್ಷ್ಮೀಕಾಂತ ಮಡಿವಾಳ, ಕೇಶವ ಖಾರ್ವಿ, ಪ್ರಶಾಂತ ಖಾರ್ವಿ, ಮಂತಿ ಶ್ರೀನಿವಾಸ ಖಾರ್ವಿ, ಬಿ.ರಾಘವೇಂದ್ರ ಪೈ, ಪಿಡಿಒ ಉಮಾಶಂಕರ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ವಾತಂತ್ರ್ಯ ನಂತರ ದೇಶವನ್ನು ಆಳಿದ ಸರಕಾರಗಳು ಭಾರತ ದೇಶಕ್ಕೆ ಮತ್ತು ಜನತೆಗೆ ಏನು ಮಾಡಿಲ್ಲ ಬಿಜೆಪಿಗೆ ಅಧಿಕಾರ ಕೊಟ್ಟರೆ ದೇಶದ ಎಲ್ಲಾ ಪ್ರಚೆಗಳನ್ನು 5 ವರ್ಷಗಳಲ್ಲಿ ಶ್ರೀಮಂತರನ್ನಾಗಿ ಮಾಡುತ್ತೆವೆಂದು ಜನರನ್ನು ಭ್ರಮಾ ಲೋಕದಲ್ಲಿ ತೆಲಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋಧಿ ನೇತ್ರತ್ವದ ಬಿಜೆಪಿ ಸರಕಾರ ನೋಟ್ ಬ್ಯಾನ್, ಜಿಎಸ್‍ಟಿಯಂತಹ ಅವೈಜ್ಞಾನಿಕ ಮಸೂದೆ ಜ್ಯಾರಿ ಮಾಡುವ ಜೊತೆಗೆ ಕರೋನಾದಂತಹ ಮಹಾಮಾರಿ ಸಾಂಕ್ರಾಮಿಕ ರೋಗ ಇರುವ ಸಂದರ್ಭದಲ್ಲಿ ಜನತೆ ಆಹಾರ ವಸ್ತು ಖರಿದಿಗೆ ಕಷ್ಟದಲ್ಲಿರುವಾಗ ನಿರಂತರ ಡಿಸೇಲ್, ಪೆಟೊಲ್, ಗ್ಯಾಸ್ ದರ ಎರಿಸಿ ತನ್ನನ್ನು ಅಧಿಕಾರ ದಲ್ಲಿ ಕೂರಿಸಿದ ಪ್ರಜೆಗಳನ್ನು ಸಂಕಷ್ಟಕ್ಕೆ ತಂದು ನಿಲ್ಲಿಸಿದ್ದಾರೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದರು. ತೈಲ ಬೆಲೆ ಏರಿಕೆಯ 3ನೇ ದಿನದ ಪ್ರತಿಭಟನೆಯ ಪ್ರಯುಕ್ತ ಹುಣ್ಸೆಮಕ್ಕಿ ಇಂಡಿಯಾನ್ ಆಯಿಲ್ ಪಂಪ್ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಗ್ಯಾಸ್ ಸಿಲಿಂಡರ್ ಗೆ 400 ರೂಪಾಯಿ ಇದ್ದಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಬೋಳಂಬಳ್ಳಿ ದೇವಸ್ಥಾನ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಪಡಿತರ ಅಕ್ಕಿ ಆಹಾರ ಇಲಾಖೆ ನಿರೀಕ್ಷಕರು ಪೋಲೀಸ್ ಸಹಕಾರದಲ್ಲಿ ಮಂಗಳವಾರ ಸಂಜೆ ದಾಳಿ ನಡೆಸಿ ವಶ ಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಕುಂದಾಪುರ ಅಹಾರ ನಿರೀಕ್ಷಕ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ಒಟ್ಟು 3.60 ಲಕ್ಷ ಮೌಲ್ಯದ 300 ಚೀಲದ 150 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಬೈಂದೂರು ಆಹಾರ ನಿರೀಕ್ಷಕ ವಿನಯ ಕುಮಾರ್, ಸಿಬ್ಬಂದಿಗಳಾದ ಪುನೀತ್, ವಿನೂತ, ಬೈಂದೂರು ಠಾಣೆಯ ಮಹಾಬಲ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಪ್ರಸಿದ್ದ ಮೈಕ್ರೋಸಾಫ್ಟ್ನ ಟ್ರೈನಿಂಗ್ ಪಾರ್ಟ್ನರ್ ಕಂಪನಿಯು ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ತನ್ನ ಬೆಳವಣಗೆಯ ಚಟುವಟಿಕೆಗೆ ಸಾಕ್ಷಿಯಾಯ್ತು. ಈ ಒಪ್ಪಂದದಿಂದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಮತ್ತು ಹೊಸ ತಂತ್ರಜ್ಞಾನ ಭರಿತ ಕೋರ್ಸ್ ಗಳನ್ನು ಕಲಿತು, ವಿಶ್ವದ ಪ್ರಸಿದ್ಧ ಸಾಫ್ಟ್ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ನಿಂದ ಪ್ರಮಾಣಪತ್ರ ಪಡೆಯುವ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತರಾಗದೆ, ಉದ್ಯೋಗವಕಾಶಕ್ಕೆ ಮುಖ್ಯವಾಗಿರುವ, ಜ್ಞಾನವನ್ನ ವೃದ್ಧಿಗೊಳಿಸುವ ಚಟುವಟಿಕೆಗಲ್ಲಿ ಒಳಗೊಂಡು ಅಧ್ಯಯನ ಮಾಡುವ ಉದ್ದೇಶದಿಂದ ಈ ಒಪ್ಪಂದ ಬಹಳ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಂಪನಿಯ ವತಿಯಿಂದ ಸಂದೀಪ್ ಜಿಯಾನ್ ಜತೇನಿ ಸಹಿ ಮಾಡಿದರು. ಕಾಲೇಜು ವತಿಯಿಂದ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಸಹಿ ಮಾಡಿದರು. ಕಾಲೇಜಿನಲ್ಲಿ ಬಹಳ ವೇಗದಲ್ಲಿ ಆಗುತ್ತಿರುವ ಬೆಳವಣಿಗೆ, ಮತ್ತು ಇದಕ್ಕೆ ಅನುಗುಣವಾಗಿ ಈ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಗೆ ದೊರಕಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿಶೇಷ ಚೇತನರಿಗೆ ಎಪಿಡಿ( ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ) ಸಂಸ್ಥೆಯಿಂದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ನೋಡಲ್ ಅಧಿಕಾರಿಗಳಾದ ಹರೀಶ ಶೆಟ್ಟಿ ಕಿಟ್ ವಿತರಿಸಿ ಮಾತನಾಡಿ, ಎಪಿಡಿ ಸಂಸ್ಥೆಯ ಬಗ್ಗೆ ಮತ್ತು ಜೀವನೋಪಾಯ ಕಾರ್ಯಕ್ರಮದ ತರಬೇತಿ ಬಗ್ಗೆ ಸ್ವವಿಸ್ತಾರವಾದ ಮಾಹಿತಿಯನ್ನು ನೀಡಿದರು, ಈ ಸಂದರ್ಭ ಹಳ್ಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ ಕೊಠಾರಿ, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಗ್ರಾಮದ ಎಲ್ಲಾ ವಿಶೇಷಚೇತನರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಾಧವ ದೇವಾಡಿಗರು ಸ್ವಾಗತಿಸಿ, ನಿರೂಪಿಸಿದರು ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಆಕಾಶ್ ಶೆಟ್ಟಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಸಂಕಷ್ಟದಲ್ಲಿರುವ ೧೦ ಕರೋನಾ ಸೋಂಕಿತ ಬಡ ಕುಟುಂಬಗಳಿಗೆ ನಮ್ಮ ಭೂಮಿ ಸಂಸ್ಥೆ ಕನ್ಯಾನ ಅವರು ಕೊಡಮಾಡಿದ ಆಹಾರ ಸಾಮಾಗ್ರಿಗಳ ಕಿಟ್‌ನ್ನು ಫಲಾನುಭವಿಗಳಿಗೆ ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸದಸ್ಯರಾದ ಶ್ರೀನಿವಾಸ ಖಾರ್ವಿ, ಬಿ. ರಾಘವೇಂದ್ರ ಪೈ, ಗ್ರಾಪಂ ಸಿಬ್ಬಂದಿಗಳಾದ ನಾರಾಯಣ ಶ್ಯಾನುಭಾಗ್, ಶೇಖರ ಜಿ., ಉದಯ ಕುಮಾರ್, ಸಂದೀಪ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2021-22ರ ಸಾಲಿನಲ್ಲಿ ಖಾಲಿ ಇರುವ ಪ್ರಾಥಮಿಕ ವಿಭಾಗದ ಬಿಐಇಆರ್‌ಟಿ ಹುದ್ದೆಗೆ ಅರ್ಹ ಸರಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ಚೇತನ ಮಕ್ಕಳ ಮನೆ-ಮನೆ ಭೇಟಿ ಮಾಡಿ ಬೋಧಿಸುವ ಮತ್ತು ಸಂಪನ್ಮೂಲ ಕೇಂದ್ರದಲ್ಲಿ ಬೋಧಿಸುವವರಿಗಾಗಿ ಇರುವ ಪ್ರಾಥಮಿಕ ವಿಭಾಗದ ಈ ಬಿಐಇಆರ್‌ಟಿ ಹುದ್ದೆಗೆ , ಶಿಕ್ಷಕ ತರಬೇತಿಯೊಂದಿಗೆ ವಿಶೇಷ ಡಿ. ಇಡಿ ಕಡ್ಡಾಯವಾಗಿರುತ್ತದೆ. ನಿವೃತ್ತರಿಗೆ ಅವಕಾಶವಿಲ್ಲ. ಆಸಕ್ತರು ಹತ್ತಿರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಜೂನ್ 21 ರಂದು ಮಧ್ಯಾಹ್ನ 12 ಗಂಟೆ ಒಳಗೆ ಅರ್ಜಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯುವಂತೆ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Read More